Elephant Attack : ಹಾಲು ತರಲು ಹೋಗುತ್ತಿದ್ದ ವೃದ್ಧನ ಬೆನ್ನಟ್ಟಿ ದಾಳಿ ಮಾಡಿದ ಕಾಡಾನೆ ಹಿಂಡು, ಗಂಭೀರ ಗಾಯ - Vistara News

ಕರ್ನಾಟಕ

Elephant Attack : ಹಾಲು ತರಲು ಹೋಗುತ್ತಿದ್ದ ವೃದ್ಧನ ಬೆನ್ನಟ್ಟಿ ದಾಳಿ ಮಾಡಿದ ಕಾಡಾನೆ ಹಿಂಡು, ಗಂಭೀರ ಗಾಯ

Elephant Attack : ಕೊಡಗು ಜಿಲ್ಲೆಯಲ್ಲಿ ಆನೆಗಳ ಹಿಂಡು ಹಾಲು ತರಲು ಹೋಗುತ್ತಿದ್ದ ವೃದ್ಧರ ಮೇಲೆ ದಾಳಿ ಮಾಡಿದೆ. ಇತ್ತೀಚೆಗೆ ಹಲವಾರು ಮಂದಿಯನ್ನು ಆನೆಗಳು ಸಾಯಿಸಿದ್ದು, ಇವರು ಅದೃಷ್ಟವಶಾತ್‌ ಬಚಾವಾಗಿದ್ದಾರೆ.

VISTARANEWS.COM

on

Elephant Attack in Kodagu
ಆನೆಗಳ ಹಿಂಡಿನ ದಾಳಿಗೆ ಒಳಗಾದ ಅಮ್ಮಂಡ ಸುಬ್ರಹ್ಮಣಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆನೆಗಳು ಮತ್ತು ಮಾನವ ಸಂಘರ್ಷ (Elephant and Human Conflict) ಮುಂದುವರೆದಿದ್ದು ಕಾಡಾನೆ ಹಿಂಡೊಂದು (Wild Elephants) ಹಾಲು ತರಲು ಹೋಗುತ್ತಿದ್ದ ವೃದ್ಧರೊಬ್ಬರ (Elephant attack on Old Man) ಮೇಲೆ ದಾಳಿ ಮಾಡಿದೆ. ಮೂರು ಆನೆಗಳ ಹಿಂಡು ನುಗ್ಗಿ ಬಂದಿದ್ದು, ಗಾಯಗೊಂಡ ವೃದ್ಧರ ಸ್ಥಿತಿ ಗಂಭೀರವಾಗಿದೆ.

ಕೊಡಗು ಜಿಲ್ಲೆ (Kodagu News) ವಿರಾಜಪೇಟೆ ತಾಲ್ಲೂಕಿನ ಕಡಂಗ ಮರೂರು ಗ್ರಾಮದಲ್ಲಿ‌ ನಡೆದಿದೆ. ಕಡಂಗ ಮರೂರು ಗ್ರಾಮದ 73 ವರ್ಷ ನಿವಾಸಿ ಅಮ್ಮಂಡ ಸುಬ್ರಹ್ಮಣಿ ಅವರು ಮನೆಯಿಂದ ಹಾಲು ತರಲು ಅಂಗಡಿಗೆ ತೆರಳುವ ಸಂದರ್ಭದಲ್ಲಿ ಕಡಂಗ ಮರೂರು ಗ್ರಾಮದ ಭದ್ರಕಾಳಿ ದೇವಾಲಯದ ಸಮೀಪದ ತೋಟದಿಂದ ಏಕಾ ಏಕಿ ಬಂದ ಮೂರು ಕಾಡಾನೆಗಳು ಸುಬ್ರಹ್ಮಣಿ ಮೇಲೆ ದಾಳಿ ನಡೆಸಿದೆ.

ಕಾಡಾನೆ ದಾಳಿಯಿಂದ ಕೈ ಕಾಲುಗಳಿಗೆ ತೀವ್ರ ಪಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ದಿನಬೆಳಗಾದರೆ ಸಾಕು ಕಾಡಿನಿಂದ ನಾಡಿಗೆ ಲಗ್ಗೆ ಇಡೋ ಕಾಡಾನೆಗಳು ರೈತರು ಬೆಳೆದ ಬೆಳೆಗಳನ್ನ ನಾಶ ಪಡಿಸುವುದರೊಂದಿಗೆ ಜನರ ಮೇಲು ಕೂಡ ದಾಳಿ ನಡೆಸುತ್ತಿವೆ.

ಜನರು ಓಡಾಲು ಕೂಡ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆನೆ ಮಾನವ ಸಂಘರ್ಷಕ್ಕೆ ಕಡಿವಾಣ ಹಾಕುವಂತ್ತೆ ಕೊಡಗಿನ ಜನತೆ ಒತ್ತಾಯಿಸುತ್ತಿದ್ದಾರೆ.

ಅರಣ್ಯ ಸಿಬ್ಬಂದಿಯನ್ನೇ ಬಲಿ ಪಡೆದಿತ್ತು ಕಾಡಾನೆ

ಕಳೆದ ಸೆಪ್ಟೆಂಬರ್‌ 4ರಂದು ಆನೆಗಳ ಹಾವಳಿಯನ್ನು ನಿಯಂತ್ರಿಸುವುದಕ್ಕಾಗಿ ರೂಪಿಸಲಾದ ರ‍್ಯಾಪಿಡ್‌ ರೆಸ್ಪಾನ್ಸ್‌ ಟೀಮ್‌ನ (Rapid Response Team- RRT) ಸದಸ್ಯರೊಬ್ಬರನ್ನೇ ಆನೆ ದಾಳಿ ಮಾಡಿ ಕೊಂದಿತ್ತು.

ಕೊಡಗಿನ ಆನೆಕಾಡು ಅರಣ್ಯ ಪ್ರದೇಶದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ದಳವೊಂದು (Rapid Response Team- RRT) ಕಾರ್ಯಾಚರಿಸುತ್ತಿದ್ದು, ಇದು ಆನೆಗಳ ಚಲನವಲನಗಳ ಮೇಲೆ ಗಮನ ಇಡುತ್ತದೆ. ಈ ತಂಡದಲ್ಲಿ RRT ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಗಿರೀಶ್ (35) ಅವರೇ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದರು. ಮಡಿಕೇರಿ ಸಮೀಪದ ಕೆದಕಲ್ ಬಳಿ ಗಿರೀಶ್‌ ಅವರು ತಂಡದ ಇದರ ಸದಸ್ಯರ ಜತೆಗೆ ಆನೆ ಕಾರ್ಯಾಚರಣೆಗೆ ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ದಾಳಿ ನಡೆಸಿತ್ತು.

ಆಗಸ್ಟ್‌ 27ಕ್ಕೆ ಹಸುವನ್ನು ಹುಡುಕಲು ಹೋದ ರೈತ ಸಾವು

ಕಳೆದ ಆಗಸ್ಟ್‌ 27ರಂದು ಸೋಮವಾಪೇಟೆ ತಾಲ್ಲೂಕಿನ ಅಡಿಯನಾಡೂರು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಆನೆಯೊಂದು 60 ವರ್ಷದ ಕೃಷಿಕ ಈರಪ್ಪ ಎಂಬವರನ್ನು ಆನೆ ಕೊಂದು ಹಾಕಿತ್ತು.

ಅಂದು ಮುಂಜಾನೆ ಈರಪ್ಪ ತಮ್ಮ‌‌ ಮನೆಯ ಹಾಲು ಕರೆಯುವ ಹಸು ಕಾಣುತ್ತಿಲ್ಲ ಅಂತ ಹುಡುಕಿಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಗೌರಿ ಗದ್ದೆಯ ಸಮೀಪ ಏಕಾಏಕಿ ನುಗ್ಗಿ ಬಂದ ಕಾಡಾನೆ ಈರಪ್ಪ ಮೇಲೆ ದಾಳಿ ನಡೆಸಿದೆ.‌ ಆನೆ ಈರಪ್ಪ ಅವರ ಎದೆಯ ಮೇಲೆಯೇ ನೇರವಾಗಿ ಕಾಲಿಟ್ಟಿದೆ. ದಾಳಿಗೆ ಸಿಲುಕಿದ ಈರಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಇದನ್ನೂ ಓದಿ: Elephant attack : ಕಾಡಾನೆ ದಾಳಿಗೆ ಮತ್ತೊಬ್ಬ ವೃದ್ಧ ಬಲಿ!

ಆಗಸ್ಟ್‌ 20ರಂದು ವಾಕಿಂಗ್‌ ಮಾಡುತ್ತಿದ್ದ ಮಹಿಳೆ ಮೃತ್ಯು

ಕಳೆದ ಆಗಸ್ಟ್‌ 2೦ರಂದು ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ಮನೆ ಸಮೀಪ ವಾಕಿಂಗ್‌ ಮಾಡುತ್ತಿದ್ದ ಆಯಿಶಾ (63) ಎಂಬವರು ಆನೆ ದಾಳಿಗೆ ಒಳಗಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಅದಕ್ಕಿಂತ ಒಂದು ವಾರದ ಹಿಂದೆ ಕೂಡ ಆನೆ ದಾಳಿಗೆ ಟ್ರಾಕ್ಟರ್ ಚಾಲಕರೊಬ್ಬರು ಮೃತ ಪಟ್ಟಿದ್ದರು. ಕಳೆದ ಒಂದು ತಿಂಗಳಲ್ಲಿ ಮರಗೋಡು, ಸಿದ್ದಾಪುರ ಸಮೀಪದ ಬಾಣಂಗಾಲ ಇದೀಗ ಸೋಮವಾರಪೇಟೆ ಭಾಗದಲ್ಲಿ ಕಾಡಾನೆ ದಾಳಿಯಾಗಿದ್ದು ಕಾಡಾನೆ ದಾಳಿಯಲ್ಲಿ ಮೂರು ಜನ ಮೃತಪಟ್ಟಂತಾಗಿದೆ.

ನಾಲ್ಕು ದಿನದ ಹಿಂದೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಮಹಿಳೆ ಮೇಲೆ ಆನೆ ದಾಳಿ ಮಾಡಿ ಮೃತಪಟ್ಟಿದ್ದರು. ಕೆಲವು ತಿಂಗಳ ಹಿಂದೆ ಕೊಡಗಿನಲ್ಲಿ ಒಂದೇ ದಿನ ಅಜ್ಜ ಮತ್ತು ಮೊಮ್ಮಗನನ್ನು ಆನೆ ಬಲಿ ಪಡೆದಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಕೋರ್ಟ್‌ ತೀರ್ಪಿನ ಪ್ರತಿ ಬೇಕೆಂದ SPP; ನೀವೇ ಓದ್ಕೋಬೇಕು ಅಂದ್ರು ನಾಗೇಶ್‌!

Prajwal Revanna Case: ಎಸ್‌ಐಟಿ ಉಲ್ಲೇಖಿಸಿದ ತೀರ್ಪುಗಳಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಲಾಗಿತ್ತು ಆದರೆ ರೇವಣ್ಣ ಪ್ರಕರಣದಲ್ಲಿ ಬೆದರಿಕೆ ಎಲ್ಲಿ ಹಾಕಿದ್ದಾರೆ? ಯಾವ ಬೇಡಿಕೆ ಇದೆ? ಎಸ್‌ಐಟಿ ಕೇಸ್‌ ಸ್ಟಡಿಗೆ ಕೌಂಟರ್ ಕೊಟ್ಟು ರೇವಣ್ಣ ಪರ ವಕೀಲ ನಾಗೇಶ್ ವಾದ ಮಂಡಿಸುತ್ತಾ, ಕೆ.ಆರ್.ನಗರ ಕಿಡ್ನ್ಯಾಪ್ ಕೇಸಲ್ಲಿ 364ಎ ಹಾಕಲು ಬೇಕಾದ ಬೇಸಿಕ್ ಅಂಶಗಳಿಲ್ಲ ಎಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿದರು. ಹೀಗೆ ಅನೇಕ ಕೇಸ್‌ಗಳ ತೀರ್ಪಿನ ಬಗ್ಗೆ ಉಲ್ಲೇಖ ಮಾಡಿದಾಗ ಎಸ್‌ಐಟಿ ಪರ ವಕೀಲರು ಅದರ ಪ್ರತಿಯನ್ನು ಕೇಳಿದ್ದಾರೆ. ಆಗ ಇಬ್ಬರ ನಡುವಿನ ವಾದವು ಗಮನ ಸೆಳೆಯಿತು.

VISTARANEWS.COM

on

Prajwal Revanna Case Revanna bail plea SPP wants a copy of the court verdict Nagesh said you have to read it yourself
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಆರ್.‌ ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದಡಿ ಜೈಲಿನಲ್ಲಿರುವ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ (HD Revanna) ಅವರ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆದಿದ್ದು, ಎರಡೂ ಕಡೆ ವಕೀಲರಿಂದ ಕೆಲವು ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗಳ ತೀರ್ಪುಗಳ ಬಗ್ಗೆ ಪ್ರಸ್ತಾಪವಾದವು. ಈ ವೇಳೆ ತೀರ್ಪಿನ ಪ್ರತಿ ಬಗ್ಗೆ ಸ್ವಾರಸ್ಯಕರ ವಾದಗಳು ನಡೆದವು.

ಈ ವೇಳೆ ರೇವಣ್ಣ ಪರ ಹಾಗೂ ಸರ್ಕಾರಿ ವಕೀಲರ ನಡುವೆ ವಾದ – ಪ್ರತಿವಾದಗಳು ನಡೆದಿವೆ. ಇಂಥ ಕಾರಣಗಳಿಗೆ ಜಾಮೀನು ಕೊಡಲೇ ಬೇಕು ಎಂದು ರೇವಣ್ಣ ಪರ ವಕೀಲರಾದ ನಾಗೇಶ್‌ ವಾದ ಮಂಡಿಸಿದರೆ, ಜಾಮೀನನ್ನು ಏಕೆ ಕೊಡಬಾರದು? ಕೊಟ್ಟರೆ ಮುಂದೇನಾಗುತ್ತದೆ ಎಂಬ ಬಗ್ಗೆ ಇದಕ್ಕೂ ಮೊದಲು ಎಸ್‌ಐಟಿ ಪರ ವಕೀಲರಾದ (ಎಸ್‌ಪಿಪಿ) ಜಯ್ನಾ ಕೊಠಾರಿ ಹಾಗೂ ಅಶೋಕ್‌ ನಾಯ್ಕ್‌ ವಾದಿಸಿದ್ದಾರೆ.

ತುಮಕೂರು ಕಿಡ್ನ್ಯಾಪ್‌ ಕೇಸ್‌ ಉಲ್ಲೇಖ

ಎಚ್.ಡಿ. ರೇವಣ್ಣ ಪರ ವಕೀಲರಾದ ನಾಗೇಶ್‌ ಅವರು ವಾದ ಮಂಡನೆ ವೇಳೆ, ತುಮಕೂರಿನ ಕಿಡ್ನ್ಯಾಪ್ ಪ್ರಕರಣವೊಂದನ್ನು ಉಲ್ಲೇಖಿಸಿದರು. ಎಸ್‌. ರಮೇಶ್ ವರ್ಸಸ್‌ ಸ್ಟೇಟ್ ಆಫ್ ಕರ್ನಾಟಕ ಪ್ರಕರಣದ ತೀರ್ಪು ಉಲ್ಲೇಖ ಮಾಡಿದ ಅವರು, ಕಾನೂನುಬಾಹಿರವಾಗಿ ಒತ್ತೆಯಾಳಾಗಿ ಇರಿಸಿಕೊಂಡರೇ ಮಾತ್ರ ಅಪರಾಧ. ಆದರೆ, ಕೆ.ಆರ್.ನಗರ ಕಿಡ್ನ್ಯಾಪ್ ಪ್ರಕರಣದಲ್ಲಿ ಈ ರೀತಿ ಬೆದರಿಕೆ ಪ್ರಶ್ನೆ ಇಲ್ಲ. ಆರೋಪಿ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸುವ ಅಪರಾಧ ಇದ್ದರೆ ಬೇಲ್‌ ಬೇಡ. ಆಗ ಮಾತ್ರ ನ್ಯಾಯಾಲಯ ರೇವಣ್ಣರಿಗೆ ಜಾಮೀನು ತಿರಸ್ಕರಿಸುವ ಅವಕಾಶ ಇದೆ. ಆದರೆ, ಇಲ್ಲಿ ರೇವಣ್ಣ ವಿರುದ್ಧ ಯಾವುದೇ ರೀತಿಯ ಸಾಕ್ಷಿಗಳೇ ಕಾಣುತ್ತಿಲ್ಲ. ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವ ಅಪರಾಧ ಕಾಣುತ್ತಿಲ್ಲ. ಎಸ್‌ಐಟಿ ಸಲ್ಲಿಸಿದ ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಸಿಆರ್‌ಪಿಸಿ 164 ಹೇಳಿಕೆ ದಾಖಲಿಸಿಲ್ಲ. ಆದರೂ ಜೀವಾವಧಿ ಶಿಕ್ಷೆ ನೀಡುವ ಅವಕಾಶ ಇರುವ ಸೆಕ್ಷನ್‌ 364ಎ ಹಾಕಿದ್ದಾರೆ. ಆರೋಪಿತ ರೇವಣ್ಣ ವಿರುದ್ಧ ಸಾಕ್ಷಿಗಳೂ ಇಲ್ಲ, ಸಾಂದರ್ಭಿಕ ಸಾಕ್ಷ್ಯವೂ ಇಲ್ಲ ಎಂದು ನಾಗೇಶ್‌ ಮಾಹಿತಿ ನೀಡಿದರು.

ತೀರ್ಪಿನ ಪ್ರತಿಗಾಗಿ ವಾದ – ಪ್ರತಿವಾದ

ಎಸ್‌ಐಟಿ ಉಲ್ಲೇಖಿಸಿದ ತೀರ್ಪುಗಳಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಲಾಗಿತ್ತು ಆದರೆ ರೇವಣ್ಣ ಪ್ರಕರಣದಲ್ಲಿ ಬೆದರಿಕೆ ಎಲ್ಲಿ ಹಾಕಿದ್ದಾರೆ? ಯಾವ ಬೇಡಿಕೆ ಇದೆ? ಎಸ್‌ಐಟಿ ಕೇಸ್‌ ಸ್ಟಡಿಗೆ ಕೌಂಟರ್ ಕೊಟ್ಟು ರೇವಣ್ಣ ಪರ ವಕೀಲ ನಾಗೇಶ್ ವಾದ ಮಂಡಿಸುತ್ತಾ, ಕೆ.ಆರ್.ನಗರ ಕಿಡ್ನ್ಯಾಪ್ ಕೇಸಲ್ಲಿ 364ಎ ಹಾಕಲು ಬೇಕಾದ ಬೇಸಿಕ್ ಅಂಶಗಳಿಲ್ಲ ಎಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿದರು. ಆದರೆ, ಆ ಎಲ್ಲಾ ಪ್ರಕರಣಗಳಲ್ಲಿ ಬೆದರಿಕೆವೊಡ್ಡಿ ಹಣಕ್ಕಾಗಿ ಬೇಡಿಕೆ ಇರಿಸಲಾಗಿತ್ತು. ಇಲ್ಲಿ ದಾಖಲಾದ ಕಿಡ್ನ್ಯಾಪ್ ಪ್ರಕರಣದಲ್ಲಿ ರೇವಣ್ಣ ವಿರುದ್ಧ ಆ ಆರೋಪಗಳಿಲ್ಲ ಎಂದು ವಾದಿಸಿದರು.

ಆಗ ಮಧ್ಯ ಪ್ರವೇಶ ಮಾಡಿದ ಜಯ್ನಾ ಕೊಠಾರಿ, ನೀವು ಉಲ್ಲೇಖಿಸುತ್ತಿರುವ ಪ್ರಕರಣಗಳ ತೀರ್ಪಿನ ಪ್ರತಿ ಕೊಡಿ ಎಂದು ಕೋರಿದರು. ಈ ನಡುವೆ ಎಸ್‌ಪಿಪಿ ಜಯ್ನಾ ಕೊಠಾರಿ ಹಾಗೂ ರೇವಣ್ಣ ವಕೀಲರ ಮಧ್ಯೆ ವಾದ ಪ್ರತಿವಾದ ನಡೆಯಿತು. ನೀವು ಕೇಳಿದ ಕೂಡಲೇ ಕೊಡಬೇಕು ಅಂತೇನಿಲ್ಲ ಎಂದು ಸಿ.ವಿ.ನಾಗೇಶ್ ಹೇಳಿದರು. ವರದಿಯಾಗಿರುವ ಪ್ರಕರಣಗಳನ್ನು ನೀವು ಓದಿಕೊಂಡಿರಬೇಕು ಎಂದು ನಾಗೇಶ್ ಕುಟುಕಿದರು. ಆದರೆ, ಯಾವ ಕೇಸ್ ಸ್ಟಡಿ ಉಲ್ಲೇಖಿಸುತ್ತೀರೋ ಅದರ ಪ್ರತಿಯನ್ನು ಕೊಡಿ ಎಂದು ಒತ್ತಾಯಿಸಿದರು.

ರೇವಣ್ಣ ವಿರುದ್ಧ ಆರೋಪಗಳೆಲ್ಲಾ ಊಹಾಪೋಹ, ರಾಜಕೀಯ ಪ್ರೇರಿತ. ಈ ರೀತಿಯಲ್ಲಿ ಆಧಾರರಹಿತ ಆರೋಪಗಳನ್ನು ಪರಿಗಣಿಸಬಾರದು. ರೇವಣ್ಣ 6 ಸಲ ಎಂಎಲ್‌ಎ ಆಗಿದ್ದವರು, ಕಾನೂನಿಗೆ ಸದಾ ತಲೆಬಾಗುತ್ತಾರೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಿ ಎಂದು ವಾದವನ್ನು ನಾಗೇಶ್‌ ವಾದಿಸಿದರು.

