Site icon Vistara News

Body found | ಮನೆಯಿಂದ ಹೊರ ಹೋಗಿದ್ದ ವೃದ್ಧ ಶವವಾಗಿ ಪತ್ತೆ; ಕೊಲೆ ಶಂಕೆ

ತುಮಕೂರು ನ್ಯೂಸ್

ತುಮಕೂರು: ಇಲ್ಲಿನ ತುರುವೇಕೆರೆ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ನೀರಿನ ಕಟ್ಟೆಯೊಂದರಲ್ಲಿ ಕೊಲೆಯಾದ ರೀತಿಯಲ್ಲಿ ವೃದ್ಧರೊಬ್ಬರೊಬ್ಬರ ಶವ ಪತ್ತೆ (Body found) ಆಗಿದೆ. ನಿಂಗಪ್ಪ (84) ಮೃತ ದುರ್ದೈವಿ.

ಕಳೆದ ನಾಲ್ಕು ದಿನಗಳ ಹಿಂದೆ ಮನೆಯಿಂದ ಹೊರ ಹೋಗಿದ್ದ ನಿಂಗಪ್ಪ, ಶನಿವಾರ ಸಂಜೆ ಅದೇ ಗ್ರಾಮದ ನೀರಿನ ಕಟ್ಟೆಯಲ್ಲಿ ಶವವಾಗಿ ಪತ್ತೆ ಆಗಿದ್ದಾರೆ. ಕೈ ಕಾಲು ಕಟ್ಟಿದ ರೀತಿಯಲ್ಲಿ ಶವ ಪತ್ತೆ ಆಗಿದ್ದು, ಸ್ಥಳಕ್ಕೆ ದಂಡಿನ ಶಿವರ ಪೊಲೀಸರು ಹಾಗೂ ಎಸ್‌ಪಿ ರಾಹುಲ್ ಕುಮಾರ್ ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ಮೃತ ನಿಂಗಪ್ಪ ಪುತ್ರ ರಮೇಶ್ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಇದು ಕೊಲೆಯೊ ಆಕಸ್ಮಿಕ ಸಾವೋ ಎಂಬುದರ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ | ಹಿರಿಯ ಪತ್ರಕರ್ತ, ಕನ್ನಡಪ್ರಭದ ಮಾಜಿ ಸಂಪಾದಕ ಕೆ. ಸತ್ಯನಾರಾಯಣ ನಿಧನ

Exit mobile version