Site icon Vistara News

Jnanayogashrama: ಸಿದ್ದೇಶ್ವರ ಶ್ರೀಗಳು ಮೊಬೈಲೇ ಬಳಸ್ತಾ ಇರಲಿಲ್ಲ ಎನ್ನುವುದನ್ನು ಮುಂದಿನ ಪೀಳಿಗೆ ನಂಬೋದೇ ಕಷ್ಟ ಎಂದರು ಬಿ.ಎಲ್‌.ಸಂತೋಷ್‌

Bjp leaders including B L Santhosh visit Vijayapura Jnana Yogaashrama

#image_title

ವಿಜಯಪುರ: ನಗರದ ಜ್ಞಾನಯೋಗಾಶ್ರಮಕ್ಕೆ (Jnanayogashrama) ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಭಾನುವಾರ ಭೇಟಿ ನೀಡಿ, ಸಿದ್ದೇಶ್ವರ ಶ್ರೀಗಳ ಗುರುಗಳಾದ ಮಲ್ಲಿಕಾರ್ಜುನ ಸ್ವಾಮೀಜಿಗಳ ಕರ್ತೃ ಗದ್ದುಗೆ ದರ್ಶನ ಮಾಡಿ, ಸಿದ್ದೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ನಡೆದ ಸ್ಥಳ ದರ್ಶನ ಮಾಡಿದರು.

ನಂತರ ಆಶ್ರಮದ ಆವರಣದಲ್ಲಿನ ಶ್ರೀ ಸಿದ್ದೇಶ್ವರ ಸ್ವಾಮೀಜಿ‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಆಶ್ರಮದ ಅಧ್ಯಕ್ಷರ ಕೊಠಡಿಗೆ ಭೇಟಿ ನೀಡಿದರು. ಈ ವೇಳೆ ವಿವಿಧ ಸ್ವಾಮೀಜಿಗಳು ಬಿ.ಎಲ್. ಸಂತೋಷ ಅವರಿಗೆ ಸನ್ಮಾನ ಮಾಡಿದರು. ನಗರ‌ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಕೆ.ಎಸ್‌ ಈಶ್ವರಪ್ಪ ಹಾಗೂ ಇತರರು ಸಾಥ್ ನೀಡಿದರು.

ನಂತರ ಬಿ.ಎಲ್.ಸಂತೋಷ್ ಮಾತನಾಡಿ, ಹಲವಾರು ಸಭೆಗಳಲ್ಲಿ ಸಿದ್ದೇಶ್ವರ ಸ್ವಾಮಿಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದೆ. ಅವರು ಭೌತಿಕವಾಗಿ ನಮ್ಮ ಜತೆಗಿಲ್ಲ. ಆದರೆ ಅವರ ಕಾರ್ಯ, ವಿಚಾರಧಾರೆಗಳ ಮೂಲಕ ನಮ್ಮ ಜತೆಗಿದ್ದಾರೆ. ನಾವು ಸಾಮಾನ್ಯ ಜನರು, ಅವರು ಸಾಧಕರು. ನಾವು ಸ್ವಲ್ಪ ಜನರಿಗೆ ನೆನಪಿರುತ್ತೇವೆ, ಆದರೆ ಸಿದ್ದೇಶ್ವರ ಸ್ವಾಮೀಜಿಗಳು ಇಡೀ ಜಗತ್ತಿಗೆ ಗೊತ್ತಿದ್ದಾರೆ ಎಂದು ಹೇಳಿದರು.‌

ಸ್ವಾಮೀಜಿಗಳು ಮಹಾಪುರುಷರು, ಅವರು ಸಾವಿರಾರು ವರ್ಷಗಳ ಕಾಲ ಅವರ ನೆರಳು ಹಾಗೆಯೇ ಇರುತ್ತದೆ. ಮುಂದಿನ ಜನಾಂಗಕ್ಕೆ ಇಂತಹ ಸ್ವಾಮೀಜಿಗಳು ಇದ್ದರು ಎನ್ನುವುದು ನಂಬಿಕೆಗೆ ಬರುವುದಿಲ್ಲ. ನಮ್ಮಂಥವರಿಗೆ 10 ನಿಮಿಷ ಮೊಬೈಲ್ ಇರದೇ ಇರಲು ಸಾಧ್ಯವಿಲ್ಲ. ಆದರೆ, ಸಾಧಕರಿಗೆ ಅಂತಹ ಅವಶ್ಯಕತೆ ಇಲ್ಲ, ಮೊಬೈಲ್ ಇರದೇ ಇದ್ದರು ಎಂಬುದು ಮುಂದಿನ ಪೀಳಿಗೆಗೆ ನಂಬಲಸಾಧ್ಯ ವಿಷಯವಾಗಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ | H D Kumarswamy: ಮಂತ್ರಾಲಯಕ್ಕೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ದಂಪತಿ ಭೇಟಿ; ರಾಯರಿಗೆ ವಿಶೇಷ ಪೂಜೆ ಸಲ್ಲಿಕೆ

ಇಲ್ಲಿರುವವರಿಗೆ ಯಾರಿಗೂ ಸುವಾಸನೆ ಅಗತ್ಯವಿಲ್ಲ, ಸ್ವಾಮಿಜಿಗಳೇ ಸುವಾಸನೆ, ತಂಗಾಳಿ ಇದ್ದಹಾಗೆ. ಪ್ರಕೃತಿ ನಿಯಮಕ್ಕನುಗುಣವಾಗಿ ಭೌತಿಕವಾಗಿ ಅವರು ನಮ್ಮನ್ನು ಅಗಲಿದ್ದಾರೆ. ಲಕ್ಷಾಂತರ ಭಕ್ತರ ನಡುವೆ ಚೇತನ ಸ್ವರೂಪಿಯಾಗಿ ಇದ್ದಾರೆ. ಮಠದ ಎಲ್ಲ ಚಟುವಟಿಕೆಗಳು ಮುಂದೆಯೂ ನಡೆಯಬೇಕು, ಅದನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ನಾವು ಅವರ ದಾರಿಯಲ್ಲಿ ಶೇ.1ರಷ್ಟು ನಡೆದರೆ ಸಾಕು. ಸ್ವಾರ್ಥದ ಯೋಚನೆ ಬೇಡ, ಅದುವೇ ಸ್ವಾಮಿಜಿಗಳಿಗೆ ಸಲ್ಲಿಸುವ ಗೌರವ ಎಂದು ಹೇಳಿದರು.

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ‌ ಮಾತನಾಡಿ, ದೈಹಿಕವಾಗಿ ಸ್ವಾಮೀಜಿ ನಮ್ಮನ್ನು ಅಗಲಿದ್ದಾರೆ. ಆದರೆ, ಅವರು ಶಾಶ್ವತವಾಗಿ ನಮ್ಮ ನೆನಪಿನಲ್ಲಿ ಉಳಿಯಲಿದ್ದಾರೆ. ಪಠ್ಯದಲ್ಲಿ ಶ್ರೀಗಳ ವಿಚಾರಧಾರೆ ಕುರಿತು ಅಳವಡಿಸಲು ಸಿಎಂ ಜತೆಗೆ ಚರ್ಚೆ ಮಾಡಲಾಗುತ್ತದೆ. ಶ್ರೀಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

Exit mobile version