ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnakata Election 2023) ಸಂಬಂಧಿಸಿದಂತೆ ಸ್ವಲ್ಪ ತಡವಾದರೂ ಭರ್ಜರಿಯಾಗಿ ಹಾಗೂ ವ್ಯವಸ್ಥಿತವಾಗಿ ಬಿಜೆಪಿಯು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಮುಖ ಭರವಸೆಗಳ ಜತೆಗೆ ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಪ್ರದೇಶವಾರು ಭರವಸೆಗಳನ್ನು ನೀಡಿದೆ. ಅದರಲ್ಲೂ ಮುಖ್ಯವಾಗಿ ಹಳೇ ಮೈಸೂರು ಭಾಗಕ್ಕೆ ಸಾಕಷ್ಟು ವಿಶೇಷ ಭರವಸೆಗಳನ್ನು ನೀಡಿದೆ. ಈ ಮೂಲಕ ಈ ಬಾರಿ ಹಳೇ ಮೈಸೂರು ಭಾಗದಲ್ಲಿ ತನ್ನ ಸ್ಥಾನ ಸಂಖ್ಯೆಯನ್ನು ಒಂದಿಷ್ಟಾದರೂ ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ನಡೆಸಿದಂತಿದೆ.
ಬೆಂಗಳೂರು ನಗರ, ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ, ಮಲೆನಾಡು ಕರ್ನಾಟಕ ಹಾಗೂ ಹಳೇ ಮೈಸೂರು ಹೀಗೆ ಏಳು ಪ್ರದೇಶಗಳನ್ನಾಗಿ ವಿಂಗಡಿಸಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಹಾಗಿದ್ದರೆ ಯಾವ ಪ್ರದೇಶಕ್ಕೆ ಏನೇನು ಕೊಡುಗೆಯ ಭರವಸೆಗಳನ್ನು ನೀಡಲಾಗಿದೆ ಎಂಬುದನ್ನು ನೋಡೋಣ.
ಇಲ್ಲಿ ನಿರ್ದಿಷ್ಟ ಭಾಗದಲ್ಲಿ ಇದುವರೆಗೆ ಮಾಡಿದ ಸಾಧನೆಗಳು ಒಂದು ಕಡೆಯಾದರೆ ಮುಂದೆ ಮಾಡಲಿರುವ ಕೆಲಸಗಳ ಭರವಸೆಯನ್ನು ಇನ್ನೊಂದು ಕಡೆ ನೀಡಲಾಗಿದೆ.
1. ಬೆಂಗಳೂರು ನಗರಕ್ಕೆ ಬಿಜೆಪಿ ಏನೇನು ಮಾಡಲಿದೆ?
ಬೆಂಗಳೂರು ನಗರದ ಸಂಚಾರದಲ್ಲಿ ಹೊಸ ಕ್ರಾಂತಿ ಮಾಡಲು ಉದ್ದೇಶಿಸಲಾಗಿದೆ. ಒಂದು ಕಾರ್ಡ್ ಬಳಸಿ ಎಲ್ಲ ರೀತಿಯ ಸಾರ್ವಜನಿಕ ಸಾರಿಗೆಯಲ್ಲೂ ಸಂಚರಿಸಬಹುದಾಗಿದೆ. ಇದರ ಜತೆ ಒಂದೇ ವೇದಿಕೆಯಲ್ಲಿ ಯಾವುದೇ ವಾಹನವನ್ನಾದರೂ ಬುಕ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಪ್ರಾಥಮಿಕ ಶಾಲೆಯಲ್ಲಿ ವರ್ಚ್ಯುವಲ್ ರಿಯಾಲಿಟಿ ಲ್ಯಾಬ್, ಅಪಾರ್ಟ್‌ಮೆಂಟ್‌ಗಳಲ್ಲಿ ಇರುವವರಿಗೆ ಮಾಲೀಕತ್ವ ಕಾಯಿದೆಯಲ್ಲಿ ಬದಲಾವಣೆ ಹೀಗೆ ಹಲವು ಹೊಸ ಸಂಗತಿಗಳನ್ನು ಪ್ರಕಟಿಸಲಾಗಿದೆ.
2. ಮಧ್ಯ ಕರ್ನಾಟಕಕ್ಕೆ ಬಿಜೆಪಿ ನೀಡಿರುವ ಭರವಸೆಗಳೇನು?
3. ಕರಾವಳಿ ಕರ್ನಾಟಕಕ್ಕೆ ಬಿಜೆಪಿ ಭರವಸೆಗಳು
4. ಮಲೆನಾಡು ಭಾಗಕ್ಕೆ ಬಿಜೆಪಿ ನೀಡಿರುವ ಭರವಸೆಗಳೇನು?
5. ಕಿತ್ತೂರು ಕರ್ನಾಟಕ ಭಾಗಕ್ಕೆ ಬಿಜೆಪಿ ಭರವಸೆಗಳೇನು?
6.ಕಲ್ಯಾಣ ಕರ್ನಾಟಕಕ್ಕೆ ನೀಡಿದ ಭರವಸೆಗಳು
7. ಹಳೇ ಮೈಸೂರು ಭಾಗಕ್ಕೆ ನೀಡಿದ ಭರವಸೆಗಳೇನು?
ಇದನ್ನೂ ಓದಿ: BJP Manifesto: ಎನ್‌ಆರ್‌ಸಿ, ಏಕರೂಪ ನಾಗರಿಕ ಸಂಹಿತೆ ಜಾರಿ; ಪ್ರಜಾ ಪ್ರಣಾಳಿಕೆಯಲ್ಲಿ ಬಿಜೆಪಿ ಭರವಸೆ