Site icon Vistara News

ರಣದೀಪ್‌ ಸುರ್ಜೇವಾಲಾ ಆರೋಪಗಳಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪ್ರತ್ಯುತ್ತರ

ravikumar

ಬೆಂಗಳೂರು : ಚಿಲುಮೆ ಸಂಸ್ಥೆ ನಡೆಸಿದೆ ಎನ್ನಲಾದ ಮತದಾರರರ ಪಟ್ಟಿಯಲ್ಲಿನ ಅಕ್ರಮಗಳಿಗೆ ಸಂಬಂಧಪಟ್ಟಂತೆ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಪ್ರತ್ಯುತ್ತರ ಕೊಟ್ಟಿದ್ದಾರೆ. ತಮ್ಮ ಅಭಿಪ್ರಾಯ ಹಾಗೂ ಕಾಂಗ್ರೆಸ್‌ಗೆ ಕೇಳಿರುವ ಪ್ರಶ್ನೆಗಳ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಅದರ ಪೂರ್ಣ ವಿವರ ಇಲ್ಲಿದೆ.

ಚಿಲುಮೆ ಸಂಸ್ಥೆಯನ್ನು 2017ರಲ್ಲಿ ಕಾನೂನು ಬಾಹಿರವಾಗಿ ನೇಮಿಸಿಕೊಂಡಿದ್ದು ಯಾರು ಸಿದ್ದರಾಮಯ್ಯನವರೇ? ಮತದಾರರ ಪಟ್ಟಿ ಪರಿಷ್ಕರಣೆ ಕೆಲಸಕ್ಕೂ, ಸರ್ಕಾರಕ್ಕೂ ಸಂಬಂಧವಿಲ್ಲ ಎಂಬ ಜ್ಞಾನವಿಲ್ಲವೇ ಕಾಂಗ್ರೆಸ್‌ ನಾಯಕರೇ? ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದು ಚುನಾವಣಾ ಆಯೋಗದ ಕೆಲಸ ಎಂಬ ಸಣ್ಣ ವಿಷಯವು ನಿಮಗೆ ತಿಳಿಯದೆ.

ಅಕ್ರಮ ನಡೆದಿದ್ದರೆ ಅದು ಸಿದ್ದರಾಮಯ್ಯನವರೇ ಮಾಡಿರುವ ಅಕ್ರಮ ನೇಮಕಾತಿಗಳ ಫಲ. ಹೀಗಾಗಿ ಪ್ರಕರಣದ ಕಿಂಗ್ ಪಿನ್ ಸಿದ್ದರಾಮಯ್ಯನವರೇ ಅಲ್ಲವೇ. ಅಕ್ರಮದ ಮಾಹಿತಿ ಬಂದ ತಕ್ಷಣ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ತನಿಖೆಯಲ್ಲಿ ಸಿದ್ದರಾಮಯ್ಯ ಮತ್ತು ಚಿಲುಮೆ ಸಂಸ್ಥೆಯ ಅಕ್ರಮಗಳು ಬೆಳಕಿಗೆ ಬರುತ್ತಿವೆ. ಹೀಗಾಗಿ ಕಾಂಗ್ರೆಸ್‌ಗೆ ತಳಮಳ ಉಂಟಾಗಿದೆ.

ಸುರ್ಜೆವಾಲಾ ಅವರೆ, ಮತದಾರ ಪಟ್ಟಿಯಲ್ಲಿರುವ ಎರಡ್ಮೂರು ಹೆಸರುಗಳನ್ನು ಡಿಲೀಟ್‌ ಮಾಡಬೇಕೇ ಅಥವಾ ಮಾಡಬಾರದಾ. ಇದರ ಬಗ್ಗೆ ನಿಮ್ಮ ನಿಲುವು ಏನು. ಪ್ರಕರಣದಲ್ಲಿ ಕಿಂಗ್ ಪಿನ್ ನಿಮ್ಮ ಪಕ್ಕದಲ್ಲೇ ಇರುವ ಸಿದ್ದರಾಮಯ್ಯ ಅವರು. ನಿಮಗೇನಾದರೂ ನೈತಿಕತೆಯಿದ್ದರೆ ಅವರನ್ನು ವಿರೋಧ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಿ.

