Site icon Vistara News

Karnataka election 2023: ಸ್ಪರ್ಧೆಗಾಗಿ ಗ್ರಾಮ ವಾಸ ಮಾಡಿರಲಿಲ್ಲ: ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಸ್ಪಷ್ಟನೆ

Karnataka election 2023 BJP candidate Siddharth Singh clarified that he did not live in the village for the contest

ಹೊಸಪೇಟೆ: ಆನಂದ ಸಿಂಗ್ ಅವರು ಸಚಿವರಾದ ಬಳಿಕ ಜವಾಬ್ದಾರಿ ಹೆಚ್ಚಾಗಿದ್ದು, ಒತ್ತಡ ಕಡಿಮೆ ಮಾಡಲು ಜನರ ಸಮಸ್ಯೆಯನ್ನು (Problems) ಅರಿಯಲು ಗ್ರಾಮ ವಾಸ ಮಾಡಿರುವೆ ಹೊರತು ಚುನಾವಣೆ ಸ್ಪರ್ಧೆಗಾಗಿ ಅಲ್ಲ ಎಂದು ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಹೇಳಿದರು.

ಮತಯಾಚನೆ ನಿಮಿತ್ತ ತಾಲೂಕಿನ ನಾಗೇನಹಳ್ಳಿಗೆ‌ ಶನಿವಾರ ಬೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: ವಿಸ್ತಾರ TOP 10 NEWS: ರಾಜ್ಯದಲ್ಲಿ ಮೋದಿ ಹವಾದಿಂದ ದಿ ಕೇರಳ ಸ್ಟೋರಿಯ ನಿಜಕಥನದವರೆಗೆ ಪ್ರಮುಖ ಸುದ್ದಿಗಳು

ನನ್ನ ತಂದೆಯವರು ಈ ಬಾರಿಯೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರೆ ನಿಮ್ಮ ಆಶೀರ್ವಾದದಿಂದ ಗೆಲುವು ಸಾಧಿಸಿ ಸಚಿವರಾಗಬಹುದಿತ್ತು. ಆದರೆ, ಅವರಿಗೆ ಅಧಿಕಾರದ ದಾಹ ಇಲ್ಲ. ಅಧಿಕಾರದ ಅವಶ್ಯಕತೆಯೂ ಇಲ್ಲ. ಕ್ಷೇತ್ರದ ಅಭಿವೃದ್ಧಿಯನ್ನು ಮಾತ್ರ ಆನಂದ ಸಿಂಗ್ ಬಯಸುವಂಥವರಾಗಿದ್ದಾರೆ. 15 ವರ್ಷಗಳ ಹಿಂದಿನ ಹಾಗೂ ಇಂದಿನ ಕ್ಷೇತ್ರದ ವ್ಯತ್ಯಾಸವನ್ನು ತಾವು ಗಮನಿಸಿದರೆ ಆನಂದ ಸಿಂಗ್ ಅವರು ಮಾಡಿರುವ ಅಭಿವೃದ್ಧಿ ಗಮನಕ್ಕೆ ಬರುತ್ತವೆ ಎಂದರು.

ಇದನ್ನೂ ಓದಿ: Karnataka Election: ರಾಜ್ಯದಲ್ಲಿ ಮೋದಿ ಅಬ್ಬರ ಮಾತ್ರವಲ್ಲ, ಇಬ್ಬರು ಜ್ಯೂನಿಯರ್‌ ಮೋದಿಗಳಿಂದಲೂ ಪ್ರಚಾರ

ವೃತ್ತ, ರಸ್ತೆಗಳು, ಅಂಗನವಾಡಿ ಮಾತ್ರವಲ್ಲದೇ, ಸರ್ಕಾರಿ ಡಿಗ್ರಿ ಕಾಲೇಜು, ಉದ್ಯಾನವನಗಳು, ಎಲ್ಲ ಸಮುದಾಯಗಳಿಗೆ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಇದು ಅನುಕಂಪದ ಸಮಯವಲ್ಲ, ಅಭಿವೃದ್ಧಿಯ ಸಮಯವಾಗಿದ್ದು, ಮತದಾರರಾದ ತಾವು ಅಭಿವೃದ್ಧಿಗಾಗಿ ಮತ ನೀಡಿ. ತಾವು ತಂದೆಯವರಿಗೆ ಮಾಡಿದ ಆಶೀರ್ವಾದ ನನಗೂ ಮಾಡಿದರೆ ವಿಧಾನಸೌಧದಲ್ಲಿ ನಿಮ್ಮ ದ್ವನಿಯಾಗಿ ಸೇವಕನಂತೆ ಕಾರ್ಯ ನಿರ್ವಹಿಸುವೆ ಎಂದರು.

ನಿಮ್ಮ ಅಭಿಮಾನ ಮರೆಯಲಾರೆ

ನಾಗೇನಹಳ್ಳಿಯ ಜನತೆಯ ಪ್ರೀತಿ, ಅಭಿಮಾನ ದೊಡ್ಡದು. ಅಪಾರ ಸಂಖ್ಯೆಯಲ್ಲಿ ಸೇರಿ ಅದ್ದೂರಿಯಾಗಿ ನನ್ನನ್ನು ಸ್ವಾಗಿಸಿಕೊಂಡಿದ್ದು ಎಂದೂ ಮರೆಯಲಾರೆ. ಗ್ರಾಮ ವಾಸ್ತವ್ಯ ಸಂದರ್ಭ ಇದೇ ಸೊಸೈಟಿಯಲ್ಲಿ ತಂಗಿ ಜನತೆಯ ಸಮಸ್ಯೆಗಳನ್ನು ಆಲಿಸಿದ್ದೆ. ಚುನಾವಣೆ ಫಲಿತಾಂಶ ಏನೇ ಆಗಿರಲಿ ನಾನು ಮತ್ತೆ ಬರುವೆ. ತಮ್ಮೊಂದಿಗೆ ಬೆರೆತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವೆ ಎಂದರು.

ಗ್ರಾಪಂ ಅಧ್ಯಕ್ಷೆ ಡಿ.ತಾರಾ, ಉಪಾಧ್ಯಕ್ಷೆ ಭಾರತಿ ಪಾಟೀಲ್, ಮುಖಂಡರಾದ ಶಂಕರಗೌಡ, ಮೇಘರಾಜ, ವೆಂಕಟೇಶ್, ಹೇಮಗಿರಿ, ಸಣ್ಣ ನೀಲಪ್ಪ, ಅನ್ವರ್, ಲಕ್ಷ್ಮಿ, ಎರಿಸ್ವಾಮಿ, ಅಂಜನಪ್ಪ, ಸೋಮಶೇಖರ್, ಹಜರತ್ ಖಾನ್, ಮಹ್ಮದ್ ಹಾಗೂ ಇತರರಿದ್ದರು.

Exit mobile version