Site icon Vistara News

Road accident | ಬೈಕ್‌ಗಳ ಮುಖಾಮುಖಿ ಡಿಕ್ಕಿ: ಹಾರಿ ಬಿದ್ದ ಯುವಕ ಲಾರಿ ಚಕ್ರಕ್ಕೆ ಸಿಲುಕಿ ದುರ್ಮರಣ

accident vijayapura

ವಿಜಯಪುರ: ಅಲ್ಲಿ ನಡೆದಿದ್ದು ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿ. ಅಷ್ಟೇ ಆಗಿದ್ದರೆ ಪ್ರಾಣ ಹಾನಿ ಸಂಭವಿಸುತ್ತಿರಲಿಲ್ಲವೇನೋ.. ಆದರೆ, ಅಪಘಾತದ (Road accident) ವೇಳೆ ಬೈಕ್‌ನಿಂದ ಎಗರಿಬಿದ್ದ ಯವಕ ಪಕ್ಕದಲ್ಲೇ ಸಾಗುತ್ತಿದ್ದ ಲಾರಿಯ ಚಕ್ರದ ಅಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.

ಘಟನೆ ನಡೆದಿರುವುದು ವಿಜಯಪುರ ನಗರದ ಮಾರುತಿ ಕಾಲೋನಿಯಲ್ಲಿ. ವಿಠಲ್ ದುಂಡಪ್ಪ ಉಕ್ಕಲಿ ಮೃತಪಟ್ಟಿರುವ ದುರ್ದೈವಿ. ವಿಠಲ್‌ ದುಂಡಪ್ಪ ಉಕ್ಕಲಿ ಅವರು ರಸ್ತೆಯ ಒಂದು ಬದಿಯಲ್ಲಿ ಸಾಗುತ್ತಿದ್ದರು. ಆಗ ಎದುರು ಭಾಗದಿಂದ ಒಂದು ಬೈಕ್‌ ಬಂತು. ಎರಡೂ ಬೈಕ್‌ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡವು. ಆಗ ವಿಠಲ್‌ ದುಂಡಪ್ಪ ಅವರು ಹಾರಿಬಿದ್ದರು. ಅಷ್ಟು ಹೊತ್ತಿಗೆ ಹಿಂಬದಿಯಿಂದ ಬಂದ ಒಂದು ಲಾರಿಯ ಚಕ್ರದ ಅಡಿಗೆ ಬಿದ್ದು ಪ್ರಾಣ ಕಳೆದುಕೊಂಡರು.

ಅಪಘಾತದ ಈ ದೃಶ್ಯ ಪಕ್ಕದ ಅಂಗಡಿಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಮಹಿಳೆ ಶವಪತ್ತೆ
ವಿಜಯಪುರ ನಗರದ ಆರ್‌ಟಿಓ ಕಚೇರಿ ಬಳಿ ಸುಮಾರು 45-50 ವಯಸ್ಸಿನ ಮಹಿಳೆ ಶವ ಪತ್ತೆಯಾಗಿದೆ. ಇವರು ಯಾರು, ಇದು ಕೊಲೆಯೋ ಅಥವಾ ಸಹಜ ಸಾವೋ ಎನ್ನುವುದು ಪೊಲೀಸ್‌ ತನಿಖೆ ಬಳಿಕ ತಿಳಿದು ಬರಬೇಕಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ | Santro Ravi Case | ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ವರ್ಗ: ನ್ಯಾಯಾಂಗ ಬಂಧನ ಮುಂದುವರಿಕೆ

Exit mobile version