Site icon Vistara News

World Cancer Day 2023 : ಕಣ್ಣಿನ ಕ್ಯಾನ್ಸರ್ ಜಾಗೃತಿಗಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಫೀಲ್ಡಿಗಿಳಿದ ವೈದ್ಯರು; ಅಂಧರೊಂದಿಗೆ ಫುಟ್ಬಾಲ್​ ಜಾಗೃತಿ

#image_title

ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ (Blind Football) ವೈದ್ಯರು ಹಾಗೂ ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಫುಟ್​ಬಾಲ್​ ಆಡುವ ಮೂಲಕ ಅಂಧರ ಮನೋಬಲ ಹೆಚ್ಚಿಸುವಂತೆ ಜಾಗೃತಿ ಮೂಡಿಸಿದರು. ಈ ಮೂಲಕ ದೃಷ್ಟಿ ಕಳೆದುಕೊಂಡವರು ಮತ್ತು ಅವರ ಆರೈಕೆ ಮಾಡುವವರು ತಮ್ಮ ದಿನಚರಿಗೆ ಮರಳಲು ಆತ್ಮವಿಶ್ವಾಸ ಹೆಚ್ಚಿಸಲು ಕ್ರೀಡೆ ಮತ್ತು ಆಟವು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತೋರಿಸಿದರು.

ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯ ವಿಟ್ರಿಯೋರೆಟಿನಾ ಮತ್ತು ಓಕ್ಯುಲರ್ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಮಹೇಶ್ ಷಣ್ಮುಗಂ ಮಾತನಾಡಿ, ಹಲವಾರು ಕಣ್ಣಿನ ಕ್ಯಾನ್ಸರ್‌ಗಳು ಮುಂಚಿತವಾಗಿಯೇ ಗುರುತಿಸಿ ಚಿಕಿತ್ಸೆ ನೀಡಿದರೆ ಜೀವ ಉಳಿಸಬಹುದಲ್ಲದೆ, ದೃಷ್ಟಿಯನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ. ಕಣ್ಣಿನ ಆರೈಕೆಗಾಗಿ ಫುಟ್ಬಾಲ್‌ ಅನ್ನು ಜಾಗೃತಿ ಸಾಧನವಾಗಿ ಬಳಸಿಕೊಂಡು ಇಕ್ವಿಬೀಯಿಂಗ್ ಫೌಂಡೇಶನ್‍ನೊಂದಿಗೆ ಕೆಲಸ ಮಾಡಲು ಸಂತಸ ಇದೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳಲ್ಲಿ ಪ್ರಾಥಮಿಕವಾಗಿ ಕಂಡುಬರುವ ರೆಟಿನೊಬ್ಲಾಸ್ಟೋಮಾವನ್ನು ಸಮಯಕ್ಕೆ ಸರಿಯಾಗಿ ರೋಗನಿರ್ಣಯ ಮಾಡದಿದ್ದರೆ ಮಾರಣಾಂತಿಕವಾಗಬಹುದು. ಈ ಮಕ್ಕಳಿಗೆ ಭಾವನಾತ್ಮಕ ಬೆಂಬಲ ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಅವರ ಜೀವನವನ್ನು ನಡೆಸುವ ಕೌಶಲ್ಯಗಳನ್ನು ಸಹ ಒದಗಿಸಬೇಕಾಗಿದೆ. ಅದರ ಮೊದಲ ಹೆಜ್ಜೆ ಕಣ್ಣಿನ ಆಸ್ಪತ್ರೆಯಲ್ಲಿ ಪ್ರಾರಂಭವಾಗುತ್ತದೆ. ಕಣ್ಣಿಗೆ ಪಟ್ಟಿಕಟ್ಟಿಕೊಂಡು ಆಡಿದ ಫುಟ್ಬಾಲ್ ಪಂದ್ಯದ ಮೂಲಕ, ನೇತ್ರ ತಜ್ಞರು ಮತ್ತು ಆಪ್ಟೋಮೆಟ್ರಿಸ್ಟ್‌ಗಳು ಈ ಕಣ್ಣಿನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವಲ್ಲಿ ರಾಯಭಾರಿಗಳಾಗಲು ಪ್ರೋತ್ಸಾಹಿಸಲು ನಾವು ಬಯಸುತ್ತೇವೆ. ಜತೆಗೆ ಅಂಧರು ಸಂತೋಷದಿಂದ ಜೀವನ ಮಾಡಲು ಅನುವು ಮಾಡಿಕೊಡುತ್ತೇವೆ ಎಂದು ಇಕ್ವಿಬೀಯಿಂಗ್ ಸಂಸ್ಥಾಪಕಿ ಡಾ. ಅನಂತಲಕ್ಷ್ಮಿ ಹೇಳಿದರು.

