Site icon Vistara News

BJP Karnataka: ವಿಧಾನಸಭೆ, ವಿಧಾನ ಪರಿಷತ್ ಉಪಚುನಾವಣೆ; 4 ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳ ನೇಮಕ

BJP Karnataka

ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭೆ, ಒಂದು ಸ್ಥಾನಕ್ಕೆ ವಿಧಾನ ಪರಿಷತ್ ಉಪಚುನಾವಣೆ ಹಿನ್ನೆಲೆಯಲ್ಲಿ ಉಸ್ತುವಾರಿಗಳನ್ನು ನೇಮಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ, ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳನ್ನು (BJP Karnataka) ನೇಮಿಸಲಾಗಿದೆ.

ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಉಸ್ತುವಾರಿ ನಾಯಕರು ಅಭಿಪ್ರಾಯ ಸಂಗ್ರಹ ಮತ್ತು ವರದಿ ತಯಾರಿಸಿ, ಹೈ ಕಮಾಂಡ್‌ಗೆ ನೀಡಲಿದ್ದಾರೆ.

ಉಸ್ತುವಾರಿಗಳ ಪಟ್ಟಿ

ದಕ್ಷಿಣ ಕನ್ನಡ (ಸ್ಥಳೀಯ ಸಂಸ್ಥೆ)

ಬಸವರಾಜ್ ಬೊಮ್ಮಾಯಿ, ಕೋಟ ಶ್ರೀನಿವಾಸ್ ಪೂಜಾರಿ, ಬ್ರಿಜೇಶ್ ಚೌಟ, ಪ್ರೀತಂ ಗೌಡ

ಶಿಗ್ಗಾಂವಿ

ಆರ್. ಅಶೋಕ್, ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಪಿ. ರಾಜೀವ್

ಸಂಡೂರು

ಗೋವಿಂದ ಕಾರಜೋಳ, ಸುನೀಲ್ ಕುಮಾರ್, ಎನ್.ರವಿಕುಮಾರ್, ಕೆ.ಎಸ್ ನವೀನ್

ಚನ್ನಪಟ್ಟಣ

ಸಿ.ಎನ್ ಅಶ್ವತ್ಥ್‌ ನಾರಾಯಣ್, ಎಂ.ಕೃಷ್ಣಪ್ಪ, ಗೋಪಿನಾಥ್ ರೆಡ್ಡಿ, ನಂದೀಶ್ ರೆಡ್ಡಿ

ರಾಜ್ಯ ಬಿಜೆಪಿಗೆ ನೂತನ ಉಸ್ತುವಾರಿ, ಸಹ ಉಸ್ತುವಾರಿ ನೇಮಕ

ಬೆಂಗಳೂರು: ರಾಜ್ಯ ಬಿಜೆಪಿಗೆ (BJP Karnataka) ನೂತನ ಉಸ್ತುವಾರಿ, ಸಹ ಉಸ್ತುವಾರಿಯನ್ನು ನೇಮಕ ಮಾಡಲಾಗಿದೆ. ಉಸ್ತುವಾರಿಯಾಗಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಮತ್ತು ಸಹ ಉಸ್ತುವಾರಿಯಾಗಿ ಪ್ರಭಾಕರ್ ರೆಡ್ಡಿ ನೇಮಕವಾಗಿದ್ದಾರೆ. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಆಗಿದ್ದ ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ರಾಜ್ಯ ಬಿಜೆಪಿ ನೂತನ ಉಸ್ತುವಾರಿಯಾಗಿ ಮುಂದುವರಿಸಲಾಗಿದೆ.

ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಿಗೆ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಅವರು ಆದೇಶ ಹೊರಡಿಸಿದ್ದು, ಕರ್ನಾಟಕದ ಉಸ್ತುವಾರಿಯಾಗಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಮತ್ತು ಸಹ ಉಸ್ತುವಾರಿಯಾಗಿ ಪ್ರಭಾಕರ್ ರೆಡ್ಡಿ ನೇಮಕ ಮಾಡಲಾಗಿದೆ.

ಚನ್ನಪಟ್ಟಣದಲ್ಲಿ ನನ್ನ ಪತ್ನಿ ಸ್ಪರ್ಧಿಸಲ್ಲ: ಸಂಸದ ಡಾ.ಸಿ.ಎನ್. ಮಂಜುನಾಥ್‌ ಸ್ಪಷ್ಟನೆ

Channapatna By Election

ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಗೆ (Channapatna By Election) ಅನುಸೂಯ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿ ಇದೆ. ಆದರೆ, ಯಾವುದೇ ಕಾರಣಕ್ಕೂ ಅನುಸೂಯ ಸ್ಪರ್ಧೆ ಮಾಡಲ್ಲ ಎಂದು ಬಿಜೆಪಿ ಸಂಸದ ಡಾ.ಸಿ.ಎನ್‌. ಮಂಜುನಾಥ್‌ ಸ್ಪಷ್ಟನೆ ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಪತ್ನಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನೂರಕ್ಕೆ ನೂರು ಪರ್ಸೆಂಟ್ ನನ್ನ ಪತ್ನಿ ನಿಲ್ಲಲ್ಲ. ಕೆಲವು ಪತ್ರಿಕೆ, ಮಾಧ್ಯಮದಲ್ಲಿ ಅನಸೂಯ ಸ್ಪರ್ಧಿಸುತ್ತಾರೆ ಎಂದು ಬಂದಿದೆ. ಇದು ನಮಗೆ ಬಹಳಷ್ಟು ಮುಜುಗರ ತರಿಸಿದೆ. ಅನುಸೂಯ ಯಾವುದೇ ಕಾರಣಕ್ಕೂ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | MyMUL President: ಸಚಿವ ಕೆ.ವೆಂಕಟೇಶ್ ಕಿರುಕುಳದಿಂದಲೇ ಮೈಮುಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ: ಪಿ.ಎಂ.ಪ್ರಸನ್ನ

ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್ ಅವರು ಸ್ಪರ್ಧಿಸುವ ಸಾಧ್ಯತೆ ಇರುವುದರಿಂದ ಡಿ.ಕೆ. ಸಹೋದರರನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು, ಸಂಸದ ಡಾ.ಸಿ.ಎನ್.ಮಂಜುನಾಥ್ ಪತ್ನಿಯನ್ನು ಕಣಕ್ಕಿಳಿಸಲಿವೆ ಎಂದು ಚರ್ಚೆಯಾಗುತ್ತಿತ್ತು. ಮಹಿಳಾ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಅನಸೂಯ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿತ್ತು. ಇದಕ್ಕೆ ಡಾ.ಮಂಜುನಾಥ್‌ ಅವರು ಸ್ಪಷ್ಟನೆ ನೀಡಿದ್ದಾರೆ.

Exit mobile version