ಬೆಳಗಾವಿ/ ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಟಿ.ಸಿ.ಎಸ್ ಕಂಪನಿಯ ಬಿ.ಬ್ಲಾಕ್‌ನಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಕರೆಯೊಂದು (Bomb threat) ಮಂಗಳವಾರ ಬೆಳಗ್ಗೆ ಬಂದಿತ್ತು. ಹೀಗಾಗಿ ಕೆಲ ಹೊತ್ತು ಆತಂಕದ ವಾತಾವರಣವೇ ಸೃಷ್ಟಿಯಾಗಿತ್ತು. ಇದೀಗ ಬಾಂಬ್ ಬೆದರಿಕೆ ಕರೆ ಮಾಡಿದ್ದು ಬೆಳಗಾವಿಯ ಶಾಹುನಗರ ನಿವಾಸಿ ಶೃತಿ ಶೆಟ್ಟಿ ಎಂದು ತಿಳಿದು ಬಂದಿದೆ.
ಶೃತಿ ಈ ಮೊದಲು ಟಿ.ಸಿ.ಎಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೆಲಸ ತೊರೆಯಲು ಮುಂದಾಗಿದ್ದಳು. ಇತ್ತ ಕಂಪನಿಯವರು ರಾಜೀನಾಮೆ ಪಡೆಯಲು ಹಿಂದೇಟು ಹಾಕಿದ್ದರು. ಇದರಿಂದ ಮಾನಸಿಕವಾಗಿ ಕುಗ್ಗಿದ ಶೃತಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾರೆ ಎನ್ನಲಾಗಿದೆ.
ಬೆಳಗಾವಿಯ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಶೃತಿ ಶೆಟ್ಟಿ ಮನೆ ಇದ್ದು, ಆಕೆಯನ್ನು ವಶಕ್ಕೆ ಪಡೆಯಲು ಬೆಂಗಳೂರಿನ ಪೊಲೀಸ್ ತಂಡ ಬೆಳಗಾವಿಗೆ ಆಗಮಿಸುತ್ತಿದೆ ಎನ್ನಲಾಗಿದೆ.
ಏನಿದು ಪ್ರಕರಣ?
ಎಲೆಕ್ಟ್ರಾನಿಕ್ ಸಿಟಿ ಟಿ.ಸಿ.ಎಸ್ ಕಂಪನಿಯಲ್ಲಿ ಕೆಲ ಹೊತ್ತು ಆತಂಕದ ವಾತಾವರಣವೇ ಸೃಷ್ಟಿಯಾಗಿತ್ತು. ಕಂಪನಿಯ ಬಿ.ಬ್ಲಾಕ್‌ನಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಕರೆಯೊಂದು (Bomb threat) ಬಂದಿತ್ತು. ಕರೆ ಬರುತ್ತಿದ್ದಂತೆ ಕಂಪನಿಯೊಳಗೆ ಇದ್ದ ಎಲ್ಲರೂ ಹೊರಗೆ ಓಡಿ ಬಂದಿದ್ದರು.
ಬಾಂಬ್ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು, ಬಾಂಬ್ ನಿಷ್ಕ್ರಿಯದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಎಲ್ಲ ಕಡೆ ತಡಕಾಡಿದರೂ ಬಾಂಬ್ ಮಾತ್ರ ಸಿಕ್ಕಿರಲಿಲ್ಲ. ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದು ಬಂದಿತ್ತು.
ಬೆಳಗಾವಿ ಮೂಲದ ಯುವತಿಯೊಬ್ಬಳು ಕರೆ ಮಾಡಿ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿತ್ತು. ಟಿ.ಸಿ.ಎಸ್ ಕಂಪನಿಯ ಚಾಲಕನೊಬ್ಬನಿಗೆ ಬಿ- ಬ್ಲಾಕ್‌ನಲ್ಲಿ ಬಾಂಬ್ ಇದೆ ಎಂದು ಕುಡಿದ ಮತ್ತಿನಲ್ಲಿ ಕರೆ ಮಾಡಿದ್ದಾಳೆ ಎನ್ನಲಾಗಿತ್ತು. ಪೊಲೀಸರ ತಪಾಸಣೆ ವೇಳೆ ಯುವತಿ ಕರೆ ಮಾಡಿರುವುದು ಕನ್ಫರ್ಮ್ ಆಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.