Site icon Vistara News

Honey Bee Attack: ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಡ್ಯಾಂಗೆ ಹಾರಿದ ಬಾಲಕ; ಈಜಲಾಗದೆ ಮುಳುಗಿ ಸಾವು

Boy jumps into dam to escape bee attack, dies

ಕೋಲಾರ: ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಡ್ಯಾಂಗೆ ಹಾರಿದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾರ್ಕಂಡೇಯ ಡ್ಯಾಂ ಬಳಿ ನಡೆದಿದ್ದು, ಇದೇ ವೇಳೆ ಹೆಜ್ಜೇನು ಕಡಿತದಿಂದ (Honey Bee Attack) ನಾಲ್ವರಿಗೆ ಗಾಯಗಳಾಗಿವೆ.

ಜಾಹಿದ್ (17) ಮೃತ ಬಾಲಕ. ಶನಿವಾರ ಮಧ್ಯಾಹ್ನ ರಂಜಾನ್ ಪ್ರಯುಕ್ತ ಯುವಕರ ದಂಡು ವಿಹಾರಕ್ಕೆ ಹೊರಟಿತ್ತು. ಈ ವೇಳೆ ಮಾಡಿದ ಹೆಜ್ಜೇನು ದಾಳಿ ಮಾಡಿದೆ. ಹೆಜ್ಜೇನು ಕಡಿತದಿಂದ ತಪ್ಪಿಸಿಕೊಳ್ಳಲು ಯುವಕರು, ಮಕ್ಕಳು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಈ ವೇಳೆ ಆತಂಕದಿಂದ ಬಾಲಕ ಜಾಹೀದ್‌ ಎಂಬಾತ ಮಾರ್ಕಂಡೇಯ ಡ್ಯಾಂಗೆ ಹಾರಿದ್ದಾನೆ. ಆದರೆ, ಈಜು ಬಾರದ ಹಿನ್ನೆಲೆಯಲ್ಲಿ ಆತ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾನೆ. ಹೆಜ್ಜೇನು ದಾಳಿಯಿಂದ ನಾಲ್ವರಿಗೆ ಗಂಭೀರ‌ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | Fire Accident: ರಾಯಚೂರಿನ ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ; ಹೆಚ್ಚಿದ ಆತಂಕ

ಕೆರೆಯಲ್ಲಿ ಮುಳುಗಿ ಎತ್ತುಗಳ ಸಾವು: ರೈತ ಅಸ್ವಸ್ಥ

ಹೊಸಪೇಟೆ: ಕೆರೆಯಲ್ಲಿ ಮೈ ತೊಳೆಯಲೆಂದು ಹೋಗಿದ್ದ ಎತ್ತುಗಳು (Lake) ನೀರಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ (Bulls) ತಾಲೂಕಿನ ಹಾರುವನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.

ಚಿಲಕನಹಟ್ಟಿ ಗ್ರಾಮದ ಬಳಿಯಿರುವ ಮಾರ್ಗದಯ್ಯನ ಕೆರೆಯಲ್ಲಿ ಎತ್ತುಗಳು ಮುಳುಗಿ ಮೃತಪಟ್ಟಿದ್ದರೆ, ರೈತ ಹನುಮಂತಪ್ಪ ಕೆರೆಯಲ್ಲಿ ಎತ್ತುಗಳನ್ನು ಮೈ ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.

ಟೈರ್ ಬಂಡಿ ಕಟ್ಟಿಕೊಂಡು ಎರಡು ಎತ್ತುಗಳನ್ನು ಮೈ ತೊಳೆಯಲು ರೈತ ಹನುಂಮತಪ್ಪ ಕೆರೆಗೆ ಬಂದಿದ್ದ. ಈ ವೇಳೆ ಎತ್ತುಗಳು ಬೆದರಿ ಇದ್ದಕ್ಕಿದ್ದಂತೆ ಗುಂಡಿಗೆ ಬಿದ್ದಿವೆ. ಚಕ್ಕಡಿಗೆ ಎತ್ತುಗಳನ್ನು ಕಟ್ಟಿದ್ದರಿಂದ ಈಜುಲು ಸಾಧ್ಯವಾಗದೆ ಎತ್ತುಗಳು ಮುಳುಗಿ ಮೃತಪಟ್ಟಿವೆ. ಇನ್ನು ಹನುಂಮತಪ್ಪ ಅವರು ಸಹ ನೀರಲ್ಲಿ ಮುಳುಗಿ ಅಸ್ವಸ್ಥರಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | IPL‌ Betting: ಐಪಿಎಲ್‌ ಬೆಟ್ಟಿಂಗ್‌ನಲ್ಲಿ ಲಕ್ಷ ಲಕ್ಷ ಕಳೆದುಕೊಂಡ ಯುವಕ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ

ಕುರಿ ತೊಳೆಯಲು ಕೆರೆಗೆ ಇಳಿದಿದ್ದ ಒಂದೇ ಕುಟುಂಬದ ಮೂವರು ನೀರುಪಾಲು

ರಾಮನಗರ: ಕುರಿ ಮೈ ತೊಳೆಯಲು ಕೆರೆಗೆ ಇಳಿದಿದ್ದ ಒಂದೇ ಕುಟುಂಬದ ಮೂವರು ನೀರಿನಲ್ಲಿ ಮುಳುಗಿ (Drowned in pond) ಪ್ರಾಣ ಕಳೆದುಕೊಂಡು ದಾರುಣ ಘಟನೆ ರಾಮನಗರ ‌ಜಿಲ್ಲೆ ಮಾಗಡಿ ತಾಲೂಕಿನ ಮುತ್ತಸಾಗರ ಗ್ರಾಮದಲ್ಲಿ ನಡೆದಿದೆ.

ಗೊಲ್ಲರಹಟ್ಟಿ ಗ್ರಾಮದ ಒಂದೇ ಕುಟುಂಬದ ನಾಗರಾಜು (30), ಜ್ಯೋತಿ (35), ಲಕ್ಷ್ಮೀ (22) ಮೃತಪಟ್ಟ ದುರ್ದೈವಿಗಳು. ಅವರು ಕೆರೆಯಲ್ಲಿ ಕುರಿ‌‌ ಮೈತೊಳೆಯಲು ಹೋಗಿದ್ದರು. ಆಗ ನೀರಿನಲ್ಲಿ ಮುಳುಗಿ ದುರಂತ ಸಂಭವಿಸಿದೆ. ಯಾರೋ ಒಬ್ಬರು ಮುಳುಗಿದಾಗ ಉಳಿದಿಬ್ಬರು ರಕ್ಷಣೆಗೆ ಹೋಗಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಘಟನೆ ತಿಳಿಯುತ್ತಿದ್ದಂತೆಯೇ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಇಬ್ಬರ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಮತ್ತೊಬ್ಬರ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version