Site icon Vistara News

Tippu sultan : ಬಿಜೆಪಿಗೆ ನಾಯಕರೇ ಇಲ್ಲ, ಅದಕ್ಕಾಗಿ ಉರಿ ಗೌಡ, ನಂಜೇಗೌಡರನ್ನು ಕರೆತಂದಿದ್ದಾರೆ ಎಂದ ಚೆಲುವರಾಯಸ್ವಾಮಿ

Cheluvarayaswamy

#image_title

ಮಂಡ್ಯ: ಬಿಜೆಪಿಗೆ ರಾಜ್ಯದಲ್ಲಿ ನಾಯಕರೇ ಇಲ್ಲ. ನರೇಂದ್ರ ಮೋದಿ, ಅಮಿತಾ ಶಾರಂಥ ನಾಯಕರನ್ನು ರಾಜ್ಯದ ಜನರು ಒಪ್ಪಲ್ಲ, ಹೀಗಾಗಿ ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಉರಿಗೌಡ, ನಂಜೇ ಗೌಡರವನ್ನು ಕರೆ ತಂದಿದ್ದಾರೆ (Tippu sultan) ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಕೊಪ್ಪದಲ್ಲಿ ಮಾತನಾಡಿದ ಅವರು, ಉರಿಗೌಡ ನಂಜೇಗೌಡ ಪ್ರಸ್ತಾಪ ಬೇಡ ಎಂಬ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಶ್ರೀಗಳ‌ ಹೇಳಿಕೆ ಸರಿಯಾಗಿದೆ ಎಂದರು.

ʻʻಜೆಡಿಎಸ್‌ ಮತ್ತು ಬಿಜೆಪಿಯವರು ಐದು ವರ್ಷದಲ್ಲಿ‌ ಕೆಟ್ಟ ಆಡಳಿತ ಕೊಟ್ಟಿದ್ದಾರೆ. ಬಿಜೆಪಿಯವರಿಗೆ ಚುನಾವಣೆಗೆ ಹೋಗುವ ನೈತಿಕ ಹಕ್ಕು ಇಲ್ಲʼʼ ಎಂದ ಅವರು, ʻʻಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಯಡಿಯೂರಪ್ಪ ಅವರನ್ನು ದೂರ ಹಾಕಿದ ಮೇಲೆ ಬಿಜೆಪಿ ನಾಯಕತ್ವ ಕುಗ್ಗಿದೆ. ಅಮಿಶ್ ಶಾ, ನರೇಂದ್ರ ಮೋದಿಯನ್ನು ರಾಜ್ಯದ ಜನರು ಒಪ್ಪಲ್ಲ. ಇದಕ್ಕಾಗಿ ಬಿಜೆಪಿ ಉರಿ ಗೌಡ, ನಂಜೇಗೌಡ ಮೊದಲಾದ ಗೊಂದಲವನ್ನು ಮೂಡಿಸುತ್ತಿದ್ದಾರೆʼʼ ಎಂದು ಹೇಳಿದರು.

ʻʻಜಾತಿ, ಧರ್ಮ, ಯಾವುದೋ‌ ಇತಿಹಾಸ ಹೀಗೆ ಎಲ್ಲವನ್ನೂ ತಿರುಚುವುದು ಬಿಜೆಪಿ ಕೆಲಸ. ಅವರು ಹೇಳಿಕೊಳ್ಳುವಂತಹ ಕೆಲಸಗಳನ್ನು ಮಾಡಿಲ್ಲ. ಹೀಗಾಗಿ ಈ ರೀತಿಯ ಚರ್ಚೆಗಳನ್ನು ಮುನ್ನೆಲೆಗೆ ತಂದಿದ್ದಾರೆ. ಹೀಗಾಗಿ ಸ್ವಾಮೀಜಿಗಳು ಹೇಳಿರುವುದು ಸರಿ ಇದೆ.ʼʼ ಎಂದರು

ʻʻಬಿಜೆಪಿಯದೇ ಸರ್ವೇ ಪ್ರಕಾರ ಈ ಚುನಾವಣೆಯಲ್ಲಿ 60 ಸೀಟ್ ಬರುವ ಸಾಧ್ಯತೆ ಇಲ್ಲ. ಅದಕ್ಕಾಗಿ ಚುನಾವಣೆ ಒಳಗೆ ಏನಾದರೂ ಗೊಂದಲ‌ ಮಾಡಬೇಕೆಂದು ಹೀಗೆ ಮಾಡುತ್ತಿದ್ದಾರೆ. ಆದರೆ, ಎಲ್ಲದಕ್ಕೂ ಮುಂಚೆ ಜನರ ನೆಮ್ಮದಿ ಮುಖ್ಯ ಅಂತಾ ಬಿಜೆಪಿ‌ ತಿಳಿಬೇಕುʼʼ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ನೂರು ಕ್ಷೇತ್ರವಿದೆ