ಸಂತ್ರಸ್ತೆ ಹೇಳಿಕೆಯ ವಿಡಿಯೊ ಪ್ರಸ್ತಾಪ

ಇದಕ್ಕೂ ಮೊದಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ವಾದ ಮಂಡಿಸಿದ ಎಸ್‌ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ, 2 ವಿಚಾರಗಳಿಗೆ ಸಂಬಂಧಿಸಿ ಆರೋಪಿಗೆ ಜಾಮೀನು ಕೊಡಬೇಡಿ. ಒಂದು ಪ್ರಕರಣದ ಗಂಭೀರತೆಯನ್ನು ನೋಡಬೇಕಿದ್ದು, ಇದರಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿದೆ. ಕಿಡ್ನ್ಯಾಪ್ ಕೇಸಲ್ಲೂ ಈಗಾಗಲೇ 2ನೇ ಆರೋಪಿ ಹೇಳಿಕೆಯನ್ನು ಪಡೆಯಲಾಗಿದೆ. ಈ ನಡುವೆ ಸಂತ್ರಸ್ತೆಯ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸಂತ್ರಸ್ತೆ ಸ್ಪಷ್ಟನೆ ನೀಡಿದ್ದಾರೆ ಎಂಬುದಾಗಿ ವಿಡಿಯೋ ವೈರಲ್ ಬಗ್ಗೆ ಕೋರ್ಟ್‌ಗೆ ಮಾಹಿತಿಯನ್ನು ನೀಡಿದರು.

ಮೊದಲು ತನಿಖಾ ವರದಿ ಕೊಡಿ ಎಂದ ನ್ಯಾಯಾಧೀಶರು

ಈ ವೇಳೆ ಮಧ್ಯಪ್ರವೇಶ ಮಾಡಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್, ತನಿಖಾಧಿಕಾರಿಯ ಇನ್‌ವೆಸ್ಟಿಗೇಷನ್‌ ರಿಪೋರ್ಟ್ ಅನ್ನು ಮೊದಲು ಸಲ್ಲಿಸಿ. ಕಿಡ್ನ್ಯಾಪ್ ಕೇಸ್‌ ಸಂಬಂಧ ಏನೇನು ವಿಚಾರಗಳು ನಡೆದಿವೆ ಎಂಬುದನ್ನು ತಿಳಿಯಬೇಕು ಎಂದು ಎಸ್‌ಪಿಪಿಗೆ ಸೂಚಿಸಿದರು. ಆಗ ರೇವಣ್ಣ ಪರ ವಕೀಲ ಸಿ.ವಿ. ನಾಗೇಶ್‌, ತನಿಖಾ ವರದಿಯನ್ನು ನಮಗೂ ಕೊಟ್ಟಿಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದರು. ಈ ವೇಳೆ ಮುಚ್ಚಿದ ಲಕೋಟೆಯಲ್ಲಿ ಇನ್‌ವೆಸ್ಟಿಗೇಷನ್ ರಿಪೋರ್ಟ್‌ ಅನ್ನು ಸಲ್ಲಿಸಲಾಯಿತು. ಇದಕ್ಕೆ ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌ರಿಂದ ಆಕ್ಷೇಪ ವ್ಯಕ್ತವಾಯಿತು. ಬಳಿಕ ತಮಗೂ ಒಂದು ಕಾಪಿ ನೀಡಲು ಕೇಳಿದ್ದು, ಅವರಿಗೂ ಒಂದು ಪ್ರತಿಯನ್ನು ನೀಡಲಾಯಿತು.

ಇದನ್ನೂ ಓದಿ: Karnataka Politics: ಆಪರೇಶನ್ ಕಮಲ ಆಗೋಕೆ ಸಾಧ್ಯಾನೇ ಇಲ್ಲ; ಇದು ಬಿಜೆಪಿಯ ಹಗಲುಗನಸು: ಸಿಎಂ ಸಿದ್ದರಾಮಯ್ಯ

ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲೇಖಿಸಿದ ಎಸ್‌ಪಿಪಿ

ಈ ವೇಳೆ ವಾದ ಮುಂದುವರಿಸಿದ ಜಯ್ನಾ ಕೊಠಾರಿ ಅವರು ಸುಪ್ರೀಂಕೋರ್ಟ್‌ ಕೇಸ್‌ ಸ್ಟಡಿಗಳನ್ನು ಉಲ್ಲೇಖಿಸಿದರು. ಕೆಲವು ತೀರ್ಪುಗಳನ್ನು ಓದಿ ಹೇಳಿದರು. ಕಿಡ್ನ್ಯಾಪ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ತೀರ್ಪುಗಳನ್ನು ಕೋರ್ಟ್‌ ಗಮನಕ್ಕೆ ತಂದರು. ಕಿಡ್ನ್ಯಾಪ್‌ ಪ್ರಕರಣದಲ್ಲಿ ಸೆಕ್ಷನ್‌ 364ಎ ಅಂದ್ರೆ ಜೀವಾವಧಿ ಶಿಕ್ಷೆ ಇದೆ. ಐಪಿಸಿ ಸೆಕ್ಷನ್‌ 364ಎ ಅಡಿಯಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಹೀಗಾಗಿ ಎಚ್.ಡಿ. ರೇವಣ್ಣ ಅವರಿಗೆ ಜಾಮೀನು ಕೊಡಬಾರದು ಎಂದು ವಾದ ಮಂಡಿಸಿದರು. ಶಿಕ್ಷೆಯ ಪ್ರಮಾಣದ ಗಂಭೀರತೆಯನ್ನು ಪರಿಗಣಿಸಿ ಬೇಲ್ ಅನ್ನು ಕೊಡಲೇಬಾರದು ಎಂದು ಮನವಿ ಮಾಡಿದರು.

ದೆಹಲಿ ಕೋರ್ಟ್‌ನ ಗುರುಚರಣ್ ಸಿಂಗ್‌ ಪ್ರಕರಣದ ಬಗ್ಗೆ ಉಲ್ಲೇಖ

ಗುರುಚರಣ್ ಸಿಂಗ್‌ ಪ್ರಕರಣದಲ್ಲಿ ಕೋರ್ಟ್‌ ಬೇಲ್ ತಿರಸ್ಕರಿಸಿತ್ತು. ಈಗ ರೇವಣ್ಣ ಪರ ದಾಖಲಾಗಿರುವ ಕೆ.ಆರ್.ನಗರ ಅಪಹರಣ ಪ್ರಕರಣವು ಒಂದು ಸೀರಿಯಸ್ ಕ್ರಿಮಿನಲ್ ಕೇಸ್ ಆಗಿದೆ ಎಂದು ವಾದ ಮಂಡಿಸಿ ಕೆಲವು ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ ತೀರ್ಪುಗಳನ್ನು ಉಲ್ಲೇಖಿಸಿದರು.

ಆರೋಪಿ ಎಡಿ. ರೇವಣ್ಣ ಅವರ ಮಗ ಪ್ರಜ್ವಲ್‌ ರೇವಣ್ಣ ಕೂಡ ಬೇರೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಮಾಹಿತಿಯನ್ನು ಗೌಪ್ಯವಾಗಿಡಬೇಕು. ಕೆಲವು ಪ್ರಕರಣದಲ್ಲಿ ಮಾತ್ರ ಅಲ್ಲ, ಬೇರೆ ಪ್ರಕರಣಗಳಲ್ಲಿಯೂ ಈ ರೀತಿ ಸಂದರ್ಭದಲ್ಲಿ ಜಾಮೀನು ಕೊಟ್ಟರೆ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ. ಗಂಭೀರತೆ ಹೆಚ್ಚಿರುವ ಪ್ರಕರಣಗಳಲ್ಲಿ ಜಾಮೀನು ಕೊಡಬಾರದು. ಜಾಮೀನು ಕೊಡಬಾರದೆಂದು ಹಲವು ಕೋರ್ಟ್‌ಗಳ ತೀರ್ಪಿದೆ. ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪುಗಳನ್ನು ಕೊಠಾರಿ ಉಲ್ಲೇಖಿಸಿದರು.

ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇರುತ್ತದೆ. ಸಂತ್ರಸ್ತೆ ಮತ್ತು ಆಕೆಯ ಪುತ್ರನಿಗೆ ಜೀವ ಬೆದರಿಕೆಯೂ ಇದೆ. ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತ್ರಸ್ತೆಯ ಮಾಹಿತಿ ಗೌಪ್ಯವಾಗಿ ಇಡಬೇಕು. ಈ ಸಂದರ್ಭದಲ್ಲಿ ಸಂತ್ರಸ್ತೆ ಮಾಹಿತಿ ಗೌಪ್ಯವಾಗಿ ಇಡಲಿಲ್ಲ ಅಂದರೆ ಬೇರೆ ಯಾವ ಸಂತ್ರಸ್ತೆಯರು ಮುಂದೆ ಬಂದು ದೂರು ನೀಡುತ್ತಾರೆ? ರೇವಣ್ಣಗೆ ಜಾಮೀನು ನೀಡಲೇಬಾರದು. ಈ ಪರಿಸ್ಥಿತಿಯಲ್ಲಿ ರೇವಣ್ಣಗೆ ಜಾಮೀನು ನೀಡಿದರೆ ನ್ಯಾಯಾಂಗ ಹಾದಿಗೇ ಅಡಚಣೆಯಾಗುತ್ತದೆ ಎಂದು ಜಯ್ನಾ ಕೊಠಾರಿ ವಾದ ಮಂಡಿಸಿದರು.

ಈ ಕಾರಣಕ್ಕಾಗಿ ಜಾಮೀನು ನೀಡಬಾರದು

ರೇವಣ್ಣ ಪ್ರಭಾವಿಯಾಗಿದ್ದು, ಅವರ ಪುತ್ರ ಸಂಸದ ಪ್ರಜ್ವಲ್ ತಲೆಮರೆಸಿಕೊಂಡಿದ್ದಾರೆ. ಇದು ಕೇವಲ ಅಪಹರಣ ಪ್ರಕರಣ ಅಲ್ಲ, ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಕಿಡ್ನ್ಯಾಪ್ ಆಗಿದೆ. ಪ್ರಕರಣದಲ್ಲಿ ಯಾವುದೇ ಮಹಿಳೆಯರು ದೂರು ನೀಡದಂತೆ ತಡೆಯುವ ಯತ್ನ ಇದಾಗಿದೆ. ಎಚ್.ಡಿ. ರೇವಣ್ಣಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಕಿಡ್ನ್ಯಾಪ್ ಪ್ರಕರಣದಲ್ಲಿ ಕೆಲವರ ಹೇಳಿಕೆ ಸಿಆರ್‌ಪಿಸಿ 164 ಅಡಿಯಲ್ಲಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರ ಹೇಳಿಕೆ ದಾಖಲಿಸಬೇಕು ಎಂದು ಜಯ್ನಾ ಕೊಠಾರಿ ವಾದ ಮಂಡನೆ ಮಾಡಿ ಮುಗಿಸಿದರು.

ಜಯ್ನಾ ಕೊಠಾರಿ ಬಳಿಕ ಹೆಚ್ಚುವರಿ ಎಸ್‌ಪಿಪಿ ಅಶೋಕ್ ನಾಯ್ಕ್ ವಾದ ಮಂಡನೆಯನ್ನು ಪ್ರಾರಂಭಿಸಿದರು. ಒಬ್ಬರು ವಾದ ಮಂಡಿಸಿದ್ರೆ ಸಾಕು ಎಂದು ವಕೀಲ ಸಿ.ವಿ.ನಾಗೇಶ್ ಆಕ್ಷೇಪಣೆ ವ್ಯಕ್ತಪಡಿಸಿದರು. ಒಂದೇ ಕೇಸ್‌ಗೆ ಇಬ್ಬರು ಎಸ್‌ಪಿಪಿಗಳ ವಾದದ ಬಗ್ಗೆ ಜಡ್ಜ್ ನಿರ್ಧಾರ ಮಾಡಬೇಕು ಎಂದು ನ್ಯಾಯಾಧೀಶರನ್ನು ಇದೇ ವೇಳೆ ಸಿ.ವಿ. ನಾಗೇಶ್ ಕೇಳಿದರು. ಅದಕ್ಕೆ ಅಶೋಕ್‌ ನಾಯ್ಕ್‌, ಎಷ್ಟು ಜನ ಬೇಕಾದರೂ ವಾದ ಮಾಡಿ ಅಂತಾ ನೀವೇ ಹೇಳಿದ್ದಿರಲ್ಲವೇ ಎಂದು ಎಸ್‌ಪಿಪಿ ಅಶೋಕ್‌ ನಾಯ್ಕ್‌ ಪ್ರಶ್ನೆ ಮಾಡಿದರು.

ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸಂತ್ರಸ್ತೆಯರು ಇದ್ದಾರೆ. ಆದ್ದರಿಂದಲೇ ಎಸ್‌ಐಟಿ ಪರವಾಗಿ ಇಬ್ಬರು ಎಸ್‌ಪಿಪಿಗಳನ್ನು ನೇಮಿಸಲಾಗಿದೆ. ನಾನು ವಾದ ಮಾಡಿದರೆ ನಿಮಗೇನು ತೊಂದರೆ? ಎಂದು ಕೇಳಿ ಅಶೋಕ್ ನಾಯ್ಕ್ ವಾದ ಮುಂದುವರಿಸಿದರು.

ಇದನ್ನೂ ಓದಿ: Prajwal Revanna Case: ಪೆನ್‌ ಡ್ರೈವ್‌ ಹಂಚಿಕೆ ಆರೋಪ ಮಾಡಿದ್ದ ನವೀನ್‌ ಗೌಡ ಮೇಲೆ ಶಾಸಕ ಮಂಜು ದೂರು

ರೇವಣ್ಣಗೆ ಜಾಮೀನು ಕೊಡಬಾರದು. ಕಿಡ್ನ್ಯಾಪ್ ಪ್ರಕರಣದ ಸಂತ್ರಸ್ತೆಯ ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಆ ವೇಳೆ ಬರಲು ಆಗಲ್ಲ ಅಂದರೂ ಬಲವಂತವಾಗಿ ಕರೆದೊಯ್ದಿದ್ದಾರೆ. ಸಂತ್ರಸ್ತೆ ಅಪಹರಿಸಿ ರೇವಣ್ಣ ಆಪ್ತರ ತೋಟದ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಚುನಾವಣೆಗೆ ನಾಲ್ಕೈದು ದಿನ ಮುಂಚೆಯೇ ಸಂತ್ರಸ್ತೆಯನ್ನು ಕರೆದೊಯ್ದಿದ್ದಾರೆ. ಆನಂತರ ಕರೆದುಕೊಂಡು ಬಂದಿದ್ದಾರೆ ಎಂದು ಅಶೋಕ್ ನಾಯ್ಕ್ ವಾದಿಸಿದರು.

ರೇವಣ್ಣ ಪುತ್ರ ಪ್ರಜ್ವಲ್ ಯಾವ ಕಾರಣಕ್ಕಾಗಿ ದೇಶ ಬಿಟ್ಟು ಹೋಗಿದ್ದಾನೆ? ಇಲ್ಲಿ ಪ್ರಜ್ವಲ್ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ ಹೊಂದಿದ್ದಾರೆ. ಅವರ ತಂದೆ – ತಾಯಿಗೆ ಯಾವ ಕಾರಣ ಹೇಳಿ ಹೋಗಿದ್ದಾರೆ? ದೇಶದ ಬಗ್ಗೆ ಚರ್ಚೆ ಮಾಡುವುದಕ್ಕೆ ಏನಾದರೂ ಹೋಗಿದ್ದಾರಾ? ಎಂದು ಅಶೋಕ್‌ ನಾಯ್ಕ್‌ ಪ್ರಶ್ನೆ ಮಾಡಿದರು.

ತಾಯಿಯ ಮೇಲೆ ನಡೆದ ಅತ್ಯಾಚಾರ ದೃಶ್ಯವನ್ನು ದೂರುದಾರ ನೋಡಿದ್ದಾರೆ. ತನ್ನ ಸ್ನೇಹಿತರ ಮೊಬೈಲ್‌ನಲ್ಲಿ ತಾಯಿ ಮೇಲಿನ ದೌರ್ಜನ್ಯದ ವಿಡಿಯೊವನ್ನು ನೋಡಿದ್ದಾರೆ. ಅದಕ್ಕಿಂತ ದುರ್ದೈವದ ಸಂಗತಿ ಇನ್ನೇನಿದೆ ಹೇಳಿ? ನಾಲ್ಕು ದಿನಗಳ ಕಾಲ ಅನುಭವಿಸಿದ್ದ ಯಾತನೆಯನ್ನು ಸಂತ್ರಸ್ತೆ ಹೇಳಿಕೊಂಡಿದ್ದಾರೆ ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಭಾನುವಾರ ವೈರಲ್ ಆಗಿರುವ ಸಂತ್ರಸ್ತೆಯ ಸ್ಪಷ್ಟನೆಯುಳ್ಳ ವಿಡಿಯೊ ಬಗ್ಗೆ ಪ್ರಸ್ತಾಪಿಸಿದ ಎಸ್‌ಪಿಪಿ ಅಶೋಕ್‌ ನಾಯ್ಕ್‌, ವೈರಲ್ ಆಗಿರುವ ವಿಡಿಯೊದಲ್ಲಿ ರೇವಣ್ಣ ಕಿಡ್ನ್ಯಾಪ್ ಮಾಡಿಲ್ಲ ಅಂದಿದ್ದಾರೆ. ಈ ಮೂಲಕ ನ್ಯಾಯಾಲಯದ ದಾರಿಯನ್ನೇ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಆ ವಿಡಿಯೊದಲ್ಲಿ ಸಂತ್ರಸ್ತೆಯೇ ಕೆಲವು ವಿಚಾರವನ್ನು ಹೇಳಿಕೊಂಡಿದ್ದಾರೆ. ಯಾವ ರೀತಿ ಕಿಡ್ನ್ಯಾಪ್ ಮಾಡಲಾಗಿದೆ ಅಂತಾ ಎಸ್‌ಐಟಿ ಅವರಿಂದ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ನ್ಯಾಯಾಲಯಕ್ಕೆ ಎಸ್‌ಐಟಿ ತನಿಖೆ ಬಗ್ಗೆ ಮಾಹಿತಿ ನೀಡಿದ ಅಶೋಕ್ ನಾಯ್ಕ್, ಎಷ್ಟು ಜನ ಕಿಡ್ನ್ಯಾಪ್ ಮಾಡಿದರು? ಎಷ್ಟು ವಾಹನಗಳಲ್ಲಿ ಅಪಹರಣ ಮಾಡಿದರು? ಮಾರ್ಗ ಮಧ್ಯೆ ವಾಹನಗಳ ಬದಲಾವಣೆ ಮಾಡಲಾಗಿದೆಯಾ ಅಂತಲೂ ತನಿಖೆ ನಡೆದಿದೆ. ಕಿಡ್ನ್ಯಾಪ್ ಹೇಗೆ ಮಾಡಲಾಗಿದೆ ಎಂಬ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ವಿವರಿಸಿದರು.

ಕಸ್ಟಡಿ ಹಾಗೂ ಜಾಮೀನು ಸಂಬಂಧ ರೇವಣ್ಣ ಪರ ವಕೀಲರು ವಾದ ಮಾಡಿದ್ದಾರೆ. ಆದರೆ ಇಲ್ಲಿ ಜಾಮೀನು ಕೊಟ್ಟರೆ ಏನು ಆಗುತ್ತೆ ಅಂತಾ, ಮುಂದೆ ಏನು ಆಗುತ್ತದೆ..? ಎರಡು ರೀತಿಯಲ್ಲಿ ನಾನು ವಾದ ಮಂಡಿಸುತ್ತೇನೆ. ಜಾಮೀನು ಕೊಟ್ಟರೆ ಏನಾಗುತ್ತದೆ? ಜಾಮೀನು ಕೊಡದಿದ್ದರೆ ಏನಾಗುತ್ತೆ ಎಂಬುದನ್ನು ಹೇಳುತ್ತೇನೆ. ನಿಮ್ಮ ವಾದದ ಅಂಶಗಳ ಕಾಪಿಯನ್ನು ಕೊಟ್ಟು ವಾದವನ್ನು ಮುಂದುವರಿಸಿ ಎಂದು ಈ ವೇಳೆ ನ್ಯಾಯಾಧೀಶರು ಹೇಳಿದರು.

ಎಚ್.ಡಿ.ರೇವಣ್ಣ ಸಲ್ಲಿಸಿರುವ ಜಾಮೀನಿಗೆ ಮಾನ್ಯತೆಯೇ ಕೊಡಬಾರದು ಎಂದು ಎಸ್‌ಐಟಿ ಪರ ಹೆಚ್ಚುವರಿ ಎಸ್‌ಪಿಪಿ ಅಶೋಕ್ ನಾಯ್ಕ್ ವಾದ ಮಂಡಿಸಿದಾಗ ಮಧ್ಯಪ್ರವೇಶ ಮಾಡಿದ ನ್ಯಾಯಾಧೀಶರು, ಬೇಲ್ ಅರ್ಜಿ ಮಾನ್ಯತೆ ವಿಚಾರ ಏಕೆ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರಿಸಿದ ಅಶೋಕ್‌ ನಾಯ್ಕ್, ಬೇಲ್ ಅರ್ಜಿ ಮಾನ್ಯತೆ ಕುರಿತು ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದರು. ಆಗ ಅಸಮಾಧಾನಗೊಂಡ ನ್ಯಾಯಾಧೀಶರು, ಈಗ ನಡೆಯುತ್ತಿರುವುದು ಬೇಲ್ ಅರ್ಜಿ ವಿಚಾರಣೆಯಾಗಿದೆ. ಅದರ ಸಂಬಂಧ ವಾದ ಮಾಡಿ ಎಂದು ಅಶೋಕ್‌ ನಾಯ್ಕ್‌ಗೆ ನ್ಯಾಯಾಧೀಶರು ಸೂಚನೆ ನೀಡಿದರು. ಅದು ಬಿಟ್ಟು ಪೊಲೀಸ್ ಕಸ್ಟಡಿ, ಜ್ಯುಡಿಷಿಯಲ್ ಕಸ್ಟಡಿ ಬಗ್ಗೆ ವಾದ ಏಕೆ? ಎಂದು ಕೇಳಿದರು.

