Site icon Vistara News

Viveka School | ಕೇಸರಿ ಬಣ್ಣವನ್ನು ಕಾಂಗ್ರೆಸ್‌ ಹಳದಿ ಕನ್ನಡಕದಿಂದ ನೋಡುತ್ತಿದೆ: ಪಿ. ರಾಜೀವ್‌

MLA Rajeev

ಬೆಂಗಳೂರು: ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡಿ ಕೇಸರಿ ಬಣ್ಣ ಬಳಿಯುವ ವಿವೇಕ ಶಾಲೆ (Viveka School) ಯೋಜನೆಯ ಕುರಿತು ಕುಡಚಿ ಬಿಜೆಪಿ ಶಾಸಕ ಪಿ. ರಾಜೀವ್‌ ಪ್ರತಿಕ್ರಿಯಿಸಿದ್ದು, ಈ ವಿವಾರವನ್ನು ಕಾಂಗ್ರೆಸ್‌ ಹಳದಿ ಕಣ್ಣಿನಿಂದ ನೋಡುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ನವರು ಕೇಸರಿ ಫೋಬಿಯಾದಿಂದ ಬಳಲುತ್ತಿದ್ದಾರೆ. ಕೇಸರಿ ಕಂಡರೆ ನಿಮಗೆ ಇಷ್ಟೊಂದು ಭಯ ಏಕೆ? ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿಕೆ ವಿವೇಕಾನಂದರ ಮೌಲ್ಯಗಳಿಗೆ ಮಾಡಿರುವ ಅಪಮಾನ. ಸ್ಚಾಮಿ ವಿವೇಕಾನಂದರನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ. ಅಂತಹವರ ಬಗ್ಗೆ ಕೀಳಾಗಿ ಮಾತನಾಡಿರುವ ಪ್ರಿಯಾಂಕ್‌ ಖರ್ಗೆ ಕ್ಷಮೆ‌ ಕೇಳಬೇಕು.

ವಿವೇಕಾನಂದರಿಂದ ಸ್ಪೂರ್ತಿಗೊಂಡ ಲಕ್ಷಾಂತರ ಯುವಕರ ಕ್ಷಮೆ ಕೇಳಬೇಕು. ಕಾಂಗ್ರೆಸ್‌ನವರು ಯಾಕೆ‌ ಭಯದಿಂದ ತತ್ತರಿಸುತ್ತಿದ್ದಾರೆ? ಕೇಸರಿ ಎನ್ನವುದು ಅರುಣೋದಯದ ಸಂಕೇತ. ನಿಸರ್ಗದ ಪ್ರಕ್ರಿಯೆ ಆರಂಭವಾಗುವುದೇ ಅರುಣೋದಯದಿಂದ. ಅರುಣೋದಯದ ರೀತಿ ಮಕ್ಕಳ ಭವಿಷ್ಯ ಬೆಳೆಯಬೇಕು. ಇಂಜಿನಿಯರ್, ವಾಸ್ತುಶಿಲ್ಪಿಗಳು ಹಾಕಿ ಕೊಟ್ಟಂತೆ ಕೊಠಡಿ ನಿರ್ಮಿಸುತ್ತಿದ್ದೇವೆ. ಕಾಂಗ್ರೆಸ್‌ನವರು ಹಳದಿ ಕನ್ನಡಕದಿಂದ ನೋಡುವ ಭಾವನೆ ಬದಲಾಯಿಸಿಕೊಳ್ಳಬೇಕು ಎಂದರು.

ಹಿಂದು ಭಾವನೆಗಳಿಗೆ ಧಕ್ಕೆ ತರುವುದೇ ನಿಮ್ಮ‌ ಧ್ಯೇಯವೇ? ಪ್ರಗತಿಶೀಲತೆಯ ಸಂಕೇತವನ್ನು ಏಕೆ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದೀರ? ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರವನ್ನು ಸ್ಥಾಪಿಸಿ ನಮ್ಮ ರಾಷ್ಟ್ರವನ್ನು ಒಡೆದವರು ಕಾಂಗ್ರೆಸ್. ತುಷ್ಟಿಕರಣವನ್ನು ಹುಟ್ಟಿಹಾಕಿದವರೇ ಕಾಂಗ್ರೆಸ್. ಹಿಂದು ಎಂದರೆ ಉರಿದು ಬೀಳುವ ಕಾಂಗ್ರೆಸ್‌ ನಡವಳಿಕೆಯನ್ನು ಜನ ನೋಡುತ್ತಿದ್ದಾರೆ. ನಾವು ಯಾವ ವರ್ಣವನ್ನೂ ವಿರೋಧ ಮಾಡುವುದಿಲ್ಲ. ತುಷ್ಟಿಕರಣವನ್ನು ವಿರೋದ ಮಾಡುತ್ತೇವೆ. ತುಷ್ಟೀಕರಣದಿಂದ ದೇಶದ ಅಸ್ಮಿತೆಗೆ ಪೆಟ್ಟು ಬೀಳುತ್ತಿದೆ. ಕೇಸರಿ ಇಲ್ಲದ ಯಾವ ಉತ್ಸವ ಆಚರಣೆಯೂ ನಮ್ಮ ದೇಶದಲ್ಲಿ ನಡೆಯುವುದಿಲ್ಲ ಎಂದರು.

ಇದನ್ನೂ ಓದಿ | Saffron politics| ವಿವೇಕ ಶಾಲೆ ಕೊಠಡಿಗಳಿಗೆ ಕೇಸರಿ ಬಣ್ಣ: ಮುಖ್ಯಮಂತ್ರಿ ಬೊಮ್ಮಾಯಿ ಸಮರ್ಥನೆ

Exit mobile version