ಸಿದ್ದರಾಮಯ್ಯ ಅವರಿಗೆ ಅವರಿಗೆ ಕ್ಷೇತ್ರ ಸಿಗುತ್ತಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವರಿಗೆ ಒಂದೆರಡು ಕ್ಷೇತ್ರಗಳು ಮಾತ್ರ ಇರುತ್ತವೆ, ಆದರೆ, ಸಿದ್ದರಾಮಯ್ಯ ಅವರಿಗೆ ನೂರು ಕ್ಷೇತ್ರಗಳಿವೆ. ಹೈಕಮಾಂಡ್ ನಿಮ್ಮ ತೀರ್ಮಾನ ನಿಮಗೆ ಬಿಟ್ಟಿದ್ದು ಅಂತ ಹೇಳಿದೆ. ನೀವು ಎಲ್ಲಾದರೂ ನಿಲ್ಲಬಹುದು ಎಂದಿದೆ. ಬಾದಾಮಿಯಲ್ಲಿಯು 100% ಗೆಲ್ಲುವ ರಿಪೋರ್ಟ್ ಬಂದಿದೆ. ಬಾದಾಮಿ ಜನರು ಬಹಳಷ್ಟು ಒತ್ತಾಯ ಮಾಡುತ್ತಿರುವುದರಿಂದ ಯೋಚನೆ ಮಾಡಿ ಎಂದಿದೆ. ಮೈಸೂರು-ಚಾಮರಾಜನಗರ ಜನ ವರುಣಾಕ್ಕೆ ಬನ್ನಿ ಅಂತಿದ್ದಾರೆ. ಕೋಲಾರದಲ್ಲಂತೂ ದೊಡ್ಡ ಡಿಮ್ಯಾಂಡ್‌ ಇದೆ. ಹಾಗಾಗಿ ನಮ್ಮ ಹೈಕಮಾಂಡ್ ನೀವೆ ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂದಿದೆ. ಅಪೇಕ್ಷೆಪಡುವ ಜನರರಿಗೆ ಬೇಸರ ಆಗೋ ಹಾಗೆ ಮಾಡಬೇಡಿ ಎನ್ನುವ ಸಲಹೆ ಕೊಟ್ಟಿದೆ ಎಂದರು.

ʻʻಸಿದ್ದರಾಮಯ್ಯ ಅವರು ಒಂದೇ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎಂಬ ಮಾಹಿತಿ ಇದೆ. ಆದರೆ ಎಲ್ಲಿ ನಿಲ್ತಾರೆ ಅನ್ನೋದನ್ನು ಯುಗಾದಿ ಹಿಂದೆ ಮುಂದೆ ತಿಳಿಸುತ್ತಾರೆʼʼ ಎಂದು ಹೇಳಿದ ಚೆಲುವರಾಯ ಸ್ವಾಮಿ ಅವರು, ʻʻಕೋಲಾರದಲ್ಲಿಯು ಗೆಲ್ತಾರೆ ಎನ್ನುವ ರಿಪೋರ್ಟ್ ಇದೆ. ಬಾದಾಮಿಯಲ್ಲಿ ಕಳೆದ ಬಾರಿಗಿಂತ ಉತ್ತಮ ಫಲಿತಾಂಶ ಬರುವ ರಿಪೋರ್ಟ್ ಇದೆ. ಇದೇ ನಿಮ್ಮ ಕೊನೆ ಚುನಾವಣೆ ಆದರೆ ವರುಣಾದಿಂದಲೆ ಮಾಡಿ ಅಂತ ಕ್ಷೇತ್ರದ ಜನರ ಹೇಳ್ತಿದ್ದಾರೆ. ಹೀಗಾಗಿ ಅವರಿಗೆ ಗೊಂದಲ ಇದೆ. ಚಾಮುಂಡೇಶ್ವರಿಯಿಂದ ಸ್ಪರ್ಧಿಸಿದರೂ ಗೆಲ್ಲಿಸುತ್ತೇವೆ ಅಂತಿದ್ದಾರೆʼʼ ಎಂದರು.

Exit mobile version