Site icon Vistara News

Birthday Party | ವರ್ತೂರ್ ಪ್ರಕಾಶ್ ಹುಟ್ಟುಹಬ್ಬಕ್ಕೆ ಬಾಡೂಟ; ಬಿರಿಯಾನಿಗಾಗಿ ನೂಕುನುಗ್ಗಲು, ಲಾಟಿ ಏಟಿಗೆ ವೃದ್ಧನ ತಲೆಗೆ ಪೆಟ್ಟು

birthday party

ಕೋಲಾರ: ಭರ್ಜರಿ ಬಿರಿಯಾನಿ ಬಾಡೂಟಕ್ಕಾಗಿ ನೂಕುನುಗ್ಗಲು ಆಗಿ ಪೊಲೀಸರು ಲಘು ಲಾಠಿ‌ ಪ್ರಹಾರ ಮಾಡಿದ ಘಟನೆ ಕೋಲಾರದ ಬೈರೇಗೌಡ ಲೇಔಟ್‌ನಲ್ಲಿ ನಡೆದಿದೆ. ಮಾಜಿ ಸಚಿವ ವರ್ತೂರ್ ಪ್ರಕಾಶ್‌ರ 56ನೇ ಹುಟ್ಟುಹಬ್ಬಕ್ಕಾಗಿ (Birthday Party) ಅಭಿಮಾನಿಗಳಿಗೆ,‌ ಕಾರ್ಯಕರ್ತರಿಗೆ ೬೦೦ ಕೆ.ಜಿ ಚಿಕನ್‌ ಬಿರಿಯಾನಿ ಸಿದ್ಧ ಮಾಡಲಾಗಿತ್ತು. ವೇದಿಕೆ ಕಾರ್ಯಕ್ರಮ ಮುಗಿದ ವೇಳೆ ಬಾಡೂಟಕ್ಕಾಗಿ ಜನರ ನೂಕುನುಗ್ಗಲು ಆಗಿದೆ.

ಬ್ಯಾರಿಕೇಡ್‌ ಹಾಕಿದ್ದರೂ ಅದರಿಂದ ಹಾರಿ ಬಂದು ಕೆಲವರು ಬಿರಿಯಾನಿ ಪಾತ್ರೆಗೆ ಕೈ ಹಾಕಿದರೆ, ಮತ್ತೆ ಹಲವರು ಗೋಣಿ ಚೀಲದಲ್ಲಿ ತುಂಬಿಕೊಂಡು ಹೋಗಿದ್ದಾರೆ. ಬಿರಿಯಾನಿಗಾಗಿ ಗಲಾಟೆ ನಡೆಯುತ್ತಿದ್ದಂತೆ ಸ್ಥಳದಲ್ಲಿಯೇ ಇದ್ದ ಪೊಲೀಸರು ಲಘು ಲಾಠಿ ಬಿಸಿ ಗುಂಪು ಚದುರಿಸಲು ಮುಂದಾದರು. ಈ ವೇಳೆ ಲಾಠಿ ಏಟು ವೃದ್ಧರೊಬ್ಬರ ತಲೆಗೆ ಬಿದ್ದು, ರಕ್ತಸ್ರಾವ ಉಂಟಾಯಿತು.

ಅಧಿವೇಶನಕ್ಕೆ ಚಕ್ಕರ್‌, ಬರ್ತ್‌ಡೇಗೆ ಹಾಜರ್‌
ಕಾರ್ಯಕ್ರಮದಲ್ಲಿ ಸಚಿವರಾದ ಮುನಿರತ್ನ, ಡಾ.ಕೆ. ಸುಧಾಕರ್ ಭಾಗಿಯಾಗಿದ್ದರು. ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಚಕ್ಕರ್ ಹಾಕಿ, ಮಾಜಿ ಶಾಸಕ ವರ್ತೂರ್ ಪ್ರಕಾಶ್ ಬರ್ತ್‌ಡೇ ಪಾರ್ಟಿಯಲ್ಲಿ ಹಾಜರಾಗಿದ್ದರು.

ಇದೇ ವೇಳೆ ಸಚಿವರಾದ ಮುನಿರತ್ನ ಹಾಗೂ ಡಾ. ಸುಧಾಕರ್‌ಗೆ ಕಂಬಳಿ ಹಾಕಿ ಕುರಿಯನ್ನು ಉಡುಗೊರೆಯಾಗಿ ನೀಡಿದರು. ಚುನಾವಣೆಗೆ ಮುನ್ನ ಹುಟ್ಟುಹಬ್ಬದ ನೆಪದಲ್ಲಿ ಕೋಲಾರದಲ್ಲಿ ಶಕ್ತಿಪ್ರದರ್ಶನಕ್ಕೆ‌ ಬಿಜೆಪಿ ನಾಯಕರು ಮುಂದಾದರು.

ಇದನ್ನೂ ಓದಿ | Viral Video| ಮನೆಗೇ ನುಗ್ಗಿ ಯುವತಿಯನ್ನು ಎಳೆದೊಯ್ದ ಯುವಕರು; ಅಸಹಾಯಕನಾಗಿ ನೋಡುತ್ತ ನಿಂತ ಅಪ್ಪ

Exit mobile version