Site icon Vistara News

Shadow CM: ಶ್ಯಾಡೊ ಸಿಎಂ ಯತೀಂದ್ರರದ್ದು ʼಪ್ರಾಕ್ಸಿ ಕ್ಯಾಬಿನೆಟ್‌ʼ: ಬಿಜೆಪಿ ಟೀಕೆ

shadow CM poster

ಬೆಂಗಳೂರು: ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಆದರೆ, ಅಧಿಕಾರಿಗಳ ವರ್ಗಾವಣೆ ಸೇರಿ ವಿವಿಧ ಕಾರ್ಯಗಳನ್ನು ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ಯತೀಂದ್ರರನ್ನು ʼಶ್ಯಾಡೊ ಸಿಎಂʼ ಎಂದು ಕರೆದಿದ್ದ ರಾಜ್ಯ ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಪೋಸ್ಟರ್‌ ವಾರ್‌ ಮುಂದುವರಿಸಿದೆ. ಶ್ಯಾಡೊ ಸಿಎಂ ಯತೀಂದ್ರ ಸರ್ಕಾರದಲ್ಲಿರುವುದು ʼಪ್ರಾಕ್ಸಿ ಕ್ಯಾಬಿನೆಟ್‌ʼ ಎಂದು ಹೇಳಿದ್ದು, ಈ ಪ್ರಾಕ್ಸಿ ಕ್ಯಾಬಿನೆಟ್‌ನಲ್ಲಿ ಸಚಿವರ ಕೆಲಸಗಳನ್ನು ಪರೋಕ್ಷವಾಗಿ ಅವರ ಹಿಂದಿನ ಬದಲಿ ಪ್ರತಿನಿಧಿಗಳು ಮಾಡುತ್ತಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ಎಟಿಎಂ ಸರ್ಕಾರದ ಶ್ಯಾಡೊ ಸಿಎಂ ಯತೀಂದ್ರರ ಸಚಿವ ಸಂಪುಟ ʼಪ್ರಾಕ್ಸಿ ಕ್ಯಾಬಿನೆಟ್‌ʼ ಆಗಿದೆ. ಸಚಿವೆ ಲಕ್ಷಿ ಹೆಬ್ಬಾಳ್ಕರ್ ಪ್ರಾಕ್ಸಿ ಮಿನಿಸ್ಟರ್ ಸಹೋದರ ಚೆನ್ನರಾಜ್ ಹಟ್ಟಿಹೊಳಿ, ಸಚಿವ ಕೆ.ಜೆ.ಜಾರ್ಜ್‌ ಪ್ರಾಕ್ಸಿ ಮಿನಿಸ್ಟರ್ ಪುತ್ರ ರಾಣಾ ಜಾರ್ಜ್, ಸಚಿವ ಡಾ.ಜಿ.ಪರಮೇಶ್ವರ ಪ್ರಾಕ್ಸಿ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ, ಸಚಿವ ಈಶ್ವರ್‌ ಖಂಡ್ರೆ ಪ್ರಾಕ್ಸಿ ಮಿನಿಸ್ಟರ್ ಪುತ್ರ ಸಾಗರ್ ಖಂಡ್ರೆ ಆಗಿದ್ದಾರೆ. ತುಘಲಕ್ ಸರ್ಕಾರದ ಪಾಳೇಗಾರಿಕೆಯಲ್ಲಿ ಇನ್ನೂ ಹಲವು ಸಚಿವರು, ಶಾಸಕರ ಸಹೋದರರು, ಸಂಬಂಧಿಕರ ಪ್ರಾಕ್ಸಿಗಳು ಶೀಘ್ರದಲ್ಲೇ ಹೊರ ಬರಲಿವೆ ಎಂದು ಬಿಜೆಪಿ ತಿಳಿಸಿದೆ.

