Site icon Vistara News

BJP Protest: ದಾಖಲೆ ನೀಡದೆ ಹೇಡಿಯಂತೆ ಪಲಾಯನ; ಸಿಎಂ ರಾಜೀನಾಮೆ ಪಡೆಯಲು ರಾಜ್ಯಪಾಲರಿಗೆ ಆರ್‌.ಅಶೋಕ್‌ ಮನವಿ

BJP Protest

ಬೆಂಗಳೂರು: ಮುಡಾ ಹಗರಣದಲ್ಲಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿವೇಶನದಲ್ಲಿ ದಾಖಲೆ ನೀಡದೆ ಹೇಡಿಯಂತೆ ಪಲಾಯನ ಮಾಡಿದ್ದಾರೆ. ಅವರ ರಾಜೀನಾಮೆ ಪಡೆಯಲು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ (BJP Protest) ತಿಳಿಸಿದರು.

ಬಿಜೆಪಿ, ಜೆಡಿಎಸ್‌ ಶಾಸಕರೊಂದಿಗೆ ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿ, ಕಾಂಗ್ರೆಸ್‌ ಸರ್ಕಾರ ದೊಡ್ಡ ಹಗರಣಗಳಲ್ಲಿ ಭಾಗಿಯಾಗಿರುವುದು ಜಗಜ್ಜಾಹೀರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಲೂಟಿ ಮಾಡಿದ ಎರಡು ಹಗರಣಗಳು ಬೆಳಕಿಗೆ ಬಂದಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣ ಬಯಲಿಗೆ ಬಂದಿದೆ. ಸಿದ್ದರಾಮಯ್ಯನವರು ಪತ್ನಿಯ ಹೆಸರಲ್ಲಿ 14 ನಿವೇಶನ ಪಡೆದಿದ್ದರೆ, ಅವರ ಕುಟುಂಬದವರು ನೂರಾರು ಸೈಟುಗಳನ್ನು ಪಡೆದಿದ್ದಾರೆ. ಸಂವಿಧಾನ ರಕ್ಷಣೆ ಮಾಡುತ್ತೇನೆಂದು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದವರೇ ಸಂವಿಧಾನವನ್ನು ಭಕ್ಷಣೆ ಮಾಡಿದ್ದಾರೆ ಎಂದು ದೂರಿದರು.

ಈ ಹಗರಣಗಳ ಕುರಿತು ಮಾತನಾಡಲು ಸದನದಲ್ಲಿ ಅವಕಾಶ ನೀಡಿಲ್ಲ. ಸ್ಪೀಕರ್‌ ಕೂಡ ಕಾಂಗ್ರೆಸ್‌ ಕಡೆ ವಾಲಿರುವುದು ಸ್ಪಷ್ಟವಾಗಿದೆ. ವಿರೋಧ ಪಕ್ಷಕ್ಕೆ ಪ್ರಶ್ನೆ ಮಾಡುವ ಅಧಿಕಾರ ಇದೆ. ಆದರೆ ಅದನ್ನು ಮೊಟಕುಗೊಳಿಸಿ, ದಾಖಲೆಗಳನ್ನು ಕೊಡುತ್ತೇವೆಂಬ ಭಯದಿಂದ ಆಡಳಿತ ಪಕ್ಷ ಪಲಾಯನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಡಾದಲ್ಲಿ ದಲಿತರ ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಬಳಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕೂಡ ದಲಿತರಿಗೆ ಸಂಬಂಧಿಸಿದೆ. ಇಷ್ಟೇ ಅಲ್ಲದೆ 25 ಸಾವಿರ ಕೋಟಿ ರೂಪಾಯಿಯನ್ನು ದಲಿತರಿಗೆ ನೀಡದೆ ಬೇರೆ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಇದಕ್ಕಾಗಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಈ ಬಗ್ಗೆ ರಾಜ್ಯಪಾಲರಿಗೆ ದೂರು ಹಾಗೂ ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿಯವರು ಪತ್ರಿಕಾಗೋಷ್ಠಿ ಬದಲು ಅಧಿವೇಶನದಲ್ಲೇ ದಾಖಲೆಗಳನ್ನು ನೀಡಲಿ. ಆಗ ನಾವು ಅಲ್ಲೇ ಪ್ರಶ್ನೆ ಕೇಳಬಹುದಿತ್ತು. ಅದನ್ನು ಬಿಟ್ಟು ಹೇಡಿಯಂತೆ ಪಲಾಯನ ಮಾಡಿದ್ದಾರೆ ಎಂದು ದೂರಿದರು.

ಇದನ್ನೂ ಓದಿ | Assembly session: ಐತಿಹಾಸಿಕ ಸ್ಥಳ, ಸ್ಮಾರಕ ವಿರೂಪಗೊಳಿಸಿದ್ರೆ ಜೈಲು ಫಿಕ್ಸ್‌; ಮಹತ್ವದ ಮಸೂದೆ ಪಾಸ್

Assembly session: ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ; ನಾಳೆ ಮುಗಿಯಬೇಕಿದ್ದ ಕಲಾಪ ಇಂದೇ ಮೊಟಕು!

