Site icon Vistara News

ವೀರಲೋಕದಿಂದ ವಿಶಿಷ್ಟ ಪುಸ್ತಕ ರಾತ್ರಿ; ಹೊಸ ವರ್ಷವನ್ನು ಪುಸ್ತಕಗಳೊಂದಿಗೆ ಸ್ವಾಗತಿಸಿ!

veeralok sahitya bandhan

ಬೆಂಗಳೂರು: ʼವೀರಲೋಕ ಬುಕ್ಸ್ʼ (Veeraloka Books) ವತಿಯಿಂದ ಹೊಸ ವರ್ಷವನ್ನು ಪುಸ್ತಕಗಳೊಟ್ಟಿಗೆ ಸ್ವಾಗತಿಸಲು ಡಿಸೆಂಬರ್ 31ರ ರಾತ್ರಿ ‘ಸಾಹಿತ್ಯ ಬಂಧನ’ ಎಂಬ ವಿಭಿನ್ನವಾದ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತನಾಮರಿಂದ ಗೀತಗಾಯನ, ಮಂತ್ರ ಮುಚ್ಚಾಲೆ, ಹಾಸ್ಯರಾತ್ರಿ, ಕೌಟುಂಬಿಕ ಸಮಯ, ಸಾಹಿತ್ಯ ಸಂಜೆ, ಸುಗ್ರಾಸ ಭೋಜನ, ಪುಸ್ತಕ ಬಿಡುಗಡೆ-ಸಂವಾದ ಇನ್ನೂ ಮತ್ತಷ್ಟು ಕಾರ್ಯಕ್ರಮಗಳು ಆ ರಾತ್ರಿ ಜರುಗಲಿವೆ.

ವೀರಲೋಕ ಕಳೆದ ಒಂದೂವರೆ ವರ್ಷದಿಂದ ಹತ್ತು ಹಲವು ಯೋಚನೆ, ಯೋಜನೆಗಳ ಮೂಲಕ ಕನ್ನಡ ಓದುಗಲೋಕ ವಿಸ್ತರಣೆಯಲ್ಲಿ ತೊಡಗಿಸಿಕೊಂಡಿದೆ. ದಿನಸಿ ಅಂಗಡಿಯಲ್ಲೂ ಕನ್ನಡ ಪುಸ್ತಕ ಲಭ್ಯತೆ, ಸ್ವಿಗ್ಗಿ,
ಜೊಮ್ಯಾಟೋ ರೀತಿಯ ಬುಕ್‌ಬಾಯ್ ಮೂಲಕ ತ್ವರಿತಗತಿಯಲ್ಲಿ ಪುಸ್ತಕ ಡೆಲಿವರಿ, ಪುಸ್ತಕಗಳ ಬಿಡುಗಡೆಯನ್ನು ಸಿನಿಮಾ ಬಿಡುಗಡೆಯಂತೆ ಅದ್ಧೂರಿಗೊಳಿಸಿದ್ದು, ನಲವತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಮಾರಾಟ ಮಾಡಿದ್ದು, ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು, ಗ್ರಾಮೀಣ ಪ್ರತಿಭೆಗಳಿಗಾಗಿ ದೇಸಿ ಜಗಲಿ ಎನ್ನುವ ರಾಜ್ಯವ್ಯಾಪಿ ಕಥಾಕಮ್ಮಟ ಆಯೋಜಿಸಿ ಪ್ರತಿಭಾನ್ವೇಷಣೆಗೆ ತೊಡಗಿದ್ದು, ಅನೇಕ ಪ್ರತಿಭಾವಂತ ಬರಹಗಾರರ ಮೊದಲ ಕೃತಿಯನ್ನು ಪ್ರಕಟಿಸಿ ಅವರನ್ನು ಮುಖ್ಯವಾಹಿನಿಗೆ ಪರಿಚಯಿಸಿದ್ದು, ಸೇರಿದಂತೆ ಹಲವಾರು ಯೋಜನೆಗಳ ಮೂಲಕ ಪುಸ್ತಕಲೋಕದಲ್ಲಿ ಸಂಭ್ರಮದ ವಾತಾವರಣ ತರಲು ಪ್ರಯತ್ನಿಸುತ್ತಿದೆ.

ಕಳೆದ ವರ್ಷದ ಕಾರ್ಯಕ್ರಮ

ಕಳೆದ ವರ್ಷದಿಂದ ವೀರಲೋಕವು ಪುಸ್ತಕರಾತ್ರಿ ಎಂಬ ಮಹತ್ತರ ಕಾರ್ಯಕ್ರಮ ಆಯೋಜಿಸುತ್ತಿದೆ. ಸಾಮಾನ್ಯವಾಗಿ ಹೊಸ ವರುಷ ಎಂದರೆ ಯುವಜನತೆ ಪಾರ್ಟಿ, ಪ್ರವಾಸಗಳಲ್ಲಿ ತೊಡಗಿಸಿಕೊಳ್ಳುವುದನ್ನು ಕಾಣುತ್ತೇವೆ. ಅದರ ಬದಲು ಪುಸ್ತಕದ ಜೊತೆ ಅವರ ಹೊಸ ವರುಷ ಶುರುವಾಗಲಿ ಎಂಬುದು ವೀರಲೋಕದ ಆಶಯ.

ಈ ಕಾರ್ಯಕ್ರಮ ಬೆಂಗಳೂರಿನ ಜಯನಗರದ ಸೌತ್‌ಎಂಡ್‌ನ ಲಾ ಮಾರ್ವೆಲ್ಲಾ ಹೋಟೆಲ್‌ನಲ್ಲಿ ಡಿ.31ರ ರಾತ್ರಿ 7ರಿಂದ 12ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಲು ಇನ್ನೂರು ಜನರಿಗೆ ಮಾತ್ರ ಅವಕಾಶವಿದೆ ಹಾಗೂ ಪ್ರವೇಶ ಶುಲ್ಕವಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು 7022122121, 8861212172 ನಂಬರಿಗೆ ಕರೆ/ವಾಟ್ಸಾಪ್ ಮಾಡಬಹುದು. ಇನ್ನಷ್ಟು ಮಾಹಿತಿಗೆ: www.veeralokabooks.comಗೆ ಭೇಟಿ ನೀಡಬಹುದು.

Exit mobile version