Site icon Vistara News

Border Dispute | ನಮಗೆ ಮೂಲಸೌಕರ್ಯ ಕೊಟ್ಟರಷ್ಟೇ ಮಹಾರಾಷ್ಟ್ರದಲ್ಲಿರುತ್ತೇವೆ; ಅಕ್ಕಲಕೋಟೆ ಗ್ರಾಮಸ್ಥರ ಖಡಕ್‌ ವಾರ್ನಿಂಗ್‌!

vijayapura akkalakote news ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ

ವಿಜಯಪುರ: ನಾವು ಈಗಲೂ ಮಹಾರಾಷ್ಟ್ರದಲ್ಲೇ ಇರಲು ಸಿದ್ಧ, ಬದ್ಧ, ಆದರೆ, ಅವರು ಮೊದಲು ನಮಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಬೇಕು. ಇಲ್ಲದಿದ್ದರೆ ನಮ್ಮನ್ನು ಕರ್ನಾಟಕಕ್ಕೆ ಸೇರ್ಪಡೆಗೊಳ್ಳಲು ಬಿಡಬೇಕು ಎಂದು ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟೆ ತಾಲೂಕಿನ ಜನ ಖಡಕ್‌ ಸಂದೇಶವನ್ನು ರವಾನಿಸಿದ್ದಾರೆ. ಈ ಮೂಲಕ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದವು (Border Dispute) ದಿನೇ ದಿನೆ ಕಾವು ಪಡೆದುಕೊಳ್ಳುತ್ತಿದೆ.

ಈ ಕುರಿತು ಮಾತನಾಡಿರುವ ಕನ್ನಡ ಸಾಹಿತ್ಯ ಪರಿಷತ್‌ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ್‌, ನಾವು ಇಲ್ಲಿ ಬಹುಸಂಖ್ಯಾತ ಕನ್ನಡಿಗರು ವಾಸವಾಗಿದ್ದೇವೆ. ಆದರೆ, ನಮಗೆ ಇಲ್ಲಿ ಯಾವುದೇ ಸೌಕರ್ಯವನ್ನು ನೀಡಲಾಗುತ್ತಿಲ್ಲ. ಈ ಸಂಬಂಧ ಹಲವಾರು ಹೋರಾಟಗಳನ್ನೂ ಮಾಡಲಾಗಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಈ ನಿಟ್ಟಿನಲ್ಲಿ ತಾಲೂಕಿನ 44ಕ್ಕೂ ಅಧಿಕ ಗ್ರಾಮಗಳ ಜನರು ಕರ್ನಾಟಕಕ್ಕೆ ಸೇರಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದರು.

ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ಇತರ ಅನೇಕ ವಿಷಯಗಳಲ್ಲಿ ಈ ಭಾಗದ ಜನತೆಗೆ ಅನ್ಯಾಯವಾಗಿದೆ. ಈ ಭಾಗದಲ್ಲಿರುವ ನಮ್ಮ ಕನ್ನಡಿಗರಿಗೆ ಮೂಲಭೂತ ಸೌಲಭ್ಯ ಸಿಗಬೇಕಿದೆ. ಕುಡಿಯುವ ನೀರು ೮ ದಿನಕ್ಕೊಮ್ಮೆ ನೀರು ಕೊಡಲಾಗುತ್ತದೆ. ನೀರಾವರಿ ಸೌಲಭ್ಯವನ್ನೂ ಸಮರ್ಪಕವಾಗಿ ನೀಡಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಭಾಗದ ಕನ್ನಡಿಗರು ಗ್ರಾಮಗಳ ಮಂಡಲಗಳಲ್ಲಿ ಕರ್ನಾಟಕಕ್ಕೆ ಸೇರ್ಪಡೆಗೊಳಿಸುವ ಸಂಬಂಧ ಠರಾವು ಪಾಸ್ ಮಾಡಿದ್ದಾರೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಕನ್ನಡಿಗರಿಂದ ಈಗಾಗಲೇ ಈ ತೀರ್ಮಾನವನ್ನು ಪ್ರಕಟ ಮಾಡಲಾಗಿದ್ದು, ವಾರದ ಗಡುವು ನೀಡಲಾಗಿದೆ.

ಇದನ್ನೂ ಓದಿ | Border Dispute | ಬೆಳಗಾವಿಗೆ ಬನ್ನಿ ಎಂದು ಮಹಾರಾಷ್ಟ್ರ ಗಡಿ ಸಮನ್ವಯ ಸಚಿವರಿಗೆ ಪತ್ರ ಬರೆದ MES; ಉದ್ದಟತನ ಪ್ರದರ್ಶನ

Exit mobile version