ಬೆಂಗಳೂರು: ಮೀಸಲಾತಿ, ಕೇಂದ್ರ- ರಾಜ್ಯದ ಡಬಲ್ ಎಂಜಿನ್ ಬಿಜೆಪಿ ಸರ್ಕಾರಗಳ ಸಾಧನೆಗಳನ್ನು ಜನಮನಕ್ಕೆ ತಲುಪಿಸಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ತಿಳಿಸಿದರು.
ಮೈಸೂರು ಮಾಧ್ಯಮ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಕುಮಾರ್, ಸಮಾಜದಲ್ಲಿ ಪತ್ರಿಕೆ ಓದುವಂಥವರು, ಟಿ.ವಿ ನೋಡುವಂತಹವರು ಕೋಟ್ಯಂತರ ಸಂಖ್ಯೆಯಲ್ಲಿ ಇದ್ದಾರೆ. ಆ ಹಿನ್ನೆಲೆಯಲ್ಲಿ ಮನೆಮನೆಗೆ ಮನ ಮನಗಳಿಗೆ ಭಾರತೀಯ ಜನತಾ ಪಾರ್ಟಿ ವಿಚಾರಗಳು, ನಮ್ಮ ಪಕ್ಷದ ಸರ್ಕಾರಗಳ ಸಾಧನೆಯನ್ನು ತಿಳಿಸುವುದೇ ಈ ಮಾಧ್ಯಮ ಕೇಂದ್ರದ ಉದ್ದೇಶ.
ಪತ್ರಿಕೆಗಳಿಗೆ, ಟಿವಿಗಳಿಗೆ, ಸುದ್ದಿಗಳಿಗೆ ಬಹಳ ದೊಡ್ಡ ಕೇಂದ್ರ ಮೈಸೂರು. ಬೆಂಗಳೂರು ಬಿಟ್ಟರೆ ಮೈಸೂರು ಬಹಳ ದೊಡ್ಡ ಕೇಂದ್ರ. ಆ ಹಿನ್ನೆಲೆಯಲ್ಲಿ ಈ ಕೇಂದ್ರವನ್ನು ಉದ್ಘಾಟನೆ ಮಾಡಿದ್ದೇವೆ. ಈ ಒಂದು ಕೇಂದ್ರದಿಂದ ಈ ಭಾಗದಲ್ಲಿ ಬರುವಂತಹ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಕೊಡಗು, ಮಂಗಳೂರು-ಬೆಂಗಳೂರಿನವರೆಗೆ ಇಲ್ಲಿಂದ ಸಾಕಷ್ಟು ವಿಚಾರಗಳನ್ನು ಸಮಾಜದ ಜನತೆಗೆ ತಲುಪಿಸಬೇಕಾಗಿದೆ ಎಂದರು.
ಒಳ ಮೀಸಲಾತಿ ಕೊಡುಬೇಕೆಂದು ಎಸ್‌ಸಿ ಸಮುದಾಯ ಹೋರಾಟ ಮಾಡಿತ್ತು. ಕಾಂಗ್ರೆಸ್ ಕಾಲವನ್ನು ತಳ್ಳುತ್ತಾ ಬಂತೇ ವಿನಹ, ಅವರನ್ನ ದಶಕಗಳ ದಶಕಗಳ ಕಾಲ ಕೇವಲ ತಮ್ಮ ಮತ ಬ್ಯಾಂಕ್ ಮಾಡಿಕೊಂಡಿದ್ದರು. ಒಂದು ತರಹ ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕುವಂತ ಒತ್ತೆಯಾಳುಗಳಾಗಿ ಮಾಡಿಕೊಂಡಿದ್ದರು. ಶೋಷಿತರು ವಿಶೇಷವಾಗಿ ಎಸ್.ಸಿ ಸಮುದಾಯದವರು ಒತ್ತೆಯಾಳುಗಳಾಗಿ ಬಿಟ್ಟಿದ್ದರು ಎಂದು ಟೀಕಿಸಿದರು.
ನಮ್ಮ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಒಳ ಮೀಸಲಾತಿಯನ್ನು ನೀಡಿದ್ದಾರೆ. ಸಾಮಾಜಿಕ ಅವಶ್ಯಕತೆ ಯಾರಿಗೆ ಇತ್ತೋ ಅವರಿಗೆ ಸಾಮಾಜಿಕ ನ್ಯಾಯ ಕೊಡತಕ್ಕಂತಹ, ಧ್ವನಿ ಕೊಡುವ ಕಾರ್ಯ ಆಗಿದೆ. ಉದ್ಯೋಗಗಳನ್ನು ಒದಗಿಸುವ ಮತ್ತು ಅನೇಕ ಸವಲತು ನೀಡುವ ಒಂದು ಬಹಳ ದೊಡ್ಡ ಐತಿಹಾಸಿಕ ತೀರ್ಮಾನವನ್ನು ಭಾರತೀಯ ಜನತಾ ಪಾರ್ಟಿ ಸರ್ಕಾರ ಮಾಡಿತು. ಈ ವಿಚಾರಗಳನ್ನ ತೋರಿಸುವ ಒಂದು ಬಹಳ ದೊಡ್ಡ ಕೇಂದ್ರ ಇದಾಗಬೇಕು ಎಂದು ತಿಳಿಸಿದರು.
ಸಂಸದ ಪ್ರತಾಪ ಸಿಂಹ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಗುಜರಾತ್ ಮಾಧ್ಯಮ ಸಂಚಾಲಕ ಯಜ್ಞೇಶ್ ದುವೆ, ಮೈಸೂರು ನಗರ ಜಿಲ್ಲಾಧ್ಯಕ್ಷ ಶ್ರೀವತ್ಸ, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: D ಕೋಡ್ ಅಂಕಣ: ರಾಜಕೀಯ ಹವಾಮಾನ ವರದಿ: ಕಾಂಗ್ರೆಸ್ ಕಡೆಗೆ ಬೀಸುವಂತಿದೆ ತಂಗಾಳಿ; ಪಕ್ಷಾಂತರಿಗಳಿಗೆ ತಿಳಿದಿದೆಯೇ ಒಳಸುಳಿ?