Site icon Vistara News

ನವರಸನಾಯಕನಿಗೆ ಒಲಿದ ರಾಜ್ಯಸಭೆ: ನಿರ್ಮಲಾ ಸೀತಾರಾಮನ್‌ ಜತೆಗೆ ಜಗ್ಗೇಶ್‌ಗೆ ಬಿಜೆಪಿ ಟಿಕೆಟ್‌

jaggesh nirmala seetharaman get BJP ticket to rajyasabha

ಬೆಂಗಳೂರು: ರಾಜ್ಯಸಭೆಗೆ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಭಾನುವಾರ ಘೋಷಣೆ ಮಾಡಿದ್ದು, ಇದೀಗ ಕರ್ನಾಟಕದಿಂದ ಸದಸ್ಯರಾಘಿರುವ ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್‌ ಅವರಿಗೆ ಮತ್ತೆ ಅವಕಾಶ ನೀಡಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಶಾಸಕ ಹಾಗೂ ನವರಸನಾಯಕ ಜಗ್ಗೇಶ್‌ ಅವರಿಗೆ ಟಿಕೆಟ್‌ ನೀಡಲು ಆಯ್ಕೆ ಮಾಡಲಾಗಿದೆ.

ಕರ್ನಾಟಕದ ಜತೆಗೆ ಮಧ್ಯಪ್ರದೇಶದ ಎರಡು, ಮಹಾರಾಷ್ಟ್ರದ ಎರಡು, ರಾಜಸ್ಥಾನದ ಒಂದು, ಉತ್ತರ ಪ್ರದೇಶದ ಆರು, ಉತ್ತರಾಖಂಡದ ಒಂದು, ಬಿಹಾರದ ಎರಡು ಹಾಗೂ ಹರ್ಯಾಣದ ಒಂದು ಸ್ಥಾನಕ್ಕೆ ಅಭ್ಯರ್ಥಿಗಳನ್ನು ಬಿಜೆಪಿ ಮುಖ್ಯ ಕಚೇರಿ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಘೋಷಿಸಿದ್ದಾರೆ.

ಇದನ್ನೂ ಓದಿ | ವಿಧಾನ ಪರಿಷತ್ ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಜೂನ್‌ 13 ರಂದು ಚುನಾವಣೆ

ಸದ್ಯ ರಾಜ್ಯದಲ್ಲಿ ಮೂರನೇ ಅಬ್ಯರ್ಥಿಯನ್ನು ಆಯ್ಕೆ ಮಾಡಲು ಯಾವುದೇ ಪಕ್ಷಕ್ಕೆ ಅಗತ್ಯ ಸಂಖ್ಯೆ ಇಲ್ಲ. ಇದೀಗ ಬಿಜೆಪಿಯೂ ಇಬ್ಬರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇಬ್ಬರನ್ನು ಆಯ್ಕೆ ಮಾಡಿದ ನಂತರ ಉಳಿಯುವ ಹೆಚ್ಚುವರಿ ಮತಗಳನ್ನು ಯಾರಿಗೆ ನೀಡಬಹುದು ಎಂಬ ಕುತೂಹಲವಿದೆ.

ರಾಜ್ಯಸಭೆಯಿಂದ ಆಯ್ಕೆಯಾಗಲು ಒಬ್ಬ ಅಭ್ಯರ್ಥಿಗೆ 45 ಮತಗಳ ಅವಶ್ಯಕತೆ ಇದೆ. ಆಡಳಿತ ಪಕ್ಷ ಬಿಜೆಪಿ ಬಳಿ ಸ್ಪೀಕರ್‌ ಸೇರಿ 120 ಮತಗಳಿವೆ. ಬಿಎಸ್‌ಪಿಯಿಂದ ಆಯ್ಕೆಯಾಗಿ ಬಿಜೆಪಿ ಸೇರಿರುವ ಎನ್‌. ಮಹೇಶ್‌, ಪಕ್ಷೇತರ ಶಾಸಕ ನಾಗೇಶ್‌ ಸೇರಿಸಿಕೊಂಡರೆ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ನಂತರ ಮೂರನೇ ಅಭ್ಯರ್ಥಿ ಆಯ್ಕೆ ಮಾಡಲು 13 ಮತಗಳ ಕೊರತೆ ಆಗುತ್ತದೆ. ಕಾಂಗ್ರೆಸ್‌ನ 69 ಮತಗಳಲ್ಲಿ ಒಬ್ಬ ಅಭ್ಯರ್ಥಿ ಆಯ್ಕೆಯಾದ ನಂತರ ಹೆಚ್ಚುವರಿಯಾಗಿ 24 ಮತಗಳು ಉಳಿಯುತ್ತವೆ.

ನಾಲ್ಕನೇ ಅಭ್ಯರ್ಥಿ ಯಾರು?

ಕಾಂಗ್ರೆಸ್‌ನ ಒಬ್ಬರೇ ಅಭ್ಯರ್ಥಿಯನ್ನು (ಜೈರಾಮ್‌ ರಮೇಶ್‌) ಘೋಷಣೆ ಮಾಡಲಾಗಿದೆ. ಇನ್ನು ಜೆಡಿಎಸ್‌ ಬಳಿ 32 ಮತಗಳಿದ್ದು, ಕಾಂಗ್ರೆಸ್‌ ಅಥವಾ ಬಿಜೆಪಿ ಯಾವುದೇ ಪಕ್ಷ ಬೆಂಬಲ ನೀಡಿದರೂ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬಹುದು. ಕುಪೇಂದ್ರ ರೆಡ್ಡಿ ಅವರಿಗೆ ಜೆಡಿಎಸ್‌ ಟಿಕೆಟ್‌ ಲಭಿಸುವುದು ಬಹುತೇಕ ಖಚಿತವಾಗಿದೆ.

ಈಗಾಗಲೆ ಕುಪೇಂದ್ರ ರೆಡ್ಡಿ ಅವರು ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿದ್ದಾರೆ. ಬಿ.ಕೆ. ಹರಿಪ್ರಸಾದ್‌ ಜತೆಗೆ ಂಆತುಕತೆ ನಡೆಸಿಬಂದಿದ್ದಾರೆ. ಅಲ್ಲಿನ ಮಾತುಕತೆ ಫಲಿತಾಂಶ ಇನ್ನೂ ತಿಳಿದುಬಂದಿಲ್ಲ. ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂಬ ಮಾತು ಆಗ ಕೇಳಿಬರುತ್ತಿತ್ತು. ಈಗ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವುದರಿಂದ ಆ ಪಕ್ಷದಿಂದಲೂ ಕುಪೇಂದ್ರ ರೆಡ್ಡಿ ಸಹಾಯ ಕೇಳಬಹುದು.

ಇದನ್ನೂ ಓದಿ | ಯಡಿಯೂರಪ್ಪ ಸರ್ಜಿಕಲ್‌ ಸ್ಟ್ರೈಕ್‌ ಫೇಲ್‌: ಬಿಜೆಪಿಯಲ್ಲಿ ಸಂತೋಷ್‌ ಮೇಲುಗೈ

Exit mobile version