ಗದಗ: ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಪಕ್ಷಗಳ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಕಾರಣಗಳಿಗಾಗಿ ಜಗಳ, ಹೊಡೆದಾಟಗಳು ಸಾಮಾನ್ಯವಾಗುತ್ತಿವೆ. ಗದಗ ತಾಲೂಕಿನ ಬಿಂಕದಕಟ್ಟೆ ಗ್ರಾಮದಲ್ಲಿ ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi status) ಅವರ ಭಾವಚಿತ್ರ ಹಾಕಿದ್ದಕ್ಕೆ ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ನಡೆದಿದೆ.
ಬಿಂಕದಕಟ್ಟಿಯ ರಾಘವೇಂದ್ರ ಪೂಜಾರ (33) ಎಂಬವರ ಮನೆಗೆ ನುಗ್ಗಿ ಈ ಹಲ್ಲೆ ಮಾಡಲಾಗಿದೆ. ರಾಘವೇಂದ್ರ ಪೂಜಾರ ಅವರು ಸ್ಟೇಟಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನು ಹಾಕಿಕೊಂಡಿದ್ದರು. ಇದನ್ನು ಆಕ್ಷೇಪಿಸಿದ ಮಲ್ಲರಡ್ಡಿ ಅಗಸನಕೊಪ್ಪ, ಶ್ರೀನಿವಾಸ ಅಗಸನಕೊಪ್ಪ ಸೇರಿದಂತೆ ಹಲವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳು ಮನೆಗೆ ನುಗ್ಗಿದ್ದಲ್ಲದೆ, ಮೋದಿ ಭಾವಚಿತ್ರ ಸ್ಟೇಟಸ್ ಇಡ್ತೀಯಾ, ಮೋದಿ ಪೋಸ್ಟ್ ಲೈಕ್ ಕೊಡ್ತೀಯಾ ಎಂದು ಪ್ರಶ್ನಿಸಿ ಹಲ್ಲೆ ಮಾಡಿದರೆಂದು ರಾಘವೇಂದ್ರ ಪೂಜಾರ ಅವರು ದೂರಿನಲ್ಲಿ ತಿಳಿಸಿದ್ದಾರೆ. ಹೀಗೆ ಹಲ್ಲೆ ಮಾಡಿದವರು ಕಾಂಗ್ರೆಸ್ ಕಾರ್ಯಕರ್ತರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮನೆಗೆ ನುಗ್ಗಿದ ದುಷ್ಕರ್ಮಿಗಳು ಥರ್ಮಕೋಲ್ ಕಟ್ಟರ್, ಕಲ್ಲು, ದೊಣ್ಣೆಗಳನ್ನು ಬಳಸಿ ಹಲ್ಲೆಗೆ ಯತ್ನಿಸಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ನಡುವೆ, ಬಿಜೆಪಿ ಮುಖಂಡರ ರಾಜು ಕುರುಡಗಿ ಸೇರಿದಂತೆ ಹಲವರು ತಡರಾತ್ರಿ ಪೊಲೀಸ್ ಠಾಣೆ ಎದುರು ಜಮಾಯಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಹಲ್ಲೆಗೊಳಗಾದ ಯುವಕನಿದೆ ಧೈರ್ಯ ತುಂಬಿದರು.
ಯುವಕ ಇದೀಗ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ನೀಡಿದ್ದಾರೆ.
