ಬೆಂಗಳೂರು: ಮಹಿಳೆಯೊಬ್ಬಳು ಯುವತಿಯೊಬ್ಬಳ ಫೋಟೊ (Photo Blackmail case) ಕ್ಲಿಕ್ಕಿಸಿದ್ದು ಇದನ್ನು ಪ್ರಶ್ನಿಸಲು ಮುಂದಾದ ಯುವತಿಯ ತಾಯಿಗೆ ಅವಾಚ್ಯ ಪದಗಳಿಂದ ನಿಂದಿಸಿರುವ ಘಟನೆ ಯಶವಂತಪುರ (Yashwanthpura police) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುನಂದ ಎಂಬಾಕೆ ರೇಷ್ಮ ಎಂಬುವವರ ಮಗಳ ಫೋಟೊ ತೆಗೆದು ಬಳಿಕ ಅದನ್ನೂ ಅಶ್ಲೀಲ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಇದನ್ನೂ ಪ್ರಶ್ನಿಸಲು ಮುಂದಾದ ನಡುರಸ್ತೆಯಲ್ಲೇ ಹಲ್ಲೆ ನಡೆಸಿದ್ದು, ಮಾತ್ರವಲ್ಲದೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರಿಂದ ಧರ್ಮ ನಿಂದನೆ ಮಾಡಿದ್ದಾರೆ ಎಂದು ರೇಷ್ಮ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾನು ಮತ್ತು ನನ್ನ ಮಗಳು ಮನೆಯ ಹೊರಗೆ ನಿಂತಿದ್ದಾಗ ಸುನಂದ ಎಂಬಾಕೆ ಫೋಟೊಗಳನ್ನು ತೆಗೆದು ಅದನ್ನು ಅಶ್ಲೀಲ ವೆಬ್‌ಸೈಟ್‌ಗಳಿಗೆ ಹಾಕುತ್ತೇನೆ ಎಂದು ಬೆದರಿಸಿದ್ದಾಳೆ. ಇದನ್ನು ಪ್ರಶ್ನಸಿದ್ದಕ್ಕೆ ರೌಡಿಗಳನ್ನು ಕಳುಹಿಸಿ ಹಲ್ಲೆ ನಡೆಸಿದ್ದಾಳೆ. ಮಾತ್ರವಲ್ಲದೆ ಇಬ್ಬರನ್ನೂ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ರೇಷ್ಮ ಉಲ್ಲೇಖಿಸಿದ್ದಾರೆ.
ರೇಷ್ಮಳ ಮೇಲೆ ಸುನಂದ ಹಾಗೂ ಅವರ ಸಂಗಡಿಗರು ಹಲ್ಲೆ ನಡೆಸಿರುವ ವಿಡಿಯೊ ಸಮೇತ ಪೊಲೀಸರಿಗೆ ದೂರು ನೀಡಿದ್ದು, ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಮುಂದುವರಿಸಿದ್ದಾರೆ.
ಕಿಡ್ನಾಪರ್ ಕೈಯಿಂದ ಚಾಣಾಕ್ಷತೆಯಿಂದ ಪಾರಾದ ಪೋರ!
ಚಿಕ್ಕಮಗಳೂರು: ಇದ್ದಕ್ಕಿದ್ದಂತೆ ಬಂದು ಎತ್ತಿಕೊಂಡು ಓಡಿದ ಕಿಡ್ನಾಪರ್‌ಗೆ ಅಷ್ಟೇ ಚಾಣಾಕ್ಷತನದಿಂದ ಒಬ್ಬ ಪೋರ ಚಳ್ಳೆಹಣ್ಣು ತಿನ್ನಿಸಿ ಪಾರಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಇದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿ ಭಾನುವಾರ ಸಂಜೆ 6.38ರ ವೇಳೆಗೆ ಬಾಲಕನ ಅಪಹರಣಕ್ಕೆ ಈ ಯತ್ನ ನಡೆದಿದೆ. ಫುಟ್‌ಪಾತ್‌ನಲ್ಲಿ ಗೆಳೆಯರ ಜತೆಗೆ ಆಟವಾಡುತ್ತಿದ್ದ ಮಗುವನ್ನು ಅಪಹರಿಸಲು ಒಬ್ಬ ವ್ಯಕ್ತಿ ಯತ್ನಿಸಿದ್ದಾನೆ. ಅಪಹರಿಸಿ ಹೆಗಲ ಮೇಲೆ ಎತ್ತಿಕೊಂಡು ವ್ಯಕ್ತಿ ವೇಗವಾಗಿ ಮುನ್ನಡೆದಿದ್ದು, ಬಾಲಕ ನುಸುಳಿಕೊಂಡು ಹೆಗಲಿನಿಂದ ಕೆಳಗೆ ಹಾರಿ ಚಾಣಾಕ್ಷತೆಯಿಂದ ಎಸ್ಕೇಪ್ ಆಗಿದ್ದಾನೆ.
ಸಾಹಸ ಮೆರೆದು ಧೈರ್ಯ ಪ್ರದರ್ಶಿಸಿದ ಬಾಲಕ ಯುಕೆಜಿ ವಿದ್ಯಾರ್ಥಿಯಾಗಿದ್ದು, ಬಾಲಕನ ಸಮಯಸ್ಫೂರ್ತಿಗೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸಿನಿಮೀಯ ರೀತಿಯಲ್ಲಿ ನಡೆದಿರುವ ಈ ಘಟನೆ ಜನನಿಬಿಡ ಪ್ರದೇಶದಲ್ಲೇ ನಡೆದಿದ್ದರೂ ತಕ್ಷಣ ಯಾರ ಗಮನಕ್ಕೂ ಬಂದಿಲ್ಲ. ಅಪಹರಣಕ್ಕೆ ಯತ್ನಿಸಿದ ವ್ಯಕ್ತಿಯ ಚಹರೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಇದನ್ನೂ ಓದಿ: Bullock blessings : ಮದುವೆಗೆ ವಿಶೇಷ ಅತಿಥಿಯಾಗಿ ಬಂದ ಕಿಲಾರಿ ಹೋರಿ, ಸೆಲ್ಫಿಗೆ ಮುಗಿಬಿದ್ದ ಜನರು!
ಇದೀಗ ಶಾಲೆಗಳಿಗೆ ಬೇಸಿಗೆ ರಜೆ ನೀಡಲಾಗಿದ್ದು, ಮಕ್ಕಳು ಮನೆಯ ಹೊರಗೆ ಆಡುತ್ತಿರುತ್ತಾರೆ. ಮಕ್ಕಳನ್ನು ಹೊರಗೆ ಬಿಡುವ ಮುನ್ನ ಪೋಷಕರು ಹುಷಾರಾಗಿರುವಂತೆ ಈ ಘಟನೆ ಎಚ್ಚರಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