ಸುರ್ಜೆವಾಲಾ ಅವರೇ, ನೀವು ಒಂದು ಬಾರಿಯೂ ಚುನಾವಣೆ ಗೆಲ್ಲದ ಹಾಗೂ ನಾಲ್ಕೂ ಬಾರಿ ಸೋತಿರುವ ಕಾಂಗ್ರೆಸ್‌ನ ಮಹಾ ನಾಯಕರು. ನೀವಿಲ್ಲಿ ಭ್ರಷ್ಟಾಚಾರವನ್ನೇ ತಮ್ಮ ವೃತ್ತಿ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರನ್ನು ಮುಂದಿಟ್ಟುಕೊಂಡು ಗೆಲ್ಲಿಸುತ್ತೇನೆ ಎಂದು ಹೇಳುತ್ತಿದ್ದೀರಿ. ನಿಮ್ಮ ಅಕ್ಕಪಕ್ಕದಲ್ಲೇ ಕಿಂಗ್ ಪಿನ್ ಗಳಿದ್ದಾರೆ. ನಿಮ್ಮ ಕಿವಿಗೆ ಹೂವಿಟ್ಟು, ನಿಮ್ಮ ಬಾಯಲ್ಲಿ ಬೊಮ್ಮಾಯಿಯವರ ಹೆಸರು ಹೇಳಿಸುತ್ತಿರುವವರೇ ಈ ಪ್ರಕರಣದ ಕಿಂಗ್ ಪಿನ್ ಸಿದ್ದರಾಮಯ್ಯ.

ಪ್ರಕರಣದ ತನಿಖೆಯಲ್ಲಿ ಕಾಂಗ್ರೆಸ್‌ ನಾಯಕರ ಬಂಡವಾಳ ಬಯಲಾಗುವುದು ನಿಶ್ಚಿತ. ನೀವೆಂತಹ ಸುಳ್ಳುಕೋರರು ಎಂಬುದು ಎಲ್ಲರಿಗೂ ಗೊತ್ತಿದೆ, ನಿಮ್ಮ ಸುಳ್ಳುಗಳನ್ನು ನಂಬಿಕೊಂಡು ತನಿಖೆ ಮಾಡುವಷ್ಟು ದಡ್ಡರಲ್ಲ ತನಿಖಾಧಿಕಾರಿಗಳು. ತಾಳ್ಮೆಯಿಂದಿರಿ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ನೀವು ಪದೇ ಪದೆ ಮುಖ್ಯಮಂತ್ರಿಗಳ ಹೆಸರೇಳಿದರೆ ನಿಮ್ಮ ಸುಳ್ಳುಗಳು ಸತ್ಯವಾಗುವುದಿಲ್ಲ.

ಕಾಂಗ್ರೆಸ್‌ ನಾಯಕರ ಬಂಡವಾಳ ಬಯಲು

ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿ ತನಿಖೆಯಾಗುತ್ತಿದೆ. ಸಿದ್ದರಾಮಯ್ಯನವರ ಸಹಿತ ಒಬ್ಬೊಬ್ಬರೇ ನಾಯಕರ ಬಂಡವಾಳ ಬಯಲಾಗುತ್ತಿದೆ. ಇದನ್ನು ಮರೆಮಾಚಲು ನೀವು ಮುಖ್ಯಮಂತ್ರಿಗಳ ಮತ್ತು ಪಾಲಿಕೆ ಆಯುಕ್ತರ ವಿರುದ್ಧ ದೂರು ದಾಖಲಿಸಿಲ್ಲ ಎನ್ನುವುದು ನಿಮ್ಮ ಅಜ್ಞಾನವೋ ಅಥವಾ ನಿಮ್ಮವರನ್ನು ರಕ್ಷಿಸಿಕೊಳ್ಳುವ ಹುನ್ನಾರವೋ ನೀವೇ ಹೇಳಬೇಕು.

ಮಿಸ್ಟರ್ ಸುರ್ಜೆವಾಲಾ, ನಿಮ್ಮ ಆರೋಪಗಳು ಸುಳ್ಳು. ನೀವು ಆರೋಪ ಮಾಡುತ್ತಿರುವುದು ಬಿಜೆಪಿ ನಾಯಕರ ವಿರುದ್ಧ. ಅದು ಸುಳ್ಳು. ನಿಜ ಏನೆಂದರೆ ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರೇ ಒಂದನೇ ಆರೋಪಿಯಾಗಬೇಕಿತ್ತು.
ಇನ್ನು, ಪ್ರಕರಣದಲ್ಲಿ ಅಕ್ರಮದ ಮಾಹಿತಿ ತಿಳಿದ ತಕ್ಷಣ ಸರ್ಕಾರ ದೂರು ದಾಖಲಿಸಿಕೊಂಡು ತನಿಖೆ ಮಾಡಲು ತಿಳಿಸಿದೆ. ಆದರೆ ಪ್ರಕರಣದಲ್ಲಿ ತನಿಖೆಯ ದಾರಿ ತಪ್ಪಿಸಿ ಜನರಿಗೆ ಸುಳ್ಳು ಮಾಹಿತಿ ಕೊಡುತ್ತಾ ಭ್ರಷ್ಟರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿರುವುದು ಕಾಂಗ್ರೆಸ್‌.

ನಿಜಕ್ಕೂ ಕನ್ನಡಿಗರನ್ನು ದಾರಿ ತಪ್ಪಿಸುತ್ತಿರುವುದು ಕಾಂಗ್ರೆಸ್. ಕಾಂಗ್ರೆಸ್ ಆರೋಪ ಮಾಡುವ ಮೊದಲೇ ಈ ಪ್ರಕರಣದಲ್ಲಿ ದೂರು ದಾಖಲಾಗಿದೆ. ಪ್ರಕರಣದ ತನಿಖೆಯಲ್ಲಿ ಎಲ್ಲಿ ತಮ್ಮ ಅಕ್ರಮಗಳು ಬೆಳಕಿಗೆ ಬಂದು ಬಿಡುತ್ತವೊ ಎಂಬ ಭಯದಿಂದ ಕಾಂಗ್ರೆಸ್ಸಿನ ಅತಿರತ ಮಹಾರಥ ಭ್ರಷ್ಟರೆಲ್ಲ ಸೇರಿ ಸಂಚು ಮಾಡಿ ವ್ಯವಸ್ಥಿತವಾಗಿ ಸಾರ್ವಜನಿಕರಿಗೆ ಸುಳ್ಳು ಮಾಹಿತಿ ಕೊಡುತಿದ್ದಾರೆ.

ಸುಳ್ಳು ಹೇಳುವುದರಲ್ಲಿ ನಿಸ್ಸೀಮರು

ತಲೆಬುಡವಿಲ್ಲದ ಆರೋಪ ಮಾಡುವುದರಲ್ಲಿ ಕಾಂಗ್ರೆಸಿಗರು ನಿಸ್ಸಿಮರು ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ? ಇವೆಲ್ಲಾ ಡಿಕೆಶಿಯವರ ವ್ಯವಸ್ಥಿತ ಸುಳ್ಳುಗಳ ಒಂದು ಭಾಗ ಅಷ್ಟೇ.

ತನಿಖೆಧಿಕಾರಿಗಳಿಗೆ ತಿಳಿಯುವ ಮೊದಲೇ ಕಾಂಗ್ರೆಸ್ಸಿಗರಿಗೆ ತಿಳಿಯುತ್ತೆ ಏನೇನು ಕಳ್ಳತನ ಆಗಿದೆ ಅಂತ, ಯಾಕೆಂದರೆ ಕದ್ದವರು ಅವರೇ ಅಲ್ಲವೇ. ಕದ್ದವರಿಗೆ ಗೊತ್ತಿರುತ್ತೆ ಏನೇನು ಕಳ್ಳತನವಾಗಿದೆ ಅಂತ. ಕೂಲಂಕಷವಾಗಿ ತನಿಖೆಯಾಗುತ್ತಿದೆ. ಎಲ್ಲಾ ಕಳ್ಳರು ಸಿಗುತ್ತಾರೆ. ಕಾಂಗ್ರೆಸ್ ನಾಯಕರು ಭಯದಿಂದ ಮೈಪರಚಿಕೊಳ್ಳುತ್ತಿದ್ದಾರೆ ಅಷ್ಟೇ. ಯಾವುದನ್ನೂ ಸೀಜ್ ಮಾಡಬೇಕು ಯಾವುದನ್ನೂ ಸೀಜ್ ಮಾಡಬಾರದು ಎಂಬುದು ತನಿಖಾಧಿಕಾರಿಗಳಿಗೆ ಗೊತ್ತಿದೆ. ಕಾಂಗ್ರೆಸ್ ನಾಯಕರು ಭಯದಿಂದ ತಮ್ಮ ಹುಚ್ಚುತನದ ಸಲಹೆಗಳನ್ನು ಕೊಡುವುದನ್ನು ನಿಲ್ಲಿಸಿದರೆ ಸಾಕು.

