ಬೆಂಗಳೂರು: ಮೀನಿಗೆ ಗಾಳ ಹಾಕಿ ಕಾಯುತ್ತ ಕೂರುವುದು ಪ್ರಾಮಾಣಿಕ ಕಾಯಕವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (dk shivakumar) ಅವರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ (Pramod Madhwaraj) (BJP Karnataka) ತಿರುಗೇಟು ನೀಡಿದ್ದಾರೆ.
ಬೈಂದೂರಿನಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ಬೇಡ ಬೇಡ ಎಂದು ಹೇಳಿದರೂ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರಿದರು. ಅವರಿಗೆ ಅಲ್ಲಿ ಏನೂ ಸಿಕ್ಕಿಲ್ಲ. ಕನಿಷ್ಠ ಪಕ್ಷ ಮಧ್ವರಾಜ್‌ಗೆ ಬಿಜೆಪಿ ವೇದಿಕೆಯಲ್ಲಿ ಕೂರುವ ಅವಕಾಶವೂ ಸಿಕ್ಕಿಲ್ಲ.
ಹಾಗಾಗಿ ಮಧ್ವರಾಜ್ ಮೀನಿಗೆ ಗಾಳ ಹಾಕ್ತಾ ಕೂತ್ಕೋಬೇಕಷ್ಟೇ. ಅವರು ಎಂಎಲ್‌ಸಿ ಆಗೋ ಆಸೆಯನ್ನು ಬಿಡುವುದು ಒಳ್ಳೆಯದು. ಮಧ್ವರಾಜ್ ಬಿಜೆಪಿಗೆ ಹೋದರೂ ಅವರ ಜತೆ ಒಬ್ಬನೂ ಕಾರ್ಯಕರ್ತ ಕೂಡ ಹೋಗಿಲ್ಲ. ಅದಕ್ಕಾಗಿ ನಾನು ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಮಧ್ವರಾಜ್, ಡಿಕೆಶಿ ತಮ್ಮ ರಾಜಕೀಯ ಜೀವನ ಪ್ರಾರಂಭ ಮಾಡಿದಾಗ ಅವರ ಆರ್ಥಿಕ ಪರಿಸ್ಥಿತಿ ಹೇಗಿತ್ತು? ಈಗ ಡಿಕೆಶಿ ಆರ್ಥಿಕ ಪರಿಸ್ಥಿತಿ ಹೇಗಿದೆ ಅಂತ ನನಗೆ ಚೆನ್ನಾಗಿ ಗೊತ್ತು.
ಮೀನಿಗೆ ಗಾಳ ಹಾಕಿ ಮಾಡುವ ಕಾಯಕ ಪ್ರಾಮಾಣಿಕ ಕಾಯಕ. ನಾನು ರಾಜಕೀಯದಲ್ಲಿ ಪ್ರಾಮಾಣಿಕತೆಯನ್ನೇ ಕಾಪಾಡಿಕೊಂಡು ಬಂದಿದ್ದೇನೆ. ಕೋಟ್ಯಂತರ ರೂ. ಲೂಟಿ ಮಾಡಿ ತಮ್ಮ ಸಾಮ್ರಾಜ್ಯ ಬೆಳೆಸೋದಕ್ಕಿಂತ ಮೀನು ಹಿಡಿದು ಜೀವನ ಮಾಡೋದೇ ಲೇಸು ಎಂದಿದ್ದಾರೆ.
ಇದನ್ನೂ ಓದಿ: Karnataka Elections 2023 : ಬಿಎಸ್‌ವೈ ಕರೆಗೆ ಕರಗಿದ ರಘುಪತಿ ಭಟ್; ಯಶ್ಪಾಲ್ ಸುವರ್ಣ 60 ಸಾವಿರ ಮತದಲ್ಲಿ ಗೆಲ್ತಾರೆ ಅಂದ್ರು