ಆದರೆ, ಆಗ ವಾದ ಮಂಡಿಸಿದ ಅಶೋಕ್‌ ನಾಯ್ಕ್‌, ಹೀಗೆಯೇ ಆದರೆ ಈ ಕಿಡ್ನ್ಯಾಪ್ ಪ್ರಕರಣವು ಸುಪ್ರೀಂ ಕೋರ್ಟ್‌ಗೆ ಹೋಗಬೇಕು ಎಂದು ಹೇಳಿದರು. ಇದಕ್ಕೆ ಸಿ.ವಿ.ನಾಗೇಶ್ ಆಕ್ಷೇಪ ವ್ಯಕ್ತಪಡಿಸಿ, ನ್ಯಾಯಾಲಯಕ್ಕೇ ನೀವು ಬೆದರಿಕೆ ಹಾಕುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್‌ ನಾಯ್ಕ್‌, ಈ ವಿಚಾರಗಳನ್ನು ಮಾತ್ರ ನಾನು ಹೇಳುತ್ತಿದ್ದೇನೆಯೇ ಹೊರತು, ಬೆದರಿಕೆಯ ಪ್ರಶ್ನೆಯೇ ಇಲ್ಲ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಬೇಡಿ ಎಂದು ಸಿ.ವಿ. ನಾಗೇಶ್‌ಗೆ ಹೇಳಿದರು.

ಯಾವ ಕಾರಣಕ್ಕೆ ರೇವಣ್ಣಗೆ ಜಾಮೀನು ನೀಡಬಾರದು?

ಯಾವ ಕಾರಣಕ್ಕೆ ರೇವಣ್ಣಗೆ ಜಾಮೀನು ನೀಡಬಾರದು ಅಂತಾ ಹೇಳುತ್ತೇನೆ ಎಂದು ವಾದವನ್ನು ಮುಂದುವರಿಸಿದ ಎಸ್‌ಪಿಪಿ ಅಶೋಕ್ ನಾಯ್ಕ್, ವೋಟ್ ಹಾಕಿ.. ವೋಟ್‌ ಹಾಕಿ.. ಅಂತಾ ಜನರನ್ನೇ ಬೆದರಿಸುತ್ತಾರೆ. ಈ ರೇವಣ್ಣ ಅವರಿಗೆ ಜಾಮೀನು ಕೊಟ್ಟರೆ ಕಥೆ ಏನು ಸ್ವಾಮಿ? ವೋಟ್ ಹಾಕಲು ಸರತಿ ಸಾಲಲ್ಲಿ ನಿಂತಿದ್ದಾಗ ಮತದಾರರಿಗೆ ಬೆದರಿಕೆ ಹಾಕುತ್ತಾರೆ. 2019ರ ಚುನಾವಣೆ ವೇಳೆ ಮತ ಹಾಕುವ ವೇಳೆ ರೇವಣ್ಣ ಅವರೇ ಬೆದರಿಕೆ ಹಾಕಿದ್ದಾರೆ. ಅಲ್ಲಿ ಯಾರೂ ರೇವಣ್ಣ ಅವರನ್ನು ಕೇಳುವಂತಿಲ್ಲ. ಈಗ ಜಾಮೀನು ಕೊಟ್ಟರೆ ಕಥೆ ಏನ್‌ ಸ್ವಾಮಿ? ಅಧಿಕಾರಿಗಳು ಹಾಗೂ ಸರ್ಕಾರಿ ವಾಹನಗಳನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಎಲೆಕ್ಷನ್‌ ಟೈಮ್‌ನಲ್ಲಿ ಇವರು ಸರ್ಕಾರಿ ವಾಹನಗಳಲ್ಲಿಯೇ ಹಣ ಸಾಗಿಸುತ್ತಿದ್ದರು. ಈ ಎಲ್ಲ ಆರೋಪಗಳಿಗೆ ಸಂಬಂಧಿಸಿದಂತೆ ಬೇಕಾದ ಎಲ್ಲ ದಾಖಲೆಗಳು ಇವೆ. ಆದ್ದರಿಂದ ರೇವಣ್ಣ ಅವರಿಗೆ ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂದು ಅಶೋಕ್‌ ನಾಯ್ಕ್‌ ವಾದ ಮಂಡಿಸಿದರು.

ಎಲೆಕ್ಷನ್‌ ಮುಗಿಯುವ ವಾರಕ್ಕೆ ಮುಂಚೆಯೇ ಫ್ಲೈಟ್‌ ಟಿಕೆಟ್‌ ಬುಕ್‌

ಒಂದು ಕಡೆ ಸಂತ್ರಸ್ತೆಯನ್ನು ಚುನಾವಣೆಗೆ ಮುಂಚೆಯೇ ಕರೆದೊಯ್ದಿರುತ್ತಾರೆ. ಇನ್ನೊಂದೆಡೆ ಎಲೆಕ್ಷನ್ ಮುಗಿಯೋದಕ್ಕೆ ಮುಂಚೆಯೇ ಫ್ಲೈಟ್ ಟಿಕೆಟ್‌ ಬುಕ್ ಆಗಿರುತ್ತದೆ. ಎಲೆಕ್ಷನ್ ಮುಗಿಯುವ ಒಂದು ವಾರ ಮೊದಲೇ ಟಿಕೆಟ್ ಬುಕಿಂಗ್ ಮಾಡಿದ್ದಾರೆ. ದೆಹಲಿಯ ಕಂಪನಿ ಮೂಲಕ ಫ್ಲೈಟ್ ಟಿಕೆಟ್ ಬುಕಿಂಗ್ ಆಗಿದೆ ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಕಿಡ್ನ್ಯಾಪ್ ಮಾಡಿದ ಬಳಿಕ ಸಂತ್ರಸ್ತೆಯನ್ನು ಅನೇಕ ಕಡೆಗೆ ಕರೆದೊಯ್ದಿದ್ದಾರೆ. ಈಗ ಆಕೆಯಿಂದ ಬಲವಂತವಾಗಿ ವಿಡಿಯೊ ಮೂಲಕ ಸ್ಪಷ್ಟನೆ ನೀಡಲಾಗಿದೆ. ಯಾರೂ ಕಿಡ್ನ್ಯಾಪ್ ಮಾಡಿಲ್ಲ ಅಂತ ಹೇಳಿಕೆಯ ಕೊಡಿಸಲು ಯತ್ನಿಸಿದ್ದಾರೆ. ಸಂತ್ರಸ್ತೆ ಮಹಿಳೆಯ ವಿಡಿಯೊ ಸ್ಪಷ್ಟನೆಯ ಸತ್ಯಾಸತ್ಯತೆ ಕುರಿತು ಪತ್ತೆ ಆಗಬೇಕು. ಕಿಡ್ನ್ಯಾಪ್ ಪ್ರಕರಣ ಸೇರಿದಂತೆ ಈ ಹಗರಣದಲ್ಲಿ ಹಲವು ಜನರು ಇದ್ದಾರೆ. ಎರಡು ದಿನಗಳಿಂದ ಕೆಲವರ ಬಂಧನ ಆಗಿದೆ. ಎಲ್ಲರೂ ಪ್ರಜ್ವಲ್‌ ರೇವಣ್ಣಗೆ ಗೊತ್ತಿರಬೇಕು ಅಂತ ಏನಿಲ್ಲ. ಬಂಧಿತ ಆರೋಪಿಗಳಿಂದ ಸಮಗ್ರ ಮಾಹಿತಿಯನ್ನು ಎಸ್‌ಐಟಿ ಕಲೆ ಹಾಕುತ್ತಿದೆ ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಸಮನ್ಸ್‌ ನೀಡಿದವರಿಗೆ ರೇವಣ್ಣರಿಂದ ಬೆದರಿಕೆ

ಮಾಜಿ ಸಚಿವ ಎಚ್.ಡಿ. ರೇವಣ್ಣ ಕುಟುಂಬಸ್ಥರು ಪ್ರಭಾವಸ್ಥರು, ಸಮನ್ಸ್ ನೀಡಿರುವ ತನಿಖಾಧಿಕಾರಿಗಳಿಗೇ ಎಚ್‌.ಡಿ. ರೇವಣ್ಣ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬೇಲ್ ಕೊಡಬಾರದು ಎಂದು ಎಸ್‌ಪಿಪಿ ಅಶೋಕ್ ನಾಯ್ಕ್‌ ವಾದ ಮಂಡಿಸಿದರು.

ಸಂತ್ರಸ್ತೆ ಹೇಳಿಕೆಯ ವಿಡಿಯೊ ವೈರಲ್‌ ಪ್ರಸ್ತಾಪ

ಸಂತ್ರಸ್ತೆ ವಿಡಿಯೊ ಹೇಳಿಕೆ ಭಾನುವಾರದಿಂದ ವೈರಲ್‌ ಆಗಿದೆ. ಈ ವಿಡಿಯೊವನ್ನು ಸಂತ್ರಸ್ತೆಗೆ ಹೆದರಿಸಿ ಮಾಡಲಾಗಿದೆ. ಈ ಬಗ್ಗೆ ಎಸ್ಐಟಿ ವಿಚಾರಣೆ ವೇಳೆ ಸಂತ್ರಸ್ತೆ ಹೇಳಿದ್ದಾರೆ. ತೋಟದ ಮನೆಯಲ್ಲಿ ಕೂಡಿ ಹಾಕಿದ್ದಾಗ ಸಂತ್ರಸ್ತೆಯ ವಿಡಿಯೊ ರೆಕಾರ್ಡ್ ಮಾಡಲಾಗಿದೆ. ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲವೆಂದು ಅವರಿಂದ ಹೇಳಿಸಿದ್ದಾರೆ ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಸಿ.ವಿ.ನಾಗೇಶ್ ವಾದ

ಇಬ್ಬರೂ ಎಸ್‌ಪಿಪಿಗಳ ವಾದ ಮಂಡನೆ ನಂತರ ಮತ್ತೆ ಸಿ.ವಿ. ನಾಗೇಶ್ ವಾದವನ್ನು ಆರಂಭಿಸಿದರು. ಏಪ್ರಿಲ್ 29ಕ್ಕೆ ಕಿಡ್ನ್ಯಾಪ್ ಮಾಡಿದರೆ, ದೂರು ಕೊಡಲು ತಡ ಯಾಕೆ ಮಾಡಿದರು? ಸಂತ್ರಸ್ತ ಮಹಿಳೆ ಎಚ್.ಡಿ.ರೇವಣ್ಣ ಅವರ ಸಂಬಂಧಿಯಾಗಿದ್ದಾರೆ. ಸುಮಾರು ವರ್ಷ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಕೆಲಸ ಮಾಡಿದ್ದವರನ್ನು ಯಾಕೆ ಕಿಡ್ನ್ಯಾಪ್ ಮಾಡಬೇಕು? ಮನೆ ಕೆಲಸ ಮಾಡುತ್ತಿದ್ದರಲ್ಲ, ಕರೆದುಕೊಂಡು ಬನ್ನಿ ಅಂದಿರಬಹುದು. ಇಲ್ಲಿ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ರೇವಣ್ಣ ಅರೆಸ್ಟ್ ಆದ ದಿನವೇ ಸಂತ್ರಸ್ತೆ ಮಹಿಳೆ ಹುಣಸೂರಿನಲ್ಲಿ ಪತ್ತೆಯಾಗಿದ್ದಾರೆ. ಮೈಸೂರಿನ ಹುಣಸೂರು ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಪತ್ತೆ ಆಗಿದ್ದರು. ಸಂತ್ರಸ್ತ ಮಹಿಳೆ ಪ್ರಜ್ವಲ್ ರೇವಣ್ಣ ವಿರುದ್ಧ ಮಾತ್ರ ಆರೋಪಿಸಿದ್ದಾರೆ. ರೇವಣ್ಣ ವಿರುದ್ಧ ಸಂತ್ರಸ್ತೆ ಮಹಿಳೆ ಯಾವುದೇ ಆರೋಪವನ್ನು ಮಾಡಿಲ್ಲ ಎಂದು ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರು.

ಸಂತ್ರಸ್ತ ಮಹಿಳೆಯಿಂದ ಪ್ರಜ್ವಲ್ ರೇವಣ್ಣ ವಿರುದ್ಧ ರೇಪ್ ಆರೋಪದ ಬಗ್ಗೆ ವಾದ ಮಂಡಿಸಿದ ಸಿ.ವಿ. ನಾಗೇಶ್‌, ಸಂತ್ರಸ್ತೆಯು ಸಿಆರ್‌ಪಿಸಿ 161 ಅಡಿಯಲ್ಲಿ ಹೇಳಿಕೆ ನೀಡುವಾಗ, ಕೇವಲ ಪ್ರಜ್ವಲ್‌ ವಿರುದ್ಧ ಅತ್ಯಾಚಾರ ಅಂತಾ ಆರೋಪ ಮಾಡಿದ್ದಾಳೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿ ಎರಡು ರಿಮ್ಯಾಂಡ್‌ ಅರ್ಜಿ ಸಲ್ಲಿಕೆಯಾಗಿದೆ. ಕಿಡ್ನ್ಯಾಪ್ ಮಾಡಿದ್ದಾರೆ ಅಂತಾ ಮಹಿಳೆಯ ಮಗನಿಗೆ ಹೇಗೆ ಗೊತ್ತಾಯ್ತು? ಅದು ಊಹೆಯಷ್ಟೇ. ಸಂತ್ರಸ್ತೆಯ ಮಗನಿಗೆ ಯಾರೂ ಕಾಲ್ ಮಾಡಿ ಡಿಮ್ಯಾಂಡ್ ಮಾಡಿಲ್ಲ. ಇನ್ನು ಸಂತ್ರಸ್ತ ಮಹಿಳೆಯನ್ನು ಅಂದು ಹುಣಸೂರಿನ ಬಳಿ ರಕ್ಷಣೆ ಮಾಡಲಾಗಿದೆ. ಆಪ್ತ ಸಮಾಲೋಚನೆ ಮಾಡಿ, ಆಕೆಯನ್ನು ಸುರಕ್ಷಿತ ಕೊಠಡಿಯಲ್ಲಿಡಲಾಗಿದೆ. ಈ ಪ್ರಕರಣ ಸಂಬಂಧ ಹೇಳಿಕೆ ದಾಖಲಿಸಿಲ್ಲ ಏಕೆ? ಇಲ್ಲಿಯ ತನಕ ರೇವಣ್ಣ ವಿರುದ್ಧ ಯಾವುದೇ ಸಾಕ್ಷಿಯನ್ನೂ ಸಂಗ್ರಹಿಸಿಲ್ಲ, ಸಂತ್ರಸ್ತೆಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಿಸಿಲ್ಲ. ಸಂತ್ರಸ್ತ ಮಹಿಳೆಯನ್ನು ಕೇವಲ ಆಪ್ತ ಸಮಾಲೋಚನೆಯಲ್ಲಿ ಇರಿಸಿದ್ದಾರೆ ಎಂದು ರೇವಣ್ಣ ಪರ ವಕೀಲ ಸಿ.ವಿ.ನಾಗೇಶ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಸಂತ್ರಸ್ತ ಮಹಿಳೆಯನ್ನು ಹುಣಸೂರಿನ ತೋಟದಿಂದ ರಕ್ಷಣೆ ಮಾಡಿದರಾ? ಎಸ್‌ಐಟಿ ಎಲ್ಲಿಂದ ಮಹಿಳೆಯನ್ನು ಕರೆತಂದರು? ಅವರ ಸಂಬಂಧಿಕರ ಮನೆಯಿಂದ ಸಂತ್ರಸ್ತೆಯನ್ನು ಕರೆ ತಂದಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಎರಡು ಕಡೆ ರೆಕಾರ್ಡ್ ಆಗಿದೆ. ಒಂದು ಕಡೆ ಫೋಟೋ ಶಾಪ್‌ವೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೊಂದು ಕಡೆ ತರಕಾರಿ ಅಂಗಡಿ ಸಿಸಿ ಕ್ಯಾಮರಾದಲ್ಲಿ ಇದು ಸೆರೆಯಾಗಿದೆ. ಅನುಮತಿ ನೀಡಿದರೆ ಸೆರೆಯಾಗಿರುವ ದೃಶ್ಯವನ್ನು ತೋರಿಸಲು ನಾವು ಸಿದ್ಧ. ಈಗ ನ್ಯಾಯಾಲಯದಲ್ಲಿಯೇ ಪ್ಲೇ ಮಾಡುತ್ತೇವೆ. ಸ್ಪೆಷಲ್ ಇನ್‌ವೆಸ್ಟಿಗೇಷನ್ ಟೀಮ್ ವಿರುದ್ಧವೇ ಸಿ.ವಿ. ನಾಗೇಶ್ ಆರೋಪಿಸಿದರು.

ಕಿಡ್ನ್ಯಾಪ್ ಪ್ರಕರಣದಲ್ಲಿ ಎಸ್‌ಐಟಿಯವರೇ ಟ್ಯಾಂಪರಿಂಗ್ ಮಾಡುತ್ತಿದ್ದಾರೆ. ಆದರೆ, ಎಸ್‌ಪಿಪಿಯವರು ಸಂತ್ರಸ್ತೆ ಹೇಳಿಕೆಯನ್ನು ಟ್ಯಾಂಪರಿಂಗ್ ಆಗಿದೆ ಎಂದು ಹೇಳಿದ್ದಾರೆ. ವೈರಲ್ ಆದ ಸ್ಪಷ್ಟನೆ ವಿಡಿಯೊದಲ್ಲಿ ಸಂತ್ರಸ್ತೆಯೇ ಹೇಳಿಕೊಂಡಿದ್ದಾರೆ. ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲವೆಂದಿದ್ದಾರೆ. ನಮ್ಮ ಕುಟುಂಬಕ್ಕೆ ತೊಂದರೆಯಾದರೆ ಅವರೇ ಹೊಣೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಂಬಂಧಿಕರ ಮನೆಯಲ್ಲಿದ್ದೇನೆ. ಬೇಗ ಬರುತ್ತೇನೆ ಎಂದೂ ಹೇಳಿದ್ದಾರೆ. ಯಾರೂ ಬೆದರಿಕೆ ಹಾಕಿಲ್ಲ, ಬಲವಂತವಾಗಿಯೂ ಕರೆದೊಯ್ದಿಲ್ಲ ಎಂದು ಹೇಳಿಕೊಂಡಿದ್ದಾರೆ. ಹೀಗೆಲ್ಲಾ ಸಂತ್ರಸ್ತೆಯೇ ವಿಡಿಯೊ ಮೂಲಕ ಹೇಳಿದ್ದಾರೆ. ಹಾಗಾಗಿ ಕಿಡ್ನ್ಯಾಪ್ ಹೇಗೆ ಆಗುತ್ತದೆ. ಈ ಕಾರಣಕ್ಕಾಗಿ ರೇವಣ್ಣ ಅವರಿಗೆ ಜಾಮೀನು ನೀಡಬೇಕು ಎಂದು ಸಿ.ವಿ. ನಾಗೇಶ್‌ ಕೋರಿದರು.

ಕಿಡ್ನ್ಯಾಪ್ ಪ್ರಕರಣದಲ್ಲಿ ಚುನಾವಣಾ ತಕರಾರು ಅರ್ಜಿ ತರುವುದು ಬೇಡ. ಎಸ್‌ಪಿಪಿ ವಾದದ ಅಂಶಗಳನ್ನು ಆಕ್ಷೇಪಿಸಿ ರೇವಣ್ಣ ಪರ ವಕೀಲರು ವಾದ ಮಂಡಿಸಿದರು. ಎಚ್.ಡಿ.ರೇವಣ್ಣ ವಿರುದ್ಧ ಕೇಳಿಬಂದಿರುವ ಆರೋಪಗಳು ಸಾಬೀತಾಗಿಲ್ಲ. ಹಿಂದಿನ ಕೇಸ್‌ಗಳು ಸಾಬೀತಾಗಿದ್ದರೆ ಯಾಕೆ ಎಲ್ಲವೂ ಬಿ ರಿಪೋರ್ಟ್ ಆಗುತ್ತಿತ್ತು? ಎಂದು ಪ್ರಶ್ನೆ ಮಾಡಿದರು.

ರಿಮ್ಯಾಂಡ್‌ ಅಪ್ಲಿಕೇಷನ್‌ನಲ್ಲಿ ಎಸ್‌ಐಟಿ ಲೋಪವೆಸಗಿದೆ. ಅದರಲ್ಲಿ ಸಂತ್ರಸ್ತೆಯ ಹೇಳಿಕೆ ಒಂದು ಪ್ಯಾರಾ ಇದೆ. ಅದು ಬಿಟ್ಟು ರಿಮ್ಯಾಂಡ್‌ ಅಪ್ಲಿಕೇಷನ್‌ನಲ್ಲಿ ಆರೋಪಿ ಹೇಳಿಕೆಯೇ ಇದೆ. ಸಂತ್ರಸ್ತ ಮಹಿಳೆಯ ಹೇಳಿಕೆ ಒಂದು ಪ್ಯಾರಾ ಬಿಟ್ಟರೆ ಬೇರೆ ಇಲ್ಲವೇ ಇಲ್ಲ. ಯಾವಾಗಲೂ ಹೇಳಿಕೆ ದಾಖಲು ಮಾಡಿಕೊಳ್ಳುವುದೇ ಎಸ್‌ಐಟಿ ಕೆಲಸನಾ? ಸಂತ್ರಸ್ತೆ ಏನು ಹೇಳ್ತಾರೆ? ಏನು ಹೇಳಲ್ಲ ಅಂತಾ ಹೇಳಿಕೆ ದಾಖಲಾಗಬೇಕು. ಆಕೆ ಎಸ್‌ಐಟಿ ಸುಪರ್ದಿಯಲ್ಲಿರುವಾಗ ಏನನ್ನೂ ಮಾಡಿಲ್ಲ. ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿರುವಂತೆ ಯಾವುದೇ ಸಾಕ್ಷಿ ಸಂಗ್ರಹಿಸಿಲ್ಲ. ಆದರೆ, ನ್ಯಾಯಾಲಯಕ್ಕೆ ಎಸ್ಐಟಿ ರಿಮ್ಯಾಂಡ್ ಅಪ್ಲಿಕೇಷನ್ ಸಲ್ಲಿಸಿದ್ದಾರೆ ಎಂದು ನಾಗೇಶ್ ಹೇಳಿದರು.

ಕಾಯ್ದೆ ಬಗ್ಗೆ ವಕೀಲರ ಆಕ್ಷೇಪ

ಸಂತ್ರಸ್ತೆ ಮೇಲೆ ಯಾವುದಾದರೂ ರೀತಿ ಹಲ್ಲೆ, ಬೆದರಿಕೆ ಇರಬೇಕು. ಆಗ ಮಾತ್ರ ಐಪಿಸಿ ಸೆಕ್ಷನ್‌ 364ಎ ಕಾಯ್ದೆ ಅನ್ವಯ ಆಗುತ್ತದಲ್ಲವೇ? ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತ್ರಸ್ತೆ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಹಾಗಾದರೆ ರೇವಣ್ಣ ವಿರುದ್ಧ ಸೆಕ್ಷನ್‌ 364ಎ ಹೇಗೆ ಅನ್ವಯ ಆಗುತ್ತದೆ? ಎಂದು ಸರ್ಕಾರದ ವಿಶೇಷ ಅಭಿಯೋಜಕರ (SPP) ವಾದಕ್ಕೆ ವಕೀಲ ಸಿ.ವಿ. ನಾಗೇಶ್ ಪ್ರತಿವಾದವನ್ನು ಮಂಡಿಸಿದರು.

ಕೊನೇ ಪಕ್ಷ ಸಂತ್ರಸ್ತೆಯ ಕುಟುಂಬದವರ ಮೇಲೂ ಹಲ್ಲೆ ನಡೆದಿಲ್ಲ. ಆರೋಪಿ ಸ್ಥಾನದಲ್ಲಿರುವ ರೇವಣ್ಣ ಯಾರ ಮೇಲೆಯೂ ಹಲ್ಲೆ ಮಾಡಿಲ್ಲ. ಆದರೂ ಕಿಡ್ನ್ಯಾಪ್ ಪ್ರಕರಣದಲ್ಲಿ ಸೆಕ್ಷನ್‌ 364ಎ ಹಾಕಿದ್ದು ಯಾಕೆ? ಈ ಸೆಕ್ಷನ್ ಹಾಕುವ ಪ್ರಮೇಯವೇ ಕಾಣುತ್ತಿಲ್ಲ. ಘಟನೆ ನಡೆದ ದಿನಕ್ಕೂ ಕೇಸ್ ದಾಖಲಾದ ದಿನಕ್ಕೂ ಅಂತರ ಇದೆ. ನಿಜವಾಗಿಯೂ ಕಿಡ್ನ್ಯಾಪ್ ಆಗಿದ್ದರೆ ಅಲ್ಲಿ ಡಿಮ್ಯಾಂಡ್ ಇರಬೇಕು. ಆದರೆ, ಬಲವಂತದ ಕಿಡ್ನ್ಯಾಪ್ ಆಗಿಲ್ಲ, ಯಾವುದೇ ಬೇಡಿಕೆ ಇಲ್ಲ ಎಂದು ವಾದಿಸಿದ ನಾಗೇಶ್‌, 364 ಎ ಸಂಬಂಧ ಹಲವು ಕೇಸ್‌ ಸ್ಟಡಿಗಳನ್ನು ಉಲ್ಲೇಖಿಸಿದರು. ಜಾರ್ಖಂಡ್ ಹೈಕೋರ್ಟ್‌ನ ರೋಹಿಣಿ ದೇವಿ ಪ್ರಕರಣವನ್ನು ಉಲ್ಲೇಖಿಸಿದರು.

ಈ ವೇಳೆ ತಮ್ಮ ಹಿಂದಿನ ವಾದಕ್ಕೆ ಕರೆಕ್ಷನ್ ಮಾಡಿಕೊಂಡ ವಕೀಲ ನಾಗೇಶ್, ಕಿಡ್ನ್ಯಾಪ್ ಸಂತ್ರಸ್ತೆ ರೇವಣ್ಣ ಅವರ ಸಂಬಂಧಿ ಅಲ್ಲ. ಮೊದಲು ಕೇಸ್ ದಾಖಲಿಸಿದ್ದ ಮಹಿಳೆ ಮಾತ್ರ ರೇವಣ್ಣರ ಸಂಬಂಧಿ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಕೇಸ್‌ನಲ್ಲಿನ ಸಂತ್ರಸ್ತೆ ಅಲ್ಲ. ಯಾರನ್ನಾದರೂ ಅಪಹರಿಸಿ, ಒತ್ತೆಯಾಳಾಗಿಟ್ಟುಕೊಂಡಲ್ಲಿ ಮಾತ್ರ ಸೆಕ್ಷನ್‌ 364ಎ ಆಗಬೇಕು. ಇಲ್ಲವಾದಲ್ಲಿ ಈ ರೀತಿ ಪ್ರಕರಣದಲ್ಲಿ ಸೆಕ್ಷನ್ 364ಎ ಸೆಕ್ಷನ್‌ ಹಾಕುವ ಅಗತ್ಯ ಇರಲ್ಲ. ಒತ್ತೆಯಾಳಾಗಿ ಇರಿಸಿಕೊಂಡು ದೌರ್ಜನ್ಯ ನಡೆಸಿ, ಕಿರುಕುಳ ನೀಡಿದರೆ ಅಪರಾಧ. ಪ್ರಾಣ ಹಾನಿ ಆಗುವಂತೆ ಹಲ್ಲೆ ಮಾಡುವುದು ಮಾತ್ರ ಅಪರಾಧ. ಇನ್ನು ವಿದೇಶದಲ್ಲಿರುವ ವ್ಯಕ್ತಿ ಕಿಡ್ನ್ಯಾಪ್ ಮಾಡಿಸಿದರೆ ಆಗ ಸೆಕ್ಷನ್‌ 365ಎ ಅನ್ವಯ ಆಗುತ್ತದೆ.
ಆದರೆ, ಈ ಕೆ.ಆರ್.ನಗರ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ 365ಎ ಅನ್ವಯ ಆಗಲ್ಲ. ಸಂತ್ರಸ್ತ ಮಹಿಳೆ ಎಚ್.ಡಿ. ರೇವಣ್ಣ ಅವರ ಮನೆಯಲ್ಲಿ 10 ವರ್ಷ ಕೆಲಸ ಮಾಡಿದ್ದಾರೆ. ಸಂತ್ರಸ್ತ ಮಹಿಳೆಯನ್ನು ಈ ಪ್ರಕರಣದಲ್ಲಿ ಕಿಡ್ನ್ಯಾಪ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ರೇವಣ್ಣ ವಿರುದ್ಧ ಬಲವಾದ ಸಾಕ್ಷಿಗಳೇ ಇಲ್ಲ

ಕಿಡ್ನ್ಯಾಪ್ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ವಿರುದ್ಧ ಬಲವಾದ ಸಾಕ್ಷಿಗಳೇ ಇಲ್ಲ. ಆದರೂ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆಯಾಗುವ ಸೆಕ್ಷನ್‌ಗಳನ್ನು ಹಾಕಲಾಗಿದೆ. ಏನೇ ಆದರೂ ಈ ರೀತಿ ಪ್ರಕರಣದಲ್ಲಿ ಬೇಲ್ ಯಾಕೆ ನೀಡಬಾರದು? ಎಂದು ಕೆಲವು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಕೇಸ್ ಸ್ಟಡಿಗಳನ್ನು ಉಲ್ಲೇಖಿಸಿದರು. ಇನ್ನು ರೇವಣ್ಣ ವಿರುದ್ಧ ಪ್ರೈಮಾಫೇಸಿ ಸಾಬೀತಾಗುವ ಯಾವುದೇ ಆರೋಪವೂ ಇಲ್ಲ. ತಮಗೆ ಗೊತ್ತಿರುವವರನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡರೆ ತಪ್ಪೇನು? ಸಂತ್ರಸ್ತೆಯನ್ನು ಭವಾನಿ ರೇವಣ್ಣ ಮನೆಗೆ ಕರೆಸಿಕೊಂಡ ಕ್ರಮಕ್ಕೆ ಸಮರ್ಥನೆ ಮಾಡಿದರು.

ಸಂತ್ರಸ್ತ ಮಹಿಳೆಯನ್ನು ರಕ್ಷಿಸಿ 6 ದಿನವಾದರೂ ಸೂಕ್ತ ರೀತಿ ಹೇಳಿಕೆ ಪಡೆದಿಲ್ಲ. ಟ್ಯೂಷನ್‌ಗೆ ಹೋಗಿದ್ದ ಬಾಲಕನ ಕಿಡ್ನ್ಯಾಪ್ ಪ್ರಕರಣವನ್ನು ಇದೇ ವೇಳೆ ಉಲ್ಲೇಖಿಸಿದರು. ನಿಮ್ಮ ತಂದೆಗೆ ಅಪಘಾತವಾಗಿದೆ, ಆಸ್ಪತ್ರೆಯಲ್ಲಿದ್ದಾರೆಂದು ಹೇಳಿ ಅಪಹರಿಸಿದ್ದಾರೆ. ಬಾಲಕನನ್ನು ಅಪಹರಿಸಿದ ಬಳಿಕ ತಂದೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪೊಲೀಸರಿಗೆ ಎಲ್ಲಿಯೂ ಹೇಳದಂತೆ ಬೆದರಿಕೆಯನ್ನು ಹಾಕಿದ್ದರು. ಆದರೆ, ಎಚ್.ಡಿ.ರೇವಣ್ಣ ಪ್ರಕರಣದಲ್ಲಿ ಯಾವುದೇ ರೀತಿ ಬೆದರಿಕೆ, ಬೇಡಿಕೆ ಇಲ್ಲ. ಹಾಗಾಗಿ ಎಚ್.ಡಿ.ರೇವಣ್ಣ ಅವರಿಗೆ ಇದು ಜಾಮೀನು ನೀಡಬಹುದಾದ ಪ್ರಕರಣವಾಗಿದೆ ಎಂದು ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದರು.

ಇದನ್ನೂ ಓದಿ: Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

ಮತ್ತೆ ಎಸ್‌ಪಿಪಿ ವಾದಕ್ಕೆ ಜಡ್ಜ್‌ ಅವಕಾಶ

ಸಿ.ವಿ.ನಾಗೇಶ್ ಪ್ರತಿವಾದಕ್ಕೆ ಮತ್ತೆ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆಗೆ ಪ್ರಾರಂಭ ಮಾಡಿದರು. ಆಗ ಮಧ್ಯ ಪ್ರವೇಶ ಮಾಡಿದ ನ್ಯಾಯಾಧೀಶರು, ಮತ್ತೆ ಪ್ರತಿವಾದಕ್ಕೆ ಅವಕಾಶ ಇದೆಯೇ ಎಂದು ಪ್ರಶ್ನೆ ಮಾಡಿದರು. ಅವಕಾಶ ಇಲ್ಲ. ಆದರೆ, 5 ನಿಮಿಷ ಕಾಲಾವಕಾಶ ಕೊಡಿ. ಎಸ್‌ಐಟಿ ಪರ ಜಯ್ನಾ ಕೊಠಾರಿ ಮತ್ತೆ ವಾದ ಮಾಡಲು ನಾಗೇಶ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ, ಮತ್ತೆ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆಗೆ ಜಡ್ಜ್‌ ಅವಕಾಶ ನೀಡಿದರು. ಅಲ್ಲದೆ, ಎರಡೂ ರಿಮ್ಯಾಂಡ್ ಅಪ್ಲಿಕೇಷನ್ ಓದಲು ಹೇಳಿದರು.

ಮೇ 4ರಂದು ಸಂತ್ರಸ್ತೆ ರಕ್ಷಣೆ ಹಾಗೂ ಮೇ 5ರಂದೇ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಮೇ 5ರಂದೇ ಸಿಆರ್‌ಪಿಸಿ 161 ಅಡಿಯಲ್ಲಿ ಎಸ್‌ಐಟಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಜಯ್ನಾ ಕೊಠಾರಿ ಹೇಳಿದರು. ಆಗ ಮಧ್ಯಪ್ರವೇಶ ಮಾಡಿದ ನ್ಯಾಯಾಧೀಶರು, ಹೇಳಿಕೆ ದಾಖಲಿಸಿಕೊಂಡ ಬಗ್ಗೆ ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಇದೆಯಾ? ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಎಲ್ಲಿ ಇದೆ ಓದಿ ಹೇಳಿ ಎಂದು ಕೇಳಿದರು. ಈ ವೇಳೆ ಎಸ್‌ಪಿಪಿಗೆ ಮಾಹಿತಿ ನೀಡುತ್ತಿದ್ದ ಎಸ್‌ಐಟಿ ಪೊಲೀಸರ ವಿರುದ್ಧ ಜಡ್ಜ್ ಗರಂ ಆದರು. ನಿಮಗೆ ಎಲ್ಲಿ ಬಂದು ಇನ್ಸ್‌ಟ್ರಕ್ಷನ್‌ ಕೊಡಬೇಕು ಅಂತಾ ಗೊತ್ತಾಗಲ್ವಾ? ಕೋರ್ಟ್‌ನಲ್ಲಾ ಬಂದು ಇನ್ಸ್‌ಟ್ರಕ್ಷನ್‌ ಕೊಡೋದು? ಎಂದು ಕೇಳಿದರು.

ಮತ್ತೆ ಲಿಖಿತ ವಾದ ಮಂಡಿಸಲು ಎಸ್‌ಪಿಪಿ ಜಯ್ನಾ ಕೊಠಾರಿ ಮನವಿ ಮಾಡಿದರು. ಆದಕ್ಕೆ ಪ್ರತಿಕ್ರಿಯಿಸಿದ ಜಡ್ಜ್ ಲಿಖಿತ ವಾದ ಇನ್ಯಾವಾಗ ಮಾಡ್ತೀರಾ? ನಾನು ಆದೇಶ ಪ್ರಕಟಿಸಲಿದ್ದೇನೆ ಎಂದು ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಹೇಳಿದರು.

Continue Reading

ರಾಜಕೀಯ

Prajwal Revanna Case: ದೇವರಾಜೇಗೌಡ 3 ದಿನ ಪೊಲೀಸ್ ಕಸ್ಟಡಿಗೆ; ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ನ 3 ಆರೋಪಿಗಳಿಗೆ ನ್ಯಾಯಾಂಗ ಬಂಧನ

Prajwal Revanna Case: ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಂಧನವಾಗಿದ್ದ ವಕೀಲ ದೇವರಾಜೇಗೌಡ ಅವರನ್ನು ಮೇ 16ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಅದೇ ರೀತಿ ಕೆ.ಆರ್.ನಗರ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ನಲ್ಲಿ ಬಂಧನವಾಗಿರುವ ಆರೋಪಿಗಳಾದ ಮಧು, ಮನು, ಸುಜಯ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

VISTARANEWS.COM

on

Prajwal Revanna Case
Koo

ಹಾಸನ: ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ (Prajwal Revanna Case) ವಿಡಿಯೊ ವೈರಲ್‌ ಮಾಡಿದವರ ಕುರಿತು ಸಾಕ್ಷ್ಯ ಬಿಡುಗಡೆ ಮಾಡುತ್ತೇನೆ ಎನ್ನುತ್ತಿದ್ದ ವಕೀಲ ದೇವರಾಜೇಗೌಡ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಂಧನವಾಗಿದ್ದರು. ಇದೀಗ ಅವರನ್ನು ಮೂರು ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಹೊಳೆನರಸೀಪುರದ ಜೆಎಂಎಎಫ್‌ಸಿ ಕೋರ್ಟ್ ಆದೇಶ ಹೊರಡಿಸಿದೆ. ಮತ್ತೊಂದೆಡೆ ಕೆ.ಆರ್.ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನಲ್ಲಿ ಬಂಧನವಾಗಿರುವ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ಅತ್ಯಾಚಾರ ಕೇಸ್‌ನ ಆರೋಪಿ ದೇವರಾಜೇಗೌಡ ಅವರನ್ನು ಬುಧವಾರ ಬೆಳಗ್ಗೆ 9 ಗಂಟೆಯಿಂದ ಮೇ 16 ರ ರಾತ್ರಿ ವರೆಗೆ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡಲು ಹೊಳೆನರಸೀಪುರ ನಗರ ಠಾಣೆ ಪೊಲೀಸರು ಮನವಿ ಮಾಡಿದ್ದರು. ಹೀಗಾಗಿ ಅವರನ್ನು ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಮೇ 11 ರಂದು ದೇವರಾಜೇಗೌಡ ಬಂಧನವಾಗಿತ್ತು. ನಾಳ ಬೆಳಗ್ಗೆ 9 ಗಂಟೆಗೆ ಹಾಸನದ ಜಿಲ್ಲಾ ಕಾರಾಗೃಹದಿಂದ ದೇವರಾಜೇಗೌಡ ಅವರನ್ನು ಪೊಲೀಸರು ಕರೆದೊಯ್ಯಲಿದ್ದಾರೆ.

ಇದನ್ನೂ ಓದಿ | Prajwal Revanna Case: ಪೆನ್‌ಡ್ರೈವ್, ವಿಡಿಯೊ ಇದ್ದವರನ್ನೆಲ್ಲ ಬಂಧಿಸ್ತಾರಾ?; ಆಪ್ತರ ಬಂಧನದ ಬಗ್ಗೆ ಪ್ರೀತಂ ಗೌಡ ಫಸ್ಟ್‌ ರಿಯಾಕ್ಷನ್

ವಕೀಲ ದೇವರಾಜೇಗೌಡ ಬಂಧನವಾಗಿರುವುದು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಾದರೂ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೇ ತಳುಕು ಹಾಕಿಕೊಂಡಿದೆ. ಈಗಾಗಲೇ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ, ಅವರ ಜತೆಗಿನ ಮಾತುಕತೆ ಎನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ, ಸಾಕಷ್ಟು ವಿಡಿಯೊಗಳು, ಸಾಕ್ಷಿಗಳು ಸಹ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದರು. ಸಾಕ್ಷ್ಯಗಳನ್ನು ಮುಂದಿನ ದಿನಗಳಲ್ಲಿ ಸಿಬಿಐ ಮುಂದೆ ಇಡುತ್ತೇನೆ ಎಂದು ಸಹ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿದ್ದರು. ಆದರೆ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಅವರನ್ನು ಬಂಧಿಸಲಾಗಿದೆ.

ಪತಿಯು ಮಾಲೀಕತ್ವದ ಸೈಟ್ ವಿಚಾರವಾಗಿ ದೇವರಾಜೇಗೌಡ ಅವರನ್ನು ಮಹಿಳೆಯೊಬ್ಬರು ಭೇಟಿಯಾಗಿದ್ದರು. ಆ ಪರಿಚಯವನ್ನು ದುರ್ಬಳಕೆ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪ ದೇವರಾಜೇಗೌಡ ವಿರುದ್ಧ ಕೇಳಿ ಬಂದಿದೆ.

ಇದನ್ನೂ ಓದಿ | Prajwal Revanna Case: ಎಚ್‌.ಡಿ. ರೇವಣ್ಣ ಜಾಮೀನು ಅರ್ಜಿಯ ರೋಚಕ ವಾದ – ಪ್ರತಿವಾದ; ಇಲ್ಲಿದೆ ಇಂಚಿಂಚು ಡಿಟೇಲ್ಸ್‌

ಕಿಡ್ನ್ಯಾಪ್‌ ಕೇಸ್; ಸತೀಶ್ ಬಾಬು ಹೊರತು ಪಡಿಸಿ ಮೂವರಿಗೆ ನ್ಯಾಯಾಂಗ ಬಂಧನ

ಕೆ.ಆರ್.ನಗರ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ನಲ್ಲಿ ಬಂಧನವಾಗಿರುವ ಸತೀಶ್ ಬಾಬು ಹೊರತುಪಡಿಸಿ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಾಲ್ವರು ಆರೋಪಿಗಳನ್ನು ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯಕ್ಕೆ ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸಿದ್ದರು. ಸಂತ್ರಸ್ರೆ ಕಿಡ್ನ್ಯಾಪ್‌ಗೆ ಸಹಕರಿಸಿದ್ದ ಆರೋಪದಲ್ಲಿ ಬಂಧನವಾಗಿದ್ದ ಮಧು, ಮನು, ಸುಜಯ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪೆನ್‌ ಡ್ರೈವ್‌ ಹಂಚಿಕೆ ಆರೋಪ ಮಾಡಿದ್ದ ನವೀನ್‌ ಗೌಡ ಮೇಲೆ ಶಾಸಕ ಮಂಜು ದೂರು

A Manju and Naveen Gowda

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೆನ್‌ಡ್ರೈವ್‌ ಲೀಕ್‌ ಮಾಡಿದ್ದು ಅರಕಲಗೂಡು ಜೆಡಿಎಸ್ ಶಾಸಕ ಎ. ಮಂಜು (A Manju) ಎಂದು ಕಾಂಗ್ರೆಸ್‌ ಕಾರ್ಯಕರ್ತ ನವೀನ್‌ ಗೌಡ (Naveen Gowda) ಆರೋಪಿಸಿ ಫೇಸ್‌ಬುಕ್‌ ಪೋಸ್ಟ್‌ ಮಾಡಿದ್ದರ ವಿರುದ್ಧ ಎಸ್‌ಐಟಿಗೆ ದೂರು ದಾಖಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಂಜು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸೋಮವಾರ ಎಸ್.ಐ.ಟಿ ಕಚೇರಿಗೆ ಆಗಮಿಸಿದ ಅರಕಲಗೂಡು ಜೆಡಿಎಸ್ ಶಾಸಕ ಎ. ಮಂಜು, ನವೀನ್ ಗೌಡ ವಿರುದ್ಧ ದೂರು ನೀಡಿದ್ದಾರೆ. ಪೆನ್ ಡ್ರೈವ್ ಅನ್ನು ಶಾಸಕ ಎ. ಮಂಜು ಅವರಿಗೆ ಕೊಟ್ಟಿದ್ದಾಗಿ ಭಾನುವಾರ ನವೀನ್‌ ಗೌಡ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದ. ಈ ಆರೋಪಕ್ಕೆ ಸಿಟ್ಟಾಗಿರುವ ಮಂಜು ಈಗ ದೂರು ನೀಡಿದ್ದಾರೆ.

ನನಗೆ ಏಪ್ರಿಲ್ 20 ರಂದು ಪೆನ್ ಡ್ರೈವ್ ಸಿಕ್ಕಿತ್ತು. ನಾನದನ್ನು ಏಪ್ರಿಲ್‌ 21ರಂದು ಅರಕಲಗೂಡು ಶಾಸಕ ಮಂಜು ಅವರಿಗೆ ಅರಕಲಗೂಡು ಮಾರುತಿ ಕಲ್ಯಾಣ ಮಂಟಪದಲ್ಲಿ ನೀಡಿದ್ದೇನೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವಿಡಿಯೊವನ್ನು ವೈರಲ್ ಮಾಡಿದ್ದರ ಹಿಂದೆ ಮಹಾ ನಾಯಕನ ಕೈವಾಡ ಇದೆ ಎಂದು ಹೇಳಿದ್ದರು. ಆ ಮಹಾ ನಾಯಕ ಅರಕಲಗೂಡು ಶಾಸಕರೇ ಇರಬಹುದು ಎಂದು ಪೋಸ್ಟ್ ಮಾಡಿದ್ದ. ನವೀನ್ ಗೌಡ ಪೋಸ್ಟ್ ಎಲ್ಲೆಡೆ ವೈರಲ್ ಆಗಿತ್ತು. ಆದರೆ, ಪೋಸ್ಟ್ ಮಾಡಿ‌ ಸ್ವಲ್ಪ ಸಮಯದ ಬಳಿಕ ನವೀನ್ ಗೌಡ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದ.

ನವೀನ್‌ ಗೌಡ ಯಾರು?

ನವೀನ್‌ ಗೌಡ ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದು, ಶಾಸಕ ಜಮೀರ್‌ ಅಹಮ್ಮದ್‌ ಆಪ್ತರಲ್ಲೊಬ್ಬನಾಗಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ, ಈತ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೀಲ್‌ಗೂ ಆಪ್ತನಾಗಿದ್ದ. ಚುನಾವಣೆ ವೇಳೆ ಶ್ರೇಯಸ್‌ ಪರವಾಗಿ ಪ್ರಚಾರವನ್ನೂ ಮಾಡಿದ್ದ. ಈತನೇ ಹಾಸನ ಜಿಲ್ಲಾದ್ಯಂತ ಪೆನ್‌ಡ್ರೈವ್‌ ಅನ್ನು ಹಂಚಿಕೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ನವೀನ್ ಗೌಡನ ಮೇಲೆ ಈಗಾಗಲೇ ಹಾಸನ ಸೆನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ಬಳಿಕ ನವೀನ್ ಗೌಡ ನಾಪತ್ತೆಯಾಗಿದ್ದ. ಆದರೆ, ಭಾನುವಾರ ಫೇಸ್‌ಬುಕ್‌ನಲ್ಲಿ ದಿಢೀರನೆ ಪ್ರತ್ಯಕ್ಷವಾಗಿ ಶಾಸಕ ಎ. ಮಂಜು ವಿರುದ್ಧ ಪೋಸ್ಟ್ ಹಾಕಿ ಕೆಲವೇ ಸಮಯದ ಬಳಿಕ ಡಿಲೀಟ್‌ ಮಾಡಿದ್ದ.

ದೂರು ನೀಡಿದ ಎ. ಮಂಜು

ಈ ಸಂಬಂಧ ಎಸ್‌ಐಟಿಗೆ ಬಂದ ಶಾಸಕ ಎ. ಮಂಜು ಅವರು ನವೀನ್‌ ಗೌಡನ ಮೇಲೆ ದೂರು ದಾಖಲು ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವೀನ್ ಗೌಡನಿಗೆ ಏಪ್ರಿಲ್‌ 20ರಂದು ಅಶ್ಲೀಲ ವಿಡಿಯೊದ ಪೆನ್‌ಡ್ರೈವ್‌ ಸಿಗುತ್ತದೆ. ಅದನ್ನು ಏಪ್ರಿಲ್‌ 21ರಂದು ನನಗೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ನನಗೆ ಪೆನ್ ಡ್ರೈವ್ ಅನ್ನು ಯಾಕೆ ಕೊಡಬೇಕು ಎಂಬುದನ್ನು ಮನಸ್ಸು ಮುಟ್ಟಿ ಹೇಳಿಕೊಳ್ಳಲಿ. ನವೀನ್ ಗೌಡ ನನಗೆ ಪರಿಚಯವೇ ಇಲ್ಲ. ನವೀನ್ ಗೌಡ ತಪ್ಪಿಸಿಕೊಳ್ಳಲು ಹಾಗೂ ಎಸ್ಐಟಿ ತನಿಖೆಯ ದಿಕ್ಕು ತಪ್ಪಿಸಲು ಈ ಹೇಳಿಕೆ ಕೊಟ್ಟಿದ್ದಾರೆ. ನನಗೆ ಗೊತ್ತಿಲ್ಲದೆಯೇ ಈ ಪ್ರಕರಣದ ಹಿಂದೆ ಯಾರಿದ್ದಾರೆಂದು ಹೇಳಲ್ಲ ಎಂದು ಹೇಳಿದರು.

ಫೇಸ್‌ಬುಕ್‌ ಹ್ಯಾಕ್‌ ಆಗಿದೆ ಎಂದು ನವೀನ್‌ ಈಗ ಹೇಳುತ್ತಿದ್ದಾನೆ. ಅಂದು ನಾನು ಮದುವೆಗಾಗಿ ಕಲ್ಯಾಣ ಮಂಟಪಕ್ಕೆ ಹೋಗಿದ್ದು ನಿಜ. ಆದರೆ, ನವೀನ್ ಗೌಡ ಭೇಟಿ ಆಗಲೇ ಇಲ್ಲ. ಸತ್ಯ ಹೊರಗೆ ಬರಲಿ ಅಂತಾ ಇವತ್ತು ದೂರು ಕೊಟ್ಟಿದ್ದೇನೆ. ದೇವೇಗೌಡ ಕುಟುಂಬದಿಂದ ನನ್ನನ್ನು ದೂರ ಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಹಾಗಾಗಿ ಈ ರೀತಿ ಕೃತ್ಯ ಮಾಡಿದ್ದಾರೆ. ದೇವೇಗೌಡರು ನನಗೆ ಕೊನೆಯ ಅವಕಾಶವನ್ನು ನೀಡಿದ್ದರು. ನಾನು ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದು ಶಾಸಕನಾಗಿದ್ದೇನೆ. ಆದರೆ, ಈಗ ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಎಸ್ಐಟಿಯವರು ನವೀನ್‌ನನ್ನು ಬಂಧಿಸಬೇಕು ಎಂದು ಒತ್ತಾಯ ಮಾಡಿದ್ದೇನೆ ಎಂದು ಎ. ಮಂಜು ಹೇಳಿದರು.

ಇದನ್ನೂ ಓದಿ: Prajwal Revanna Case: ಎಸ್‌ಐಟಿಗೆ ಸವಾಲೆಸೆದ ನವೀನ್‌ ಗೌಡ; ದೇವರಾಜೇಗೌಡ, ಪ್ರೀತಂಗೌಡ ಆಪ್ತರು ಎಸ್‌ಐಟಿ ಕಸ್ಟಡಿಗೆ?

ಈ ಪ್ರಕರಣದ ಹಿಂದೆ ಯಾರೇ ಇದ್ದರೂ ಶಿಕ್ಷೆಯಾಗಲೇಬೇಕು. ಪ್ರಜ್ವಲ್ ರೇವಣ್ಣ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಘಟನೆ ಬಳಿಕ ದೇವೇಗೌಡರ ನಿವಾಸಕ್ಕೆ ಹೋಗಿದ್ದೆ. ಧೈರ್ಯವಾಗಿ ಇರಿ ಅಂತಾ ಹೇಳಿ ಬಂದಿದ್ದೇನೆ. ಎಚ್.ಡಿ. ರೇವಣ್ಣ ಅವರನ್ನು ಭೇಟಿ ಮಾಡಿ ಬಂದಿದ್ದೆ. ಬೇಲ್ ವಿಚಾರಣೆ ನಡೆಯುತ್ತಿದೆ. ಏನಾಗುತ್ತದೆ ಎಂದು ನೋಡಬೇಕು ಎಂದು ಹೇಳಿದರು.

Continue Reading

ಮಳೆ

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Rain News : ರಾಜ್ಯಾದ್ಯಂತ ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಗಾಳಿಯೊಟ್ಟಿಗೆ ಧಾರಾಕಾರ ಮಳೆಯಾಗುವ (Heavy Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

VISTARANEWS.COM

on

By

Karnataka Weather Forecast
Koo

ಬೆಂಗಳೂರು: ಭಾನುವಾರದಂದು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಕರಾವಳಿ, ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿರುವ (Rain News) ವರದಿ ಆಗಿದೆ. ಅತಿ ಹೆಚ್ಚು ಮಳೆಯು ಪುತ್ತೂರು ಹಾಗೂ ರಾಯಚೂರಿನಲ್ಲಿ ತಲಾ 10 ಸೆಂ.ಮೀ (Karnataka Weather Forecast) ಮಳೆಯಾಗಿದೆ. ಉಳಿದಂತೆ ಉಪ್ಪಿನಂಗಡಿ 9, ಸಿರಾ ಮತ್ತು ಕೊಟ್ಟಿಗೆಹಾರದಲ್ಲಿ ತಲಾ 8 ಸೆಂ.ಮೀ, ಗಬ್ಬೂರು, ಬೆಳಗಾವಿಯಲ್ಲಿ 7 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಗರಿಷ್ಠ ಉಷ್ಣಾಂಶ ರಾಯಚೂರಿನಲ್ಲಿ 39.4 ಡಿ. ಸೆ ದಾಖಲಾಗಿದೆ.

ಕಾಸರಗೋಡಿನಲ್ಲಿ ಗಾಳಿ ಮಳೆಗೆ ನೆಲಕ್ಕುರುಳಿದ ಬೃಹತ್ ಹೋರ್ಡಿಂಗ್‌

ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಕೇರಳದ ಕಾಸರಗೋಡಿನ ಬಸ್ ನಿಲ್ದಾಣ ಬಳಿ ಗಾಳಿ ಸಹಿತ ಮಳೆಯಾಗುತ್ತಿದೆ. ಗಾಳಿ ಮಳೆಗೆ ಬೃಹತ್ ಹೋರ್ಡಿಂಗ್‌ ನೆಲಕ್ಕುರುಳಿದ ಘಟನೆ ನಡೆದಿದೆ. ಹೋರ್ಡಿಂಗ್‌ ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಹೋರ್ಡಿಂಗ್‌ ಬಿದ್ದು ಕೆಳಗಡೆ ಪಾರ್ಕ್ ಮಾಡಿದ್ದ ವಾಹನಗಳಿಗೆ ಹಾನಿಯಾಗಿದೆ. ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಪಾರ್ಕಿಂಗ್‌ ಜಾಗದಲ್ಲಿ ಜನರು ಇರಲಿಲ್ಲ. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಹಾಸನದಲ್ಲಿ ಉರುಳಿ ಬಿದ್ದ ಮರ

ಹಾಸನ ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮರವೊಂದು ಉರುಳಿ ಬಿದ್ದಿತ್ತು. ಪರಿಣಾಮ ಎರಡು ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿಘಾಟ್‌ ರಸ್ತೆಯಲ್ಲಿ ಘಟನೆ ನಡೆದಿದೆ.

ಮಂಗಳೂರು-ಬೆಂಗಳೂರು ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಘಾಟ್ ರಸ್ತೆಗೆ ಮರ ಬಿದ್ದಿತ್ತು. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ವಾಹನ ಸವಾರರು ಪರದಾಡಿದರು. ಸ್ಥಳಕ್ಕಾಗಮಿಸಿ ಟ್ರಾಫಿಕ್‌ ಪೊಲೀಸರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತ ಮಾಡಿದರು.

ಇದನ್ನೂ ಓದಿ: Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

ಮಳೆ ಜತೆಗೆ 60 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ ಬಿರುಗಾಳಿ

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದ್ದು, ಮೇ 14ರಂದು ಭಾರಿ ಮಳೆಯೊಂದಿಗೆ ಗಾಳಿ ವೇಗವು 50-60 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಚಿಕ್ಕಮಗಳೂರು, ಹಾಸನ, ಮಂಡ್ಯ,ಮೈಸೂರು ಸೇರಿ ಕಲಬುರಗಿ, ಬೆಳಗಾವಿ, ಯಾದಗಿರಿ ಜಿಲ್ಲೆಗಳಲ್ಲಿ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಕೋಲಾರ, ವಿಜಯಪುರ, ಬಾಗಲಕೋಟೆ, ಬೀದರ್‌, ಧಾರವಾಡ,ಗದಗದಲ್ಲಿ ಗುಡುಗು, ಸಿಡಿಲಿನೊಂದಿಗೆ ಜೋರಾದ ಗಾಳಿಯೊಂದಿಗೆ ಮಳೆಯಾಗಲಿದೆ. ಉಳಿದೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿ ನಂತರ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಹಾಗೂ ಕನಿಷ್ಠ ಉಷ್ಣಾಂಶ 22 ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Prajwal Revanna Case: ಎಚ್‌.ಡಿ. ರೇವಣ್ಣ ಜಾಮೀನು ಅರ್ಜಿಯ ರೋಚಕ ವಾದ – ಪ್ರತಿವಾದ; ಇಲ್ಲಿದೆ ಇಂಚಿಂಚು ಡಿಟೇಲ್ಸ್‌

Prajwal Revanna Case: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಪ್ರಕರಣ ಸಂಬಂಧ ವಾದ ಮಂಡಿಸಿದ ಎಸ್‌ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ, 2 ವಿಚಾರಗಳಿಗೆ ಸಂಬಂಧಿಸಿ ಆರೋಪಿಗೆ ಜಾಮೀನು ಕೊಡಬೇಡಿ. ಒಂದು ಪ್ರಕರಣದ ಗಂಭೀರತೆಯನ್ನು ನೋಡಬೇಕಿದ್ದು, ಇದರಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿದೆ. ಕಿಡ್ನ್ಯಾಪ್ ಕೇಸಲ್ಲೂ ಈಗಾಗಲೇ 2ನೇ ಆರೋಪಿ ಹೇಳಿಕೆಯನ್ನು ಪಡೆಯಲಾಗಿದೆ. ಈ ನಡುವೆ ಸಂತ್ರಸ್ತೆಯ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸಂತ್ರಸ್ತೆ ಸ್ಪಷ್ಟನೆ ನೀಡಿದ್ದಾರೆ ಎಂಬುದಾಗಿ ವಿಡಿಯೋ ವೈರಲ್ ಬಗ್ಗೆ ಕೋರ್ಟ್‌ಗೆ ಮಾಹಿತಿಯನ್ನು ನೀಡಿದರು.

VISTARANEWS.COM

on

Prajwal Revanna Case HD Revanna bail plea arguments and counter arguments
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಆರ್.‌ ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದಡಿ ಜೈಲಿನಲ್ಲಿರುವ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ (HD Revanna) ಅವರ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆದಿದೆ. ಈ ವೇಳೆ ರೇವಣ್ಣ ಪರ ಹಾಗೂ ಸರ್ಕಾರಿ ವಕೀಲರ ನಡುವೆ ವಾದ – ಪ್ರತಿವಾದಗಳು ನಡೆದಿವೆ. ಇಂಥ ಕಾರಣಗಳಿಗೆ ಜಾಮೀನು ಕೊಡಲೇ ಬೇಕು ಎಂದು ರೇವಣ್ಣ ಪರ ವಕೀಲರಾದ ನಾಗೇಶ್‌ ವಾದ ಮಂಡಿಸಿದರೆ, ಜಾಮೀನನ್ನು ಏಕೆ ಕೊಡಬಾರದು? ಕೊಟ್ಟರೆ ಮುಂದೇನಾಗುತ್ತದೆ ಎಂದು ಎಸ್‌ಐಟಿ ಪರ ವಕೀಲರಾದ (ಎಸ್‌ಪಿಪಿ) ಜಯ್ನಾ ಕೊಠಾರಿ ಹಾಗೂ ಅಶೋಕ್‌ ನಾಯ್ಕ್‌ ವಾದಿಸಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಪ್ರಕರಣ ಸಂಬಂಧ ವಾದ ಮಂಡಿಸಿದ ಎಸ್‌ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ, 2 ವಿಚಾರಗಳಿಗೆ ಸಂಬಂಧಿಸಿ ಆರೋಪಿಗೆ ಜಾಮೀನು ಕೊಡಬೇಡಿ. ಒಂದು ಪ್ರಕರಣದ ಗಂಭೀರತೆಯನ್ನು ನೋಡಬೇಕಿದ್ದು, ಇದರಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿದೆ. ಕಿಡ್ನ್ಯಾಪ್ ಕೇಸಲ್ಲೂ ಈಗಾಗಲೇ 2ನೇ ಆರೋಪಿ ಹೇಳಿಕೆಯನ್ನು ಪಡೆಯಲಾಗಿದೆ. ಈ ನಡುವೆ ಸಂತ್ರಸ್ತೆಯ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸಂತ್ರಸ್ತೆ ಸ್ಪಷ್ಟನೆ ನೀಡಿದ್ದಾರೆ ಎಂಬುದಾಗಿ ವಿಡಿಯೋ ವೈರಲ್ ಬಗ್ಗೆ ಕೋರ್ಟ್‌ಗೆ ಮಾಹಿತಿಯನ್ನು ನೀಡಿದರು.

ಮೊದಲು ತನಿಖಾ ವರದಿ ಕೊಡಿ ಎಂದ ನ್ಯಾಯಾಧೀಶರು

ಈ ವೇಳೆ ಮಧ್ಯಪ್ರವೇಶ ಮಾಡಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್, ತನಿಖಾಧಿಕಾರಿಯ ಇನ್‌ವೆಸ್ಟಿಗೇಷನ್‌ ರಿಪೋರ್ಟ್ ಅನ್ನು ಮೊದಲು ಸಲ್ಲಿಸಿ. ಕಿಡ್ನ್ಯಾಪ್ ಕೇಸ್‌ ಸಂಬಂಧ ಏನೇನು ವಿಚಾರಗಳು ನಡೆದಿವೆ ಎಂಬುದನ್ನು ತಿಳಿಯಬೇಕು ಎಂದು ಎಸ್‌ಪಿಪಿಗೆ ಸೂಚಿಸಿದರು. ಆಗ ರೇವಣ್ಣ ಪರ ವಕೀಲ ಸಿ.ವಿ. ನಾಗೇಶ್‌, ತನಿಖಾ ವರದಿಯನ್ನು ನಮಗೂ ಕೊಟ್ಟಿಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದರು. ಈ ವೇಳೆ ಮುಚ್ಚಿದ ಲಕೋಟೆಯಲ್ಲಿ ಇನ್‌ವೆಸ್ಟಿಗೇಷನ್ ರಿಪೋರ್ಟ್‌ ಅನ್ನು ಸಲ್ಲಿಸಲಾಯಿತು. ಇದಕ್ಕೆ ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌ರಿಂದ ಆಕ್ಷೇಪ ವ್ಯಕ್ತವಾಯಿತು. ಬಳಿಕ ತಮಗೂ ಒಂದು ಕಾಪಿ ನೀಡಲು ಕೇಳಿದ್ದು, ಅವರಿಗೂ ಒಂದು ಪ್ರತಿಯನ್ನು ನೀಡಲಾಯಿತು.

