Site icon Vistara News

ಬಿಎಂಎಸ್ ಸಂಜೆ ಎಂಜಿನಿಯರಿಂಗ್ ಕಾಲೇಜು ಸಮಸ್ಯೆ: 2021-22ಕ್ಕೆ ಮಾತ್ರ ಲ್ಯಾಟರಲ್ ಪ್ರವೇಶಕ್ಕೆ ವಿನಾಯಿತಿ

ashwath narayan

ಬೆಂಗಳೂರು: ಬಿಎಂಎಸ್ ಸಂಜೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿಗೆ ಲ್ಯಾಟರಲ್ ಪ್ರವೇಶ ಪಡೆದುಕೊಂಡಿದ್ದ ಡಿಪ್ಲೊಮಾ ಪದವೀಧರರ ಬಿಕ್ಕಟ್ಟು ಸ್ವಲ್ಪ ಮಟ್ಟಿಗೆ ಬಗೆಹರಿಯುವ ತೀರ್ಮಾನವೊಂದು ಬಂದಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎಐಸಿಟಿಇ) 2021-22ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕೆ ಮಾತ್ರ ಅನ್ವಯವಾಗುವಂತೆ ವಿನಾಯಿತಿ ಕೊಟ್ಟಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಇದನ್ನೂ ಓದಿ | Viral News | ಹಣ ಉಳಿಸಲು ಆ ಕಾಲೇಜು ವಿದ್ಯಾರ್ಥಿ ತಿಂದಿದ್ದು ಡಾಗ್‌ಫುಡ್‌!

ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು ಈ ಕಾಲೇಜಿನಲ್ಲಿ ಡಿಪ್ಲೊಮಾ ಪದವೀಧರರು ಲ್ಯಾಟರಲ್ ಪ್ರವೇಶಾತಿಗೆ ಎಐಸಿಟಿಇ ಅನುಮತಿ ನಿರಾಕರಿಸಿತ್ತು. ಇದರಿಂದ ಈಗಾಗಲೇ ಪ್ರವೇಶ ಪಡೆದವರಿಗೆ ತೊಂದರೆ ಆಗಿತ್ತು. ಇದನ್ನು ಎಐಸಿಟಿಇಗೆ ಪತ್ರ ಬರೆದು ಮತ್ತು ಮಾತುಕತೆ ನಡೆಸಿ ಬಗೆಹರಿಸಲಾಗಿದೆ. ಈ ರಿಯಾಯಿತಿಯು 2021-22ರಲ್ಲಿ ಲ್ಯಾಟರಲ್ ಪ್ರವೇಶಾತಿ ಪಡೆದುಕೊಂಡಿರುವವರಿಗೆ ಮಾತ್ರ ಅನ್ವಯವಾಗಲಿದೆ ಎಂದು ಎಐಸಿಟಿಇ ತಿಳಿಸಿದೆ ಎಂದರು.

ಇದನ್ನೂ ಓದಿ | ಶಾಲಾ-ಕಾಲೇಜು ಆಯ್ತು ಇದೀಗ ಬಿಎಂಟಿಸಿಗೂ ಬಂತು ಧರ್ಮ ದಂಗಲ್

Exit mobile version