ಬೆಂಗಳೂರು: ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಮತ್ತು ಕಾಂಗ್ರೆಸ್ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಿಂದ ಬಿಜೆಪಿಗೆ ನಡುಕ ಉಂಟಾಗಿದೆ ಎಂದು ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿದ್ದಾರೆ.
ʻʻಸಾಮೂಹಿಕ ನಾಯಕತ್ವ ಕಟ್ಟುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಮಾವೇಶ ಮಾಡಿದೆ. ಅದಕ್ಕಾಗಿ ಬಿಜೆಪಿಗೆ ಭಯ ಶುರುವಾಗಿದೆʼʼ ಎಂದು ಸಲೀಂ ಅಹಮದ್ ಹೇಳಿದರು.
ʻʻನಾವು ನಾಡಿದ್ದು ಮಾಡುವ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾವೇಶದಿಂದಲೂ ಬಿಜೆಪಿಗೆ ಭಯ ಶುರುವಾಗಿದೆ. ಅಂದು ಒಂದು ಲಕ್ಷ ಜನ ಭಾಗವಹಿಸುವ ಬೃಹತ್ ಕಾರ್ಯಕ್ರಮ ಆಯೋಜನೆಯಾಗಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿರುವ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಮೂರನೇ ಸಭೆ ಮಾಡಿದ್ದೇವೆ. ರಾಜ್ಯದ ಎಲ್ಲ 224 ಕ್ಷೇತ್ರದಿಂದಲೂ ಜನ ಆಗಮಿಸಿದ್ದರುʼʼ ಎಂದು ತಿಳಿಸಿದರು.
ʻʻಅಂದು ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೆ ದೊಡ್ಡ ಮಟ್ಟದ ಕಾಲ್ನಡಿಗೆ ಕಾರ್ಯಕ್ರಮವಿದೆ. ಸಾಹಿತಿಗಳು, ಹೋರಾಟಗಾರರು ಎಲ್ಲರೂ ರಾಷ್ಟ್ರಧ್ವಜ ಹಿಡಿದು ಸಾಗಲಿದ್ದಾರೆ. ಒಂದು ದೊಡ್ಡ ಕಾರ್ಯಕ್ರಮ ಇದಾಗಲಿದೆʼʼ ಎಂದು ಹೇಳಿದರು.
ಅಮಿತ್ ಶಾ ಬೈದಿದ್ದು ನಾಚಿಕೆ ಆಗಬೇಕು
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಿದ್ದಾಗ ಬಿಜೆಪಿ ನಾಯಕರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಸಲೀಂ ಅಹಮದ್ ಹೇಳಿದ್ದಾರೆ. ಸಂಘಟನೆ ಸರಿಯಾಗಿ ಮಾಡಿ ಎಂದು ಅಮಿತ್ ಶಾ ಕೈಯಲ್ಲಿ ಬೈಸಿಕೊಂಡಿರುವ ಬಿಜೆಪಿಯವರಿಗೆ ನಾಚಿಕೆ ಆಗಬೇಕು ಎಂದು ಹೇಳಿದರು ಸಲೀಂ ಅಹಮದ್.
ಇದನ್ನೂ ಓದಿ| ಸಿದ್ದರಾಮೋತ್ಸವ ಎಫೆಕ್ಟ್ ಕಡೆಗಣಿಸುವಂತಿಲ್ಲ; ಅಮಿತ್ ಶಾಗೆ ಯಡಿಯೂರಪ್ಪ ರಿಪೋರ್ಟ್