ಗಣೇಶನ ರಾಜಬೀದಿ ಉತ್ಸವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಸಂಪೂರ್ಣ ಕೇಸರಿಮಯವಾಗಿತ್ತು. ಕೇಸರಿ ಪೇಟದಲ್ಲಿ ಮಿಂಚುತ್ತಿದ್ದ ಯುವಕ ಹಾಗೂ ಯುವತಿಯರು ಡೊಳ್ಳು ಹಾಗೂ ಡಿಜೆ ಸದ್ದಿಗೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದರು.
ಬೆಳಗಾವಿಯಲ್ಲಿ 382 ಸಾರ್ವಜನಿಕ ಗಣಪತಿಗಳು, 26 ಸಾವಿರ ಮನೆ ಗಣಪತಿ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾದ ಗಣೇಶೋತ್ಸವ ಮೆರವಣಿಗೆ ಅದ್ಧೂರಿಯಾಗಿ ನಡೆಯುತ್ತಿದೆ. ಎಲ್ಲೆಡೆ ಕೇಸರಿ ಧ್ವಜಗಳು ವಿಜೃಂಭಿಸುತ್ತಿವೆ. ಭದ್ರತೆಯೂ ಅಷ್ಟೇ ಬಿಗಿಯಾಗಿದೆ. ಶನಿವಾರ ಮುಂಜಾನೆವರೆಗೂ ಮೆರವಣಿಗೆ ನಡೆಯಲಿದೆ.
ಶಿಕಾರಿಪುರದಲ್ಲಿ ಗಣೇಶ ವಿಸರ್ಜನೆ ವೇಳೆ ಟಿಪ್ಪು ಸಾಂಗ್ ಕೇಳಿಬಂದಿದ್ದು, ಟಿಪ್ಪುವಿನ ಬಾವುಟ ಹಿಡಿದು ಯುವಕರು ಕುಣಿದಿರುವ ವಿಡಿಯೊ ವೈರಲ್ ಆಗಿದೆ.
ಹುಬ್ಬಳ್ಳಿಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಪಾಲಿಕೆ ಸದಸ್ಯರೊಬ್ಬರ ನಡುವಿನ ವಾಗ್ವಾದದ ವಿಡಿಯೊವೊಂದು ವೈರಲ್ (Hubli Ganesha) ಆಗಿದೆ.
ಗಣೇಶ ಮೂರ್ತಿ (Ganesh Chaturthi ) ವಿಸರ್ಜನೆ ವೇಳೆ ಸಂಸದ ಬಿ.ವೈ.ರಾಘವೇಂದ್ರ ಸಖತ್ ಸ್ಟೆಪ್ಸ್ ಹಾಕಿರುವ ವಿಡಿಯೊ ವೈರಲ್ ಆಗಿದೆ.
ಚಾಮರಾಜಪೇಟೆ ಮೈದಾನ ವಿವಾದದ ವೇಳೆಯೇ ಹೇಳಿದಂತೆ ಶಾಸಕ ಜಮೀರ್ ಖಾನ್ ಅವರು ತಮ್ಮ ಕಚೇರಿಯಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದಾರೆ.