ವಿಜಯನಗರ: ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ನಗರದ 5, 6 ಹಾಗೂ ಏಳನೇ ವಾರ್ಡ್ ಗಳಲ್ಲಿ ಬುಧವಾರ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಾರ್ಥ ಸಿಂಗ್, ಪ್ರಧಾನಿ ಮೋದಿ ಅವರು ವಿಜಯನಗರದ ಜಿಲ್ಲೆಗೆ ಬಂದು ಹೋಗಿದ್ದರಿಂದ ಕಾರ್ಯಕರ್ತರಲ್ಲಿ ಮತ್ತಷ್ಟು ಹುಮ್ಮಸ್ಸು ಹೆಚ್ಚಾಗಿದೆ. ಇಡೀ ಕ್ಷೇತ್ರದ ವಾತಾವರಣ ಬದಲಾಗಿದೆ. ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತ್ತೆ ಬಿಜೆಪಿಗೆ ಅಧಿಕಾರ ಕೊಡಬೇಕು ಎನ್ನುವ ಅಭಿಪ್ರಾಯ ಎಲ್ಲೆಡೆ ವ್ಯಕ್ತ ಆಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: Modi in Karnataka : ಮೋದಿ ಬೆಂಗಳೂರು ರೌಂಡ್ಸ್ಗೆ ಭರ್ಜರಿ ಸಿದ್ಧತೆ; ಮೇ 6ರಂದು ಇಡೀ ದಿನ ರೋಡ್ ಶೋ
ಹೊಸಪೇಟೆ ನಗರಸಭೆ ವ್ಯಾಪ್ತಿಯ 35 ವಾರ್ಡ್ ಗಳ ಪೈಕಿ 20ನೇ ವಾರ್ಡ್ಗಳಲ್ಲಿ ಈಗಾಗಲೇ ಪ್ರಚಾರ ಸಂಪೂರ್ಣ ಆಗಿದೆ. ಇನ್ನು ಹತ್ತು ವಾರ್ಡ್ ಗಳಿವೆ, ಒಂದು ವಾರದಲ್ಲಿ ಉಳಿದ ಎಲ್ಲಾ ವಾರ್ಡ್ ಗಳಲ್ಲಿ ಪ್ರಚಾರವನ್ನು ಸಂಪೂರ್ಣ ಮಾಡುತ್ತೇವೆ ಎಂದು ಹೇಳಿದರು.
ಆರನೇ ವಾರ್ಡ್ ನಲ್ಲಿ ಪ್ರಚಾರಕ್ಕೂ ಮುನ್ನ ಬಿಜೆಪಿ ಕಟ್ಟಾ ಕಾರ್ಯಕರ್ತ ಮಂಜು ಎಂಬುವವರ ಮನೆಯಲ್ಲಿ ಸಿದ್ದಾರ್ಥ ಸಿಂಗ್ ಭೋಜನ ಸವಿದರು.
ಇದನ್ನೂ ಓದಿ: Acid Attack: ಮನೆಯ ಸೌಂದರ್ಯಕ್ಕೆ ಧಕ್ಕೆ; ಜಯನಗರದಲ್ಲಿ ಮರಕ್ಕೆ ಆ್ಯಸಿಡ್ ಹಾಕಿದ ದುರುಳರು
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.