Site icon Vistara News

ವರ್ಧಂತಿ ಮಹೋತ್ಸವದಂದೇ ರಕ್ತದಾನ ಮಾಡಿದ ಸ್ವರ್ಣವಲ್ಲಿ ಶ್ರೀಗಳು

swarnavalli mutt

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ‌55ನೇ ವರ್ಧಂತಿ ಮಹೋತ್ಸವ ಗುರುವಾರ ನಡೆಯಿತು.

ಈ ಸಂದರ್ಭದಲ್ಲಿ  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಮ್‌ ಗ್ರಾಮಾಭ್ಯುದಯ ಸಂಸ್ಥೆ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದ ಶ್ರೀಗಳು ರಕ್ತದಾನ ಮಾಡಿದರು.

ವರ್ಧಂತ್ಯುತ್ಸವದ ಶುಭದಿನದಂದು ಪರಮಪೂಜ್ಯರು ಪ್ರತಿ ವರ್ಷವೂ ರಕ್ತದಾನ ಮಾಡಿಕೊಂಡು ಬಂದಿದ್ದಾರೆ. ಅದರಂತೆ ಈ ಬಾರಿಯೂ ನೀಡಿದರು. ಈ ಶಿಬಿರದಲ್ಲಿ ಭಕ್ತರ ಆರೋಗ್ಯವನ್ನು ಉಚಿತವಾಗಿ ತಪಾಸಣೆ ಮಾಡಲಾಯಿತಲ್ಲದೆ, ಔಷಧಿಯನ್ನೂ ವಿತರಿಸಲಾಯಿತು.

ಕಳೆದ 31 ವರ್ಷಗಳಿಂದ ನಿಯಮಿತವಾಗಿ ನವಾವರಣ ಪೂಜೆ ಹಾಗೂ ಶ್ರೀ ಮಠದ ಆರಾಧ್ಯ ದೇವರಾದ ಶ್ರೀ ಲಕ್ಷ್ಮೀ ನರಸಿಂಹ, ಶ್ರೀ ಚಂದ್ರಮೌಳೀಶ್ವರ, ಶ್ರೀ ರತ್ನಗರ್ಭ ಗಣಪತಿ ಮುಂತಾದ ದೇವರುಗಳ ಪೂಜೆಯನ್ನು ಅತ್ಯಂತ ನಿಷ್ಠೆಯಿಂದ ಮಾಡಿಕೊಂಡು ಬಂದ ಶ್ರೀಗಳಿಗೆ ಈ ಶುಭ ಸಂದರ್ಭದಲ್ಲಿ ಅಪಾರ ಭಕ್ತರು ಶಿರಸಾಷ್ಠಾಂಗ ಪ್ರಣಾಮಗಳನ್ನು ಸಲ್ಲಿಸಿದರು.

ಅಧ್ಯಯನ ಮತ್ತು ಅಧ್ಯಾಪನವನ್ನು ಆದ್ಯ ಕರ್ತವ್ಯವೆಂದೇ ಭಾವಿಸಿರುವ ಶ್ರೀಗಳು ಎಷ್ಟೇ ರಾತ್ರಿಯಾದರೂ ಈ ಕರ್ತವ್ಯವನ್ನು ವ್ರತದಂತೆ ಪರಿಪಾಲಿಸಿಕೊಂಡು ಬಂದಿದ್ದಾರೆ. ಹೀಗಾಗಿ ದೇಶಾದ್ಯಂತ ಶ್ರೀಗಳು ಅಪಾರ ಭಕ್ತರನ್ನು ಹೊಂದಿದ್ದು, ಅವರೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಗೌರವವನ್ನು ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ|ಅವನಿ ಶೃಂಗೇರಿ ಶಂಕರಾಚಾರ್ಯ ಮಠದ ನೂತನ ಪೀಠಾಧೀಪತಿಗಳ ಪಟ್ಟಾಭಿಷೇಕ

Exit mobile version