ಬೆಂಗಳೂರು: ಬಾಂಗ್ಲಾ ಯುವತಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 9 ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿ 54ನೇ ಸಿಸಿಹೆಚ್ ಕೋರ್ಟ್ ನ್ಯಾಯಾಧೀಶ ಸುಬ್ರಹ್ಮಣ್ಯ ತೀರ್ಪು ನೀಡಿದ್ದಾರೆ.
2021ರ ಮೇ 18ರಂದು ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. ಮೇ 27ರಂದು ಅತ್ಯಾಚಾರ ವಿಡಿಯೋ ವೈರಲ್ ಆದ ನಂತರ ಪೊಲೀಸರು 11 ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು. ಈ ಹಿಂದೆ ಆರೋಪಿಗಳಲ್ಲಿ ಇಬ್ಬರಿಗೆ ವಿದೇಶಿ ಕಾಯ್ದೆಯಡಿ ಶಿಕ್ಷೆ ನೀಡಲಾಗಿತ್ತು.
ಇದೀಗ ಶುಕ್ರವಾರ ನಡೆದ ವಿಚಾರಣೆಯಲ್ಲಿ, ಬಾಂಗ್ಲಾ ಯುವತಿ ಅತ್ಯಾಚಾರ ಪ್ರರಕರಣದ ಉಳಿದ 9 ಮಂದಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದೆ. ಆರನೇ ಆರೋಪಿ ಮಹಿಳೆ ತಾನಿಯಾ ಖಾನ್‌ಗೆ 20 ವರ್ಷ, ಒಂಭತ್ತನೇ ಆರೋಪಿ ಜಮಾಲ್‌ಗೆ 5 ವರ್ಷ ಜೈಲು ಶಿಕ್ಷೆ ಜತೆಗೆ ಆರೋಪಿಗಳಾದ ಸೋಬುಜ್ ಶೇಖ್, ರಿದಯ್ ಬಾಬು, ರಕಿಬುಲ್ಲ್ ಇಸ್ಲಾಂ ಸಾಗರ್, ಮಹಮದ್‌ಬಾಬು, ರಪ್ಸಾನ ಮಂಡಲ್, ದಾಲಿಂ, ಅಜೀಂ ಸೇರಿ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸರ್ಕಾರದ ಪರ ವಕೀಲ ವೀರಣ್ಣ ತಿಗಡಿ ವಾದ ಮಂಡಿಸಿದ್ದಾರೆ.
ಇದನ್ನೂ ಓದಿ | ಶಿಗ್ಗಾಂವಿ ರಾಜಶ್ರೀ ಥಿಯೇಟರ್ ಶೂಟೌಟ್ ಪ್ರಕರಣದ ಆರೋಪಿ ಬಂಧನ