Site icon Vistara News

Bomb Blast : ಕಾಡುಹಂದಿಗೆ ಬಾಂಬಿಟ್ಟ ಪ್ರಕರಣ; ಚೆಂಡಿಯಾದಲ್ಲಿ ಮತ್ತೊಂದು ಜೀವಂತ ಬಾಂಬ್‌ ಪತ್ತೆ!

Another live bomb found in karwar

ಕಾರವಾರ: ಜನರ ಜತೆಗೆ ಆತ್ಮೀಯವಾಗಿದ್ದ ಕಾಡುಹಂದಿಯೊಂದನ್ನು ದುಷ್ಟರು ನಾಡ ಬಾಂಬಿಟ್ಟು (Bomb Blast) ಕೊಲೆ ಮಾಡಿದ ಘಟನೆ ಆಗಸ್ಟ್‌ 4ರ ರಾತ್ರಿ ನಡೆದಿತ್ತು. ಕಾಡುಹಂದಿ ಬೇಟೆಗಾಗಿ (Hunting wild boar) ಬಾಂಬ್ ಇರಿಸಿದ್ದ ಅಮದಳ್ಳಿ ಮೂಲದ ಸೀಫ್ರನ್ ಥಾಮಸ್‌ ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ವಿಚಾರಣೆಯನ್ನು ನಡೆಸುತ್ತಿತ್ತು. ಈ ವೇಳೆ ಬಾಂಬ್‌ ಸ್ಫೋಟಗೊಂಡ ಸ್ಥಳದಲ್ಲೇ ಮತ್ತೊಂದು ಜೀವಂತ ಬಾಂಬ್‌ ಭಾನುವಾರ ಪತ್ತೆ ಆಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಮಂಗಳೂರಿನಿಂದ ಬಂದಿದ್ದ ತಂಡ ಬಾಂಬ್‌ ನಿಷ್ಕ್ರಿಯಗೊಳಿಸಿದೆ. ಕಾರವಾರದ ಚೆಂಡಿಯಾ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಸ್ಮಶಾನಕ್ಕೆ ಹೋಗುವ ಮಾರ್ಗದ ಬಳಿ ಮತ್ತೊಂದು ನಾಡಬಾಂಬ್ ಪತ್ತೆ ಆಗಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಾಂಬ್ ಇರುವ ಪ್ರದೇಶದ ಬಳಿ ಜನಸಂಚಾರವನ್ನು ಬಂದ್ ಮಾಡಿದ್ದರು. ಬಾಂಬ್‌ ಮೇಲೆ ಟಯರ್ ಇಟ್ಟು ಸುತ್ತ ಬ್ಯಾರಿಕೇಡ್ ಅಳವಡಿಸಿದ್ದರು. ಜೀವಂತ ಬಾಂಬ್ ನಾಶಗೊಳಿಸಲು ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ತಂಡ ಆಗಮಿಸಿತ್ತು. ಬಾಂಬ್ ನಿಷ್ಕ್ರಿಯ ತಂಡವು ಜೀವಂತ ಬಾಂಬ್ ಸ್ಪೋಟಿಸಿ ನಾಶಗೊಳಿಸಿದ್ದಾರೆ.

ನಾಡಬಾಂಬ್‌ ಇಟ್ಟ ಆರೋಪಿಯ ಬಂಧನ

ಏನಿದು ಪ್ರಕರಣ?

ಸಾಮಾನ್ಯವಾಗಿ ಕಾಡ ಹಂದಿ ಎಂದರೆ ಜನರಿಗೆ ತೊಂದರೆ ಕೊಡುವುದೇ ಹೆಚ್ಚು. ನೆಟ್ಟು ಬೆಳೆಸಿದ ಗಡ್ಡೆ, ಗೆಣಸುಗಳನ್ನು ಹಾಳು ಮಾಡುವುದು, ಕಂಡ ಕಂಡವರ ಮೇಲೆ ದಾಳಿ ಮಾಡುವುದು ಸಾಮಾನ್ಯ. ಕೆಲವೊಂದು ಹಂದಿಗಳು ಮನುಷ್ಯರನ್ನು ಕಂಡರೆ ಓಡುತ್ತವೆ. ಆದರೆ, ಇಲ್ಲೊಂದು ಕಾಡ ಹಂದಿ ಮನುಷ್ಯರ ಜತೆ ಆತ್ಮೀಯ ಒಡನಾಟ ಹೊಂದಿ (good relationship with villagers), ಪ್ರೀತಿಯ ಬದುಕು ಕಟ್ಟಿಕೊಂಡಿತ್ತು. ಯಾರಿಗೂ ತೊಂದರೆ ಮಾಡದ ಈ ಹಂದಿಯ ಬಗ್ಗೆ ಜನರಿಗೂ ದೈವಿಕ ಭಾವನೆ ಇತ್ತು.

Wild boar killed

ಆದರೆ, ಆ ಜನರ ಪ್ರೀತಿಯ ಹಂದಿಯನ್ನು (Hunting Pig) ದುರುಳರು ಬಾಂಬಿಟ್ಟು ಕೊಲೆ (hunting wild boar) ಮಾಡಿದ್ದರು. ಈ ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ (Uttara Kannada News) ಕಾರವಾರದ ಚೆಂಡಿಯಾ ಗ್ರಾಮದಲ್ಲಿ ಆಗಸ್ಟ್‌ 4ರ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಕಾಡಹಂದಿ ಶನಿವಾರ ಬಾರದೆ ಇದ್ದಾಗ ಜನರಿಗೆ ಸಂಶಯ ಕಾಡಿತ್ತು. ಯಾಕೆ ಬರಲಿಲ್ಲ. ಬಳಿಕ ಹುಡುಕಿದಾಗ ಸಿಕ್ಕಿದ್ದು ಅದರ ಶವ. ಕಾಡಿನ ಬದಿಯಲ್ಲಿ ಶವವಾಗಿ ಮಲಗಿತ್ತು ಕಾಡುಹಂದಿ.

Wild boar killed

ಈ ಕಾಡು ಹಂದಿಯನ್ನು ಗಮನಿಸಿದಾಗ ಅದರ ಬಾಯಿಯ ಭಾಗ ಸಂಪೂರ್ಣ ಛಿದ್ರವಾಗಿತ್ತು. ಎದುರುಗಡೆ ಕೋಳಿ ಮಾಂಸ ಬಿದ್ದಿತ್ತು. ಯಾರೋ ಬೇಟೆಗಾರರು ಕೋಳಿ ಮಾಂಸದಲ್ಲಿ ನಾಡ ಬಾಂಬ್‌ ಇಟ್ಟಿದ್ದು, ಅದಕ್ಕೆ ಬಾಯಿ ಹಾಕಿದ ಹಂದಿ ಬಾಂಬ್‌ ಸ್ಫೋಟದಿಂದ ಮೃತಪಟ್ಟಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿತ್ತು. ಯಾರೋ ಬೇಟೆಗಾರರು ಬಾಂಬ್ ಇಟ್ಟು ಹಂದಿ ಹತ್ಯೆಗೈದಿದ್ದಾಗಿ ಗ್ರಾಮಸ್ಥರು ಆರೋಪ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version