Site icon Vistara News

ಬಿಎಂಟಿಸಿ ಬಸ್‌ ಧಾವಂತಕ್ಕೆ ಪಾದಚಾರಿ ಬಲಿ, ಐದು ಮಹಡಿಗಳ ಕಟ್ಟಡದಿಂದ ಧುಮುಕಿ ಮಾನಸಿಕ ಅಸ್ವಸ್ಥ ಸಾವು

death

#image_title

ಬೆಂಗಳೂರು: ರಾಜಧಾನಿಯಲ್ಲಿ ಬಿಎಂಟಿಸಿ ಬಸ್‌ ಧಾವಂತಕ್ಕೆ ಸಿಲುಕಿ ಪಾದಚಾರಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ನಗರದ ಜೆಡಿಎಸ್ ಕಚೇರಿ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬಸ್‌ ಡಿಕ್ಕಿ ಹೊಡೆದಿದ್ದು, ವ್ಯಕ್ತಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

KA – 57 F 4762 ನಂಬರ್‌ನ ಬಸ್ ಚಾಲನೆ ಮಾಡುತ್ತಿದ್ದ ಚಾಲಕ ಮಹಾಂತೇಶ್‌ ಅವರ ನಿರ್ಲಕ್ಷ್ಯದ ಚಾಲನೆಯೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಮೃತದೇಹವನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಅವರ ಗುರುತುಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ.

ಕಟ್ಟಡದಿಂದ ಧುಮುಕಿ ಮಾನಸಿಕ ಅಸ್ವಸ್ಥ ಯುವಕ ಸಾವು

ಬೆಂಗಳೂರು: ನಗರದ ಎನ್‌ಟಿಐ ಲೇಔಟ್ ಜಂಕ್ಷನ್ ಇರುವ ಐದು ಮಹಡಿಗಳ ಕಟ್ಟಡದಿಂದ ಯುವಕನೊಬ್ಬ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಮಾರು ೨೦ ವರ್ಷದ ಯುವಕ ಸುಚೀರ್‌ ಮಾನಸಿಕ ಅಸ್ವಸ್ಥನೆಂದು ಹೇಳಲಾಗಿದೆ.

ಕೆಲವು ಸಮಯದಿಂದ ಅಮೆರಿಕದಿಂದ ಮರಳಿ ಬಂದಿದ್ದ ಸುಚೀರ್‌ ಸ್ವಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಎಂ.ಎಸ್‌. ರಾಮಯ್ಯ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಿದ್ದ ಈತ ಈ ಹಿಂದೆ ಹಲವು ಬಾರಿ ಚಿಕಿತ್ಸೆ ಪಡೆದಿದ್ದ ಎನ್ನಲಾಗಿದೆ.

ಈತನ ತಂದೆ ಅಮೆರಿಕದಲ್ಲಿ ವಾಸಿಸುತ್ತಿದ್ದು ಮಗನನ್ನು ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದಿದ್ದ. ಇವರ ಕುಟುಂಬ ಮೂಲತಃ ಆಂಧ್ರ ಪ್ರದೇಶದ್ದು ಎನ್ನಲಾಗಿದೆ.

ಸುಚೀರ್ ಶವವನ್ನು ಎಂ ಎಸ್ ರಾಮಯ್ಯಗೆ ರವಾನೆ ಮಾಡಲಾಗಿದ್ದು, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : Road Accident: ದಾವಣಗೆರೆ ಸಮೀಪ ಬೈಕ್‌ಗೆ ಬಸ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

Exit mobile version