Site icon Vistara News

Drowned in Pond: ಸೆಕೆ ತಾಳಲಾರದೆ ಕೆರೆಯಲ್ಲಿ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವು

Pond near kolar

#image_title

ಕೋಲಾರ : ರಾಜ್ಯಾದ್ಯಂತ ಸೆಕೆ ವಿಪರೀತವಾಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ಜನರು ನಾನಾ ತಂತ್ರಗಳನ್ನು ಬಳಸುತ್ತಿದ್ದಾರೆ. ಕೆಲವರು ನೀರಿನಲ್ಲಿ ಈಜಲೂ ಹೋಗುವುದುಂಟು. ಆದರೆ, ಇಲ್ಲೊಬ್ಬರು ಸೆಕೆ ತಾಳಲಾರದೆ ಕೆರೆಯಲ್ಲಿ ಈಜಲು (Drowned in Pond) ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.

ಕೋಲಾರದ (Kolar news) ಗಾಂಧಿ ನಗರದ ಮೂವರು ಯುವಕರು ಮಂಗಸಂದ್ರ-ಮಾಲೂರು ಮಾರ್ಗದ ರಸ್ತೆ ಬದಿಯ ಕೆರೆಯಲ್ಲಿ ಸ್ನಾನಕ್ಕೆಂದು ಹೋಗಿದ್ದವರು. ಮೂವರಲ್ಲಿ ಇಬ್ಬರಿಗೆ ಈಜು ಬರುತ್ತಿದ್ದರೆ ಒಬ್ಬನಿಗೆ ಬರುತ್ತಿರಲಿಲ್ಲ.

ಕೆರೆಯ ನೀರಿನಲ್ಲಿ ಸ್ನಾನ ಮಾಡುತ್ತಾ ಖುಷಿಪಡುತ್ತಿದ್ದಾಗ ಪ್ರಭಾಸ್‌ ಎಂಬ ಯುವಕ ನೀರಿನಲ್ಲಿ ಮುಳುಗಿದ್ದಾನೆ. ಆತನಿಗೆ ಈಜು ಬಾರದೆ ಮುಳುಗಿದ್ದಾನೆ. ಉಳಿದ ಇಬ್ಬರು ಆತನ ರಕ್ಷಣೆಗೆ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ.

ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ದೇಹವನ್ನು ಎಸ್ ಎನ್ ಆರ್ ಆಸ್ಪತ್ರಗೆ ರವಾನಿಸಲಾಗಿದೆ.

ಸಿಗಂದೂರಿಗೆ ಲಾಂಚ್‌ ಸಂಚಾರ ಸ್ಥಗಿತ

ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ನೀರು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಹಲ್ಕೆ-ಮುಪ್ಪಾನೆ ಲಾಂಚ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಾರ್ಗಲ್, ಜೋಗದಿಂದ ಶ್ರೀ ಕ್ಷೇತ್ರ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಲಾಂಚ್ ಇದಾಗಿದೆ.

ಹಿನ್ನೀರಿನಲ್ಲಿ ವಾಡಿಕೆಗಿಂತಲೂ ನೀರು ಕಡಿಮೆಯಾಗಿದೆ. ಹೀಗಾಗಿ, ಲಾಂಚ್​ ಸಂಚಾರಕ್ಕೆ ಕಲ್ಲು, ಮರದ ದಿಮ್ಮಿ, ಮರಳಿನ ದಿಬ್ಬ ಅಡ್ಡಿಯಾಗಿದೆ. ಒಂದೊಮ್ಮೆ ಕಡಿಮೆ ನೀರಿನಲ್ಲಿ ಲಾಂಚ್​ ಓಡಾಡಿದರೆ ಅಪಘಾತಕ್ಕೀಡಾಗುವ ಆತಂಕ ಎದುರಾಗಿದೆ.  ಸುರಕ್ಷತೆಯ ದೃಷ್ಟಿಯಿಂದ ಲಾಂಚ್ ಸಂಚಾರ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ವಾಹನಿಗರು ವಾಹನಿಗರಿಗೆ 60 ಕಿ.ಮೀ. ದೂರ ಸುತ್ತು ಬಳಸಿ ದೇವಸ್ಥಾನಕ್ಕೆ ಹೋಗಬೇಕಾಗಿದೆ.

ಇದನ್ನೂ ಓದಿ: Students Drowned : ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲು

Exit mobile version