Site icon Vistara News

Bommai Trust: ಗಂಗಮ್ಮ ಸೋಮಪ್ಪ ಬೊಮ್ಮಾಯಿ‌ ಟ್ರಸ್ಟ್‌ನಿಂದ ಪುಸ್ತಕ ಪ್ರಶಸ್ತಿಗೆ ಕೃತಿಗಳ ಅಹ್ವಾನ

Books

ಹುಬ್ಬಳ್ಳಿ: ಕಳೆದ ಹಲವು ವರ್ಷಗಳಿಂದ ಕನ್ನಡದ ಶ್ರೇಷ್ಠ ಕೃತಿಗಳಿಗೆ ಗಂಗಮ್ಮ ಸೋಮಪ್ಪ ಬೊಮ್ಮಾಯಿ‌ ಟ್ರಸ್ಟ್‌ನಿಂದ (Bommai Trust) ಮೂರು ವಿಧದ ಕೃತಿಗಳಿಗೆ ಪುಸ್ತಕ ಪ್ರಶಸ್ತಿಗಳನ್ನು ನೀಡುತ್ತಾ ಬರಲಾಗಿದೆ. ಅದೇ ರೀತಿ 2023ರ ಸಾಲಿನ ಪುಸ್ತಕ ಪ್ರಶಸ್ತಿಗಳಿಗಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ.

ಜಾನಪದ ಸಾಹಿತ್ಯ ಸಂಬಂಧಿಸಿದಂತೆ ಕೃತಿಗೆ ಜಾನಪದ ಸಿರಿ ಪ್ರಶಸ್ತಿ, ಮಹಿಳೆಯರು ರಚಿಸಿದ ಯಾವುದೇ ಪ್ರಕಾರದ ಸಾಹಿತ್ಯ ಕೃತಿಗೆ ಅಕ್ಕ ಪ್ರಶಸ್ತಿ ಹಾಗೂ 18 ವರ್ಷದೊಳಗಿನ ಮಕ್ಕಳು ರಚಿಸಿದ ಕೃತಿಗೆ ಅರಳು ಮೊಗ್ಗು ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರತಿಯೊಂದು ಪ್ರಶಸ್ತಿಯೂ 25 ಸಾವಿರ ರೂ.‌ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ | Aero India 2023: ರಾಷ್ಟ್ರದ ರಕ್ಷಣಾ ವಲಯ ಬೇಡಿಕೆಯ ಪೂರೈಕೆಯಲ್ಲಿ ರಾಜ್ಯದ ಪಾಲು ಶೇ.65: ಸಿಎಂ ಬೊಮ್ಮಾಯಿ

ಜನವರಿ 2020 ರಿಂದ ಡಿಸೆಂಬರ್ 2022ರ ಅವಧಿಯಲ್ಲಿ ಪ್ರಥಮ ಬಾರಿಗೆ ಮುದ್ರಣಗೊಂಡ ಕೃತಿಗಳನ್ನು ರಚಿಸಿದ ಲೇಖಕರು ತಮ್ಮ ಕೃತಿಯ 3 ಪ್ರತಿಗಳನ್ನು ಮಾರ್ಚ್ 10ರೊಳಗೆ ಚಂದ್ರಶೇಖರ್ ವಸ್ತ್ರದ, ಬೆಳಗು, ಆನಂದ ಆಶ್ರಮ ರಸ್ತೆ, ಪಂಚಾಕ್ಷರಿ ನಗರ, ಗದಗ. ದೂರವಾಣಿ 9448677434 ಈ ವಿಳಾಸಕ್ಕೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

Exit mobile version