ಬೆಂ. ಗ್ರಾಮಾಂತರ: ಬಿಜೆಪಿಯ ದುಡ್ಡು ತೆಗೆದುಕೊಂಡು ಕಾಂಗ್ರೆಸ್‌ಗೆ ಓಟು ಹಾಕಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ನನಗೆ ಮತ ಹಾಕದೇ ಮೋಸ ಮಾಡಿದ್ದೀರಿ, ಈ ಬಾರಿಯೂ ನಿಮ್ಮನ್ನು ನಂಬಿದ್ದಕ್ಕೆ ಮೋಸ ಹೋದೆ ಎಂದು ಮುಸ್ಲಿಂ ಸಮುದಾಯದ ವಿರುದ್ಧ ಮಾಜಿ ಸಚಿವ ಎಂಟಿಬಿ ನಾಗರಾಜ್ (MTB Nagaraj) ಆಕ್ರೋಶ ಹೊರಹಾಕಿದ್ದಾರೆ.
ಹೊಸಕೋಟೆ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಕಳೆದ ಎರಡು ಚುನಾವಣೆಗಳಲ್ಲಿ ನನಗೆ ಮತ ಹಾಕದೇ ಮೋಸ ಮಾಡಿದ್ದೀರಿ, ಈ ಬಾರಿಯೂ ನಿಮ್ಮನ್ನು ನಂಬಿದ್ದಕ್ಕೆ ಮೋಸ ಹೋದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಿನಕ್ಕೆ ಮೂರು ಸಲ ನಮಾಜ್ ಮಾಡುತ್ತೀರಿ, ಖುರಾನ್ ಹಾಗೂ ಅಲ್ಲಾಹು ಮೇಲೆ ಪ್ರಮಾಣ ಮಾಡಿದ್ದಿರಿ. ಆದರೂ ನನ್ನ ಬೆನ್ನಿಗೆ ಚೂರಿ ಹಾಕಿದ್ದೀರಿ. ಮುಸ್ಲಿಂ ಸಮುದಾಯವನ್ನು ನಂಬಬೇಡಿ, ಅವರಿಗೆ ದುಡ್ಡು ಕೊಡಬೇಡಿ ಎಂದು ಅನೇಕರು ನನಗೆ ಹೇಳಿದ್ದರು. ಎಲೆಕ್ಷನ್ ವೇಳೆ ದುಡ್ಡನ್ನು ಹಿಂದು ಸಮುದಾಯಗಳಿಗೆ ಕೊಡಿ ಎಂದು ಸಲಹೆ ನೀಡಿದ್ದರು. ಆದರೆ, ಮುಸ್ಲಿಂ ಸಮುದಾಯಕ್ಕೆ ಖರ್ಚು ಮಾಡಿದ್ದು ವ್ಯರ್ಥ ಎಂಬುವುದು ಈಗ ತಿಳಿದುಬಂದಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | Siddaramaiah: ಡೋಂಟ್ ಡೂ ದಟ್!: ಮೈಸೂರು ಪೊಲೀಸರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದೇಕೆ ಸಿಎಂ ಸಿದ್ದರಾಮಯ್ಯ?
ಈ ಸಲ ನಾನು ನಿಮ್ಮನ್ನು ನಂಬಿದೆ. ನಂಬಿಸಿ, ಮಾತು ಕೊಟ್ಟು ನನಗೆ ಮೋಸ ಮಾಡಿದ್ದೀರಿ. ಇಷ್ಟು ದಿನ ಸಮುದಾಯ ಪಕ್ಷಾಂತರ ಆಗುತ್ತದೆ ಎಂಬ ಭಯ ಪಟ್ಟಿದ್ದೆ. ಆದರೆ, ಇನ್ಮುಂದೆ ಅಂತಹ ಭಯ ಪಡುವ ಪ್ರಮೇಯವೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.