Site icon Vistara News

ಮೈ ಮೇಲೆ ಬಿಸಿ ಸಾಂಬಾರ್‌ ಬಿದ್ದು ಬಾಲಕ ಸಾವು; ಕುಳಿತಲ್ಲೇ ಸ್ತಬ್ಧವಾಯ್ತು ಪ್ರಯಾಣಿಕನ ಹೃದಯ!

Boy Dies after hot sambar Falls

ದಾವಣಗೆರೆ: ಬಿಸಿ ಸಾಂಬರ್‌ ಮೈ ಮೇಲೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬಾಲಕನೊರ್ವ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿರುವ ಘಟನೆ ನಡೆದಿದೆ. ದಾವಣಗೆರೆಯ ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದ ಸಮರ್ಥ್‌ (12) ಮೃತ ದುರ್ದೈವಿ.

ಶೃತಿ ಹಾಗೂ ಹನುಮಂತ ದಂಪತಿಯ 2ನೇ ಮಗನಾದ ಸಮರ್ಥ್, ಮನೆಯಲ್ಲಿ ಆಟವಾಡುತ್ತಿದ್ದ. ಈ ವೇಳೆ ಮೈ ಮೇಲೆ‌ ಬಿಸಿ ಸಾಂಬಾರ್ ಬಿದ್ದಿತ್ತು. ಬಿಸಿ ಸಾಂಬಾರ್‌ ಮೈ ಮೇಲೆ ಬಿದ್ದ ಪರಿಣಾಮ ಸುಟ್ಟ ಗಾಯಗಳಾಗಿದ್ದವು.

ಸಮರ್ಥ್‌ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಜಮಾಯಿಸಿದ ಸಹಪಾಠಿಗಳು

ಕೂಡಲೇ ಆತನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಸಮರ್ಥ್‌ ಚಿಕಿತ್ಸೆ ಫಲಕಾರಿಯಾಗದೆ ನ.3ರಂದು ಮೃತಪಟ್ಟಿದ್ದಾನೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ವಿಧಿಯಾಟಕ್ಕೆ ಶಪಿಸಿದ್ದಾರೆ. ಇತ್ತ ನೆಚ್ಚಿನ ಸ್ನೇಹಿತ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಶಾಲೆಗಳಿಂದ ವಿದ್ಯಾರ್ಥಿಗಳ ದಂಡೆ ಬಂದಿತ್ತು. ಸ್ನೇಹಿತನನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರು ಹಾಕಿದರು.

ಇದನ್ನೂ ಓದಿ: Road Accident : ಡಿಕ್ಕಿ ಹೊಡೆದ ಬುಲೆರೋ; ಬೈಕ್‌ನಿಂದ ಎಗರಿ ಬಿದ್ದ ಸವಾರರು ಮೃತ್ಯು, ಕಾಲ್ಕಿತ್ತ ಚಾಲಕ!

ಬಸ್‌ನಲ್ಲೇ ಸ್ತಬ್ಧವಾಯ್ತು ಪ್ರಯಾಣಿಕನ ಹೃದಯ

ಇತ್ತೀಚೆಗೆ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೂತಲ್ಲೇ ಮೃತ್ಯು ಆವರಿಸುತ್ತಿದೆ. ಸದ್ಯ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಹೃದಯಾಘಾತದಿಂದ ಮೃತಪಟ್ಟ ಸುರೇಶ್‌

ಮೈಸೂರಿನ ನಂಜನಗೂಡು ತಾಲೂಕಿನ ವೀರದೇವನಪುರ ಗ್ರಾಮದಲ್ಲಿ ನಡೆದಿದೆ. ಚುಂಚನಹಳ್ಳಿ ಗ್ರಾಮದ ಸುರೇಶ್ (50) ಹೃದಯಾಘಾತ ಮೃತಪಟ್ಟ ಪ್ರಯಾಣಿಕ. ನಂಜನಗೂಡಿನಿಂದ ಚುಂಚನಹಳ್ಳಿ ಗ್ರಾಮಕ್ಕೆ ಪ್ರಯಾಣ ಮಾಡುವಾಗ ಸುರೇಶ್‌ಗೆ ಕುಳಿತಲೇ ಹೃದಯಘಾತವಾಗಿದೆ. ಕೊನೆ ನಿಲ್ದಾಣ ಬಂದಾಗಲೂ ಸುರೇಶ್‌ ಇಳಿಯದೆ ಇದ್ದಾಗ ಕಂಡಕ್ಟರ್ ಹತ್ತಿರ ಹೋಗಿ ಮಾತನಾಡಿಸಿದ್ದಾರೆ.

ಮಾತನಾಡದೇ ಇದ್ದಾಗ ಅನುಮಾನಗೊಂಡು ಕೂಡಲೇ ಬಸ್‌ನಲ್ಲೇ ದೊಡ್ಡ ಕವಲಂದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ವಾರಸುದಾರರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version