ಇದನ್ನೂ ಓದಿ: Karnataka Politics: ಆಪರೇಶನ್ ಕಮಲ ಆಗೋಕೆ ಸಾಧ್ಯಾನೇ ಇಲ್ಲ; ಇದು ಬಿಜೆಪಿಯ ಹಗಲುಗನಸು: ಸಿಎಂ ಸಿದ್ದರಾಮಯ್ಯ

ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲೇಖಿಸಿದ ಎಸ್‌ಪಿಪಿ

ಈ ವೇಳೆ ವಾದ ಮುಂದುವರಿಸಿದ ಜಯ್ನಾ ಕೊಠಾರಿ ಅವರು ಸುಪ್ರೀಂಕೋರ್ಟ್‌ ಕೇಸ್‌ ಸ್ಟಡಿಗಳನ್ನು ಉಲ್ಲೇಖಿಸಿದರು. ಕೆಲವು ತೀರ್ಪುಗಳನ್ನು ಓದಿ ಹೇಳಿದರು. ಕಿಡ್ನ್ಯಾಪ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ತೀರ್ಪುಗಳನ್ನು ಕೋರ್ಟ್‌ ಗಮನಕ್ಕೆ ತಂದರು. ಕಿಡ್ನ್ಯಾಪ್‌ ಪ್ರಕರಣದಲ್ಲಿ ಸೆಕ್ಷನ್‌ 364ಎ ಅಂದ್ರೆ ಜೀವಾವಧಿ ಶಿಕ್ಷೆ ಇದೆ. ಐಪಿಸಿ ಸೆಕ್ಷನ್‌ 364ಎ ಅಡಿಯಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಹೀಗಾಗಿ ಎಚ್.ಡಿ. ರೇವಣ್ಣ ಅವರಿಗೆ ಜಾಮೀನು ಕೊಡಬಾರದು ಎಂದು ವಾದ ಮಂಡಿಸಿದರು. ಶಿಕ್ಷೆಯ ಪ್ರಮಾಣದ ಗಂಭೀರತೆಯನ್ನು ಪರಿಗಣಿಸಿ ಬೇಲ್ ಅನ್ನು ಕೊಡಲೇಬಾರದು ಎಂದು ಮನವಿ ಮಾಡಿದರು.

ದೆಹಲಿ ಕೋರ್ಟ್‌ನ ಗುರುಚರಣ್ ಸಿಂಗ್‌ ಪ್ರಕರಣದ ಬಗ್ಗೆ ಉಲ್ಲೇಖ

ಗುರುಚರಣ್ ಸಿಂಗ್‌ ಪ್ರಕರಣದಲ್ಲಿ ಕೋರ್ಟ್‌ ಬೇಲ್ ತಿರಸ್ಕರಿಸಿತ್ತು. ಈಗ ರೇವಣ್ಣ ಪರ ದಾಖಲಾಗಿರುವ ಕೆ.ಆರ್.ನಗರ ಅಪಹರಣ ಪ್ರಕರಣವು ಒಂದು ಸೀರಿಯಸ್ ಕ್ರಿಮಿನಲ್ ಕೇಸ್ ಆಗಿದೆ ಎಂದು ವಾದ ಮಂಡಿಸಿ ಕೆಲವು ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ ತೀರ್ಪುಗಳನ್ನು ಉಲ್ಲೇಖಿಸಿದರು.

ಆರೋಪಿ ಎಚ್‌.ಡಿ. ರೇವಣ್ಣ ಅವರ ಮಗ ಪ್ರಜ್ವಲ್‌ ರೇವಣ್ಣ ಕೂಡ ಬೇರೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಮಾಹಿತಿಯನ್ನು ಗೌಪ್ಯವಾಗಿಡಬೇಕು. ಕೆಲವು ಪ್ರಕರಣದಲ್ಲಿ ಮಾತ್ರ ಅಲ್ಲ, ಬೇರೆ ಪ್ರಕರಣಗಳಲ್ಲಿಯೂ ಈ ರೀತಿ ಸಂದರ್ಭದಲ್ಲಿ ಜಾಮೀನು ಕೊಟ್ಟರೆ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ. ಗಂಭೀರತೆ ಹೆಚ್ಚಿರುವ ಪ್ರಕರಣಗಳಲ್ಲಿ ಜಾಮೀನು ಕೊಡಬಾರದು. ಜಾಮೀನು ಕೊಡಬಾರದೆಂದು ಹಲವು ಕೋರ್ಟ್‌ಗಳ ತೀರ್ಪಿದೆ. ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪುಗಳನ್ನು ಕೊಠಾರಿ ಉಲ್ಲೇಖಿಸಿದರು.

ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇರುತ್ತದೆ. ಸಂತ್ರಸ್ತೆ ಮತ್ತು ಆಕೆಯ ಪುತ್ರನಿಗೆ ಜೀವ ಬೆದರಿಕೆಯೂ ಇದೆ. ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತ್ರಸ್ತೆಯ ಮಾಹಿತಿ ಗೌಪ್ಯವಾಗಿ ಇಡಬೇಕು. ಈ ಸಂದರ್ಭದಲ್ಲಿ ಸಂತ್ರಸ್ತೆ ಮಾಹಿತಿ ಗೌಪ್ಯವಾಗಿ ಇಡಲಿಲ್ಲ ಅಂದರೆ ಬೇರೆ ಯಾವ ಸಂತ್ರಸ್ತೆಯರು ಮುಂದೆ ಬಂದು ದೂರು ನೀಡುತ್ತಾರೆ? ರೇವಣ್ಣಗೆ ಜಾಮೀನು ನೀಡಲೇಬಾರದು. ಈ ಪರಿಸ್ಥಿತಿಯಲ್ಲಿ ರೇವಣ್ಣಗೆ ಜಾಮೀನು ನೀಡಿದರೆ ನ್ಯಾಯಾಂಗ ಹಾದಿಗೇ ಅಡಚಣೆಯಾಗುತ್ತದೆ ಎಂದು ಜಯ್ನಾ ಕೊಠಾರಿ ವಾದ ಮಂಡಿಸಿದರು.

ಈ ಕಾರಣಕ್ಕಾಗಿ ಜಾಮೀನು ನೀಡಬಾರದು

ರೇವಣ್ಣ ಪ್ರಭಾವಿಯಾಗಿದ್ದು, ಅವರ ಪುತ್ರ ಸಂಸದ ಪ್ರಜ್ವಲ್ ತಲೆಮರೆಸಿಕೊಂಡಿದ್ದಾರೆ. ಇದು ಕೇವಲ ಅಪಹರಣ ಪ್ರಕರಣ ಅಲ್ಲ, ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಕಿಡ್ನ್ಯಾಪ್ ಆಗಿದೆ. ಪ್ರಕರಣದಲ್ಲಿ ಯಾವುದೇ ಮಹಿಳೆಯರು ದೂರು ನೀಡದಂತೆ ತಡೆಯುವ ಯತ್ನ ಇದಾಗಿದೆ. ಎಚ್.ಡಿ. ರೇವಣ್ಣಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಕಿಡ್ನ್ಯಾಪ್ ಪ್ರಕರಣದಲ್ಲಿ ಕೆಲವರ ಹೇಳಿಕೆ ಸಿಆರ್‌ಪಿಸಿ 164 ಅಡಿಯಲ್ಲಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರ ಹೇಳಿಕೆ ದಾಖಲಿಸಬೇಕು ಎಂದು ಜಯ್ನಾ ಕೊಠಾರಿ ವಾದ ಮಂಡನೆ ಮಾಡಿ ಮುಗಿಸಿದರು.

ಜಯ್ನಾ ಕೊಠಾರಿ ಬಳಿಕ ಹೆಚ್ಚುವರಿ ಎಸ್‌ಪಿಪಿ ಅಶೋಕ್ ನಾಯ್ಕ್ ವಾದ ಮಂಡನೆಯನ್ನು ಪ್ರಾರಂಭಿಸಿದರು. ಒಬ್ಬರು ವಾದ ಮಂಡಿಸಿದರೆ ಸಾಕು ಎಂದು ವಕೀಲ ಸಿ.ವಿ.ನಾಗೇಶ್ ಆಕ್ಷೇಪಣೆ ವ್ಯಕ್ತಪಡಿಸಿದರು. ಒಂದೇ ಕೇಸ್‌ಗೆ ಇಬ್ಬರು ಎಸ್‌ಪಿಪಿಗಳ ವಾದದ ಬಗ್ಗೆ ಜಡ್ಜ್ ನಿರ್ಧಾರ ಮಾಡಬೇಕು ಎಂದು ನ್ಯಾಯಾಧೀಶರನ್ನು ಇದೇ ವೇಳೆ ಸಿ.ವಿ. ನಾಗೇಶ್ ಕೇಳಿದರು. ಅದಕ್ಕೆ ಅಶೋಕ್‌ ನಾಯ್ಕ್‌, ಎಷ್ಟು ಜನ ಬೇಕಾದರೂ ವಾದ ಮಾಡಿ ಅಂತಾ ನೀವೇ ಹೇಳಿದ್ದಿರಲ್ಲವೇ ಎಂದು ಸಿ.ಪಿ. ನಾಗೇಶ್‌ಗೆ ಪ್ರಶ್ನೆ ಮಾಡಿದರು.

ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸಂತ್ರಸ್ತೆಯರು ಇದ್ದಾರೆ. ಆದ್ದರಿಂದಲೇ ಎಸ್‌ಐಟಿ ಪರವಾಗಿ ಇಬ್ಬರು ಎಸ್‌ಪಿಪಿಗಳನ್ನು ನೇಮಿಸಲಾಗಿದೆ. ನಾನು ವಾದ ಮಾಡಿದರೆ ನಿಮಗೇನು ತೊಂದರೆ? ಎಂದು ಕೇಳಿ ಅಶೋಕ್ ನಾಯ್ಕ್ ವಾದ ಮುಂದುವರಿಸಿದರು.

ಇದನ್ನೂ ಓದಿ: Prajwal Revanna Case: ಪೆನ್‌ ಡ್ರೈವ್‌ ಹಂಚಿಕೆ ಆರೋಪ ಮಾಡಿದ್ದ ನವೀನ್‌ ಗೌಡ ಮೇಲೆ ಶಾಸಕ ಮಂಜು ದೂರು

ರೇವಣ್ಣಗೆ ಜಾಮೀನು ಕೊಡಬಾರದು. ಕಿಡ್ನ್ಯಾಪ್ ಪ್ರಕರಣದ ಸಂತ್ರಸ್ತೆಯ ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಆ ವೇಳೆ ಬರಲು ಆಗಲ್ಲ ಅಂದರೂ ಬಲವಂತವಾಗಿ ಕರೆದೊಯ್ದಿದ್ದಾರೆ. ಸಂತ್ರಸ್ತೆ ಅಪಹರಿಸಿ ರೇವಣ್ಣ ಆಪ್ತರ ತೋಟದ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಚುನಾವಣೆಗೆ ನಾಲ್ಕೈದು ದಿನ ಮುಂಚೆಯೇ ಸಂತ್ರಸ್ತೆಯನ್ನು ಕರೆದೊಯ್ದಿದ್ದಾರೆ. ಆನಂತರ ಕರೆದುಕೊಂಡು ಬಂದಿದ್ದಾರೆ ಎಂದು ಅಶೋಕ್ ನಾಯ್ಕ್ ವಾದಿಸಿದರು.

ರೇವಣ್ಣ ಪುತ್ರ ಪ್ರಜ್ವಲ್ ಯಾವ ಕಾರಣಕ್ಕಾಗಿ ದೇಶ ಬಿಟ್ಟು ಹೋಗಿದ್ದಾನೆ? ಇಲ್ಲಿ ಪ್ರಜ್ವಲ್ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ ಹೊಂದಿದ್ದಾರೆ. ಅವರ ತಂದೆ – ತಾಯಿಗೆ ಯಾವ ಕಾರಣ ಹೇಳಿ ಹೋಗಿದ್ದಾರೆ? ದೇಶದ ಬಗ್ಗೆ ಚರ್ಚೆ ಮಾಡುವುದಕ್ಕೆ ಏನಾದರೂ ಹೋಗಿದ್ದಾರಾ? ಎಂದು ಅಶೋಕ್‌ ನಾಯ್ಕ್‌ ಪ್ರಶ್ನೆ ಮಾಡಿದರು.

ತಾಯಿಯ ಮೇಲೆ ನಡೆದ ಅತ್ಯಾಚಾರ ದೃಶ್ಯವನ್ನು ದೂರುದಾರ ನೋಡಿದ್ದಾರೆ. ತನ್ನ ಸ್ನೇಹಿತರ ಮೊಬೈಲ್‌ನಲ್ಲಿ ತಾಯಿ ಮೇಲಿನ ದೌರ್ಜನ್ಯದ ವಿಡಿಯೊವನ್ನು ನೋಡಿದ್ದಾರೆ. ಅದಕ್ಕಿಂತ ದುರ್ದೈವದ ಸಂಗತಿ ಇನ್ನೇನಿದೆ ಹೇಳಿ? ನಾಲ್ಕು ದಿನಗಳ ಕಾಲ ಅನುಭವಿಸಿದ್ದ ಯಾತನೆಯನ್ನು ಸಂತ್ರಸ್ತೆ ಹೇಳಿಕೊಂಡಿದ್ದಾರೆ ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಭಾನುವಾರ ವೈರಲ್ ಆಗಿರುವ ಸಂತ್ರಸ್ತೆಯ ಸ್ಪಷ್ಟನೆಯುಳ್ಳ ವಿಡಿಯೊ ಬಗ್ಗೆ ಪ್ರಸ್ತಾಪಿಸಿದ ಎಸ್‌ಪಿಪಿ ಅಶೋಕ್‌ ನಾಯ್ಕ್‌, ವೈರಲ್ ಆಗಿರುವ ವಿಡಿಯೊದಲ್ಲಿ ರೇವಣ್ಣ ಕಿಡ್ನ್ಯಾಪ್ ಮಾಡಿಲ್ಲ ಅಂದಿದ್ದಾರೆ. ಈ ಮೂಲಕ ನ್ಯಾಯಾಲಯದ ದಾರಿಯನ್ನೇ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಆ ವಿಡಿಯೊದಲ್ಲಿ ಸಂತ್ರಸ್ತೆಯೇ ಕೆಲವು ವಿಚಾರವನ್ನು ಹೇಳಿಕೊಂಡಿದ್ದಾರೆ. ಯಾವ ರೀತಿ ಕಿಡ್ನ್ಯಾಪ್ ಮಾಡಲಾಗಿದೆ ಅಂತಾ ಎಸ್‌ಐಟಿ ಅವರಿಂದ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ನ್ಯಾಯಾಲಯಕ್ಕೆ ಎಸ್‌ಐಟಿ ತನಿಖೆ ಬಗ್ಗೆ ಮಾಹಿತಿ ನೀಡಿದ ಅಶೋಕ್ ನಾಯ್ಕ್, ಎಷ್ಟು ಜನ ಕಿಡ್ನ್ಯಾಪ್ ಮಾಡಿದರು? ಎಷ್ಟು ವಾಹನಗಳಲ್ಲಿ ಅಪಹರಣ ಮಾಡಿದರು? ಮಾರ್ಗ ಮಧ್ಯೆ ವಾಹನಗಳ ಬದಲಾವಣೆ ಮಾಡಲಾಗಿದೆಯಾ ಅಂತಲೂ ತನಿಖೆ ನಡೆದಿದೆ. ಕಿಡ್ನ್ಯಾಪ್ ಹೇಗೆ ಮಾಡಲಾಗಿದೆ ಎಂಬ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ವಿವರಿಸಿದರು.

ಕಸ್ಟಡಿ ಹಾಗೂ ಜಾಮೀನು ಸಂಬಂಧ ರೇವಣ್ಣ ಪರ ವಕೀಲರು ವಾದ ಮಾಡಿದ್ದಾರೆ. ಆದರೆ ಇಲ್ಲಿ ಜಾಮೀನು ಕೊಟ್ಟರೆ ಏನು ಆಗುತ್ತೆ ಅಂತಾ, ಮುಂದೆ ಏನು ಆಗುತ್ತದೆ..? ಎರಡು ರೀತಿಯಲ್ಲಿ ನಾನು ವಾದ ಮಂಡಿಸುತ್ತೇನೆ. ಜಾಮೀನು ಕೊಟ್ಟರೆ ಏನಾಗುತ್ತದೆ? ಜಾಮೀನು ಕೊಡದಿದ್ದರೆ ಏನಾಗುತ್ತೆ ಎಂಬುದನ್ನು ಹೇಳುತ್ತೇನೆ. ನಿಮ್ಮ ವಾದದ ಅಂಶಗಳ ಕಾಪಿಯನ್ನು ಕೊಟ್ಟು ವಾದವನ್ನು ಮುಂದುವರಿಸಿ ಎಂದು ಈ ವೇಳೆ ನ್ಯಾಯಾಧೀಶರು ಹೇಳಿದರು.

ಎಚ್.ಡಿ.ರೇವಣ್ಣ ಸಲ್ಲಿಸಿರುವ ಜಾಮೀನಿಗೆ ಮಾನ್ಯತೆಯೇ ಕೊಡಬಾರದು ಎಂದು ಎಸ್‌ಐಟಿ ಪರ ಹೆಚ್ಚುವರಿ ಎಸ್‌ಪಿಪಿ ಅಶೋಕ್ ನಾಯ್ಕ್ ವಾದ ಮಂಡಿಸಿದಾಗ ಮಧ್ಯಪ್ರವೇಶ ಮಾಡಿದ ನ್ಯಾಯಾಧೀಶರು, ಬೇಲ್ ಅರ್ಜಿ ಮಾನ್ಯತೆ ವಿಚಾರ ಏಕೆ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರಿಸಿದ ಅಶೋಕ್‌ ನಾಯ್ಕ್, ಬೇಲ್ ಅರ್ಜಿ ಮಾನ್ಯತೆ ಕುರಿತು ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದರು. ಆಗ ಅಸಮಾಧಾನಗೊಂಡ ನ್ಯಾಯಾಧೀಶರು, ಈಗ ನಡೆಯುತ್ತಿರುವುದು ಬೇಲ್ ಅರ್ಜಿ ವಿಚಾರಣೆಯಾಗಿದೆ. ಅದರ ಸಂಬಂಧ ವಾದ ಮಾಡಿ ಎಂದು ಅಶೋಕ್‌ ನಾಯ್ಕ್‌ಗೆ ನ್ಯಾಯಾಧೀಶರು ಸೂಚನೆ ನೀಡಿದರು. ಅದು ಬಿಟ್ಟು ಪೊಲೀಸ್ ಕಸ್ಟಡಿ, ಜ್ಯುಡಿಷಿಯಲ್ ಕಸ್ಟಡಿ ಬಗ್ಗೆ ವಾದ ಏಕೆ? ಎಂದು ಕೇಳಿದರು.

ಆದರೆ, ಆಗ ವಾದ ಮಂಡಿಸಿದ ಅಶೋಕ್‌ ನಾಯ್ಕ್‌, ಹೀಗೆಯೇ ಆದರೆ ಈ ಕಿಡ್ನ್ಯಾಪ್ ಪ್ರಕರಣವು ಸುಪ್ರೀಂ ಕೋರ್ಟ್‌ಗೆ ಹೋಗಬೇಕು ಎಂದು ಹೇಳಿದರು. ಇದಕ್ಕೆ ಸಿ.ವಿ.ನಾಗೇಶ್ ಆಕ್ಷೇಪ ವ್ಯಕ್ತಪಡಿಸಿ, ನ್ಯಾಯಾಲಯಕ್ಕೇ ನೀವು ಬೆದರಿಕೆ ಹಾಕುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್‌ ನಾಯ್ಕ್‌, ಈ ವಿಚಾರಗಳನ್ನು ಮಾತ್ರ ನಾನು ಹೇಳುತ್ತಿದ್ದೇನೆಯೇ ಹೊರತು, ಬೆದರಿಕೆಯ ಪ್ರಶ್ನೆಯೇ ಇಲ್ಲ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಬೇಡಿ ಎಂದು ಸಿ.ವಿ. ನಾಗೇಶ್‌ಗೆ ಹೇಳಿದರು.

ಯಾವ ಕಾರಣಕ್ಕೆ ರೇವಣ್ಣಗೆ ಜಾಮೀನು ನೀಡಬಾರದು?

ಯಾವ ಕಾರಣಕ್ಕೆ ರೇವಣ್ಣಗೆ ಜಾಮೀನು ನೀಡಬಾರದು ಅಂತಾ ಹೇಳುತ್ತೇನೆ ಎಂದು ವಾದವನ್ನು ಮುಂದುವರಿಸಿದ ಎಸ್‌ಪಿಪಿ ಅಶೋಕ್ ನಾಯ್ಕ್, ವೋಟ್ ಹಾಕಿ.. ವೋಟ್‌ ಹಾಕಿ.. ಅಂತಾ ಜನರನ್ನೇ ಬೆದರಿಸುತ್ತಾರೆ. ಈ ರೇವಣ್ಣ ಅವರಿಗೆ ಜಾಮೀನು ಕೊಟ್ಟರೆ ಕಥೆ ಏನು ಸ್ವಾಮಿ? ವೋಟ್ ಹಾಕಲು ಸರತಿ ಸಾಲಲ್ಲಿ ನಿಂತಿದ್ದಾಗ ಮತದಾರರಿಗೆ ಬೆದರಿಕೆ ಹಾಕುತ್ತಾರೆ. 2019ರ ಚುನಾವಣೆ ವೇಳೆ ಮತ ಹಾಕುವ ವೇಳೆ ರೇವಣ್ಣ ಅವರೇ ಬೆದರಿಕೆ ಹಾಕಿದ್ದಾರೆ. ಅಲ್ಲಿ ಯಾರೂ ರೇವಣ್ಣ ಅವರನ್ನು ಕೇಳುವಂತಿಲ್ಲ. ಈಗ ಜಾಮೀನು ಕೊಟ್ಟರೆ ಕಥೆ ಏನ್‌ ಸ್ವಾಮಿ? ಅಧಿಕಾರಿಗಳು ಹಾಗೂ ಸರ್ಕಾರಿ ವಾಹನಗಳನ್ನೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಎಲೆಕ್ಷನ್‌ ಟೈಮ್‌ನಲ್ಲಿ ಇವರು ಸರ್ಕಾರಿ ವಾಹನಗಳಲ್ಲಿಯೇ ಹಣ ಸಾಗಿಸುತ್ತಿದ್ದರು. ಈ ಎಲ್ಲ ಆರೋಪಗಳಿಗೆ ಸಂಬಂಧಿಸಿದಂತೆ ಬೇಕಾದ ಎಲ್ಲ ದಾಖಲೆಗಳು ಇವೆ. ಆದ್ದರಿಂದ ರೇವಣ್ಣ ಅವರಿಗೆ ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂದು ಅಶೋಕ್‌ ನಾಯ್ಕ್‌ ವಾದ ಮಂಡಿಸಿದರು.

