Site icon Vistara News

NDA vs INDIA: ಕಾಂಗ್ರೆಸ್‌ ಜತೆಗಿನ ಪಕ್ಷಗಳನ್ನು ʼತುಂಡರಸರುʼ ಎಂದ ಬಿಜೆಪಿ: ಈಸ್ಟ್‌ INDIAಗೆ ಹೋಲಿಕೆ!

bjp poster about opposition meet

ಬೆಂಗಳೂರು: ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಲು ಬೆಂಗಳೂರಿನಲ್ಲಿ ಸೇರಿದ್ದ ಪ್ರತಿಪಕ್ಷಗಳು ಮೈತ್ರಿಕೂಟಕ್ಕೆ INDIA ಎಂದು ಹೆಸರಿಟ್ಟಿವೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿ (NDA vs INDIA), ವಿಪಕ್ಷಗಳ ಮೈತ್ರಿಕೂಟವನ್ನು ಈಸ್ಟ್‌ ಇಂಡಿಯಾ ಕಂಪನಿಗೆ ಹೋಲಿಕೆ ಮಾಡಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ, ಭಾರತ ಸಮೃದ್ಧವಾದಾಗಲೆಲ್ಲಾ INDIA ಹೆಸರಿನಲ್ಲಿ ಖದೀಮ ಕಂಪನಿಗಳು ಹುಟ್ಟಿಕೊಳ್ಳುತ್ತವೆ. ಅಂದು ಬ್ರಿಟಿಷ್‌ ಈಸ್ಟ್‌ INDIA ಕಂಪನಿ ಸ್ಥಾಪಿತವಾಗಿ ಭಾರತದ ತುಂಡರಸರನ್ನೆಲ್ಲಾ ಸೇರಿಸಿ ದೇಶವನ್ನು ಕೊಳ್ಳೆ ಹೊಡೆಯಿತು. ಇಂದು ಮತ್ತೊಮ್ಮೆ ಸಮೃದ್ಧ ಭಾರತವನ್ನು ಕೊಳ್ಳೆ ಹೊಡೆಯಲು ಹೊಂಚು ಹಾಕಿ ಇಟಲಿ ಈಸ್ಟ್‌ INDIA ಕಂಪನಿಯ ಘೋಷಣೆಯಾಗಿದೆ. ಆದರೆ ಈ ಕಂಪನಿ ಸದ್ಯದಲ್ಲೇ ಬರ್ಕಾಸ್ತಾಗಲಿರುವುದು ನಿಶ್ಚಿತ ಹೇಳಿದೆ.

ಮತ್ತೊಂದು ಟ್ವೀಟ್‌ನಲ್ಲಿ ಹೊಸ ಹೆಸರಿನ ಹಳೆ ಭ್ರಷ್ಟರ ಕೂಟ ಭಾರತೀಯರನ್ನು ವಂಚಿಸಲು ಸಂಚು ರೂಪಿಸಿದೆ. ಇದು ಇಟಾಲಿಯನ್‌ ಈಟ್‌ ಇಂಡಿಯಾ ಕಂಪನಿ. ಎಚ್ಚರ.. ಎಚ್ಚರ.. ಎಚ್ಚರ..! ಟೀಕಿಸಲಾಗಿದೆ.

ಇದನ್ನೂ ಓದಿ | NDA vs INDIA: ಲೋಕಸಭೆ ಫೈನಲ್‌ಗೆ ಬೆಂಗಳೂರಲ್ಲಿ ರಣಘೋಷ: ಟೀಂ INDIA ನಡೆಸಲಿದ್ದಾರೆ 11 ಆಟಗಾರರು!

