Site icon Vistara News

Blackmail case | ಬ್ಲ್ಯಾಕ್‌ಮೇಲ್‌ ಆರೋಪದಡಿ ಹಿಂದು ಮಹಾಸಭಾ ಮುಖಂಡನ ಬಂಧನ

Rajesh pavithran hindu mahasabha

ಮಂಗಳೂರು: ವ್ಯಕ್ತಿಯೊಬ್ಬರಿಗೆ ಬ್ಲ್ಯಾಕ್ ಮೇಲ್ (Blackmail case) ಮಾಡಿದ ಆರೋಪದಡಿ ಹಿಂದು ಮಹಾಸಭಾ ಮುಖಂಡನನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ. ಇದೊಂದು ವ್ಯವಹಾರ ಸಂಬಂಧಿತ ಕೃತ್ಯ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಮಂಗಳೂರಿನ ಹಿಂದೂ ಮಹಾ ಸಭಾ ಮುಖಂಡ ರಾಜೇಶ್ ಪವಿತ್ರನ್(42) ಬಂಧನಕ್ಕೆ ಒಳಗಾದವರು. ಇವರು ಸುರೇಶ್ ಎಂಬವರಿಗೆ ಹಣಕ್ಕಾಗಿ ‌ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಸುರೇಶ್ ಮತ್ತು ರಾಜೇಶ್ ನಡುವೆ ಟ್ರೇಡಿಂಗ್ ವ್ಯವಹಾರ ಇತ್ತು. ಈ ವ್ಯವಹಾರದಲ್ಲಿ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ವೇಳೆ ರಾಜೇಶ್‌ ಪವಿತ್ರನ್‌ ಅವರು ಸುರೇಶ್ ಲ್ಯಾಪ್ ಟಾಪ್ ಕಸಿದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ಒಂದು ಕಡೆ ನೇರವಾಗಿ ಜೀವ ಬೆದರಿಕೆ ಹಾಕಿದರೆ, ಇನ್ನೊಂದು ಕಡೆಯಲ್ಲಿ ಖಾಸಗಿ ಮಾಹಿತಿಯನ್ನು ಸಾಮಾಜಿಕ ತಾಣಗಳಲ್ಲಿ ಹಾಕುವ ಬೆದರಿಕೆಯನ್ನೂ ಹಾಕಲಾಗಿದೆ ಎಂದು ‌ಸುರತ್ಕಲ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಸುರೇಶ್‌ ತಿಳಿಸಿದ್ದಾರೆ. ರಾಜೇಶ್‌ಗೆ ಡಾ.ಸನಿಜಾ ಎಂಬವರು ಸಹಕರಿಸುತ್ತಿದ್ದರು ಎನ್ನಲಾಗಿದ್ದು, ಅವರ ಮೇಲೂ ಪ್ರಕರಣ ದಾಖಲಾಗಿದೆ. ಅವರನ್ನು ಬಂಧಿಸಲಾಗಿಲ್ಲ.

ಇದನ್ನೂ ಓದಿ | Blackmail | ಖಾಸಗಿ ವಿಡಿಯೊ: ಸಿಸಿಬಿ ಪೊಲೀಸರ ಹೆಸರಿನಲ್ಲಿ ಗೆಳೆಯನಿಗೇ ಖೆಡ್ಡಾ! 15 ಲಕ್ಷ ರೂ., ಚಿನ್ನ ಸುಲಿಗೆ!

Exit mobile version