ಬೆಂಗಳೂರು: ಯಲಹಂಕದ ಬಸ್ ಡಿಪೋದಲ್ಲಿ (yalahaka bus depo) ಭೀಕರ ಅಪಘಾತ (Bus accident) ಸಂಭವಿಸಿದೆ. ಬಿಎಂಟಿಸಿ ಕಂಡಕ್ಟರ್‌ಗೆ (BMTC Conductor) ಮತ್ತೊಂದು ಬಸ್‌ವೊಂದು ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಕಂಡಕ್ಟರ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಸೋಮಣ್ಣ ಮೃತ ದುರ್ದೈವಿ ಆಗಿದ್ದಾರೆ.
ಡಿಪೋ ನಂಬರ್ 30ರಲ್ಲಿ ಮಂಗಳವಾರ (ಮೇ 9) ಸಂಜೆ 4.30ಕ್ಕೆ ಈ ದುರ್ಘಟನೆ ನಡೆದಿದೆ. ಸೋಮಣ್ಣ 402b/10 ನಂಬರ್ ಬಸ್‌ನ ಕಂಡಕ್ಟರ್ ಆಗಿದ್ದರು ಎಂದು ತಿಳಿದು ಬಂದಿದೆ. ಟಿಟಿಗೆ ಟಿಕೆಟ್‌ನ ಹಣ ನೀಡಿ ವಾಪಸ್ ಬರುವ ವೇಳೆ ಮತ್ತೊಂದು ಬಸ್ ಡಿಕ್ಕಿ ಹೊಡೆದ ಪರಿಣಾಮ ಸೋಮಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಟ್ಟಡದ ಗೋಡೆಯೇ ಧ್ವಂಸವಾಗಿದೆ. ಕಟ್ಟಡಕ್ಕೆ ಬಸ್ ವೇಗವಾಗಿ ಹೋಗಿ ಗುದ್ದಿದ್ದರಿಂದ ಬಸ್ ಮತ್ತು ಗೋಡೆಯ ಮಧ್ಯೆ ಸಿಲುಕಿ ಕಂಡಕ್ಟರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಂಡಕ್ಟರ್‌ನ ಹೃದಯ ಕಿತ್ತು ಬಂದು ರಸ್ತೆಗೆ ಬಿದ್ದಿದ್ದು, ಅಲ್ಲಿದ್ದವರು ಹೌಹಾರಿದ್ದಾರೆ. ಬಸ್‌ನಲ್ಲಿ ಇದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: Karnataka Rain : ಸಿಡಿಲು ಬಡಿದು ಕೃಷಿ ಕಾರ್ಮಿಕ ಮಹಿಳೆ ಸಾವು; ಇಬ್ಬರಿಗೆ ಗಾಯ, ಬಸ್ ಮೇಲೆ ಉರುಳಿ ಬಿದ್ದ ಮರ
ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಛಿದ್ರ ಛಿದ್ರವಾಗಿ ಬಿದ್ದಿದ್ದ ಕಂಡಕ್ಟರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.