ಎಲೆಕ್ಷನ್‌ ಮುಗಿಯುವ ವಾರಕ್ಕೆ ಮುಂಚೆಯೇ ಫ್ಲೈಟ್‌ ಟಿಕೆಟ್‌ ಬುಕ್‌

ಒಂದು ಕಡೆ ಸಂತ್ರಸ್ತೆಯನ್ನು ಚುನಾವಣೆಗೆ ಮುಂಚೆಯೇ ಕರೆದೊಯ್ದಿರುತ್ತಾರೆ. ಇನ್ನೊಂದೆಡೆ ಎಲೆಕ್ಷನ್ ಮುಗಿಯೋದಕ್ಕೆ ಮುಂಚೆಯೇ ಫ್ಲೈಟ್ ಟಿಕೆಟ್‌ ಬುಕ್ ಆಗಿರುತ್ತದೆ. ಎಲೆಕ್ಷನ್ ಮುಗಿಯುವ ಒಂದು ವಾರ ಮೊದಲೇ ಟಿಕೆಟ್ ಬುಕಿಂಗ್ ಮಾಡಿದ್ದಾರೆ. ದೆಹಲಿಯ ಕಂಪನಿ ಮೂಲಕ ಫ್ಲೈಟ್ ಟಿಕೆಟ್ ಬುಕಿಂಗ್ ಆಗಿದೆ ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಕಿಡ್ನ್ಯಾಪ್ ಮಾಡಿದ ಬಳಿಕ ಸಂತ್ರಸ್ತೆಯನ್ನು ಅನೇಕ ಕಡೆಗೆ ಕರೆದೊಯ್ದಿದ್ದಾರೆ. ಈಗ ಆಕೆಯಿಂದ ಬಲವಂತವಾಗಿ ವಿಡಿಯೊ ಮೂಲಕ ಸ್ಪಷ್ಟನೆ ನೀಡಲಾಗಿದೆ. ಯಾರೂ ಕಿಡ್ನ್ಯಾಪ್ ಮಾಡಿಲ್ಲ ಅಂತ ಹೇಳಿಕೆಯ ಕೊಡಿಸಲು ಯತ್ನಿಸಿದ್ದಾರೆ. ಸಂತ್ರಸ್ತೆ ಮಹಿಳೆಯ ವಿಡಿಯೊ ಸ್ಪಷ್ಟನೆಯ ಸತ್ಯಾಸತ್ಯತೆ ಕುರಿತು ಪತ್ತೆ ಆಗಬೇಕು. ಕಿಡ್ನ್ಯಾಪ್ ಪ್ರಕರಣ ಸೇರಿದಂತೆ ಈ ಹಗರಣದಲ್ಲಿ ಹಲವು ಜನರು ಇದ್ದಾರೆ. ಎರಡು ದಿನಗಳಿಂದ ಕೆಲವರ ಬಂಧನ ಆಗಿದೆ. ಎಲ್ಲರೂ ಪ್ರಜ್ವಲ್‌ ರೇವಣ್ಣಗೆ ಗೊತ್ತಿರಬೇಕು ಅಂತ ಏನಿಲ್ಲ. ಬಂಧಿತ ಆರೋಪಿಗಳಿಂದ ಸಮಗ್ರ ಮಾಹಿತಿಯನ್ನು ಎಸ್‌ಐಟಿ ಕಲೆ ಹಾಕುತ್ತಿದೆ ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಸಮನ್ಸ್‌ ನೀಡಿದವರಿಗೆ ರೇವಣ್ಣರಿಂದ ಬೆದರಿಕೆ

ಮಾಜಿ ಸಚಿವ ಎಚ್.ಡಿ. ರೇವಣ್ಣ ಕುಟುಂಬಸ್ಥರು ಪ್ರಭಾವಸ್ಥರು, ಸಮನ್ಸ್ ನೀಡಿರುವ ತನಿಖಾಧಿಕಾರಿಗಳಿಗೇ ಎಚ್‌.ಡಿ. ರೇವಣ್ಣ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬೇಲ್ ಕೊಡಬಾರದು ಎಂದು ಎಸ್‌ಪಿಪಿ ಅಶೋಕ್ ನಾಯ್ಕ್‌ ವಾದ ಮಂಡಿಸಿದರು.

ಸಂತ್ರಸ್ತೆ ಹೇಳಿಕೆಯ ವಿಡಿಯೊ ವೈರಲ್‌ ಪ್ರಸ್ತಾಪ

ಸಂತ್ರಸ್ತೆ ವಿಡಿಯೊ ಹೇಳಿಕೆ ಭಾನುವಾರದಿಂದ ವೈರಲ್‌ ಆಗಿದೆ. ಈ ವಿಡಿಯೊವನ್ನು ಸಂತ್ರಸ್ತೆಗೆ ಹೆದರಿಸಿ ಮಾಡಲಾಗಿದೆ. ಈ ಬಗ್ಗೆ ಎಸ್ಐಟಿ ವಿಚಾರಣೆ ವೇಳೆ ಸಂತ್ರಸ್ತೆ ಹೇಳಿದ್ದಾರೆ. ತೋಟದ ಮನೆಯಲ್ಲಿ ಕೂಡಿ ಹಾಕಿದ್ದಾಗ ಸಂತ್ರಸ್ತೆಯ ವಿಡಿಯೊ ರೆಕಾರ್ಡ್ ಮಾಡಲಾಗಿದೆ. ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲವೆಂದು ಅವರಿಂದ ಹೇಳಿಸಿದ್ದಾರೆ ಎಂದು ಅಶೋಕ್‌ ನಾಯ್ಕ್‌ ಹೇಳಿದರು.

ಸಿ.ವಿ.ನಾಗೇಶ್ ವಾದ

ಇಬ್ಬರೂ ಎಸ್‌ಪಿಪಿಗಳ ವಾದ ಮಂಡನೆ ನಂತರ ಮತ್ತೆ ಸಿ.ವಿ. ನಾಗೇಶ್ ವಾದವನ್ನು ಆರಂಭಿಸಿದರು. ಏಪ್ರಿಲ್ 29ಕ್ಕೆ ಕಿಡ್ನ್ಯಾಪ್ ಮಾಡಿದರೆ, ದೂರು ಕೊಡಲು ತಡ ಯಾಕೆ ಮಾಡಿದರು? ಸಂತ್ರಸ್ತ ಮಹಿಳೆ ಎಚ್.ಡಿ.ರೇವಣ್ಣ ಅವರ ಸಂಬಂಧಿಯಾಗಿದ್ದಾರೆ. ಸುಮಾರು ವರ್ಷ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಕೆಲಸ ಮಾಡಿದ್ದವರನ್ನು ಯಾಕೆ ಕಿಡ್ನ್ಯಾಪ್ ಮಾಡಬೇಕು? ಮನೆ ಕೆಲಸ ಮಾಡುತ್ತಿದ್ದರಲ್ಲ, ಕರೆದುಕೊಂಡು ಬನ್ನಿ ಅಂದಿರಬಹುದು. ಇಲ್ಲಿ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ರೇವಣ್ಣ ಅರೆಸ್ಟ್ ಆದ ದಿನವೇ ಸಂತ್ರಸ್ತೆ ಮಹಿಳೆ ಹುಣಸೂರಿನಲ್ಲಿ ಪತ್ತೆಯಾಗಿದ್ದಾರೆ. ಮೈಸೂರಿನ ಹುಣಸೂರು ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಪತ್ತೆ ಆಗಿದ್ದರು. ಸಂತ್ರಸ್ತ ಮಹಿಳೆ ಪ್ರಜ್ವಲ್ ರೇವಣ್ಣ ವಿರುದ್ಧ ಮಾತ್ರ ಆರೋಪಿಸಿದ್ದಾರೆ. ರೇವಣ್ಣ ವಿರುದ್ಧ ಸಂತ್ರಸ್ತೆ ಮಹಿಳೆ ಯಾವುದೇ ಆರೋಪವನ್ನು ಮಾಡಿಲ್ಲ ಎಂದು ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರು.

ಸಂತ್ರಸ್ತ ಮಹಿಳೆಯಿಂದ ಪ್ರಜ್ವಲ್ ರೇವಣ್ಣ ವಿರುದ್ಧ ರೇಪ್ ಆರೋಪದ ಬಗ್ಗೆ ವಾದ ಮಂಡಿಸಿದ ಸಿ.ವಿ. ನಾಗೇಶ್‌, ಸಂತ್ರಸ್ತೆಯು ಸಿಆರ್‌ಪಿಸಿ 161 ಅಡಿಯಲ್ಲಿ ಹೇಳಿಕೆ ನೀಡುವಾಗ, ಕೇವಲ ಪ್ರಜ್ವಲ್‌ ವಿರುದ್ಧ ಅತ್ಯಾಚಾರ ಅಂತಾ ಆರೋಪ ಮಾಡಿದ್ದಾಳೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿ ಎರಡು ರಿಮ್ಯಾಂಡ್‌ ಅರ್ಜಿ ಸಲ್ಲಿಕೆಯಾಗಿದೆ. ಕಿಡ್ನ್ಯಾಪ್ ಮಾಡಿದ್ದಾರೆ ಅಂತಾ ಮಹಿಳೆಯ ಮಗನಿಗೆ ಹೇಗೆ ಗೊತ್ತಾಯ್ತು? ಅದು ಊಹೆಯಷ್ಟೇ. ಸಂತ್ರಸ್ತೆಯ ಮಗನಿಗೆ ಯಾರೂ ಕಾಲ್ ಮಾಡಿ ಡಿಮ್ಯಾಂಡ್ ಮಾಡಿಲ್ಲ. ಇನ್ನು ಸಂತ್ರಸ್ತ ಮಹಿಳೆಯನ್ನು ಅಂದು ಹುಣಸೂರಿನ ಬಳಿ ರಕ್ಷಣೆ ಮಾಡಲಾಗಿದೆ. ಆಪ್ತ ಸಮಾಲೋಚನೆ ಮಾಡಿ, ಆಕೆಯನ್ನು ಸುರಕ್ಷಿತ ಕೊಠಡಿಯಲ್ಲಿಡಲಾಗಿದೆ. ಈ ಪ್ರಕರಣ ಸಂಬಂಧ ಹೇಳಿಕೆ ದಾಖಲಿಸಿಲ್ಲ ಏಕೆ? ಇಲ್ಲಿಯ ತನಕ ರೇವಣ್ಣ ವಿರುದ್ಧ ಯಾವುದೇ ಸಾಕ್ಷಿಯನ್ನೂ ಸಂಗ್ರಹಿಸಿಲ್ಲ, ಸಂತ್ರಸ್ತೆಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಿಸಿಲ್ಲ. ಸಂತ್ರಸ್ತ ಮಹಿಳೆಯನ್ನು ಕೇವಲ ಆಪ್ತ ಸಮಾಲೋಚನೆಯಲ್ಲಿ ಇರಿಸಿದ್ದಾರೆ ಎಂದು ರೇವಣ್ಣ ಪರ ವಕೀಲ ಸಿ.ವಿ.ನಾಗೇಶ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಸಂತ್ರಸ್ತ ಮಹಿಳೆಯನ್ನು ಹುಣಸೂರಿನ ತೋಟದಿಂದ ರಕ್ಷಣೆ ಮಾಡಿದರಾ? ಎಸ್‌ಐಟಿ ಎಲ್ಲಿಂದ ಮಹಿಳೆಯನ್ನು ಕರೆತಂದರು? ಅವರ ಸಂಬಂಧಿಕರ ಮನೆಯಿಂದ ಸಂತ್ರಸ್ತೆಯನ್ನು ಕರೆ ತಂದಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಎರಡು ಕಡೆ ರೆಕಾರ್ಡ್ ಆಗಿದೆ. ಒಂದು ಕಡೆ ಫೋಟೋ ಶಾಪ್‌ವೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೊಂದು ಕಡೆ ತರಕಾರಿ ಅಂಗಡಿ ಸಿಸಿ ಕ್ಯಾಮರಾದಲ್ಲಿ ಇದು ಸೆರೆಯಾಗಿದೆ. ಅನುಮತಿ ನೀಡಿದರೆ ಸೆರೆಯಾಗಿರುವ ದೃಶ್ಯವನ್ನು ತೋರಿಸಲು ನಾವು ಸಿದ್ಧ. ಈಗ ನ್ಯಾಯಾಲಯದಲ್ಲಿಯೇ ಪ್ಲೇ ಮಾಡುತ್ತೇವೆ. ಸ್ಪೆಷಲ್ ಇನ್‌ವೆಸ್ಟಿಗೇಷನ್ ಟೀಮ್ ವಿರುದ್ಧವೇ ಸಿ.ವಿ. ನಾಗೇಶ್ ಆರೋಪಿಸಿದರು.

ಕಿಡ್ನ್ಯಾಪ್ ಪ್ರಕರಣದಲ್ಲಿ ಎಸ್‌ಐಟಿಯವರೇ ಟ್ಯಾಂಪರಿಂಗ್ ಮಾಡುತ್ತಿದ್ದಾರೆ. ಆದರೆ, ಎಸ್‌ಪಿಪಿಯವರು ಸಂತ್ರಸ್ತೆ ಹೇಳಿಕೆಯನ್ನು ಟ್ಯಾಂಪರಿಂಗ್ ಆಗಿದೆ ಎಂದು ಹೇಳಿದ್ದಾರೆ. ವೈರಲ್ ಆದ ಸ್ಪಷ್ಟನೆ ವಿಡಿಯೊದಲ್ಲಿ ಸಂತ್ರಸ್ತೆಯೇ ಹೇಳಿಕೊಂಡಿದ್ದಾರೆ. ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲವೆಂದಿದ್ದಾರೆ. ನಮ್ಮ ಕುಟುಂಬಕ್ಕೆ ತೊಂದರೆಯಾದರೆ ಅವರೇ ಹೊಣೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಂಬಂಧಿಕರ ಮನೆಯಲ್ಲಿದ್ದೇನೆ. ಬೇಗ ಬರುತ್ತೇನೆ ಎಂದೂ ಹೇಳಿದ್ದಾರೆ. ಯಾರೂ ಬೆದರಿಕೆ ಹಾಕಿಲ್ಲ, ಬಲವಂತವಾಗಿಯೂ ಕರೆದೊಯ್ದಿಲ್ಲ ಎಂದು ಹೇಳಿಕೊಂಡಿದ್ದಾರೆ. ಹೀಗೆಲ್ಲಾ ಸಂತ್ರಸ್ತೆಯೇ ವಿಡಿಯೊ ಮೂಲಕ ಹೇಳಿದ್ದಾರೆ. ಹಾಗಾಗಿ ಕಿಡ್ನ್ಯಾಪ್ ಹೇಗೆ ಆಗುತ್ತದೆ. ಈ ಕಾರಣಕ್ಕಾಗಿ ರೇವಣ್ಣ ಅವರಿಗೆ ಜಾಮೀನು ನೀಡಬೇಕು ಎಂದು ಸಿ.ವಿ. ನಾಗೇಶ್‌ ಕೋರಿದರು.

ಕಿಡ್ನ್ಯಾಪ್ ಪ್ರಕರಣದಲ್ಲಿ ಚುನಾವಣಾ ತಕರಾರು ಅರ್ಜಿ ತರುವುದು ಬೇಡ. ಎಸ್‌ಪಿಪಿ ವಾದದ ಅಂಶಗಳನ್ನು ಆಕ್ಷೇಪಿಸಿ ರೇವಣ್ಣ ಪರ ವಕೀಲರು ವಾದ ಮಂಡಿಸಿದರು. ಎಚ್.ಡಿ.ರೇವಣ್ಣ ವಿರುದ್ಧ ಕೇಳಿಬಂದಿರುವ ಆರೋಪಗಳು ಸಾಬೀತಾಗಿಲ್ಲ. ಹಿಂದಿನ ಕೇಸ್‌ಗಳು ಸಾಬೀತಾಗಿದ್ದರೆ ಯಾಕೆ ಎಲ್ಲವೂ ಬಿ ರಿಪೋರ್ಟ್ ಆಗುತ್ತಿತ್ತು? ಎಂದು ಪ್ರಶ್ನೆ ಮಾಡಿದರು.

ರಿಮ್ಯಾಂಡ್‌ ಅಪ್ಲಿಕೇಷನ್‌ನಲ್ಲಿ ಎಸ್‌ಐಟಿ ಲೋಪವೆಸಗಿದೆ. ಅದರಲ್ಲಿ ಸಂತ್ರಸ್ತೆಯ ಹೇಳಿಕೆ ಒಂದು ಪ್ಯಾರಾ ಇದೆ. ಅದು ಬಿಟ್ಟು ರಿಮ್ಯಾಂಡ್‌ ಅಪ್ಲಿಕೇಷನ್‌ನಲ್ಲಿ ಆರೋಪಿ ಹೇಳಿಕೆಯೇ ಇದೆ. ಸಂತ್ರಸ್ತ ಮಹಿಳೆಯ ಹೇಳಿಕೆ ಒಂದು ಪ್ಯಾರಾ ಬಿಟ್ಟರೆ ಬೇರೆ ಇಲ್ಲವೇ ಇಲ್ಲ. ಯಾವಾಗಲೂ ಹೇಳಿಕೆ ದಾಖಲು ಮಾಡಿಕೊಳ್ಳುವುದೇ ಎಸ್‌ಐಟಿ ಕೆಲಸನಾ? ಸಂತ್ರಸ್ತೆ ಏನು ಹೇಳ್ತಾರೆ? ಏನು ಹೇಳಲ್ಲ ಅಂತಾ ಹೇಳಿಕೆ ದಾಖಲಾಗಬೇಕು. ಆಕೆ ಎಸ್‌ಐಟಿ ಸುಪರ್ದಿಯಲ್ಲಿರುವಾಗ ಏನನ್ನೂ ಮಾಡಿಲ್ಲ. ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿರುವಂತೆ ಯಾವುದೇ ಸಾಕ್ಷಿ ಸಂಗ್ರಹಿಸಿಲ್ಲ. ಆದರೆ, ನ್ಯಾಯಾಲಯಕ್ಕೆ ಎಸ್ಐಟಿ ರಿಮ್ಯಾಂಡ್ ಅಪ್ಲಿಕೇಷನ್ ಸಲ್ಲಿಸಿದ್ದಾರೆ ಎಂದು ನಾಗೇಶ್ ಹೇಳಿದರು.

ಕಾಯ್ದೆ ಬಗ್ಗೆ ವಕೀಲರ ಆಕ್ಷೇಪ

ಸಂತ್ರಸ್ತೆ ಮೇಲೆ ಯಾವುದಾದರೂ ರೀತಿ ಹಲ್ಲೆ, ಬೆದರಿಕೆ ಇರಬೇಕು. ಆಗ ಮಾತ್ರ ಐಪಿಸಿ ಸೆಕ್ಷನ್‌ 364ಎ ಕಾಯ್ದೆ ಅನ್ವಯ ಆಗುತ್ತದಲ್ಲವೇ? ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತ್ರಸ್ತೆ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಹಾಗಾದರೆ ರೇವಣ್ಣ ವಿರುದ್ಧ ಸೆಕ್ಷನ್‌ 364ಎ ಹೇಗೆ ಅನ್ವಯ ಆಗುತ್ತದೆ? ಎಂದು ಸರ್ಕಾರದ ವಿಶೇಷ ಅಭಿಯೋಜಕರ (SPP) ವಾದಕ್ಕೆ ವಕೀಲ ಸಿ.ವಿ. ನಾಗೇಶ್ ಪ್ರತಿವಾದವನ್ನು ಮಂಡಿಸಿದರು.

ಕೊನೇ ಪಕ್ಷ ಸಂತ್ರಸ್ತೆಯ ಕುಟುಂಬದವರ ಮೇಲೂ ಹಲ್ಲೆ ನಡೆದಿಲ್ಲ. ಆರೋಪಿ ಸ್ಥಾನದಲ್ಲಿರುವ ರೇವಣ್ಣ ಯಾರ ಮೇಲೆಯೂ ಹಲ್ಲೆ ಮಾಡಿಲ್ಲ. ಆದರೂ ಕಿಡ್ನ್ಯಾಪ್ ಪ್ರಕರಣದಲ್ಲಿ ಸೆಕ್ಷನ್‌ 364ಎ ಹಾಕಿದ್ದು ಯಾಕೆ? ಈ ಸೆಕ್ಷನ್ ಹಾಕುವ ಪ್ರಮೇಯವೇ ಕಾಣುತ್ತಿಲ್ಲ. ಘಟನೆ ನಡೆದ ದಿನಕ್ಕೂ ಕೇಸ್ ದಾಖಲಾದ ದಿನಕ್ಕೂ ಅಂತರ ಇದೆ. ನಿಜವಾಗಿಯೂ ಕಿಡ್ನ್ಯಾಪ್ ಆಗಿದ್ದರೆ ಅಲ್ಲಿ ಡಿಮ್ಯಾಂಡ್ ಇರಬೇಕು. ಆದರೆ, ಬಲವಂತದ ಕಿಡ್ನ್ಯಾಪ್ ಆಗಿಲ್ಲ, ಯಾವುದೇ ಬೇಡಿಕೆ ಇಲ್ಲ ಎಂದು ವಾದಿಸಿದ ನಾಗೇಶ್‌, 364 ಎ ಸಂಬಂಧ ಹಲವು ಕೇಸ್‌ ಸ್ಟಡಿಗಳನ್ನು ಉಲ್ಲೇಖಿಸಿದರು. ಜಾರ್ಖಂಡ್ ಹೈಕೋರ್ಟ್‌ನ ರೋಹಿಣಿ ದೇವಿ ಪ್ರಕರಣವನ್ನು ಉಲ್ಲೇಖಿಸಿದರು.

