Site icon Vistara News

Karnataka election 2023: ಕುಷ್ಟಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಅಭಿಮಾನಿಯಿಂದ ದೀರ್ಘದಂಡ‌ ನಮಸ್ಕಾರ

Karnataka election 2023 BJP candidate from Kushtagi Constituency prays for victory long salute from fan

ಕುಷ್ಟಗಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಅವರು ಗೆಲುವು ಸಾಧಿಸಲಿ ಎಂದು ಪ್ರಾರ್ಥಿಸಿ ಅಭಿಮಾನಿಐೊಬ್ಬ ಕೊರಡಕೇರಾ ಗ್ರಾಮದ ಮಾರುತೇಶ್ವರ ದೇವಸ್ಥಾನದಿಂದ ಮದಲಗಟ್ಟಿ ಆಂಜನೇಯ ದೇವಸ್ಥಾನವರೆಗೆ ದೀರ್ಘದಂಡ ನಮಸ್ಕಾರ ಸಲ್ಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಅವರ ಸ್ವಗ್ರಾಮ ಕೊರಡಕೇರಾದಿಂದ ಸುಮಾರು 6 ಕಿಲೋ ಮೀಟರ್ ಅಂತರದಲ್ಲಿರುವ ಮದಲಗಟ್ಟಿಯವರೆಗೆ ದೀರ್ಘದಂಡ ನಮಸ್ಕಾರ ಹಾಕಿದರು. ಅಭ್ಯರ್ಥಿಯ ಅಪ್ಪಟ ಅಭಿಮಾನಿಯಾಗಿರುವ ಕೊರಡಕೇರಾ ಗ್ರಾಮದ ವೀರನಗೌಡ ಅಮರೇಗೌಡ ಪಾಟೀಲ ದೀರ್ಘದಂಡ ನಮಸ್ಕಾರ ಸಲ್ಲಿಸಿದರು.

ಇದನ್ನೂ ಓದಿ: Actor Rajinikanth: ʻಲಾಲ್ ಸಲಾಮ್ʼ ಚಿತ್ರದ ಮೂಲಕ ಹೊಸ ಲುಕ್‌ನಲ್ಲಿ ಬಂದ ರಜನಿಕಾಂತ್‌; ಪುತ್ರಿ ಆ್ಯಕ್ಷನ್ ಕಟ್‌!

ನರ್ಸಿಂಗ್ ಪದವೀಧರರಾಗಿರುವ ವೀರನಗೌಡ ಪಾಟೀಲ, ತಮ್ಮ ಗ್ರಾಮದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಈ ಬಾರಿ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಜಯ ಸಾಧಿಸಲಿ ಎಂದು ಈ ಹರಕೆ ಸೇವೆ ಸಲ್ಲಿಸಿದರು. ಈ ವೇಳೆ ಕೊರಡಕೇರಾ ಗ್ರಾಮದ ಗುರು ಹಿರಿಯರು ಪಾಲ್ಗೊಂಡಿದ್ದರು.

Exit mobile version