Site icon Vistara News

ಇದೆಂಥ ಅನ್ಯಾಯ! ಹುಟ್ಟುಹಬ್ಬದ ಕೇಕ್‌ ಕತ್ತರಿಸಲು ರೆಡಿಯಾಗಿದ್ದ ಬಾಲಕ ಕಾಂಪೌಂಡ್‌ ಕುಸಿದು ದುರ್ಮರಣ

wall collpase

ದಾವಣಗೆರೆ: ಹುಟ್ಟುಹಬ್ಬದ ದಿನವೇ ಬಾಲಕನೊಬ್ಬ ಮಸಣ ಸೇರಿದ್ದಾನೆ. ನಾಗಾರ್ಜುನ (11) ಮೃತ ದುರ್ದೈವಿ. ನಾಗಾರ್ಜುನ ಮನೆ ಮುಂದೆ ಆಟವಾಡುತ್ತಿದ್ದಾಗ ಏಕಾಏಕಿ ಕಾಂಪೌಂಡ್‌ ಕುಸಿದಿದೆ. ನಾಗಾರ್ಜುನನ ತಲೆ ಮೇಲೆ ಕಾಂಪೌಂಡ್‌ ಹಾಗೂ ಗೇಟ್‌ ಬಿದ್ದಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ದಾವಣಗೆರೆಯ ಬಸಾಪುರ ಗ್ರಾಮದಲ್ಲಿ ನಡೆದಿದೆ.

ನಾಗಾರ್ಜುನ ಕುಟುಂಬಸ್ಥರು ಆತನ ಹುಟ್ಟುಹಬ್ಬಕ್ಕಾಗಿ ತಯಾರಿ ನಡೆಸುತ್ತಿದ್ದರು. ಕೇಕ್ ಕತ್ತರಿಸಲು ಸಿದ್ಧತೆ ‌ಮಾಡಿಕೊಂಡಿದ್ದರು. ಆದರೆ ಹುಟ್ಟು ಹಬ್ಬದ ದಿನವೇ ಮಗನನ್ನು ಕಳೆದುಕೊಂಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಆರ್.ಎಂ.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಹಿಂಬದಿಯಿಂದ ಗುದ್ದಿದ ಲಾರಿ; ನಾಲ್ವರು ಸ್ಥಳದಲ್ಲೇ ಸಾವು

ಮಂಡ್ಯ: ನಾಗಮಂಗಲ ತಾಲೂಕಿನ ತಿರುಮಲಾಪುರದ ಬಳಿ ಇಂದು ಮುಂಜಾನೆ ಟಿಪ್ಪರ್ ಲಾರಿಗೆ ಸ್ಯಾಂಟ್ರೋ ಕಾರು ಡಿಕ್ಕಿಯಾಗಿ (Road Accident)ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಲಾರಿ ಡಸ್ಟ್​ ತುಂಬಿದ ಈ ಲಾರಿ ಬೆಂಗಳೂರು ಕಡೆಯಿಂದ ಚೆನ್ನರಾಯಪಟ್ಟಣದ ಕಡೆಗೆ ತೆರಳುತ್ತಿತ್ತು. ಮುಂದೆ ಹೋಗುತ್ತಿದ್ದ ಕಾರಿಗೆ ತಿರುಮಲಾ ಗ್ರಾಮದ ಬಳಿ ಈ ಲಾರಿ ಹಿಂದಿನಿಂದ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್​ ದಾಖಲಾಗಿದೆ.

ಬಾಗಲಕೋಟೆಯಲ್ಲಿ ಬೈಕ್ ಸವಾರ ಸಾವು

ಬಾಗಲಕೋಟೆಯ ಬಾಡಗಂಡಿ-ಬೀಳಗಿ ಸಂಪರ್ಕಿಸುವ ರಸ್ತೆಯಲ್ಲಿ ಲಾರಿ ಮತ್ತು ಬೈಕ್​ ನಡುವೆ ಭೀಕರ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತವಾಗುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಅವರಿಗೆ 45-50 ವರ್ಷ ವಯಸ್ಸಾಗಿದ್ದಿರಬಹುದು ಎನ್ನಲಾಗಿದೆ. ಬಾಗಲಕೋಟೆಯ ಬೀಳಗಿ ಪಟ್ಟಣದಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೊದಲ ರಾತ್ರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ನವದಂಪತಿ; ಅಂಥದ್ದೇನಾಯ್ತು ಕೋಣೆಯಲ್ಲಿ!

ಇತ್ತೀಚೆಗೆ ಮೈಸೂರಲ್ಲಿ ಭೀಕರ ರಸ್ತೆ ಅಪಘಾತವಾಗಿತ್ತು. ಇನ್ನೋವಾ ಕಾರು ಮತ್ತು ಖಾಸಗಿ ಬಸ್​ ನಡುವಿನ ಡಿಕ್ಕಿಯಲ್ಲಿ ಒಂದೇ ಕುಟುಂಬದ 10 ಮಂದಿ ಮೃತಪಟ್ಟಿದ್ದರು. ಇವರೆಲ್ಲ ಬಳ್ಳಾರಿ ಮೂಲದ ಸಂಗನಕಲ್​ ಗ್ರಾಮದವರಾಗಿದ್ದು, ಮೈಸೂರಿಗೆ ಪ್ರವಾಸಕ್ಕೆಂದು ಬಂದವರು ಆಗಿದ್ದರು. ತಮ್ಮ ಊರಿನಿಂದ ರೈಲಿಗೆ ಬಂದಿದ್ದ ಪ್ರವಾಸಿಗರು ಮೈಸೂರಲ್ಲಿ ಬಾಡಿಗೆ ಕಾರು ಮಾಡಿಸಿಕೊಂಡು ವಿವಿಧ ತಾಣಗಳಿಗೆ ಭೇಟಿಕೊಡುತ್ತಿದ್ದರು. ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ಕೊಟ್ಟು ವಾಪಸ್​ ಬರುತ್ತಿದ್ದಾಗ ಖಾಸಗಿ ಬಸ್​ಗೆ ಡಿಕ್ಕಿಯಾಗಿದೆ. ಅಂದು ಚಾಲಕ ಸೇರಿ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರಲ್ಲಿ ನಿನ್ನೆ ಒಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version