ಈ ವೇಳೆ ತಮ್ಮ ಹಿಂದಿನ ವಾದಕ್ಕೆ ಕರೆಕ್ಷನ್ ಮಾಡಿಕೊಂಡ ವಕೀಲ ನಾಗೇಶ್, ಕಿಡ್ನ್ಯಾಪ್ ಸಂತ್ರಸ್ತೆ ರೇವಣ್ಣ ಅವರ ಸಂಬಂಧಿ ಅಲ್ಲ. ಮೊದಲು ಕೇಸ್ ದಾಖಲಿಸಿದ್ದ ಮಹಿಳೆ ಮಾತ್ರ ರೇವಣ್ಣರ ಸಂಬಂಧಿ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಕೇಸ್‌ನಲ್ಲಿನ ಸಂತ್ರಸ್ತೆ ಅಲ್ಲ. ಯಾರನ್ನಾದರೂ ಅಪಹರಿಸಿ, ಒತ್ತೆಯಾಳಾಗಿಟ್ಟುಕೊಂಡಲ್ಲಿ ಮಾತ್ರ ಸೆಕ್ಷನ್‌ 364ಎ ಆಗಬೇಕು. ಇಲ್ಲವಾದಲ್ಲಿ ಈ ರೀತಿ ಪ್ರಕರಣದಲ್ಲಿ ಸೆಕ್ಷನ್ 364ಎ ಸೆಕ್ಷನ್‌ ಹಾಕುವ ಅಗತ್ಯ ಇರಲ್ಲ. ಒತ್ತೆಯಾಳಾಗಿ ಇರಿಸಿಕೊಂಡು ದೌರ್ಜನ್ಯ ನಡೆಸಿ, ಕಿರುಕುಳ ನೀಡಿದರೆ ಅಪರಾಧ. ಪ್ರಾಣ ಹಾನಿ ಆಗುವಂತೆ ಹಲ್ಲೆ ಮಾಡುವುದು ಮಾತ್ರ ಅಪರಾಧ. ಇನ್ನು ವಿದೇಶದಲ್ಲಿರುವ ವ್ಯಕ್ತಿ ಕಿಡ್ನ್ಯಾಪ್ ಮಾಡಿಸಿದರೆ ಆಗ ಸೆಕ್ಷನ್‌ 365ಎ ಅನ್ವಯ ಆಗುತ್ತದೆ.
ಆದರೆ, ಈ ಕೆ.ಆರ್.ನಗರ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ 365ಎ ಅನ್ವಯ ಆಗಲ್ಲ. ಸಂತ್ರಸ್ತ ಮಹಿಳೆ ಎಚ್.ಡಿ. ರೇವಣ್ಣ ಅವರ ಮನೆಯಲ್ಲಿ 10 ವರ್ಷ ಕೆಲಸ ಮಾಡಿದ್ದಾರೆ. ಸಂತ್ರಸ್ತ ಮಹಿಳೆಯನ್ನು ಈ ಪ್ರಕರಣದಲ್ಲಿ ಕಿಡ್ನ್ಯಾಪ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ರೇವಣ್ಣ ವಿರುದ್ಧ ಬಲವಾದ ಸಾಕ್ಷಿಗಳೇ ಇಲ್ಲ

ಕಿಡ್ನ್ಯಾಪ್ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ವಿರುದ್ಧ ಬಲವಾದ ಸಾಕ್ಷಿಗಳೇ ಇಲ್ಲ. ಆದರೂ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆಯಾಗುವ ಸೆಕ್ಷನ್‌ಗಳನ್ನು ಹಾಕಲಾಗಿದೆ. ಏನೇ ಆದರೂ ಈ ರೀತಿ ಪ್ರಕರಣದಲ್ಲಿ ಬೇಲ್ ಯಾಕೆ ನೀಡಬಾರದು? ಎಂದು ಕೆಲವು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಕೇಸ್ ಸ್ಟಡಿಗಳನ್ನು ಉಲ್ಲೇಖಿಸಿದರು. ಇನ್ನು ರೇವಣ್ಣ ವಿರುದ್ಧ ಪ್ರೈಮಾಫೇಸಿ ಸಾಬೀತಾಗುವ ಯಾವುದೇ ಆರೋಪವೂ ಇಲ್ಲ. ತಮಗೆ ಗೊತ್ತಿರುವವರನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡರೆ ತಪ್ಪೇನು? ಸಂತ್ರಸ್ತೆಯನ್ನು ಭವಾನಿ ರೇವಣ್ಣ ಮನೆಗೆ ಕರೆಸಿಕೊಂಡ ಕ್ರಮಕ್ಕೆ ಸಮರ್ಥನೆ ಮಾಡಿದರು.

ಸಂತ್ರಸ್ತ ಮಹಿಳೆಯನ್ನು ರಕ್ಷಿಸಿ 6 ದಿನವಾದರೂ ಸೂಕ್ತ ರೀತಿ ಹೇಳಿಕೆ ಪಡೆದಿಲ್ಲ. ಟ್ಯೂಷನ್‌ಗೆ ಹೋಗಿದ್ದ ಬಾಲಕನ ಕಿಡ್ನ್ಯಾಪ್ ಪ್ರಕರಣವನ್ನು ಇದೇ ವೇಳೆ ಉಲ್ಲೇಖಿಸಿದರು. ನಿಮ್ಮ ತಂದೆಗೆ ಅಪಘಾತವಾಗಿದೆ, ಆಸ್ಪತ್ರೆಯಲ್ಲಿದ್ದಾರೆಂದು ಹೇಳಿ ಅಪಹರಿಸಿದ್ದಾರೆ. ಬಾಲಕನನ್ನು ಅಪಹರಿಸಿದ ಬಳಿಕ ತಂದೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪೊಲೀಸರಿಗೆ ಎಲ್ಲಿಯೂ ಹೇಳದಂತೆ ಬೆದರಿಕೆಯನ್ನು ಹಾಕಿದ್ದರು. ಆದರೆ, ಎಚ್.ಡಿ.ರೇವಣ್ಣ ಪ್ರಕರಣದಲ್ಲಿ ಯಾವುದೇ ರೀತಿ ಬೆದರಿಕೆ, ಬೇಡಿಕೆ ಇಲ್ಲ. ಹಾಗಾಗಿ ಎಚ್.ಡಿ.ರೇವಣ್ಣ ಅವರಿಗೆ ಇದು ಜಾಮೀನು ನೀಡಬಹುದಾದ ಪ್ರಕರಣವಾಗಿದೆ ಎಂದು ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದರು.

ತುಮಕೂರು ಕಿಡ್ನ್ಯಾಪ್‌ ಕೇಸ್‌ ಉಲ್ಲೇಖ

ಇದೇ ವೇಳೆ ತುಮಕೂರಿನ ಕಿಡ್ನ್ಯಾಪ್ ಪ್ರಕರಣವೊಂದನ್ನು ಉಲ್ಲೇಖಿಸಿ ನಾಗೇಶ್ ವಾದ ಮಾಡಿದ್ದಾರೆ. ಎಸ್‌. ರಮೇಶ್ ವರ್ಸಸ್‌ ಸ್ಟೇಟ್ ಆಫ್ ಕರ್ನಾಟಕ ಪ್ರಕರಣದ ತೀರ್ಪು ಉಲ್ಲೇಖ ಮಾಡಿದ ನಾಗೇಶ್‌, ಕಾನೂನುಬಾಹಿರವಾಗಿ ಒತ್ತೆಯಾಳಾಗಿ ಇರಿಸಿಕೊಂಡರೇ ಮಾತ್ರ ಅಪರಾಧ. ಆದರೆ, ಕೆ.ಆರ್.ನಗರ ಕಿಡ್ನ್ಯಾಪ್ ಪ್ರಕರಣದಲ್ಲಿ ಈ ರೀತಿ ಬೆದರಿಕೆ ಪ್ರಶ್ನೆ ಇಲ್ಲ. ಆರೋಪಿ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸುವ ಅಪರಾಧ ಇದ್ದರೆ ಬೇಲ್‌ ಬೇಡ. ಆಗ ಮಾತ್ರ ನ್ಯಾಯಾಲಯ ರೇವಣ್ಣರಿಗೆ ಜಾಮೀನು ತಿರಸ್ಕರಿಸುವ ಅವಕಾಶ ಇದೆ. ಆದರೆ, ಇಲ್ಲಿ ರೇವಣ್ಣ ವಿರುದ್ಧ ಯಾವುದೇ ರೀತಿಯ ಸಾಕ್ಷಿಗಳೇ ಕಾಣುತ್ತಿಲ್ಲ. ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವ ಅಪರಾಧ ಕಾಣುತ್ತಿಲ್ಲ. ಎಸ್‌ಐಟಿ ಸಲ್ಲಿಸಿದ ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಸಿಆರ್‌ಪಿಸಿ 164 ಹೇಳಿಕೆ ದಾಖಲಿಸಿಲ್ಲ. ಆದರೂ ಜೀವಾವಧಿ ಶಿಕ್ಷೆ ನೀಡುವ ಅವಕಾಶ ಇರುವ ಸೆಕ್ಷನ್‌ 364ಎ ಹಾಕಿದ್ದಾರೆ. ಆರೋಪಿತ ರೇವಣ್ಣ ವಿರುದ್ಧ ಸಾಕ್ಷಿಗಳೂ ಇಲ್ಲ, ಸಾಂದರ್ಭಿಕ ಸಾಕ್ಷ್ಯವೂ ಇಲ್ಲ ಎಂದು ನಾಗೇಶ್‌ ಮಾಹಿತಿ ನೀಡಿದರು.

ತೀರ್ಪಿನ ಪ್ರತಿಗಾಗಿ ವಾದ – ಪ್ರತಿವಾದ

ಎಸ್‌ಐಟಿ ಉಲ್ಲೇಖಿಸಿದ ತೀರ್ಪುಗಳಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಲಾಗಿತ್ತು ಆದರೆ ರೇವಣ್ಣ ಪ್ರಕರಣದಲ್ಲಿ ಬೆದರಿಕೆ ಎಲ್ಲಿ ಹಾಕಿದ್ದಾರೆ? ಯಾವ ಬೇಡಿಕೆ ಇದೆ..? ಎಸ್‌ಐಟಿ ಕೇಸ್‌ ಸ್ಟಡಿಗೆ ಕೌಂಟರ್ ಕೊಟ್ಟು ರೇವಣ್ಣ ಪರ ವಕೀಲ ನಾಗೇಶ್ ವಾದ ಮಂಡಿಸುತ್ತಾ, ಕೆ.ಆರ್.ನಗರ ಕಿಡ್ನ್ಯಾಪ್ ಕೇಸಲ್ಲಿ 364ಎ ಹಾಕಲು ಬೇಕಾದ ಬೇಸಿಕ್ ಅಂಶಗಳಿಲ್ಲ ಎಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿದರು. ಆದರೆ ಆ ಎಲ್ಲಾ ಪ್ರಕರಣಗಳಲ್ಲಿ ಬೆದರಿಕೆವೊಡ್ಡಿ ಹಣಕ್ಕಾಗಿ ಬೇಡಿಕೆ ಇರಿಸಲಾಗಿತ್ತು. ಇಲ್ಲಿ ದಾಖಲಾದ ಕಿಡ್ನ್ಯಾಪ್ ಪ್ರಕರಣದಲ್ಲಿ ರೇವಣ್ಣ ವಿರುದ್ಧ ಆ ಆರೋಪಗಳಿಲ್ಲ ಎಂದು ವಾದಿಸಿದರು.

ಆಗ ಮಧ್ಯ ಪ್ರವೇಶ ಮಾಡಿದ ಜಯ್ನಾ ಕೊಠಾರಿ, ನೀವು ಉಲ್ಲೇಖಿಸುತ್ತಿರುವ ಪ್ರಕರಣಗಳ ತೀರ್ಪಿನ ಪ್ರತಿ ಕೊಡಿ ಎಂದು ಕೋರಿದರು. ಈ ನಡುವೆ ಎಸ್‌ಪಿಪಿ ಜಯ್ನಾ ಕೊಠಾರಿ ಹಾಗೂ ರೇವಣ್ಣ ವಕೀಲರ ಮಧ್ಯೆ ವಾದ ಪ್ರತಿವಾದ ನಡೆಯಿತು. ನೀವು ಕೇಳಿದ ಕೂಡಲೇ ಕೊಡಬೇಕು ಅಂತೇನಿಲ್ಲ ಎಂದು ಸಿ.ವಿ.ನಾಗೇಶ್ ಹೇಳಿದರು. ವರದಿಯಾಗಿರುವ ಪ್ರಕರಣಗಳನ್ನು ನೀವು ಓದಿಕೊಂಡಿರಬೇಕು ಎಂದು ನಾಗೇಶ್ ಕುಟುಕಿದರು. ಆದರೆ, ಯಾವ ಕೇಸ್ ಸ್ಟಡಿ ಉಲ್ಲೇಖಿಸುತ್ತೀರೋ ಅದರ ಪ್ರತಿಯನ್ನು ಕೊಡಿ ಎಂದು ಒತ್ತಾಯಿಸಿದರು.

ರೇವಣ್ಣ ವಿರುದ್ಧ ಆರೋಪಗಳೆಲ್ಲಾ ಊಹಾಪೋಹ, ರಾಜಕೀಯ ಪ್ರೇರಿತ. ಈ ರೀತಿಯಲ್ಲಿ ಆಧಾರರಹಿತ ಆರೋಪಗಳನ್ನು ಪರಿಗಣಿಸಬಾರದು. ರೇವಣ್ಣ 6 ಸಲ ಎಂಎಲ್‌ಎ ಆಗಿದ್ದವರು, ಕಾನೂನಿಗೆ ಸದಾ ತಲೆಬಾಗುತ್ತಾರೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಿ ಎಂದು ವಾದವನ್ನು ನಾಗೇಶ್‌ ಮುಕ್ತಾಯಗೊಳಿಸಿದರು.

ಇದನ್ನೂ ಓದಿ: Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

ಮತ್ತೆ ಎಸ್‌ಪಿಪಿ ವಾದಕ್ಕೆ ಜಡ್ಜ್‌ ಅವಕಾಶ

ಸಿ.ವಿ.ನಾಗೇಶ್ ಪ್ರತಿವಾದಕ್ಕೆ ಮತ್ತೆ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆಗೆ ಪ್ರಾರಂಭ ಮಾಡಿದರು. ಆಗ ಮಧ್ಯ ಪ್ರವೇಶ ಮಾಡಿದ ನ್ಯಾಯಾಧೀಶರು, ಮತ್ತೆ ಪ್ರತಿವಾದಕ್ಕೆ ಅವಕಾಶ ಇದೆಯೇ ಎಂದು ಪ್ರಶ್ನೆ ಮಾಡಿದರು. ಆಗ ಜಯ್ನಾ ಕೊಠಾರಿ, ಅವಕಾಶ ಇಲ್ಲ. ಆದರೆ, 5 ನಿಮಿಷ ಕಾಲಾವಕಾಶ ಕೊಡಿ ಎಂದು ಕೇಳಿಕೊಂಡರು. ಜಯ್ನಾ ಕೊಠಾರಿ ಮತ್ತೆ ವಾದ ಮಾಡಲು ನಾಗೇಶ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ, ಮತ್ತೆ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆಗೆ ಜಡ್ಜ್‌ ಅವಕಾಶ ನೀಡಿದರು. ಅಲ್ಲದೆ, ಎರಡೂ ರಿಮ್ಯಾಂಡ್ ಅಪ್ಲಿಕೇಷನ್ ಓದಲು ಹೇಳಿದರು.

ಮೇ 4ರಂದು ಸಂತ್ರಸ್ತೆ ರಕ್ಷಣೆ ಹಾಗೂ ಮೇ 5ರಂದೇ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಮೇ 5ರಂದೇ ಸಿಆರ್‌ಪಿಸಿ 161 ಅಡಿಯಲ್ಲಿ ಎಸ್‌ಐಟಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಜಯ್ನಾ ಕೊಠಾರಿ ಹೇಳಿದರು. ಆಗ ಮಧ್ಯಪ್ರವೇಶ ಮಾಡಿದ ನ್ಯಾಯಾಧೀಶರು, ಹೇಳಿಕೆ ದಾಖಲಿಸಿಕೊಂಡ ಬಗ್ಗೆ ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಇದೆಯಾ? ರಿಮ್ಯಾಂಡ್ ಅಪ್ಲಿಕೇಷನ್‌ನಲ್ಲಿ ಎಲ್ಲಿ ಇದೆ ಓದಿ ಹೇಳಿ ಎಂದು ಕೇಳಿದರು. ಈ ವೇಳೆ ಎಸ್‌ಪಿಪಿಗೆ ಮಾಹಿತಿ ನೀಡುತ್ತಿದ್ದ ಎಸ್‌ಐಟಿ ಪೊಲೀಸರ ವಿರುದ್ಧ ಜಡ್ಜ್ ಗರಂ ಆದರು. ನಿಮಗೆ ಎಲ್ಲಿ ಬಂದು ಇನ್ಸ್‌ಟ್ರಕ್ಷನ್‌ ಕೊಡಬೇಕು ಅಂತಾ ಗೊತ್ತಾಗಲ್ವಾ? ಕೋರ್ಟ್‌ನಲ್ಲಾ ಬಂದು ಇನ್ಸ್‌ಟ್ರಕ್ಷನ್‌ ಕೊಡೋದು? ಎಂದು ಕೇಳಿದರು.

ಮತ್ತೆ ಲಿಖಿತ ವಾದ ಮಂಡಿಸಲು ಎಸ್‌ಪಿಪಿ ಜಯ್ನಾ ಕೊಠಾರಿ ಮನವಿ ಮಾಡಿದರು. ಆದಕ್ಕೆ ಪ್ರತಿಕ್ರಿಯಿಸಿದ ಜಡ್ಜ್ ಲಿಖಿತ ವಾದ ಇನ್ಯಾವಾಗ ಮಾಡ್ತೀರಾ? ನಾನು ಆದೇಶ ಪ್ರಕಟಿಸಲಿದ್ದೇನೆ ಎಂದು ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಹೇಳಿದರು.

Continue Reading
Advertisement
Prajwal Revanna Case Revanna bail plea SPP wants a copy of the court verdict Nagesh said you have to read it yourself
ಕ್ರೈಂ18 mins ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಕೋರ್ಟ್‌ ತೀರ್ಪಿನ ಪ್ರತಿ ಬೇಕೆಂದ SPP; ನೀವೇ ಓದ್ಕೋಬೇಕು ಅಂದ್ರು ನಾಗೇಶ್‌!

Moringa Leaves Health Benefits
ಆರೋಗ್ಯ24 mins ago

Moringa Leaves Health Benefits: ನುಗ್ಗೆ ಸೊಪ್ಪು ಏಕೆ ತಿನ್ನಬೇಕು? ಏನಿದೆ ಇದರಲ್ಲಿ ವಿಶೇಷ ಗುಣ?

Prajwal Revanna Case
ರಾಜಕೀಯ25 mins ago

Prajwal Revanna Case: ದೇವರಾಜೇಗೌಡ 3 ದಿನ ಪೊಲೀಸ್ ಕಸ್ಟಡಿಗೆ; ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ನ 3 ಆರೋಪಿಗಳಿಗೆ ನ್ಯಾಯಾಂಗ ಬಂಧನ

Karnataka Weather Forecast
ಮಳೆ34 mins ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Overweight man suffering from chest pain, high blood pressure, cholesterol level
ಆರೋಗ್ಯ38 mins ago

Health Tips Kannada: ಅನಾರೋಗ್ಯದ ಮೂಲ ಕೊಲೆಸ್ಟ್ರಾಲ್‌ ತಗ್ಗಿಸಬೇಕೆ? ಬೆಳಗ್ಗೆ ಈ ಪೇಯ ಕುಡಿಯಿರಿ

Prajwal Revanna Case HD Revanna bail plea arguments and counter arguments
ಕ್ರೈಂ45 mins ago

Prajwal Revanna Case: ಎಚ್‌.ಡಿ. ರೇವಣ್ಣ ಜಾಮೀನು ಅರ್ಜಿಯ ರೋಚಕ ವಾದ – ಪ್ರತಿವಾದ; ಇಲ್ಲಿದೆ ಇಂಚಿಂಚು ಡಿಟೇಲ್ಸ್‌

IPL 2024
ಪ್ರಮುಖ ಸುದ್ದಿ48 mins ago

IPL 2024 : ಡೆಲ್ಲಿ ವಿರುದ್ದ ಗೆದ್ದ ಆರ್​ಸಿಬಿ ತಂಡದ ಸಂಭ್ರಮ ಹೀಗಿತ್ತು, ಇಲ್ಲಿದೆ ವಿಡಿಯೊ

Modi Roadshow Live
ದೇಶ53 mins ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Viral Video
ದೇಶ57 mins ago

Viral Video: ಜೊತೆಗಿದ್ದ ಬೆಂಬಲಿಗನನ್ನೇ ವೇದಿಕೆಯಿಂದ ತಳ್ಳಿದ ಲಾಲೂ ಪುತ್ರ; ಎಲ್ಲೆಡೆ ಭಾರೀ ಖಂಡನೆ

Naxals
ದೇಶ1 hour ago

Naxals: ಮತ್ತೆ ಮೂವರು ನಕ್ಸಲರ ಹತ್ಯೆ, ಎನ್‌ಕೌಂಟರ್‌ನಲ್ಲಿ ಈ ವರ್ಷ ಶತಕ ಬಾರಿಸಿದ ಭದ್ರತಾ ಸಿಬ್ಬಂದಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ34 mins ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ53 mins ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ12 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ13 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ24 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ1 day ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

ಟ್ರೆಂಡಿಂಗ್‌