Site icon Vistara News

Border Dispute | ಬೆಳಗಾವಿ ಅಧಿವೇಶನಕ್ಕಾಗಿ ಆಗಮಿಸಿದ್ದ ಸರ್ಕಾರಿ ವಾಹನಕ್ಕೆ ಮರಾಠಿ ಪುಂಡರಿಂದ ಕಲ್ಲು ತೂರಾಟ

belagavi border dispute ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಮರಾಠಿ ಪುಂಡರಿಂದ ಕಲ್ಲು ತೂರಾಟ

ಬೆಳಗಾವಿ: ಕರ್ನಾಟಕಮಹಾರಾಷ್ಟ್ರ ಗಡಿ ವಿವಾದವು (Border Dispute) ಸದ್ಯಕ್ಕೆ ನಿಲ್ಲುವಂತಹ ಲಕ್ಷಣಗಳು ಗೋಚರಿಸುತ್ತಿಲ್ಲ. ಅಲ್ಲದೆ, ಕರ್ನಾಟಕದಲ್ಲಿರುವ ಮರಾಠಿಗರ ಉದ್ದಟತನವೂ ಎಲ್ಲೆ ಮೀರಿದೆ. ಇದೇ ಡಿಸೆಂಬರ್‌ ೧೯ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭಕ್ಕೆ ಮುನ್ನವೇ ನಗರದಲ್ಲಿ ಮರಾಠಿ ಭಾಷಿಕರ ಪುಂಡಾಟ ಆರಂಭವಾಗಿದೆ. ಅಧಿವೇಶನಕ್ಕಾಗಿ ಆಗಮಿಸುತ್ತಿದ್ದ ಸರ್ಕಾರಿ ವಾಹನವೊಂದರ ಮೇಲೆ ಕಲ್ಲು ತೂರಿ ವಿಕೃತಿಯನ್ನು ಮೆರೆಯಲಾಗಿದೆ.

belagavi border dispute ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಮರಾಠಿ ಪುಂಡರಿಂದ ಕಲ್ಲು ತೂರಾಟ

ಬೆಳಗಾವಿ ಹೊರವಲಯದ ಸುವರ್ಣಸೌಧದ ಎದುರೇ ಈ ಕೃತ್ಯವನ್ನು ಎಸೆಗಲಾಗಿದ್ದು, ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಬೆಳಗಾವಿಗೆ ಚಳಿಗಾಲ ಅಧಿವೇಶನಕ್ಕಾಗಿ ವಾಹನವೊಂದು ಬಂದಿದೆ. ಕರ್ನಾಟಕ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ಸೇರಿದ ವಾಹನ ಇದಾಗಿದ್ದು, ಇದರ ಮೇಲೆ ಕಲ್ಲು ತೂರಲಾಗಿದೆ.

ಕರ್ನಾಟಕ ಸರ್ಕಾರ ಎಂದು ಈ ಜೀಪ್‌ನಲ್ಲಿ ಬರೆದುಕೊಂಡಿದ್ದರಿಂದ ವಾಹನವನ್ನು ಅಡ್ಡಗಟ್ಟಿದ ಮರಾಠಿ ಭಾಷಿಕರು ಕಲ್ಲು ತೂರಿ ವಿಕೃತಿ ಮೆರೆದಿದ್ದಾರೆ. ಅಲ್ಲದೆ, ಚಾಲಕ ಚೇತನ್‌ ಎಂಬುವವರ ಮೇಲೂ ಹಲ್ಲೆಗೆ ಯತ್ನ ಮಾಡಿದ್ದಾರೆ. ಜತೆಗೆ ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ.

ಈ ವೇಳೆ ತಮ್ಮ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಾರೆಂದು ಗೊತ್ತಾದ ತಕ್ಷಣವೇ ಚಾಲಕ ಚೇತನ್‌ ಜೀಪು ಚಲಾಯಿಸಿಕೊಂಡು ಹೋಗಿದ್ದು, ಪುಂಡರಿಂದ ತಪ್ಪಿಸಿಕೊಂಡಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿವೆ.

ಇದನ್ನೂ ಓದಿ | Karnataka Election | ಡಿಕೆಶಿ ಬೇಡ ಅಂದ್ರೂ ಅಭ್ಯರ್ಥಿ ಘೋಷಣೆ ಮಾಡಲು ಸಿದ್ದರಾಮಯ್ಯಗೆ ಯಾರು ಅಧಿಕಾರ ಕೊಟ್ರು: ಈಶ್ವರಪ್ಪ

Exit mobile version