ತಾಳ್ಮೆ ವಹಿಸಿ ಕಾಂಗ್ರೆಸ್ ನಾಯಕರೇ, ಚಿಲುಮೆ ಸಂಸ್ಥೆ ಯಾವಾಗ ಹುಟ್ಟಿತು, ಅದನ್ನು ಯಾರ ಸರ್ಕಾರ ಇದ್ದಾಗ ನೇಮಿಸಿಕೊಳ್ಳಲಾಗಿದೆ, ಯಾರ ಅಣತಿಯಂತೆ ಅದು ಕೆಲಸ ಮಾಡುತ್ತಿತ್ತು, ಯಾರಿಗೆ ಅಕ್ರಮದ ಲಾಭವಾಗುತ್ತಿತ್ತು, ಎಲ್ಲವೂ ತನಿಖೆಯಲ್ಲಿ ಹೊರಬರುತ್ತದೆ. ಇವೆಲ್ಲಕ್ಕೂ ಉತ್ತರ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಎನ್ನುವುದು ಸತ್ಯ. ಅದೂ ಕೂಡ ತನಿಖೆಯಿಂದ ಹೊರಬರುತ್ತದೆ.

ಸುರ್ಜೆವಾಲಾ ಅವರೆ ನೀವು ಬಿಜೆಪಿಯ ವಿರುದ್ಧ ಮಾಡುತ್ತಿರುವ ಆರೋಪ ಸುಳ್ಳು ಅಷ್ಟೇ, ಅದರೆ FIR ಆದಮೇಲೆ ಇದರಲ್ಲಿ ಸಿದ್ದರಾಮಯ್ಯನವರೇ ಕಿಂಗ್ ಪಿನ್ ಎನ್ನುವುದನ್ನು ಹಲವು ದಾಖಲೆಗಳು ಸಾರಿ ಸಾರಿ ಹೇಳುತ್ತಿವೆ.

ಆಧಾರ ರಹಿತ ಆರೋಪ ಮಾಡುವುದರಲ್ಲಿ ಕಾಂಗ್ರೆಸ್ಸಿಗರು ಪಳಗಿದ್ದಾರೆ. ಯಾವುದೇ ವಿಚಾರವಿರಲಿ ಸುಳ್ಳುಗಳನ್ನು ಸತ್ಯದಂತೆ ಬಿಂಬಿಸುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗುತ್ತೆ. ಆದರೆ ಸುರ್ಜೆವಾಲಾ ಮತ್ತು ಕಾಂಗ್ರೆಸ್ ನಾಯಕರು ತನಿಖೆಗೆ ಅಡ್ಡಿಪಡಿಸದೇ ತನಿಖೆ ನಡೆಯಲು ಬಿಡಬೇಕಷ್ಟೆ.

ಕಾಂಗ್ರೆಸ್ ಪಕ್ಷವೆಂದರೇ ಅಕ್ರಮ. ಪಿ.ಎಸ್.ಐ ನೇಮಕಾತಿ, ಅರ್ಜಿ ಸಲ್ಲಿಸದೇ ಶಿಕ್ಷಕರ ನೇಮಕಾತಿ ಮಾಡಿದ್ದು ಸೇರಿದಂತೆ ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿದೆ. ನಿಮ್ಮ ಕಾಲದಲ್ಲಿ ಅಕ್ರಮಗಳಾದರೇ, ನಮ್ಮ ಕಾಲದಲ್ಲಿ ತನಿಖೆಗಳಾಗಿ ಆರೋಪಿಗಳು ಶಿಕ್ಷೆಗೊಳಪಡುತ್ತಿದ್ದಾರೆ.

ಇದನ್ನೂ ಓದಿ |Voter data | ವಕೀಲರ ಭೇಟಿಗೆ ಬಂದಿದ್ದ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿ ಕುಮಾರ್‌ ಸೆರೆ

Exit mobile version