ಜಾಗೃತಿ ಅಗತ್ಯ

ಸುಧಾರಿತ ತಂತ್ರಜ್ಞಾನದೊಂದಿಗೆ, ರೆಟಿನೊಬ್ಲಾಸ್ಟೋಮಾದಿಂದ ಬಳಲುತ್ತಿರುವವರ, ಬದುಕುಳಿಯುವ ಪ್ರಮಾಣವು ಸುಧಾರಿಸಿದೆ. ಆದರೆ, ಕಡಿಮೆ ಜಾಗೃತಿ ಇನ್ನೂ ಕಳವಳಕ್ಕೆ ಕಾರಣವಾಗಿದೆ. ಆದ್ದರಿಂದ ವಿಶೇಷವಾಗಿ ಮಕ್ಕಳ ಜೀವ ಉಳಿಸುವಲ್ಲಿ ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ಅತ್ಯಗತ್ಯ. ಬಿಳಿ ಕಣ್ಣು, ಅಥವಾ ಬೆಕ್ಕಿನ ಕಣ್ಣಿನ ಪ್ರತಿಫಲನವು ಸಾಮಾನ್ಯವಾಗಿ ಹೆಚ್ಚಿನ ಗಮನ ನೀಡಬೇಕಾದ ಸಮಸ್ಯೆಯಾಗಿದೆ. ಆದರೂ ಯಾವುದೇ ಹಠಾತ್ ಊತ, ಕಣ್ಣಿನ ಮೆಳ್ಳಗಣ್ಣು ಇತ್ಯಾದಿಗಳನ್ನು ನಿರ್ಲಕ್ಷಿಸಬಾರದು ಮತ್ತು ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Wedding Fashion: ವೆಡ್ಡಿಂಗ್‌ ಫ್ಯಾಷನ್‌ ಫೋಟೋ ಶೂಟ್‌ನಲ್ಲಿ ಟ್ರೆಂಡಿಯಾದ ದೇಸಿ ಲುಕ್‌

ಈ ಕಾರ್ಯಕ್ರಮದಲ್ಲಿ ಕೇರಳದ ರಾಜ್ಯ ಅಂಧರ ಫುಟ್ಬಾಲ್ ತಂಡದ ಸದಸ್ಯ ಮತ್ತು ಸಂಶೋಧಕ ಮುಹಮ್ಮದ್ ಅಫ್ಸಲ್, ಇಕ್ವಿಬೀಯಿಂಗ್ ಫೌಂಡೇಶನ್‍ನ ಸಂಸ್ಥಾಪಕಿ ಅನಂತಲಕ್ಷ್ಮಿ, ಭಾರತದ ಶಂಕರ ಐ ಫೌಂಡೇಶನ್‍ನ ವಿಟ್ರಿಯೋರೆಟಿನಾ ಮತ್ತು ಓಕ್ಯುಲರ್ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಮಹೇಶ್ ಪಿ. ಷಣ್ಮುಗಂ ಭಾಗವಹಿಸಿದ್ದರು.

Exit mobile version