ಲೋಕಸಭೆಗೆ NDA vs INDIA: ಮೋದಿ ವಿರೋಧಿ ಪ್ರತಿಪಕ್ಷಕ್ಕೆ ಹೊಸ ಹೆಸರು

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಎನ್‌ಡಿಎಗೆ ಪ್ರತಿಯಾಗಿ ಬೆಂಗಳೂರಿನಲ್ಲಿ ನಡೆದಿರುವ ಮಹಾಘಟಬಂಧನಕ್ಕೆ (Opposition Meet) INDIA ಎಂದು ನಾಮಕರಣ ಮಾಡುವ ಸಾಧ್ಯತೆಯಿದೆ. ಕಾಂಗ್ರೆಸ್‌ ಸರ್ಕಾರವಿರುವ ಕರ್ನಾಟಕಕ್ಕೆ ಇಡೀ ದೇಶದ ರಾಜಕಾರಣ ಶಿಫ್ಟ್‌ ಆಗಿದ್ದು, ಖಾಸಗಿ ಹೋಟೆಲ್‌ನಲ್ಲಿ 23 ಪಕ್ಷಗಳ 45ಕ್ಕೂ ಹೆಚ್ಚು ಪ್ರಮುಖ ನಾಯಕರು ಭಾಗವಹಿಸಿದ್ದಾರೆ.

ಈ ಹಿಂದೆ ಯುಪಿಎ ಎಂದು ನಾಮಕರಣ ಮಾಡಲಾಗಿತ್ತು. ಕಾಂಗ್ರೆಸ್‌ ನೇತೃತ್ವದ ಯುಪಿಎಯಲ್ಲಿ ಅನೇಕ ಪಕ್ಷಗಳಿದ್ದವು. ಯುಪಿಎ-1 ಹಾಗೂ ಯುಪಿಎ-2ರ ಮೈತ್ರಿಕೂಟವು ಒಟ್ಟು 10 ವರ್ಷ ದೇಶವನ್ನು ಆಳಿತು. ನಂತರ 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಯುಪಿಎ ಬಲಗುಂದಿದೆ.

ಪ್ರತಿಪಕ್ಷಗಳು ಛಿದ್ರಛಿದ್ರವಾಗಿ ಒಡೆದುಹೋಗಿವೆ. ಒಂದೇ ರಾಜ್ಯದಲ್ಲಿ ವಿರುದ್ಧವಿರುವ ಎರಡು ಪಕ್ಷಗಳು ಒಟ್ಟಿಗೆ ಸೇರಬೇಕಾದ ಅನಿವಾರ್ಯತೆ ಎದುರಾಗಿದೆ. ಯುಪಿಎ ಬದಲಿಗೆ ಬೇರೆ ಹೆಸರನ್ನು ಇರಿಸಬೇಕು ಎಂಬ ಚರ್ಚೆ ಬೆಂಗಳೂರಿನಲ್ಲಿ ನಡೆದಿದೆ.

ಇದನ್ನೂ ಓದಿ | NDA vs INDIA : ಮಿತ್ರ ಕೂಟಕ್ಕೆ INDIA ಹೆಸರಿಟ್ಟಿದ್ದು ಯಾರು? ಚುನಾವಣಾ ಚಾಣಕ್ಯರಲ್ಲ, ಒಬ್ಬ ಮಹಿಳಾ ಲೀಡರ್‌!

INDIA ಎಂದರೆ Indian National Developmental Inclusive Alliance ಎಂದಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಸಭೆಯು ಇನ್ನೂ ನಡೆಯುತ್ತಿದೆ. ಕೆಲ ಹೊತ್ತಿನಲ್ಲೇ ಈ ಕುರಿತು ಅಧಿಕೃತ ಹೇಳಿಕೆ ಹೊರಬೀಳಬಹುದು ಎನ್ನಲಾಗಿದೆ.

ಈ ವೇಳೆಗಾಗಲೆ ಟಿಎಂಸಿ ಸಂಸದ ಡೆರೆಕ್‌ ಒ ಬ್ರಿಯಾನ್‌ ಟ್ವೀಟ್‌ ಮಾಡಿದ್ದಾರೆ. ಚಕ್‌ ದೇ INDIA ಎಂದು ತಿಳಿಸಿದ್ದಾರೆ. ಇದು INDIA ಹೆಸರೇ ಅಂತಿಮಗೊಳ್ಳಬಹುದು ಎನ್ನುವುದರ ಮುನ್ಸೂಚನೆ ನೀಡಿದೆ.

Exit mobile version