Site icon Vistara News

Bmtc Driver: ಡಿಪೋ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಬಿಎಂಟಿಸಿ ಚಾಲಕ; ವಿಷ ಕುಡಿದು ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆರ್‌ಆರ್ ನಗರದ ಡಿಪೋ 21ರಲ್ಲಿ ಬಿಎಂಟಿಸಿ ಚಾಲಕನೊಬ್ಬ (Bmtc Driver) ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ರಂಗನಾಥ್ ವಿಷ ಕುಡಿದ ಚಾಲಕ.

ರಂಗನಾಥ್ ವಿಷ ಕುಡಿದ ಚಾಲಕ

ಶುಕ್ರವಾರ ಬೆಳಗ್ಗೆ ರಂಗನಾಥ್ ಡಿಪೋಗೆ ಕರ್ತವ್ಯಕ್ಕೆ ಬಂದಾಗ, ಅಧಿಕಾರಿಗಳು ಅವಾಚ್ಯ ಪದಗಳಿಂದ ನಿಂದಿಸಿದ್ದರಂತೆ. ಹೀಗಾಗಿಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಇತರೆ ಸಿಬ್ಬಂದಿ ಆರೋಪಿಸಿದ್ದಾರೆ. ಸರಿಯಾಗಿ ರಜೆ ನೀಡದೇ, ಹೆಚ್ಚುವರಿ ಕೆಲಸ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ ಎಂದು ರಂಗನಾಥ್‌ ಪತ್ರದಲ್ಲಿ ಉಲ್ಲೇಖ ಮಾಡಿದ್ದು, ಟಿಐ ಶೋಭಾ ಅವರೇ ನೇರ ಹೊಣೆ ಎಂದು ಬರೆದಿದ್ದಾರೆ. ನೌಕರರನ್ನು ಗುಲಾಮರನ್ನಾಗಿ ಕಾಣುತ್ತಿದ್ದು, ಅಧಿಕಾರದ ದರ್ಪ ತೋರುತ್ತಿದ್ದಾರೆ. ಶೋಭಾ ಅವರು ಜೀವನದಲ್ಲಿ ಕುಗ್ಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Ayush Doctors Demands: ಆಯುಷ್ ವೈದ್ಯರ ಕೆಲಸಕ್ಕೆ ಸಿಗದ ಸಮಾನ ವೇತನ; ಶ್ರೀನಿವಾಸಾಚಾರಿ ವರದಿ ಅನುಷ್ಠಾನಕ್ಕೆ ಪಟ್ಟು

ಇತ್ತ ವಿಷ ಕುಡಿದ ವಿಚಾರ ತಿಳಿಯುತ್ತಿದ್ದಂತೆ ಡಿಪೋದಲ್ಲಿದ್ದ ಇತರೆ ಚಾಲಕ, ನಿರ್ವಾಹಕರು ರಂಗನಾಥ್‌ ಅವರನ್ನು ಕೊಂಡೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಂಗನಾಥ್ ಮಾಗಡಿ ಮೂಲದವರಾಗಿದ್ದು, ೧೫ ವರ್ಷಗಳಿಂದ ಬಿಎಂಟಿಸಿಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Exit mobile version