Site icon Vistara News

Bomb Blast : ಮೇವು ಎಂದು ನಾಡ ಬಾಂಬ್‌ ತಿಂದ ಎತ್ತು; ಸ್ಫೋಟಕ್ಕೆ ಛಿದ್ರವಾಯ್ತು ಬಾಯಿ

nada Bomb Blast

ವಿಜಯನಗರ: ಕಾಡು ಹಂದಿ ಕಾಟಕ್ಕೆ ಕೆಲವರು ಹಂದಿಯನ್ನು ಓಡಿಸಲೆಂದು ನಾಡ ಬಾಂಬ್‌ (Bomb Blast) ಅನ್ನು ಇಟ್ಟಿದ್ದರು. ಆದರೆ ಹಸುವೊಂದು ಮೇಯುತ್ತಾ ಹೋಗಿ ನಾಡಬಾಂಬ್‌ ತಿಂದಿದೆ. ಪರಿಣಾಮ ಬಾಂಬ್‌ ಸ್ಫೋಟುಗೊಂಡು ಬಾಯೆಲ್ಲ ಛಿದ್ರ ಛಿದ್ರವಾಗಿದೆ.

ವಿಜಯನಗರದ ಕೂಡ್ಲಿಗಿಯ ಹರವದಿ ಗ್ರಾಮದಲ್ಲಿ ಈ ಅವಘಡ ನಡೆದಿದೆ. ಎತ್ತಿನ ಬಾಯಿಯಲ್ಲಿ ನಾಡ ಬಾಂಬ್ ಸ್ಪೋಟಗೊಂಡು ಛಿದ್ರಗೊಂಡಿದ್ದರಿಂದ ತೀವ್ರ ನರಳಾಟ ಅನುಭವಿಸುತ್ತಿದೆ. ರೈತ ಮಲಿಯಪ್ಪ‌ ಎಂಬುವರಿಗೆ ಸೇರಿದ ಎತ್ತು ತೀವ್ರ ನರಳಾಟವನ್ನು ಅನುಭವಿಸುತ್ತಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹರವದಿ ಗ್ರಾಮವು ಅರಣ್ಯ ಪ್ರದೇಶ ಪಕ್ಕದಲ್ಲಿದೆ. ಹೀಗಾಗಿ ಕಾಡಿನಿಂದ ಹಂದಿಗಳು ಬಂದು ಕಾಟ ನೀಡುತ್ತಿದ್ದವು. ಸಾಮಾನ್ಯವಾಗಿ ಕಾಡ ಹಂದಿ ಎಂದರೆ ಜನರಿಗೆ ತೊಂದರೆ ಕೊಡುವುದೇ ಹೆಚ್ಚು. ನೆಟ್ಟು ಬೆಳೆಸಿದ ಗಡ್ಡೆ, ಗೆಣಸುಗಳನ್ನು ಹಾಳು ಮಾಡುವುದು, ಕಂಡ ಕಂಡವರ ಮೇಲೆ ದಾಳಿ ಮಾಡುತ್ತವೆ. ಹೀಗಾಗಿ ನಾಡಬಾಂಬ್‌ ಇಡಲಾಗಿತ್ತು ಎನ್ನಲಾಗಿದೆ. ಯಾರಿಗೋ, ಯಾರೋ ಇಟ್ಟ ಬಾಂಬ್‌ ತಿಂದು ಎತ್ತು ಸಂಕಷ್ಟವನ್ನು ಅನುಭವಿಸುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಖಾನಾಪುರದಲ್ಲಿ ಕರಡಿ ದಾಳಿಗೆ ರೈತ ಬಲಿ, ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಂಧಲೆ

ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕರಡಿ ದಾಳಿಗೆ (Bear attack) ರೈತರೊಬ್ಬರು ಬಲಿಯಾಗಿದ್ದರೆ, ಇತ್ತ ಚಿಕ್ಕಮಗಳೂರಿನಲ್ಲಿ ಆನೆಗಳ ದಾಂಧಲೆ (Elephant attack) ಜೋರಾಗಿದೆ. ಒಟ್ಟಿನಲ್ಲಿ ಕಾಡು ಪ್ರಾಣಿಗಳ ಸಮಸ್ಯೆಯಿಂದ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಘೋಶೆ ಬುದ್ರುಕ ಗ್ರಾಮದಲ್ಲಿ ರೈತ ಭೀಕಾಜಿ ಮಿರಾಶಿ (63) ಎಂಬುವರು ಕರಡಿ ದಾಳಿಗೆ ಬಲಿಯಾಗಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕರಡಿ ದಾಳಿ ಮಾಡಿದೆ. ದಾಳಿ ಮಾಡಿದ ಜಾಗದಿಂದ ಶವವನ್ನು ಸುಮಾರು 2 ಕಿ.ಮೀ. ದೂರದಲ್ಲಿ ಬಿಟ್ಟು ಹೋಗಿದೆ.

ಹೊಲದಿಂದ ಸುಮಾರು ಎರಡು ಕಿ.ಮೀ. ದೂರದ ಅರಣ್ಯ ಪ್ರದೇಶದಲ್ಲಿ ಅವರ ಶವ ಪತ್ತೆಯಾಗಿದೆ. ಹೊಲದಲ್ಲಿ ಅವರ ಜತೆಗೆ ಬೇರೆಯವರೂ ಕೆಲಸ ಮಾಡುತ್ತಿದ್ದರು. ಆದರೆ, ಯಾವುದನ್ನೂ ಲೆಕ್ಕಿಸದೆ ಕರಡಿ ದಾಳಿ ಮಾಡಿದೆ. ಅದು ಮಿರಾಶಿ ಅವರನ್ನು ಎತ್ತಿಕೊಂಡು ಹೋಗಿ ಕಾಡಿನಲ್ಲಿ ಎಸೆದು ಹೋಗಿದೆ. ಈ ಬಗ್ಗೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಾಣ ಕಳೆದುಕೊಂಡಿರುವ ರೈತನ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.

Elephant attack at Chikkamagaluru

ಚಿಕ್ಕಮಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗಜ ಪಡೆ ಎಂಟ್ರಿ!

ಚಿಕ್ಕಮಗಳೂರು ಜಿಲ್ಲೆ ಕಣತಿ ಗ್ರಾಮದಕ್ಕೆ ಬೆಳಗ್ಗೆಯೇ ಆನೆಗಳು ಲಗ್ಗೆ ಇಟ್ಟಿವೆ. ಕಾಡಿನ ಅಂಚಿನ ಮೂಲಕ ರಸ್ತೆ ದಾಟಿ ಬಂದಿರುವ ಈ ಆನೆಗಳು ಸಿಕ್ಕಸಿಕ್ಕ ತೋಟಗಳನ್ನು ಧ್ವಂಸ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಆರೇಳು ಕಾಡಾನೆಗಳ ಗುಂಪು ರಸ್ತೆಯಲ್ಲಿ ಓಡಾಟ ಮಾಡುತ್ತಿದೆ. ಇದು ವಾಹನ ಸವಾರರು ಹಾಗೂ ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಭಾನುವಾರ ರಾತ್ರಿಯಿಂದಲೂ ಕಣತಿ ಸುತ್ತಮುತ್ತ ಬೀಡು ಬಿಟ್ಟಿರುವ ಕಾಡಾನೆಗಳು ಬೆಳಗ್ಗೆ ತೋಟಗಳಿಗೆ ನುಗ್ಗಿವೆ.

ಇದನ್ನೂ ಓದಿ: Elephant Attack : ಹಾಲು ತರಲು ಹೋಗುತ್ತಿದ್ದ ವೃದ್ಧನ ಬೆನ್ನಟ್ಟಿ ದಾಳಿ ಮಾಡಿದ ಕಾಡಾನೆ ಹಿಂಡು, ಗಂಭೀರ ಗಾಯ

ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಇನ್ನೂ ಆಗಮಿಸದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಕಾಡಾನೆಗಳ ಉಪಟಳ ಮತ್ತಷ್ಟು ಹೆಚ್ಚಳವಾಗುವ ಅಪಾಯ ಎದುರಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version