Site icon Vistara News

Blast in Quarry : ಕೋರೆಯಲ್ಲಿ ಸಿಡಿದ ಕಲ್ಲಿಗೆ 17 ವರ್ಷದ ಬಾಲಕ ದಾರುಣ ಬಲಿ

Death in Stone quarry

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕಲ್ಲುಕೋರೆಯೊಂದರಲ್ಲಿ ಸ್ಫೋಟ (Blast in quarry) ನಡೆಸುವ ವೇಳೆ ಸಿಡಿದ ಕಲ್ಲಿಗೆ ಸಿಲುಕಿ 17 ವರ್ಷದ ಬಾಲಕನೊಬ್ಬ (17 year olb boy dead) ದಾರುಣವಾಗಿ ಮೃತಪಟ್ಟಿದ್ದಾನೆ. ಜೂನ್ 29ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಾಗಲಕೋಟೆ ಜಿಲ್ಲೆಯ (Bagalakote News) ಬಾದಾಮಿ ತಾಲ್ಲೂಕಿನ ನರೇನೂರ ಗ್ರಾಮದಲ್ಲಿರುವ ಕಲ್ಲಿನ ಕೋರೆ ಇದಾಗಿದ್ದು, ಬಾಲಕ ರಮೇಶ್‌ ನಂದ್ಯಾಳ ಕೂಡಾ ಅದೇ ಕೋರೆಯಲ್ಲಿ ಕೆಲಸ ಮಾಡುತ್ತಿದ್ದ. ಕಲ್ಲಿನಲ್ಲಿ ಬೃಹತ್‌ ಶಕ್ತಿಯ ಸ್ಫೋಟಕವನ್ನು ಬಳಸಿ ಕಲ್ಲುಗಳನ್ನು ಸಿಡಿಸಲಾಗುತ್ತಿತ್ತು. ಈ ವೇಳೆ ಎತ್ತರಕ್ಕೆ ಸಿಡಿದ ಕಲ್ಲೊಂದು ಬಾಲಕನ ಮೇಲೆ ಬಿದ್ದು ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ರಮೇಶನ ಮನೆಯವರ ಕಣ್ಣೀರು

ಕ್ರಷರ್ ಮಾಲೀಕ ಮಲ್ಲಪ್ಪ ಪೂಜಾರಿ ವಿರುದ್ಧ ಬಾಲಕನ ತಂದೆ ರಂಗಪ್ಪ ಮತ್ತು ಬಂಧುಗಳು ದೂರು ನೀಡಿದ್ದಾರೆ. ಕೆರೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ ; ತಂದೆ ಕಣ್ಣೆದುರೇ ಹಾರಿ ಹೋಯ್ತು ಮಗಳ ಪ್ರಾಣ

ಬೆಂಗಳೂರು: ಇಲ್ಲಿನ ಜಾಲಹಳ್ಳಿ ಕ್ರಾಸ್‌ನಲ್ಲಿ ಬೈಕ್‌ಗೆ ಖಾಸಗಿ ಬಸ್‌ ಡಿಕ್ಕಿಯಾಗಿ ಪಿಯು ವಿದ್ಯಾರ್ಥಿನಿ (Road Accident) ಮೃತಪಟ್ಟಿದ್ದಾಳೆ. ದಿಶಾ (18) ಮೃತ ದುರ್ದೈವಿ.

ದಿಶಾ ತನ್ನ ತಂದೆ ಸತೀಶ್‌ ಜತೆಗೆ ಬೈಕ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದಳು. ಈ ವೇಳೆ ಹಿಂದಿನಿಂದ ಬಂದ ಖಾಸಗಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ದಿಶಾ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾಳೆ. ಕೂದಳೆ ಅಂತರದಲ್ಲಿ ತಂದೆ ಸತೀಶ್‌ ಬಚಾವ್ ಆಗಿದ್ದಾರೆ.

Road Accident in Bengaluru

ದಿಶಾ ಮಲ್ಲೇಶ್ವರಂನ ಎಂಇಎಸ್‌ ಕಾಲೇಜಿನಲ್ಲಿ (MES college) ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ತಂದೆ ಕಣ್ಣೆದುರೇ ಮಗಳ ಪ್ರಾಣ ಹಾರಿ ಹೋಗಿದ್ದು, ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Crocodile attack : ಕೃಷ್ಣಾ ನದಿಯಲ್ಲಿ ನೀರು ಖಾಲಿ; ಊರಿಗೆ ನುಗ್ಗಿದ ಮೊಸಳೆಯಿಂದ ಮೇಕೆ ಮೇಲೆ ದಾಳಿ

ಸದ್ಯ, ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Exit mobile version