ಬೆಂಗಳೂರು: ವಿಧಾನ ಮಂಡಲ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದೆ. ಇದರಿಂದ ನಾಳೆ (ಜು.26) ಮುಗಿಯಬೇಕಿದ್ದ ಅಧಿವೇಶನ (Assembly session) ಇಂದೇ ಮೊಟಕುಗೊಂಡಂತಾಗಿದೆ. 16ನೇ ವಿಧಾನ ಸಭೆಯ ನಾಲ್ಕನೇ ಅಧಿವೇಶನ 8 ದಿನಗಳ ಕಾಲ (37 ಗಂಟೆ, 30 ನಿಮಿಷ) ನಡೆದಿದ್ದು, ರಾಷ್ಟ್ರಗೀತೆಯೊಂದಿಗೆ ಅನಿರ್ಧಿಷ್ಟಾವಧಿಗೆ ಕಲಾಪ ಮುಂದೂಡಿಕೆಯಾಗಿದೆ.

ಅಧಿವೇಶನ ಅನಿರ್ಧಿಷ್ಟಾವಧಿ ಮುಂದೂಡಿಕೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರು ರಾಜಭವನಕ್ಕೆ ತೆರಳಲಿದರು. ಸ್ಪೀಕರ್ ನಡೆ ಕಾಂಗ್ರೆಸ್ ಕಡೆ ಎಂದು ಕೂಗಿ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ನಲ್ಲಿ ಭೇಟಿ ಮಾಡಿ ದೂರು ನೀಡಿದ ಬಿಜೆಪಿ-ಜೆಡಿಎಸ್ ನಿಯೋಗ, ಮುಡಾ ಹಗರಣ ವಿಚಾರ ಚರ್ಚೆಗೆ ನೀಡದ ಬಗ್ಗೆ ಹಾಗೂ ನಾಳೆಗೆ ಮುಗಿಯುವ ಅಧಿವೇಶನ ಇಂದೇ ಮೊಟಕುಗೊಳಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸುವಂತೆ ಮನವಿ ಮಾಡಿದ್ದಾರೆ.

12 ವಿಧೇಯಕಗಳ ಅಂಗೀಕಾರ

16ನೇ ವಿಧಾನ ಸಭೆಯ 4ನೇ ಅಧಿವೇಶನದಲ್ಲಿ ಒಟ್ಟು 8 ದಿನಗಳ ಕಲಾಪ ನಡೆದಿದ್ದು, ಪೂರಕ ಅಂದಾಜುಗಳು, ಲೆಕ್ಕಪರಿಶೋಧಕರ ವರದಿ ಮಂಡನೆ ಮಾಡಲಾಗಿದೆ. ಭರವಸೆಗಳ ಸಮಿತಿ, ಕಾಗದ ಪತ್ರಗಳ ಸಮಿತಿ, ಅಂದಾಜು ಸಮಿತಿ, ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಕಲ್ಯಾಣ ಸಮಿತಿ, ಅಲ್ಪಾಸಂಖ್ಯಾತ ಸಮಿತಿಯ ಮೊದಲ ವರದಿ ಮಂಡನೆ ಮಾಡಲಾಗಿದೆ.

ಇದನ್ನೂ ಓದಿ | Assembly session: ಪರಿಷತ್‌ನಲ್ಲೂ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಮಸೂದೆ ಪಾಸ್; ಹೆಚ್ಚಲಿದೆ ಸಿನಿಮಾ ಟಿಕೆಟ್ ದರ, ಒಟಿಟಿ ಶುಲ್ಕ!

12 ವಿಧೇಯಕಗಳನ್ನು ಅಂಗೀಕಾರ ಮಾಡಲಾಗಿದ್ದು, ಗ್ರೇಟರ್ ಬೆಂಗಳೂರು ವಿಧೇಯಕವನ್ನು ಜಂಟಿ ಪರಿಶೀಲನಾ ಸಮಿತಿಗೆ ಒಪ್ಪಿಸಲಾಗಿದೆ. ನಿಯಮ 69 ಅಡಿಯಲ್ಲಿ 14 ಸೂಚನೆಗಳ ಅಂಗೀಕಾರ ಸಿಕ್ಕಿದ್ದು, 117 ಪ್ರಶ್ನೆಗಳಿಗೆ ಉತ್ತರ ಹಾಗೂ 1902 ಪ್ರಶ್ನೆಗಳಿಗೆ ಪೈಕಿ 1438 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. 170 ಗಮನ ಸೆಳೆಯುವ ಸೂಚನೆ ಗಳಿಗೆ ಉತ್ತರ ನೀಡಲಾಗಿದೆ.

ನಾಲ್ಕು ನಿರ್ಣಯ ಪಾಸ್

Exit mobile version