ಬೆಂಗಳೂರು: ಗಾಂಧಿಯನ್ನು ಗೋಡ್ಸೆ ಕೊಂದಿರುವುದಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (Brahmin CM) ಹೇಳಿದ್ದಾರೆ. ದೇಶ ನಂಬಿಕೆ ಇಟ್ಟಿರುವುದು ಗಾಂಧಿ ಮೇಲೆ. ಆದರೂ, ದೇಶ ವಿಭಜನೆಯಾಯಿತು. ಟಿಪ್ಪು ಸುಲ್ತಾನ್ ಮಾರಣಹೋಮದ ಬಗ್ಗೆ ಹೇಳುತ್ತಾರೆ. ಆದರೆ, ಟಿಪ್ಪು ಸುಲ್ತಾನ್ ಜಾತಿ ಉಲ್ಲೇಖ ಮಾಡಿ ಹೇಳುತ್ತಾರಾ? ದೇಶ ವಿಭಜನೆ ಮಾಡಿದವರ ಬಗ್ಗೆ ಇವರೇನು ಹೇಳುತ್ತಾರೆ. ಹೇಳುವುದಕ್ಕೆ ಧೈರ್ಯ ಇಲ್ಲದವರನ್ನು ರಾಜಕೀಯ ನಪಂಸಕರು ಎನ್ನಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದ್ದಾರೆ.
ರಾಜ್ಯದಲ್ಲಿರುವುದು ನಪುಂಸಕ ಸರ್ಕಾರ ಹಾಗೂ ಬಿಜೆಪಿಯಲ್ಲಿ ಯಡಿಯೂರಪ್ಪ ಕಡೆಗಣನೆಯಾಗಿದ್ದಾರೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ನವ ದೆಹಲಿಯಲ್ಲಿ ತಿರುಗೇಟು ನೀಡಿರುವ ಅವರು, ಯಡಿಯೂರಪ್ಪ ಜತೆ ಯಾವಾಗಲೂ ಕುಮಾರಸ್ವಾಮಿ ನಿಂತಿಲ್ಲ. ಅವರ ಜತೆ ನಿಂತಿದ್ದರೆ ಅವರ ಬಗ್ಗೆ ಮಾತನಾಡಲು ನೈತಿಕತೆ ಇರುತ್ತಿತ್ತು. ಸಿಂಪತಿಗೂ ಕೂಡ ಸರ್ಕಾರ ಮಾಡಲು ಬಿಡಲಿಲ್ಲ. ಎಚ್‌ಡಿಕೆ ಕಾಂಗ್ರೆಸ್‌ನವರ ಜತೆ ಸೇರಿ ಸಿಎಂ ಆದವರು ಎಂದು ಕಿಡಿ ಕಾರಿದರು.
ಬಿಎಸ್‌ವೈ ಆನಂದದಿಂದ ಪಕ್ಷದಲ್ಲಿ ಇದ್ದಾರೆ. ಅವರು ಆನಂದದಿಂದ ಇರುವುದನ್ನು ನೋಡಿ ಕುಮಾರಸ್ವಾಮಿಗೆ ಸಂಕಟವಾಗಿದೆ. ಅವರು ಬೆಳೆಸಿದ ಪಕ್ಷ ಬಿಜೆಪಿ, ಬೆಳೆದ ಪಕ್ಷ ಬಿಜೆಪಿ. ಸಿದ್ದರಾಮಯ್ಯರನ್ನು ಬೆಳಸಿದ್ದೇವೆ ಎಂದು ಹೇಳಿದರೆ ಸರಿ ಎಂದು ಛೇಡಿಸಿದರು. ಎಚ್‌ಡಿಕೆ ಬ್ರಾಹ್ಮಣ ಸಿಎಂ ಹೇಳಿಕೆಗೆ ಗೋಕರ್ಣದಲ್ಲಿ ಅರ್ಚಕರ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿ, ಆ್ಯಕ್ಷನ್‌ಗೆ ರಿಯಾಕ್ಷನ್ ಇರುತ್ತದೆ ಎಂದರು.
ಇದನ್ನೂ ಓದಿ | ಗೋಕರ್ಣದಲ್ಲಿ ಕುಮಾರಸ್ವಾಮಿ ಮುಂದೆ ರಾಜ್ಯವಾಳಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಂತೆಯೇ ದೇವರ ತಲೆ ಮೇಲಿಂದ ಬಿತ್ತು ಗರಿಕೆ ಹೂವಿನ ಪ್ರಸಾದ!
ಕುಮಾರಸ್ವಾಮಿ ಸರ್ವಾಂತರ್ಯಾಮಿ, ಸರ್ವಜ್ಞ. ಈಗ ಯಾವುದರ ಬಗ್ಗೆ ಚರ್ಚೆಯಾಗಬೇಕು. ಈಗ ಜಾತಿಯ ಬಗ್ಗೆ ಚರ್ಚೆಯಾಗಬೇಕೋ ಅಥವಾ ಅಭಿವೃದ್ಧಿ ಬಗ್ಗೆಯೋ ಎಂದು ಪ್ರಶ್ನಿಸಿದರು. ಅಮಾಯಕ ಕುಟುಂಬದ ಮೇಷ್ಟ್ರು ಕೆಆರ್‌ಎಸ್ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಅದಕ್ಕೆ ಕಾರಣ ಯಾರು ಎಂಬ ಎಚ್‌ಡಿಕೆ ಪ್ರಶ್ನೆಗೆ ಉತ್ತರಿಸಿ, ಯಾರೊ ಎಲ್ಲೋ ಹೋಗಿ ಸತ್ತರೆ ಯಾರು ಜವಾಬ್ದಾರಿ? ಹೊಳೆನರಸಿಪುರದ ರೈಲ್ವೆ ಟ್ರ್ಯಾಕ್‌ಗೆ ಬಿದ್ದು ಇಬ್ಬರು ಸತ್ತರೆ ಅದಕ್ಕೆ ಯಾರು ಹೊಣೆ? ಸತ್ಯಹರಿಶ್ಚಂದ್ರ ಥರ ಇರುವವರು ಬೇರೆಯವರ ಮೇಲೆ ಆರೋಪ ಮಾಡಬಹುದು. ಜಂತಕಲ್ ಮೈನಿಂಗ್ ಕೇಸ್ ಯಾರ ಮೇಲೆ ಇದೆ. ಯಾರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ ಎಂದು ಹೇಳಿದರು.