Site icon Vistara News

‘ಮಂತ್ರದ್ರಷ್ಟ ಅರವಿಂದ ಘೋಷ್​’ ಪುಸ್ತಕ ಬಿಡುಗಡೆ; ಅರವಿಂದರ ಮಾಹಿತಿ ಬಿಚ್ಚಿಟ್ಟ ಲೇಖಕ ಕಾ.ಶ್ರೀ.ನಾಗರಾಜ

ARAVINDO 2

ಬೆಂಗಳೂರು: ಯೋಗಿ ಅರವಿಂದ ಅವರ ಬಗ್ಗೆ ಸಾಕಷ್ಟು ಸ್ವಾರಸ್ಯಕರ ಸಂಗತಿಗಳಿವೆ. ದೇಶವನ್ನು ಕಟ್ಟುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಅವರ ಸಾಧನೆ, ಛಲವನ್ನು ನಾವು ತಿಳಿದುಕೊಳ್ಳಲೇಬೇಕು. ಅವರು ಹಲವು ರಂಗಗಳಲ್ಲಿ ಸಾಧನೆ ಮಾಡಿದವರು ಎಂದು ಸಾಹಿತಿ, ಲೇಖಕ ಕಾ.ಶ್ರೀ.ನಾಗರಾಜ ಹೇಳಿದರು.

ಯೋಗಿ ಅರವಿಂದರ 150ನೇ ಪಾವನ ಜನ್ಮದಿನದ ಪ್ರಯುಕ್ತ ಕೇಂದ್ರೀಯ ಸದನದಲ್ಲಿ ಶನಿವಾರ ತಮ್ಮ ಕೃತಿ “ಯೋಗಿ ಅರವಿಂದ” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ೧೯೨೦ರಲ್ಲಿ ನಾಗಪುರ ಕಾಂಗ್ರೆಸ್‌ಗೆ ಅರವಿಂದರನ್ನು ಅಧ್ಯಕ್ಷರಾಗಿ ಬರಬೇಕೆಂದು ಕೆಲವರು ಕೇಳಿಕೊಂಡಾಗ ನಿರಾಕರಿಸಿದ್ದ ಅವರು, ತಾವು ಅಧ್ಯಾತ್ಮಿಕ ಕ್ಷೇತ್ರಕ್ಕೆ ಸೇರಿಕೊಂಡಿದ್ದು, ಬರುವುದಿಲ್ಲ ಎಂದು ಹೇಳಿದ್ದರು. ಆದರೆ, ಅವರು ಹುಟ್ಟಾ ರಾಜಕಾರಣಿಯೇ, ಹುಟ್ಟಾ ಚರಿತ್ರಕಾರರೇ? ವಿದ್ವಾಂಸರೇ? ಎಂಬ ಬಗ್ಗೆ ಹೇಳಲು ಕಷ್ಟವಾಗುತ್ತದೆ. ಅವರ ತಂದೆ ಕಳುಹಿಸಿದರು ಎಂಬ ಕಾರಣಕ್ಕೆ ಚಿಕ್ಕವಯಸ್ಸಿಗೆ ಓದಲು ಇಂಗ್ಲೆಂಡ್‌ ಹೋಗಿದ್ದರು. ಭಾರತದ ಹೆಸರು ಗೊತ್ತಿಲ್ಲ, ಸಂಸ್ಕೃತ, ಬಂಗಾಳಿ ಯಾವುದೂ ಗೊತ್ತಿಲ್ಲ. ಆದರೆ, ಅವರು ಅಲ್ಲಿಂದ ಭಾರತಕ್ಕೆ ವಾಪಸ್‌ ಬಂದ ಮೇಲೆ ಬಂಗಾಳಿ ಸೇರಿದಂತೆ ಎಲ್ಲವನ್ನೂ ಕಲಿತರು. ಜ್ಞಾನವನ್ನು ಉದಾರವಾಗಿ ಹಂಚಿದರು ಎಂದು ಹೇಳಿದರು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದ ಸಾಹಿತ್ಯಾಸಕ್ತರು.

ಅರವಿಂದರು ವಿದೇಶದಿಂದ ಬಂದ ಬಳಿಕ ಕಾಂಗ್ರೆಸ್‌ ಸೇರಿದ್ದರು. ಒಂದೇ ಮಾತರಂ ಚಳವಳಿಗೆ ಧುಮುಕಿದರು. ಬಳಿಕ ಕಾಂಗ್ರೆಸ್‌ ವಿಭಜನೆಯಾಯಿತು. ಆಗ ಅವರು ಬ್ರಿಟಿಷರನ್ನು ಕೊಡಿ ಎಂದು ಕೇಳುವ ಕಾಂಗ್ರೆಸ್‌ ಬಿಟ್ಟು, ಕೊಡು ಎಂದು ಕೇಳುವ ಕಾಂಗ್ರೆಸ್‌ ಅನ್ನು ಆಯ್ಕೆ ಮಾಡಿಕೊಂಡರು. ಅವರು ಅಷ್ಟು ದೊಡ್ಡ ನಾಯಕರಾಗಿ ಬೆಳೆದರು. ಕೊನೆಗೆ ಅವರು ಯೋಗವನ್ನು ಆಯ್ದುಕೊಂಡರು. ಈ ಕ್ಷೇತ್ರದಲ್ಲಿ ಭಾರಿ ಸಾಧನೆ ಮಾಡಿದರು ಎಂದು ಕಾ. ಶ್ರೀ ನಾಗರಾಜ ಮಾಹಿತಿಯನ್ನು ಬಿಚ್ಚಿಟ್ಟರು.

ಈ ಪುಸ್ತಕವು 160 ಪುಟಗಳನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿದೆ. 100 ರೂಪಾಯಿ ದರವನ್ನು ನಿಗದಿ ಮಾಡಲಾಗಿದೆ ಎಂದು ಲೇಖಕರು ತಿಳಿಸಿದ್ದಾರೆ.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಖ್ಯಾತ ಲೇಖಕ ಹಾಗೂ ವಿಮರ್ಶಕ ಡಾ. ಜಿ.ಬಿ. ಹರೀಶ್ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆ ಹೇಗಿತ್ತು? ನಮ್ಮ ತಂಟೆಗೆ ಬಂದವರನ್ನು ಬಿಡದಿರುವ ಮನೋಭಾವದ ಜತೆ ಜತೆಗೆ ಇನ್ನೊಬ್ಬರ ಸ್ವತ್ತಿನ ಮೇಲೆ ಕಣ್ಣು ಹಾಕುವವರಲ್ಲ ಎಂಬ ಮನಸ್ಥಿತಿಯನ್ನೂ ಹೊಂದಿದವರು. ಇಂತಹ ಹಲವು ನಿದರ್ಶನಗಳು ರಾಮಾಯಣ, ಮಹಾಭಾರತದಲ್ಲಿ ಬರುತ್ತದೆ. ಅಲ್ಲದೆ, ನಮ್ಮಲ್ಲಿರುವ ಶಕ್ತಿಯನ್ನು ಸಾತ್ವಿಕವಾಗಿ ಬಳಸಬೇಕು ಎಂಬಿತ್ಯಾದಿ ಮಾಹಿತಿಯನ್ನು ಸಹ ಚರ್ಚೆ ವೇಳೆ ವಿವರಿಸಿದರು.

ಇದನ್ನೂ ಓದಿ | ಜಿ ಎನ್ ರಂಗನಾಥ ರಾವ್ ಅವರ ಆ ಪತ್ರಿಕೋದ್ಯಮ ಕೃತಿ ನಾಳೆ ಬಿಡುಗಡೆ

Exit mobile version