ಯಾದಗಿರಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಭಾನುವಾರ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು.
ಕ್ಷೇತ್ರದ ವಡಗೇರಾ ಪಟ್ಟಣದ ಬಸವೇಶ್ವರ ವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ಭರ್ಜರಿ ರೋಡ್ ಶೋ ನಡೆಸಿದ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ, ಮತಯಾಚನೆ ನಡೆಸಿದರು.
ಇದನ್ನೂ ಓದಿ: Rishab Shetty: ಫ್ಯಾಮಿಲಿ ಫೋಟೊಶೂಟ್ ಶೇರ್ ಮಾಡಿಕೊಂಡ ರಿಷಬ್ ಶೆಟ್ಟಿ
ರೋಡ್ ಶೋ ವೇಳೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಅವರ ಮೇಲೆ ಪುಷ್ಪ ಮಳೆಗೈದು ಅಭಿಮಾನ ಮೆರೆದರು. ಸಾವಿರಾರು ಜನರು ರೋಡ್ ಶೋದಲ್ಲಿ ಭಾಗಿಯಾದರು. ನಂತರ ನಡೆದ ಪ್ರಚಾರ ಸಭೆ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಜನ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ವೇಳೆ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ಯಾದಗಿರಿ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ಕೊಡುಗೆ ನನ್ನ ಅಧಿಕಾರಾವಧಿಯಲ್ಲಿ ಸಿಕ್ಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನೇಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಶಿಕ್ಷಣ, ಕುಡಿಯುವ ನೀರು, ರಸ್ತೆ, ಮೂಲಭೂತ ಸೌಲಭ್ಯವನ್ನು ಕಲ್ಪಿಸಲಾಗಿದೆ. ವಡಗೇರಾದಲ್ಲಿ ಮಿನಿವಿಧಾನಸೌಧ ನಿರ್ಮಾಣ ಮಾಡಲು ಈಗಾಗಲೇ ಸರ್ಕಾರ ಮಂಜೂರಾತಿ ನೀಡಿದೆ. ಕ್ಷೇತ್ರದ ಜನರು ಆಶೀರ್ವಾದ ಮಾಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತೇನೆ ಎಂದರು.
ಇದನ್ನೂ ಓದಿ: IPL 2023: ಸಾಹಾ, ಗಿಲ್ ಬ್ಯಾಟಿಂಗ್ ಕಮಾಲ್; ಬೃಹತ್ ಮೊತ್ತ ಪೇರಿಸಿದ ಗುಜರಾತ್ ಟೈಟನ್ಸ್
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಣ್ಣಗೌಡ ಕಾಡಂನೋರ್, ಬಸವರಾಜ ಸೊನ್ನದ, ರಾಜಶೇಖರ ಕಾಡಂನೋರ್, ಮಲ್ಲಿಕಾರ್ಜುನ ಸಾಹು ಕರಣಗಿ, ಪ್ರವೀಣ ಕರಣಗಿ, ಡಾ.ಜಗದೀಶ್ ಹಿರೇಮಠ, ಮಲ್ಲು ಹೇರುಂಡಿ, ಮಹಾದೇವಪ್ಪ ಗೋನಾಳ, ಶಿವಕುಮಾರ ಕೊಂಕಲ್ ಸೇರಿದಂತೆ ಅನೇಕರು ಇದ್ದರು.