Site icon Vistara News

Body found: ನಾಪತ್ತೆಯಾಗಿದ್ದ ನೇಪಾಳಿ ಮಹಿಳೆ ಶವವಾಗಿ ಪತ್ತೆ?; ಇವಳೇನಾ ಅವಳು!

#image_title

ಬೆಂಗಳೂರು: ಮರವೊಂದರ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದ ಅವಶೇಷಗಳು, ಈ ಹಿಂದೆ ನಾಪತ್ತೆಯಾಗಿದ್ದ (Body found) ನೇಪಾಳಿ ಮಹಿಳೆಯದ್ದು ಎಂದು ಶಂಕಿಸಲಾಗಿದೆ. ಹುಳಿಮಾವು ಸಮೀಪದ ಅಕ್ಷಯನಗರದ ಬಳಿ ಮಹಿಳೆಯೊಬ್ಬರ ಶವ ಬುಧವಾರ ಪತ್ತೆಯಾಗಿತ್ತು. ಶವದ ಅವಶೇಷ ನೋಡಿ ಆತ್ಮಹತ್ಯೆ ಮಾಡಿಕೊಂಡು ಆರು ತಿಂಗಳಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಗುರುವಾರ ಬೆಳಗ್ಗೆ ಮಹಿಳೆಯೊಬ್ಬರ ಅಸ್ತಿಪಂಜರ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಸ್ತಿಪಂಜರದ ಪಕ್ಕದಲ್ಲಿಯೇ ಚಪ್ಪಲಿ ಹಾಗೂ ನೆಕ್ಲೆಸ್ ಎಲ್ಲವೂ ಪತ್ತೆಯಾಗಿತ್ತು. ಹೀಗಾಗಿ ಮಿಸ್ಸಿಂಗ್ ಕೇಸ್‌ಗಳನ್ನು ಹುಡುಕಲು ಶುರು ಮಾಡಿದಾಗ ಕಳೆದ ವರ್ಷ ಜುಲೈನಲ್ಲಿ ಹುಳಿಮಾವು ಠಾಣಾ ವ್ಯಾಪ್ತಿ ನೇಪಾಳಿ ಮಹಿಳೆ ನಾಪತ್ತೆ ಕೇಸ್ ದಾಖಲಾಗಿತ್ತು. ನಾಪತ್ತೆಯಾದವಳು ಪುಷ್ಪಧಾಮಿ ಎಂದು ತಿಳಿದು ಬಂದಿದೆ.

ಅಸ್ತಿಪಂಜರದ ಬಳಿ ಸಿಕ್ಕಿರುವ ವಸ್ತುಗಳೆಲ್ಲ ಮ್ಯಾಚ್ ಮಾಡಲಾಗಿದ್ದು, ಅದು ಮಹಿಳೆಯದ್ದೇ ಶವ ಎಂಬುದು ತಿಳಿದು ಬಂದಿದೆ. ಆದರೂ ಅಸ್ಥಿಪಂಜರದ ಡಿಎನ್‌ಎ, ಸತ್ತ ಅವಧಿಯ ಬಗ್ಗೆ ಮಾಹಿತಿ ಎಲ್ಲವನ್ನೂ ಪಡೆದುಕೊಳ್ಳಲಿದ್ದೇವೆ ಎಂದರು ತಿಳಿಸಿದ್ದಾರೆ.

ಆರು ತಿಂಗಳಿಂದ ಕೊಳೆಯುತ್ತಿದ್ದ ಶವ

ಮಲಯಾಳಂ ಚಲನಚಿತ್ರ ʼಕೋಲ್ಡ್ ಕೇಸ್ʼ ಮಾದರಿಯಲ್ಲಿ ತಲೆ ಬುರುಡೆಯೊಂದು ಮೊದಲಿಗೆ ಪತ್ತೆಯಾಗಿದೆ. ಗುರುವಾರ ಪೊಲೀಸರು ಮೂತ್ರ ವಿಸರ್ಜನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಪರಿಶೀಲನೆ ನಡೆಸಿದಾಗ ಮಹಿಳೆ ಶವ ಎಂಬುದು ದೃಢವಾಗಿತ್ತು. ಸುತ್ತಮುತ್ತ ಕಟ್ಟಡಗಳ ನಡುವೆ ಖಾಲಿ ನಿವೇಶನ ಒಂದರ ಪೊದೆಗಳ ನಡುವೆ ಇರುವ ಮರದಲ್ಲಿ ಶವ ಪತ್ತೆಯಾಗಿತ್ತು. ಶವದ ಬಳಿ ಮಹಿಳೆಯರು ಬಳಸುವ ಚಪ್ಪಲಿ ಕಂಡು ಬಂದಿತ್ತು.

ಇದನ್ನೂ ಓದಿ: Love Torture:‌ ಪ್ರೇಮದ ಸುಳಿಯಲ್ಲಿ ಸಿಲುಕಿದ ಬಾಲಕಿ ಆತ್ಮಹತ್ಯೆ; ಪ್ರಿಯಕರ ಅನುಮಾನಿಸಿ, ಅವಮಾನಿಸಿದ್ದೇ ಕಾರಣವಾಯ್ತಾ?

ಜನ ಓಡಾಡುವ ಪ್ರದೇಶದಲ್ಲಿಯೇ ಇದ್ದರೂ ಸಹ ಆರು ತಿಂಗಳವರೆಗೆ ಶವ ಯಾರಿಗೂ ಕಂಡುಬಾರದೇ ಇದ್ದುದು ಆಶ್ಚರ್ಯ ಮೂಡಿಸಿದೆ. ಹೀಗಾಗಿ ಹುಳಿಮಾವು ಠಾಣೆ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು. ಆರು ತಿಂಗಳ ಹಿಂದಿನ ಮಿಸ್ಸಿಂಗ್ ಕೇಸ್‌ಗಳ ಹಿಂದೆ ಬಿದ್ದಿದ್ದ ಪೊಲೀಸರು ನೇಪಾಳಿ ಮಹಿಳೆಯದ್ದು ಎಂದು ಅಂದಾಜಿಸಿದ್ದು, ವೈದ್ಯಕೀಯ ಪರೀಕ್ಷೆಗಳಿಂದ ಇದಕ್ಕೆ ಉತ್ತರ ನಿರೀಕ್ಷಿಸಲಾಗುತ್ತಿದೆ.

Exit mobile version