ಇದನ್ನೂ ಓದಿ | Gruha Lakshmi Scheme : ಜು. 19ಕ್ಕೆ ಗೃಹಲಕ್ಷ್ಮಿಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಬರಲ್ಲ ಹೈಕಮಾಂಡ್

ಕಾಂಗ್ರೆಸ್‌ನ ಪೇಸಿಎಂ ಅಭಿಯಾನಕ್ಕೆ ಬಿಜೆಪಿಯಿಂದ ಶ್ಯಾಡೊ ಸಿಎಂ ಪೋಸ್ಟರ್ ವಾರ್

ಬೆಂಗಳೂರು: ವಿಧಾನಸಭೆ ಎಲೆಕ್ಷನ್‌ಗೂ ಮುನ್ನ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧ ಪೇಸಿಎಂ ಅಭಿಯಾನವನ್ನು ಕಾಂಗ್ರೆಸ್‌ ರೂಪಿಸಿತ್ತು. ಕರ್ನಾಟಕ ರಾಜ್ಯ ಕಾಂಟ್ರಾಕ್ಟರ್ಸ್‌ ಅಸೋಸಿಯೇಷನ್‌ ಮಾಡಿದ್ದ 40% ಕಮಿಷನ್‌ ಆರೋಪವನ್ನೇ ಆಧಾರವಾಗಿಸಿಕೊಂಡು ಪೆಸಿಎಂ ಪೋಸ್ಟರ್‌ಗಳನ್ನು ಬಹಿರಂಗವಾಗಿ ಅಂಟಿಸಿತ್ತು. (Shadow CM)

ಈ ಪೋಸ್ಟರ್‌ಗಳು ಸರ್ಕಾರಕ್ಕೆ ಸಾಕಷ್ಟ ಮುಜುಗರ ಉಂಟುಮಾಡಿದ್ದವು. ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಜನರಿಗೆ ಮನವರಿಕೆ ಮಾಡುವಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿದ್ದವು. ಇದೀಗ ಕಾಂಗ್ರೆಸ್‌ ಸರ್ಕಾರ ರಚನೆಯಾಗಿದ್ದು, ಶ್ಯಾಡೊ ಸಿಎಂ ಅಭಿಯಾನವನ್ನು ಬಿಜೆಪಿ ಕೈಗೆತ್ತಿಕೊಂಡಿದೆ.

ಅಧಿಕಾರಿಗಳ ವರ್ಗಾವಣೆಯಿಂದ ಮೊದಲುಗೊಂಡು ಅನೇಕ ಕಾರ್ಯಗಳನ್ನು ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದೇ ಆರೋಪಕ್ಕೆ ಅನಗುಣವಾಗಿ ಶ್ಯಾಡೊ ಸಿಎಂ ಪೋಸ್ಟರ್‌ಗಳನ್ನು ರೂಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದೆ.

1. ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ಕೈಗೊಂಬೆಯಾಗಿರುವ ಸಿದ್ದರಾಮಯ್ಯ, ಪುತ್ರನನ್ನು ಶ್ಯಾಡೋ ಸಿಎಂ ಮಾಡಿ ತಾಳಕ್ಕೆ ಕುಣಿಯುತ್ತಿದ್ದಾರೆ. ಸೋನಿಯಾ ಗಾಂಧಿಯವರ ತಾಳಕ್ಕೆ ರಾಜ್ಯದ ಕಾಂಗ್ರೆಸ್ ನಾಯಕರು ಕುಣಿಯುತ್ತಿದ್ದಾರೆ. 2024ರ ಕಾಂಗ್ರೆಸ್ ಚುನಾವಣಾ ಖರ್ಚಿಗೆ ರಾಜ್ಯ ಬಲಿಯಾಗುತ್ತಿದೆ.

2. ಸರಕಾರದ ಎಲ್ಲಾ ಬಗೆಯ ಡೀಲ್‌ಗಳಿಗೆ ನೇರವಾಗಿ ಸಂಪರ್ಕಿಸಿ…

3. ಹುದ್ದೆಗಳು ಮಾರಾಟಕ್ಕಿವೆ… #ShadowCM ರವರನ್ನು ನೇರವಾಗಿ ಸಂಪರ್ಕಿಸಬಹುದು.

4. ಹುದ್ದೆಗಳು ಮಾರಾಟಕ್ಕಿವೆ.. #ShadowCM ರವರನ್ನು ನೇರವಾಗಿ ಸಂಪರ್ಕಿಸಬಹುದು.

5. CM ನೆರಳಿನಲ್ಲಿ #ShadowCM ಅವ್ಯವಹಾರ. ಅಂಕೆ ಮೀರಿದೆ ಇವರಿಬ್ಬರ ಭ್ರಷ್ಟಾಚಾರ.

6. Commission Master in the shadows of Chief Minister!

Exit mobile version