ಚಿಕ್ಕಬಳ್ಳಾಪುರ : ಇಲ್ಲಿನ ಚಿಕ್ಕಕಾಡಿಗೇನಹಳ್ಳಿ ಗ್ರಾಮದಲ್ಲಿರುವ ಶ್ರೀರಾಮಕುಂಟೆ ಹಳ್ಳದಲ್ಲಿ (Drowned) ಗಣಪತಿ ವಿಸರ್ಜನೆ (Ganesha chathurthi) ಮಾಡಲು ಹೋಗಿ ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕಡಶೀಗೇನಹಳ್ಳಿ ಗ್ರಾಮದ ನಿಶಾಲ್ ತೇಜ್ (12) ಮೃತ ಬಾಲಕ.
ಸೆ.29ರಂದು ಸ್ನೇಹಿತರೊಂದಿಗೆ ನಿಶಾಲ್ ತೇಜ್ ಗಣಪತಿ ವಿಸರ್ಜನೆಗೆ ತೆರಳಿದ್ದ. ಈ ವೇಳೆ ಗಣೇಶ ವಿಸರ್ಜನೆ ಮಾಡುವ ಉತ್ಸಾಹದಲ್ಲಿ ಹಳ್ಳದ ಆಳ ಅರಿಯದೇ ನೀರಿಗೆ ಇಳಿದಿದ್ದಾನೆ. ಆದರೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ. ಆತನ ಮೃತದೇಹವು ಕೂಗಳತೆ ದೂರದಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: Doctor death : ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯೆ ನಿಗೂಢ ಸಾವು; ಪಕ್ಕದಲ್ಲೇ ಸಿರಿಂಜ್ ಪತ್ತೆ!
ಆಟವಾಡುವಾಗ ಕಾಲು ಜಾರಿ ನಾಲೆಗೆ ಬಿದ್ದ ಬಾಲಕಿ ದಾರುಣ ಸಾವು
ಹಾಸನ: ಇಲ್ಲಿನ ಅರಕಲಗೂಡು ತಾಲ್ಲೂಕಿನ ಮಧುರನಹಳ್ಳಿ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಆಟವಾಡುವಾಗ ಬಾಲಕಿ ಕಾಲು ಜಾರಿ ನಾಲೆ ಬಿದ್ದು (Drowned In Canal) ಮೃತಪಟ್ಟಿರುವ ಘಟನೆ ನಡೆದಿದೆ. ಸುಪ್ರೀತಾ (5) ಮೃತ ದುರ್ದೈವಿ.
ಗ್ರಾಮದ ರೇವಣ್ಣ-ಭಾಗ್ಯ ದಂಪತಿ ಪುತ್ರಿ ಸುಪ್ರೀತಾ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇತ್ತು. ಹೀಗಾಗಿ ಗ್ರಾಮದ ಸಮೀಪವಿರುವ ನಾಲೆಯ ಬಳಿ ಸ್ನೇಹಿತರೊಂದಿಗೆ ಸುಪ್ರೀತಾ ಆಟವಾಡುತ್ತಿದ್ದಳು. ಈ ವೇಳೆ ಅಚಾನಕ್ ಆಗಿ ಕಾಲುಜಾರಿ ನಾಲೆಗೆ ಬಿದ್ದಿದ್ದಾಳೆ. ನಾಲೆಯಲ್ಲಿ ಹರಿಯುತ್ತಿದ್ದ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.
ಹಾರಂಗಿ ಬಲದಂಡೆ ನಾಲೆಯಲ್ಲಿ ಮುಳುಗಿರುವ ಬಾಲಕಿ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಈಗಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿ 6 ಕಿ.ಮೀವರೆಗೂ ಶೋಧಕಾರ್ಯ ನಡೆಸಿದ್ದಾರೆ. ಆದರೆ ಮೃತದೇಹವು ಪತ್ತೆಯಾಗಿಲ್ಲ. ಹಳ್ಳಿ ಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