ಸಾಗರ ಕೋರ್ಟ್ ಬಳಿ ಕೆಲಸ ಮಾಡುತ್ತಿದ್ದ ಬೆರಳಚ್ಚುಗಾರ ಕೆರೆಗೆ ಹಾರಿ ಆತ್ಮಹತ್ಯೆ; ಕಿವಿ ಕೇಳಿಸದ ಬೇಸರ
ಶಿವಮೊಗ್ಗ: ಸಾಗರದ ಕೋರ್ಟ್ ಮುಂಭಾಗದಲ್ಲಿ ಖಾಸಗಿ ಬೆರಳಚ್ಚುಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ (Suicide case) ಮಾಡಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬೆರಳಚ್ಚುಗಾರರಾಗಿದ್ದ ನಿತ್ಯಾನಂದ ಅವರು ಕೆಳದಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಎಲ್ಲರ ಜತೆ ಆತ್ಮೀಯ ಸಂಬಂಧ ಹೊಂದಿದ್ದ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕಿವಿ ಕೇಳಿಸದ ವ್ಯಕ್ತಿ ಬದುಕಬಾರದು
ವಿಶ್ವನಾಥ ಅವರು ಭಾನುವಾರ ರಾತ್ರಿ ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿದ್ದಾರೆ. ಸಾಗರ ಗ್ರಾಮಾಂತರ ಠಾಣೆ ಪಿಎಸ್ಐ ಗೆ ಬರೆದ ಪತ್ರದಲ್ಲಿ ಕೆಲವೊಂದು ಅಂಶಗಳನ್ನು ಬರೆದಿದ್ದು, ಅವರ ಸಾವಿಗೆ ಜೀವನದಲ್ಲಿ ಎದುರಾಗಿರುವ ಕೆಲವು ಘಟನೆಗಳೇ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಸೋಮವಾರ ಬೆಳಗ್ಗೆ ಕೆರೆಯ ಬಳಿ ಅವರ ಶವ ಪತ್ತೆಯಾಗಿದೆ.
ನಿತ್ಯಾನಂದ ಅವರು ಡೆತ್ ನೋಟ್ ಬರೆದಿಟ್ಟು ಬೈಕ್ ಏರಿ ನಾಪತ್ತೆಯಾಗಿದ್ದರು. ಅವರ ಬೈಕ್ ಮತ್ತು ಚಪ್ಪಲಿ ಕೆಳದಿ ಕೆರೆ ಬಳಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ತಿಳಿಸಲಾಯಿತು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಶವವನ್ನು ಕೆರೆಯಿಂದ ಮೇಲೆತ್ತಿದರು.
ʻʻಕಿವಿ ಕೇಳಿಸದೇ ಇರುವುದರಿಂದ ಕೆಲಸ ಮಾಡಲು ಆಗುತ್ತಿಲ್ಲ. ಪ್ರಯೋಜನವಿಲ್ಲದ ವ್ಯಕ್ತಿಯಾಗಿ ಬದುಕಲು ಇಷ್ಟವಿಲ್ಲ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆʼʼ ಎಂದು ಪಿಎಸ್‌ಐಗೆ ಬರೆದಿರುವ ಡೆತ್ ನೋಟ್‌ನಲ್ಲಿ ತಿಳಿಸಿದ್ದಾರೆ.
ಮೃತರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ವಿಶ್ವನಾಥ ಅವರಿಗೆ ಹಿಂದಿನಿಂದಲೂ ಕಿವಿ ಕೇಳಿಸುತ್ತಿರಲಿಲ್ಲವೇ ಅಥವಾ ಇದು ಹೊಸ ಸಮಸ್ಯೆಯೇ ಎನ್ನುವುದು ಗೊತ್ತಾಗಿಲ್ಲ. ಅಂತೂ ಕೆಲವೊಂದು ಸಣ್ಣ ವಿಚಾರಗಳು ಹೇಗೆ ಬದುಕಿನಲ್ಲಿ ಅತಿರೇಕದ ಹೆಜ್ಜೆ ಇಡಲು ಕಾರಣವಾಗುತ್ತವೆ ಎನ್ನುವುದಕ್ಕೆ ಈ ಸಾವು ಒಂದು ನಿದರ್ಶನ.
ಇದನ್ನೂ ಓದಿ : AAP : ಆಪ್ ರಾಜ್ಯ ಘಟಕದ ಮುಖಂಡನ ಮೇಲೆ ಹಲ್ಲೆಗೆ ಯತ್ನ