ಹಾವೇರಿ: ಇಲ್ಲಿನ ಹಿರೇಕೆರೂರು ತಾಲೂಕಿನ ಜೋಗಚಿಕೊಪ್ಪ ತಾಂಡಾದಲ್ಲಿ ಸ್ಮಶಾನವೊಂದರಲ್ಲಿ ಮೂವರು ಹುಡುಗಿಯರ ಫೋಟೊ ಇಟ್ಟು ವಾಮಾಚಾರ (Black Magic) ನಡೆಸಲಾಗಿದೆ. ಆಗುಂತಕರು ಸ್ಮಶಾನದಲ್ಲಿ ಮಧ್ಯರಾತ್ರಿ ಪೂಜೆ ಮಾಡುತ್ತಿದ್ದಾಲೇ ಗ್ರಾಮಸ್ಥರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಹುಡುಗಿಯರ ಫೋಟೊ ಜತೆ ಮನುಷ್ಯರ ತಲೆ ಬುರುಡೆ ಇಟ್ಟು ವಾಮಾಚಾರ ಮಾಡಿದ್ದಾರೆ. ಮಾತ್ರವಲ್ಲದೆ ಕುಂಬಳ ಕಾಯಿ ಮೇಲೆ ವ್ಯಕ್ತಿಯೊಬ್ಬರ ಚಿತ್ರ ಬರೆದು ರಾಮಪ್ಪ ಎಂದು ಹೆಸರು ಬರೆದಿದ್ದಾರೆ.
ವಾಮಾಚಾರದಲ್ಲಿ ಲಿಂಗವೊಂದು ಪತ್ತೆಯಾಗಿದ್ದು, ಪೂಜೆಗೆ ಕೋಳಿಗಳನ್ನು ಬಲಿ ಪಡೆದಿದ್ದಾರೆ. ಮಹಿಳೆ ಸೇರಿ ನಾಲ್ಕು ಜನರಿಂದ ಮಾಟ ಮಂತ್ರದ ಕೃತ್ಯ ನಡಯುತ್ತಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Weather Report: ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ
ಮಧ್ಯರಾತ್ರಿ ಸ್ಮಶಾನದಲ್ಲಿ ಮಾಟ ಮಂತ್ರ ಮಾಡುತ್ತಿದ್ದ ನಾಲ್ವರಲ್ಲಿ ಹನುಮಂತಪ್ಪ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಮಾಟ ಮಂತ್ರದಲ್ಲಿ ತೊಡಗಿದವರು ಇದೇ ಗ್ರಾಮದವರಾ? ಯಾಕಾಗಿ ವಾಮಾಚಾರ ಮಾಡಿಸುತ್ತಿದ್ದರು ಎಂಬುದರ ಕುರಿತು ತನಿಖೆಯಿಂದ ಗೊತ್ತಾಗಬೇಕಿದೆ.